english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ಹೆಚ್ಚು ಪರಿಣಾಮಕಾರಿ ಜನರ 9 ಅಭ್ಯಾಸಗಳು: ಅಭ್ಯಾಸ ಸಂಖ್ಯೆ 8
ಅನುದಿನದ ಮನ್ನಾ

ಹೆಚ್ಚು ಪರಿಣಾಮಕಾರಿ ಜನರ 9 ಅಭ್ಯಾಸಗಳು: ಅಭ್ಯಾಸ ಸಂಖ್ಯೆ 8

Saturday, 17th of January 2026
2 1 118
Categories : ಹೆಚ್ಚು ಪರಿಣಾಮಕಾರಿ ಜನರ 9 (9 Habit of Highly Effective people)
" ಆದಕಾರಣ ನೀವು ನಡಕೊಳ್ಳುವ ರೀತಿಯನ್ನು ಕುರಿತು ಚೆನ್ನಾಗಿ ನೋಡಿಕೊಳ್ಳಿರಿ. ಜ್ಞಾನವಿಲ್ಲದರಾಗಿರದೆ ಜ್ಞಾನವಂತರಾಗಿರ್ರಿ. ಈ ದಿನಗಳು ಕೆಟ್ಟವುಗಳಾಗಿವೆ; ಆದದರಿಂದ ಕಾಲವನ್ನು ಸುಮ್ಮನೆ ಕಳಕೊಳ್ಳದೆ ಅದನ್ನು ಬೆಲೆಯುಳ್ಳದ್ದೆಂದು ಉಪಯೋಗಿಸಿಕೊಳ್ಳಿರಿ. (ಎಫೆಸ 5:15–16)

ಹೆಚ್ಚು ಪರಿಣಾಮಕಾರಿ ಜನರು ಇಮೇಲ್‌ಗಳು, ಸಮಸ್ಯೆಗಳು ಮತ್ತು ಇತರ ಜನರು ಹೇಳುವುದಕ್ಕೆಲ್ಲಾ ಪ್ರತಿಕ್ರಿಯಿಸುತ್ತಾ ಜೀವನವನ್ನು ನಡೆಸುವುದಿಲ್ಲ. ಅವರು ತಮ್ಮ ದಿನಗಳನ್ನು ಉದ್ದೇಶಪೂರ್ವಕವಾಗಿ ಯೋಜಿಸುತ್ತಾರೆ. ದೈವೀಕ ಕರೆಯು ಆಕಸ್ಮಿಕವಾಗಿ ಸಂಭವಿಸುವುದಿಲ್ಲ - ನಾವು ಪ್ರತಿದಿನ ಮಾಡುವ ಆಯ್ಕೆಗಳಿಂದ ಅದು ರೂಪುಗೊಳ್ಳುತ್ತದೆ. 

ಬೈಬಲ್ ಇದನ್ನು ಇನ್ನೂ ಹೆಚ್ಚಾಗಿ ಸ್ಪಷ್ಟಪಡಿಸುತ್ತದೆ: ಅದೇನೆಂದರೆ ಯಶಸ್ಸು ಮತ್ತು ಫಲಪ್ರದತೆಯು ಆಕಸ್ಮಿಕವಲ್ಲ. ಅನೇಕ ಜನರು ಪ್ರಾಮಾಣಿಕರು, ಪ್ರಾರ್ಥನಾಶೀಲರು ಮತ್ತು ಪ್ರತಿಭಾನ್ವಿತರು, ಆಗಿದ್ದರೂ ಅವರು ಅನುತ್ಪಾದಕರಾಗಿಯೇ ಉಳಿದಿದ್ದಾರೆ - ಕಾರಣವು ಅವರಲ್ಲಿನ ಸಾಮರ್ಥ್ಯದ ಕೊರತೆಯಿಂದಾಗಿ ಅಲ್ಲ, ಆದರೆ ಅವರು ಸ್ಪಷ್ಟ ಉದ್ದೇಶದಿಂದ ಬದುಕುವ ಬದಲು ಸಂದರ್ಭಗಳಿಗೆ ಪ್ರತಿಕ್ರಿಯಿಸುತ್ತಲೇ ಇರುವುದರಿಂದ.

ದೇವರು ಗೊಂದಲವನ್ನು ಆಶೀರ್ವದಿಸುವುದಿಲ್ಲ; ಆತನು ಕ್ರಮವನ್ನು ಆಶೀರ್ವದಿಸುತ್ತಾನೆ.

1. ಉದ್ದೇಶಪೂರ್ವಕತೆ ಜ್ಞಾನಕ್ಕೆ ಪುರಾವೆಯಾಗಿದೆ 

ಬೈಬಲ್ ಜ್ಞಾನವನ್ನು ಉದ್ದೇಶಪೂರ್ವಕ ಜೀವನದೊಂದಿಗೆ ಸ್ಥಿರವಾಗಿ ಸಂಪರ್ಕಿಸುತ್ತದೆ. “ಜಾಗರೂಕತೆಯಿಂದ ನಡೆಯುವುದು” ಎಂದರೆ ಎಚ್ಚರಿಕೆಯಿಂದ, ನಿಖರವಾಗಿ ಮತ್ತು ಅರಿವಿನೊಂದಿಗೆ ಬದುಕುವುದು. ಇದು ಹಠಾತ್ ನಿರ್ಧಾರ ತೆಗೆದುಕೊಳ್ಳುವಿಕೆ ಅಥವಾ ಭಾವನಾತ್ಮಕ ಚಾಲಿತ ನಾಯಕತ್ವಕ್ಕೆ ವಿರುದ್ಧವಾಗಿದೆ. 

ಸೊಲೊಮೋನನು ದೇವರಲ್ಲಿ ಆತ್ಮೀಕನಾಗಿ ಕಾಣಿಸಿಕೊಳ್ಳಲು ಜ್ಞಾನವನ್ನು ಬೇಡಿಕೊಳ್ಳಲಿಲ್ಲ - ಅವನು ಚೆನ್ನಾಗಿ ಮುನ್ನಡೆಯಲು ಮತ್ತು ಜವಾಬ್ದಾರಿಯುತವಾಗಿ ಆಡಳಿತ ನಡೆಸಲು ಅದನ್ನು ಕೇಳಿಕೊಂಡನು (1 ಅರಸುಗಳು 3:9).ಯಾವುದು ಜೀವನಕ್ಕೆ ಮುಖ್ಯವಾದದ್ದು ಮತ್ತು ಯಾವುದು ತಕ್ಷಣಕ್ಕೆ ಬೇಕಾದದು ಎಂಬುದರ ನಡುವಿನ ವ್ಯತ್ಯಾಸವನ್ನು ಹೇಗೆ ಗುರುತಿಸಬೇಕೆಂದು ಜ್ಞಾನವು ನಮಗೆ ಕಲಿಸುತ್ತದೆ.

ಹೆಚ್ಚು ಪರಿಣಾಮಕಾರಿ ಜನರು ತಮ್ಮ ದಿನವನ್ನು ಪ್ರಾರಂಭಿಸುವಾಗ, 

“ನನಗೆ ಇಂದು ಏನು ಮಾಡಬೇಕೆಂದು ಅನಿಸುತ್ತಿದೆ?” 
ಎಂದು ಕೇಳಿಕೊಳ್ಳದೆ 

“ನನ್ನ ಜೀವಿತದ ಉದ್ದೇಶ ಮತ್ತು ಜವಾಬ್ದಾರಿಯೊಂದಿಗೆ ಹೊಂದಿಕೆಯಾಗಲು ನಾನು ಇಂದು ಏನು ಮಾಡಬೇಕು? 
ಎಂದು ಕೇಳಿಕೊಳ್ಳುತ್ತಾರೆ.

2. ಸಮಯವು ಒಂದು ಭರವಸೆಯಗಿದೆ, ಹೊರತು ಶತ್ರುವಲ್ಲ.

ಧರ್ಮಗ್ರಂಥವು ಸಮಯವನ್ನು ಭರವಸೆಯಾಗಿ ಪರಿಗಣಿಸುತ್ತದೆ. 

"ನಮ್ಮ ದಿನಗಳು ಕೊಂಚವೇ ಎಂದು ಎಣಿಸಿಕೊಳ್ಳುವ ಹಾಗೆ ನಮಗೆ ಕಲಿಸು; ಆಗ ಜ್ಞಾನದ ಹೃದಯವನ್ನು ಪಡಕೊಳ್ಳುವೆವು."ಎಂದು ಮೋಶೆ ಪ್ರಾರ್ಥಿಸಿದನು.(ಕೀರ್ತನೆ 90:12).

ಇದು ಮರಣದ ಭಯವಲ್ಲ—ಇದು ಜೀವನವನ್ನು ಘನವಾಗಿ ಪರಿಗಣಿಸುವ ಭಯ. ಪ್ರತಿ ದಿನವೂ ಒಂದು ಸಂಭಾವ್ಯ ಮೌಲ್ಯವನ್ನು ಹೊಂದಿರುತ್ತದೆ. ಕಳಪೆಯಾಗಿ ನಿರ್ವಹಿಸಲಾದ ದಿನಗಳು ಅಂತಿಮವಾಗಿ ಕೆಟ್ಟದಾಗಿ ನಿರ್ವಹಿಸಲಾದ ವರ್ಷಗಳಾಗಿ ಮಾರ್ಪಡುತ್ತವೆ. 

ಕರ್ತನಾದ ಯೇಸು ಅಸಾಧಾರಣ ಸಮಯದ ಅರಿವನ್ನು ಪ್ರದರ್ಶಿಸಿದನು. ಯಾವಾಗ ಕಾಯಬೇಕು ಮತ್ತು ಯಾವಾಗ ಕಾರ್ಯನಿರ್ವಹಿಸಬೇಕು ಎಂಬುದು ಆತನಿಗೆ ತಿಳಿದಿತ್ತು.

"ನನ್ನ ಸಮಯ ಇನ್ನೂ ಬಂದಿಲ್ಲ" (ಯೋಹಾನ 7:6), ಮತ್ತು ನಂತರ, "ಆ ಗಳಿಗೆ ಈಗ ಬಂದಿದೆ" (ಯೋಹಾನ 12:23) ಎಂದು ಆತನು ಹೇಳಿದನು.

ಹೆಚ್ಚು ಪರಿಣಾಮಕಾರಿ ನಾಯಕರು ಸಮಯಗಳನ್ನು ಅರ್ಥಮಾಡಿಕೊಳ್ಳುತ್ತಾರೆ. ಯಾವಾಗ ಮುಂದುವರಿಯಬೇಕು, ಯಾವಾಗ ವಿರಾಮಗೊಳಿಸಬೇಕು, ಯಾವಾಗ ಮಾತನಾಡಬೇಕು ಮತ್ತು ಯಾವಾಗ ಸುಮ್ಮನಿರಬೇಕು. ಎನ್ನುವ ಕಾರ್ಯತಂತ್ರ  ಅವರಿಗೆ ತಿಳಿದಿದೆ.(ಪ್ರಸಂಗಿ 3:1–8) 

3. ವೇಗಕ್ಕಿಂತ ಮಾರ್ಗ ಮುಖ್ಯ.

ಕಾರ್ಯನಿರತವಾಗಿರುವಂತದ್ದು ಪರಿಣಾಮಕಾರಿತ್ವಕ್ಕೆ ಸಮಾನವಲ್ಲ. 

“ಮನುಷ್ಯನಿಗೆ ಸರಿಯಾಗಿ ತೋರುವ ಮಾರ್ಗವಿದೆ, ಆದರೆ ಅದರ ಅಂತ್ಯವು ಮರಣವೇ ” ಎಂದು ಶಾಸ್ತ್ರವು ಎಚ್ಚರಿಸುತ್ತದೆ (ಜ್ಞಾನೋಕ್ತಿ 14:12).

ಮಾರ್ಗ ಸರಿಯಾಗಿದ್ದಾಗ ಮಾತ್ರ ವೇಗಕ್ಕೆ ಮೌಲ್ಯ ಸಿಗುತ್ತದೆ. ಪೌಲನು

"ನಾನು ಗೊತ್ತು ಗುರಿಯಿಲ್ಲದೆ ಓಡುವುದಿಲ್ಲ" (1 ಕೊರಿಂಥ 9:26) ಎಂದು ಸ್ಪಷ್ಟವಾಗಿ ಹೇಳಿದನು. 

ಹೆಚ್ಚು ಪರಿಣಾಮಕಾರಿ ಜನರು ಪ್ರಾರ್ಥನಾಪೂರ್ವಕವಾಗಿ ಯೋಜಿಸುತ್ತಾರೆ, ಎಚ್ಚರಿಕೆಯಿಂದ ಮೌಲ್ಯಮಾಪನ ಮಾಡುತ್ತಾರೆ ಮತ್ತು ನಿರ್ಣಾಯಕವಾಗಿ ಚಲಿಸುತ್ತಾರೆ. ಗಮನ ವಿಕೇಂದ್ರೀಕರಣ ಗೊಳ್ಳುವುದು ಪಾಪವಲ್ಲ - ಆದರೆ ಆ ಗದ್ದಲಗಳು ಸೃಷ್ಟಿಸುವ ಪರಿಣಾಮಗಳು ದುಬಾರಿಯಾಗಿರುವುದರಿಂದ ಅವರು ಗದ್ದಲಗಳನ್ನು ತೆಗೆದುಹಾಕುತ್ತಾರೆ. ತದೇಕಚಿತ್ತದಿಂದಿರುವುದು ನಾಯಕತ್ವದ ಶಿಸ್ತಾಗಿದೆ.

4. ಶಿಸ್ತಿನ ಮೂಲಕ ಉದ್ದೇಶವು ಸಂರಕ್ಷಿಸಲ್ಪಡುತ್ತದೆ. 

ಉದ್ದೇಶಪೂರ್ವಕ ಜೀವನಕ್ಕೆ ರಚನಾತ್ಮಕ ಯೋಜನೆಗಳು ಮತ್ತು  ಮಿತಿಗಳು ಬೇಕಾಗುತ್ತವೆ. ಕರ್ತನಾದ ಯೇಸುವೇ ಆಗಾಗ್ಗೆ ಜನಸಂದಣಿಯಿಂದ ಹಿಂದೆ ಸರಿದು ಪ್ರಾರ್ಥಿಸಲು ಹೋಗುತ್ತಿದ್ದನು (ಲೂಕ 5:16). ತನ್ನ ನಿಯೋಜನೆಯನ್ನು ಕಾಪಾಡಿಕೊಳ್ಳಲು ಆತನು ಇತರರಿಗೆ ಪ್ರವೇಶವನ್ನು ನಿರ್ಬಂಧಿಸಿದನು.

" - ನನಗೆ ದೊಡ್ಡ ಜವಾಬ್ದಾರಿ ಉಂಟು; ಅದನ್ನು ಬಿಟ್ಟು ನಿಮ್ಮ ಬಳಿಗೆ ಬಂದರೆ ಕೆಲಸವು ನಿಂತುಹೋಗುವದು; ನಾನು ಬರಲಾರೆನು  " (ನೆಹೆಮಿಯಾ 6:3) ಎಂದು ಹೇಳುವಾಗ ನೆಹೆಮಿಯಾನು ಸಹ ಇದೇ ಶಿಸ್ತನ್ನು ಪ್ರದರ್ಶಿಸಿದನು.

ಪರಿಣಾಮಕಾರಿ ನಾಯಕರು ಒಳ್ಳೆಯ ಅವಕಾಶಗಳಿಗೂ—ಆ ಅವಕಾಶಗಳು ಧ್ಯೇಯವನ್ನು ದುರ್ಬಲಗೊಳಿಸುವಂತದ್ದು ಎಂಬುದನ್ನು ಅರಿತಾಗ ಅವುಗಳಿಗೂ ಸಹ ಇಲ್ಲ ಎಂದು ಹೇಳುವುದನ್ನು ಕಲಿಯುತ್ತಾರೆ. ತದೇಕಚಿತ್ತವು ದುರಹಂಕಾರವಲ್ಲ. ಅದು ಉಸ್ತುವಾರಿ.

5. ಉದ್ದೇಶಪೂರ್ವಕ ಜೀವನವು ಅಳೆಯಬಹುದಾದ ಪರಂಪರೆಯನ್ನು ಸೃಷ್ಟಿಸಿ ಹೋಗುತ್ತದೆ.

"ನಾನು ಒಳ್ಳೆಯ ಹೋರಾಟವನ್ನು ಮಾಡಿ, ನಾನು ಓಟವನ್ನು ಮುಗಿಸಿದ್ದೇನೆ" ಎಂದು ಅಪೊಸ್ತಲ ಪೌಲನು ತನ್ನ ಜೀವನದ ಅಂತ್ಯದ ವೇಳೆಗೆ ಹೇಳಿದನು. (2 ತಿಮೊಥೆಯ 4:7). 

ಗಮನಿಸಿ—ಅವನು ಮುಗಿಸಿದನು. ಅನೇಕರು ಪ್ರಾರಂಭಿಸುತ್ತಾರೆ; ಕೆಲವರು ಮಾತ್ರ ಅದನ್ನು ಮುಗಿಸುತ್ತಾರೆ. ಮುಗಿಸಲು ಉದ್ದೇಶಪೂರ್ವಕತೆ ಬೇಕು. ಹೇಗೋ ಬದುಕಿದ ಜೀವನಗಳು ನೆನಪುಗಳನ್ನು ಬಿಡುತ್ತವೆ. ಉದ್ದೇಶಪೂರ್ವಕವಾಗಿ ಬದುಕಿದ ಜೀವನಗಳು  ಪರಂಪರೆಗಳನ್ನು ಬಿಟ್ಟು ಹೋಗುತ್ತವೆ.

ಹೆಚ್ಚು ಪರಿಣಾಮಕಾರಿ ಜನರು ಪ್ರತಿದಿನ ಈ ಸತ್ಯದ ಅರಿವಿನೊಂದಿಗೆ ಬದುಕುತ್ತಾರೆ: ತದೇಕಚಿತ್ತವು ಒಂದು ಕ್ಷಣದಲ್ಲಿ ಈಡೇರುವುದಿಲ್ಲ, ಆದರೆ ದೇವರ ಚಿತ್ತದೊಂದಿಗೆ ಹೊಂದಿಕೆಯಾಗುವ ಸಾವಿರಾರು ಉದ್ದೇಶಪೂರ್ವಕ ಆಯ್ಕೆಗಳ ಮೂಲಕ ಈಡೇರುತ್ತದೆ. 

ಇದು ಅಭ್ಯಾಸ ಸಂಖ್ಯೆ 8. 

ಉದ್ದೇಶಪೂರ್ವಕವಾಗಿ ಬದುಕುವವರು ಕೇವಲ ಅಸ್ತಿತ್ವದಲ್ಲಿರುವುದಿಲ್ಲ — ಬದಲಾಗಿ ಅವರು ನಿಯೋಜನೆಯನ್ನು ಪೂರೈಸಿ, ಸಮಯವನ್ನು ಪುನಃ ಪಡೆದುಕೊಂಡು ಶಾಶ್ವತ ಹೆಜ್ಜೆಗುರುತುಗಳನ್ನು ಬಿಟ್ಟು ಹೋಗುತ್ತಾರೆ.

Bible Reading: Genesis 47-49
ಪ್ರಾರ್ಥನೆಗಳು
ತಂದೆಯೇ, ನನ್ನನ್ನು ಗೊಂದಲ ಮತ್ತು ಅಲೆಗಳಿಂದ ಬಿಡಿಸು. ಸಮಯವನ್ನು ಪುನಃ ಪಡೆದುಕೊಳ್ಳುವ ಜ್ಞಾನ, ಏಕಾಗ್ರತೆಯ ಶಿಸ್ತು ಮತ್ತು ನಿಮ್ಮ ಉದ್ದೇಶಕ್ಕೆ ಅನುಗುಣವಾಗಿ ಉದ್ದೇಶಪೂರ್ವಕವಾಗಿ ಬದುಕುವ ಸ್ಪಷ್ಟತೆಯನ್ನು ನನಗೆ ಯೇಸುನಾಮದಲ್ಲಿ ದಯಪಾಲಿಸು. ಆಮೆನ್!!

Join our WhatsApp Channel


Most Read
● ದಿನ 05:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ದಿನ 17:40 ದಿನಗಳ ಉಪವಾಸ ಪ್ರಾರ್ಥನೆ.
● ನಿಮ್ಮ ಮಾರ್ಗದರ್ಶಕರು ಯಾರು - II
● ಪ್ರೀತಿಯ ಹುಡುಕಾಟ
● ನೀವು ದೇವರನ್ನು ಎದುರಿಸುತ್ತಿದ್ದೀರಾ?
● ದೇವರು ದೊಡ್ಡ ಬಾಗಿಲುಗಳನ್ನು ತೆರೆಯಲಿದ್ದಾನೆ
● ನೀವು ಸುಲಭವಾಗಿ ಬೇಸರಗೊಳ್ಳುವಿರಾ?
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2026 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್