ಅನುದಿನದ ಮನ್ನಾ
1
0
70
ದೀನತೆ ಎಂಬುದು ಬಲಹೀನತೆ ಎನ್ನುವುದಕ್ಕೆ ಸಮನಾದುದಲ್ಲ.
Tuesday, 29th of April 2025
Categories :
ನಮ್ರತೆ (Humility)
ರೂಪಾಂತರ(transformation)
ದೀನತೆಯು ಬಲಹೀನತೆಗೆ ಸಮನಾಗಿದೆ ಎಂಬ ಸಾಮಾನ್ಯ ತಪ್ಪು ಕಲ್ಪನೆಯು "ದೀನ " ಮತ್ತು "ಬಲಹೀನ " ಎನ್ನುವ ಪದಗಳ ನಡುವಿನ ಹೋಲಿಕೆಯಿಂದಾಗಿರಬಹುದು. ಆದಾಗ್ಯೂ, ಎರಡು ಪದಗಳು ಪ್ರಾಸಬದ್ಧವಾಗಿರುವುದರಿಂದ ಅವು ಒಂದೇ ಅರ್ಥವನ್ನು ಹೊಂದಿವೆ ಎಂದರ್ಥವಲ್ಲ. ದೀನತೆಗೆ ಸಂಬಂಧಿಸಿದ ನಕಾರಾತ್ಮಕ ಅರ್ಥವು ಒಬ್ಬ ವ್ಯಕ್ತಿಯು ಬಲ ಅಥವಾ ದೃಢತೆ ಇಲ್ಲದ ವ್ಯಕ್ತಿ ಎಂದು ಅನೇಕರನ್ನು ನಂಬುವಂತೆ ಮಾಡಿದೆ.
ಸಾಮಾನ್ಯವಾಗಿ ನಾವು ದೀನ ವ್ಯಕ್ತಿಯ ಚಿತ್ರಣವನ್ನು ಕಳಪೆಯಾಗಿ ಬಟ್ಟೆಗಳನ್ನು ಧರಿಸುವುದು ಅಥವಾ ಇತರರು ತಮ್ಮ ಮೇಲೆ ದಬ್ಬಾಳಿಕೆ ಮಾಡಲು ಬಿಡುವುದು ಎಂದು ಭಾವಿಸುತ್ತೇವೆ.
ಆದಾಗ್ಯೂ, ಈ ತಪ್ಪು ವ್ಯಾಖ್ಯಾನವು ಸತ್ಯಕ್ಕೆ ದೂರವಾದದ್ದು. ಮತ್ತಾಯ 11:29 ರಲ್ಲಿ ದೀನ ಎಂದು ಉಲ್ಲೇಖಿಸಲ್ಪಟ್ಟಿರುವ ಕರ್ತನಾದ ಯೇಸು ಬಲಹೀನನ್ನಾಗಿರಲಿಲ್ಲ.ಇದಕ್ಕೆ ತದ್ವಿರುದ್ಧವಾಗಿ, ಆತನು ಅಧಿಕಾರದಿಂದ ಮಾತನಾಡಿದನು ಮತ್ತು ಅಷ್ಟೇ ಅಲ್ಲದೆ ತಾನು ನಂಬಿದ್ದಕ್ಕೆ ತನ್ನ ನಿಲುವನ್ನು ತೆಗೆದುಕೊಂಡನು. ದೇವಾಲಯದಲ್ಲಿ ಹಣ ವಿನಿಮಯ ಮಾಡಿ ಕೊಡುವವರನ್ನು ಹೊರಗೆ ಅಟ್ಟಿದಾಗ ಆತನು ತನ್ನ ದೈಹಿಕ ಶಕ್ತಿಯನ್ನು ಸಹ ಪ್ರದರ್ಶಿಸಿದನು.
ದೀನತೆ ಎಂಬುದು ತಳ್ಳಿಸಿ ಕೊಳ್ಳುವುದೋ ಅಥವಾ ಶಕ್ತಿಯ ಕೊರತೆಯ ಕುರಿತೋ ಅಲ್ಲ, ಬದಲಾಗಿ ಒಬ್ಬರ ಭಾವನೆಗಳು ಮತ್ತು ಕ್ರಿಯೆಗಳನ್ನು ವಿನಮ್ರ ಮತ್ತು ಸೌಮ್ಯ ರೀತಿಯಲ್ಲಿ ನಿಯಂತ್ರಿಸುವ ಸಾಮರ್ಥ್ಯವನ್ನು ಹೊಂದಿರುವುದಾಗಿದೆ. ಇದು ತಾಳ್ಮೆಯಿಂದಿರುವುದು,ಇತರರ ಅಭಿಪ್ರಾಯಗಳನ್ನು ಪರಿಗಣಿಸುವುದು ಮತ್ತು ಇತರರ ಬಗ್ಗೆ ಸಹಾನುಭೂತಿಯನ್ನು ತೋರಿಸುವುದನ್ನು ಒಳಗೊಂಡಿರುತ್ತದೆ. ಪ್ರತಿಕೂಲ ಪರಿಸ್ಥಿತಿ ಅಥವಾ ಸಂಘರ್ಷದ ಸಂದರ್ಭದಲ್ಲಿ ದೀನತೆಯನ್ನು ಪ್ರದರ್ಶಿಸಲು ಹೆಚ್ಚಿನ ಆಂತರಿಕ ಶಕ್ತಿ ಬೇಕಾಗುತ್ತದೆ, ಏಕೆಂದರೆ ಅದು ನಿಮ್ಮ ಅಹಂಕಾರವನ್ನು ಬದಿಗಿಟ್ಟು ಇತರರ ಅಗತ್ಯಗಳಿಗೆ ಆದ್ಯತೆ ನೀಡುವುದನ್ನು ಒಳಗೊಂಡಿರುತ್ತದೆ. ಮೂಲಭೂತವಾಗಿ, ದೀನತೆಯು ಬಲಹೀನತೆಯ ಸಂಕೇತಕ್ಕಿಂತ ಹೆಚ್ಚಾಗಿ ಉತ್ತಮ ಆಂತರಿಕ ಶಕ್ತಿ ಮತ್ತು ಚಾರಿತ್ರ್ಯ ವನ್ನು ಅಪೇಕ್ಷಿಸುವ ಸದ್ಗುಣವಾಗಿದೆ.
ದೀನ ವ್ಯಕ್ತಿ ಎಂದರೆ ಕಲಿಯಲು ಇನ್ನೂ ಹೆಚ್ಚಿನದಿದೆ ಎಂದು ಯಾವಾಗಲೂ ಒಪ್ಪಿಕೊಳ್ಳುವ ವ್ಯಕ್ತಿ. ಅವರು ಕಲಿಸಲು ಮುಕ್ತರಾಗಿದ್ದು ಹೆಮ್ಮೆ ಅಥವಾ ದುರಹಂಕಾರವು ಅವರ ಬೆಳವಣಿಗೆ ಅಥವಾ ಪ್ರಗತಿಗೆ ಅಡ್ಡಿಯಾಗಲು ಬಿಟ್ಟು ಕೊಡುವುದಿಲ್ಲ. ಮತ್ತೊಂದೆಡೆ, ದುರಹಂಕಾರಿ ವ್ಯಕ್ತಿಗಳು ತಮಗೆ ಈಗಾಗಲೇ ಎಲ್ಲವೂ ತಿಳಿದಿದೆ ಮತ್ತು ಕಲಿಯುವ ಅವಶ್ಯಕತೆ ಇಲ್ಲ ಎಂದು ಭಾವಿಸುತ್ತಾರೆ, ಇದುವೇ ಅವರ ಅವನತಿಗೆ ಕಾರಣವಾಗಬಹುದು. ಆದಾಗ್ಯೂ, ದೀನ ವ್ಯಕ್ತಿಯು ಜ್ಞಾನವು ಇಬ್ಬಾಯಿಯ ಕತ್ತಿಯಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳುತ್ತಾನೆ. ಅವರು ಹೆಚ್ಚು ಹೆಚ್ಚು ಕಲಿತಂತೆ, ಅವರಿಗೆ ಇನ್ನೂ ಏನೂ ತಿಳಿದಿಲ್ಲ ಎಂದು ಅವರು ಹೆಚ್ಚು ಹೆಚ್ಚಾಗಿ ಅರಿತುಕೊಳ್ಳುತ್ತಾರೆ. ಕಲಿಕೆಗೆ ಈ ನಮ್ರತೆ ಮತ್ತು ಮುಕ್ತತೆಯು ನಿಮಗೆ ವೈಯಕ್ತಿಕ ಮತ್ತು ವೃತ್ತಿಪರ ಬೆಳವಣಿಗೆಯನ್ನು ಅನುಭವಿಸಲು ಕಾರಣವಾಗಿ, ಜೊತೆಗೆ ಇನ್ನೂ ಹೆಚ್ಚಿನ ಅಂತರ್ದೃಷ್ಟಿಯನ್ನು ನೀಡುತ್ತದೆ.
ನಾನು ದೇವರ ವಾಕ್ಯವನ್ನು ಬೋಧಿಸುವಾಗ, ಕೆಲವು ವ್ಯಕ್ತಿಗಳು ತಮ್ಮ Whatsapp ಸಂದೇಶಗಳು ಅಥವಾ ಸಾಮಾಜಿಕ ಮಾಧ್ಯಮ ಸ್ಥಿತಿಯನ್ನು ಪರಿಶೀಲಿಸುವ ಮೂಲಕ ನಿರಂತರವಾಗಿ ವಿಚಲಿತರಾಗುವುದನ್ನು ನಾನು ಗಮನಿಸಿದ್ದೇನೆ. ಅಂತಹವರು ಮೌನವಾಗಿ, "ನೀವು ನನಗೆ ಏನು ಹೇಳುತ್ತಿದ್ದೀರೋ ಅದನ್ನು ನಾನು ತಿಳಿದುಕೊಳ್ಳುವ ಅಗತ್ಯವಿಲ್ಲ" ಎಂದು ಹೇಳುತ್ತಿದ್ದಾರೆ. ಯಾಕೋಬ 1:21 ನಾವು "ಬೇರೂರಿದ ವಾಕ್ಯವನ್ನು ದೀನತೆಯಿಂದ ಸ್ವೀಕರಿಸಬೇಕು" ಎಂದು ಹೇಳುತ್ತದೆ. ಆದ್ದರಿಂದ, ನಾವು ದೇವರ ವಾಕ್ಯವನ್ನು ಕಲಿಯುವಾಗ ನಾವು ಯಾವಾಗಲೂ ಈ ವಾಕ್ಯವು ನಮಗೆ ಇಂದು ಏನನ್ನು ಕಲಿಸುತ್ತದೆ ಎನ್ನುವ ಮನೋಭಾವವನ್ನು ಕಾಪಾಡಿಕೊಳ್ಳಬೇಕು.
ಸತ್ಯವೇದವು ದೀನತೆಯಲ್ಲಿರುವ ಅನೇಕ ಉತ್ಕೃಷ್ಟ ಪ್ರಯೋಜನಗಳನ್ನು ಪಟ್ಟಿ ಮಾಡುತ್ತದೆ:
1.ದೀನರು ತೃಪ್ತರಾಗುತ್ತಾರೆ:
"ದೀನರು ಉಂಡು ತೃಪ್ತರಾಗುವರು; ಯೆಹೋವನ ಭಕ್ತರೆಲ್ಲರೂ ಆತನನ್ನು ಕೊಂಡಾಡುವರು. ನಿಮ್ಮ ಅಂತರಾತ್ಮವು ಯಾವಾಗಲೂ ಚೈತನ್ಯವುಳ್ಳದ್ದಾಗಿರಲಿ." ಎಂದು ಕೀರ್ತನೆ 22:26 ಹೇಳುತ್ತದೆ. ಈ ವಚನವು ದೀನ ಮನೋಭಾವವನ್ನು ಹೊಂದಿದ್ದು ದೇವರನ್ನು ಹುಡುಕುವವರು ಆತನಲ್ಲಿ ತೃಪ್ತಿಯನ್ನು ಕಂಡುಕೊಳ್ಳುತ್ತಾರೆ ಎಂದು ಸೂಚಿಸುತ್ತದೆ. ಆತನು ಅವರನ್ನು ಖಾಲಿ ಕೈಯಲ್ಲಿ ಬಿಡಲ್ಪಡುವುದಿಲ್ಲ ಆದರೆ ದೇವರ ಪ್ರಸನ್ನತೆಯಲ್ಲಿ ತೃಪ್ತಿ ಮತ್ತು ನೆರವೇರಿಕೆಯನ್ನು ಅವರು ಕಂಡುಕೊಳ್ಳುತ್ತಾರೆ.
2.ದೇವರೇ ಅವರನ್ನು ನಡೆಸುತ್ತಾನೆ:
"ಆತನು ದೀನರನ್ನು ತನ್ನ ವಿಧಿಗನುಗುಣವಾಗಿ ನಡಿಸುವನು; ಅವರಿಗೆ ತನ್ನ ಮಾರ್ಗವನ್ನು ತೋರಿಸುವನು."ಎಂದು ಕೀರ್ತನೆ 25:9 ಹೇಳುತ್ತದೆ. ಈ ಭಾಗವು ದೀನರು ದೇವರಿಂದಲೇ ಮಾರ್ಗದರ್ಶಿಸಲ್ಪಡುತ್ತಾರೆ ಎಂಬುದನ್ನು ಸೂಚಿಸುತ್ತದೆ. ಅವರಿಗೆ ನೀತಿಯುತ ಮಾರ್ಗವನ್ನು ತೋರಿಸಿಕೊಟ್ಟು ದೇವರ ಚಿತ್ತದ ಪ್ರಕಾರ ಹೇಗೆ ಬದುಕಬೇಕೆಂದು ಕಲಿಸಲಾಗುತ್ತದೆ. ಈ ಮಾರ್ಗದರ್ಶನವು ಒಬ್ಬರ ಜೀವನಕ್ಕೆ ಬೇಕಾದ ಸಮಾಧಾನ, ಸ್ಪಷ್ಟತೆ ಮತ್ತು ಉದ್ದೇಶವನ್ನು ತಂದು ಕೊಡಬಹುದು.
3.ಅವರು ಹೊಸ ಆನಂದದಿಂದ ತುಂಬಲ್ಪಡುತ್ತಾರೆ:
"ದೀನರು ಯೆಹೋವನಲ್ಲಿ ಹೆಚ್ಚುಹೆಚ್ಚಾಗಿ ಆನಂದಿಸುವರು, ಬಡವರು ಇಸ್ರಾಯೇಲ್ಯರ ಸದಮಲಸ್ವಾವಿುಯಲ್ಲಿ ಉಲ್ಲಾಸಿಸುವರು." ಎಂದು ಯೆಶಾಯ 29:19 ಹೇಳುತ್ತದೆ. ದೀನರು ತಮ್ಮ ಜೀವನದಲ್ಲಿ ಹೊಸ ಆನಂದವನ್ನು ಅನುಭವಿಸುತ್ತಾರೆ ಎಂಬುದನ್ನು ಈ ವಚನ ಸೂಚಿಸುತ್ತದೆ. ಈ ಸಂತೋಷವು ದೇವರ ಪ್ರಸನ್ನತೆಯಲ್ಲಿ ಇರುವುದರಿಂದ ಮತ್ತು ಆತನ ಪ್ರೀತಿ ಮತ್ತು ಕೃಪೆಯನ್ನು ಅನುಭವಿಸುವುದರಿಂದಲೇ ಬರುತ್ತದೆ. ಇದು ಬೇರೆ ಯಾವುದೇ ಮೂಲದಿಂದ ಪಡೆಯಲಾಗದ ಸಂತೋಷವಾಗಿದ್ದು ಅದಕ್ಕೆ ಕಷ್ಟದ ಸಮಯದಲ್ಲಿ ನಮ್ಮನ್ನು ಪೋಷಿಸಲು ಸಾಧ್ಯವಾಗುತ್ತದೆ . ಆದ್ದರಿಂದ ನೀವು ನೋಡಿ, ಕಲಿಯಲು ಅರ್ಹರಾಗಿರುವುದು ಯೋಗ್ಯವಾಗಿದೆ!
Bible Reading: 1 Kings 15-16
ಪ್ರಾರ್ಥನೆಗಳು
ತಂದೆಯೇ, ನನ್ನ ಜೀವನದಲ್ಲಿ ಮತ್ತು ಅದರ ಮೂಲಕ ನೀವು ಏನು ಮಾಡಲು ಬಯಸುತ್ತೀರಿ ಎಂಬುದನ್ನು ಕಲಿತುಕೊಳ್ಳಲು ನಿನಗೇ ಶರಣಾಗುತ್ತೇನೆ, ನನ್ನನ್ನೇ ಅರ್ಪಿಸಿ ನೀನು ಹೇಳುವುದನ್ನೇ ಅಂಗೀಕರಿಸಿಕೊಳ್ಳುತ್ತೇನೆ. ನನ್ನ ಹೆಮ್ಮೆ ಮತ್ತು ಕೋಪವನ್ನು ತ್ಯಜಿಸಿ ನಾನು ನನ್ನನ್ನೇ ನಿನಗೇ ಬಿಟ್ಟುಕೊಡುತ್ತೇನೆ ನಿನ್ನ ಆತ್ಮದಿಂದ ನನ್ನನ್ನು ತುಂಬಿಸಿ ಯೇಸುವಿನಂತೆಯೇ ನನ್ನನ್ನು ಕಲಿಯಲು ಯೋಗ್ಯನನ್ನಾಗಿ ಮಾಡು. ಆಮೆನ್!
Join our WhatsApp Channel

Most Read
● ಯಾವಾಗ ಸುಮ್ಮನಿರಬೇಕು ಮತ್ತು ಯಾವಾಗ ಮಾತನಾಡಬೇಕು● ದಿನ 18:40ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಕರ್ತನೇ ನನ್ನ ದೀಪವನ್ನು ಬೆಳಗಿಸು.
● ದೇವರವಾಕ್ಯವನ್ನು ಮಾರ್ಪಡಿಸಬೇಡಿರಿ
● ಈ ದಿನಗಳಲ್ಲಿ ಇದನ್ನು ಮಾಡಿರ
● ಪುರುಷರು ಏಕೆ ಪತನಗೊಳ್ಳುವರು -6
● ದೇವದೂತರ ಸಹಾಯವನ್ನು ಸಕ್ರಿಯಗೊಳಿಸುವುದು ಹೇಗೆ
ಅನಿಸಿಕೆಗಳು