"ಅವರು ಆಚೇದಡಕ್ಕೆ ಸೇರಿದ ಮೇಲೆ ಎಲೀಯನು ಎಲೀಷನನ್ನು - ನಿನ್ನನ್ನು ಬಿಟ್ಟುಹೋಗುವ ಮೊದಲು ನಾನು ನಿನಗೋಸ್ಕರ ಏನು ಮಾಡಬೇಕನ್ನುತ್ತೀ ಹೇಳು ಎಂದು ಕೇಳಿದನು. ಅದಕ್ಕೆ ಎಲೀಷನು - ನಿನಗಿರುವ ಆತ್ಮದಲ್ಲಿ ನನಗೆ ಎರಡು ಪಾಲನ್ನು ಅನುಗ್ರಹಿಸು ಎಂದು ಬೇಡಿಕೊಂಡನು."(2 ಅರಸುಗಳು 2:9)
ಮೊದಲನೇದಾಗಿ ಉನ್ನತವಾದ ಅಧಿಕಾರಕ್ಕೂ,ಬಲಕ್ಕೂ ನಾವು ಮುನ್ನಡೆಯಲು ಬೇಕಿರುವ ಮುಖ್ಯ ಅವಶ್ಯವಾದ ಸಂಗತಿ ಎಂದರೆ ಅದಕ್ಕಾಗಿ ದಾಹ ಪಡುವುದು.ಇದು ದೇವರಿಂದಲೇ ಹುಟ್ಟುವಂಥದ್ದಾಗಿದೆಯೇ ವಿನಹಃ ಕೃತಕವಾಗಿ ಅದನ್ನು ನಾವೇ ಉಂಟು ಮಾಡಿಕೊಳ್ಳಲು ಸಾಧ್ಯವಿಲ್ಲ. ಎಲೀಷನು ಎಲೀಯನ ಸೇವಕನಾಗಿ ಎಲೀಯನು ಮಾಡಿದ ಅನೇಕ ಅದ್ಭುತಗಳನ್ನು ನೋಡಿದ್ದನು. ಆದರೆ ಎಲೀಷನು ಅದಕ್ಕಿಂತಲೂ ಹೆಚ್ಚಿನದನ್ನು ಬಯಸಿದನು. ಎಲೀಷನು ಎಲೀಯನಲ್ಲಿದ್ದಂತ ಆತ್ಮದ ಎರಡು ಪಟ್ಟು ಪಾಲನ್ನು ಬಯಸಿದನು. ಎಲಿಷನು ಎಲೀಯನ ಬಳಿ ಇದನ್ನು ಕೇಳಿದಾಗ ಪ್ರವಾದಿಯಾದ ಎಲೀಯನು"ನೀನು ಬೇಡಿಕೊಂಡದ್ದು ಬಹಳ ಕಷ್ಟಕರವಾದುದು" ಎಂದು ಹೇಳಿದನು. ಇದು ಅನುಗ್ರಹಿಸಲು ಸಾಧ್ಯವಿಲ್ಲದ್ದು ಎಂಬ ಕಾರಣಕ್ಕಾಗಿ ಇದನ್ನು ಹೇಳಲಿಲ್ಲ. ಆದರೆ ದೊಡ್ಡ ಅಭಿಷೇಕವು ಯಾವಾಗಲೂ ದೊಡ್ಡ ಜವಾಬ್ದಾರಿಯನ್ನು ಮತ್ತು ಸಂಕೀರ್ಣತೆಗಳನ್ನು ಒಳಗೊಂಡಿರುತ್ತದೆ ಎಂಬುದನ್ನು ಎಲೀಯನು ಬಲ್ಲವನಾಗಿದ್ದನು.
ಎರಡನೆಯದಾಗಿ, ಸನ್ಮಾನಕ್ಕೆ ಮುಂಚೆ ದೀನತ್ವ ಬರುತ್ತದೆ. ಎಲೀಷನು ಎಲೀಯನ ಸೇವಕನೆಂದು ಗುರುತಿಸಲ್ಪಟ್ಟವನಾಗಿದ್ದನು. ಮತ್ತೊಬ್ಬರ ಸೇವಕ ಅಥವಾ ಸೇವಕಿ ಎಂದು ಎಣಿಸಿಕೊಳ್ಳಲು ನಿಮಗೆ ಹೇಗನಿಸುತ್ತದೆ? ನಿಮ್ಮ ಹೆಸರು ಸಹ ಯಾರೂ ಎಲ್ಲಿಯೂ ನಮೂದಿಸುವುದಿಲ್ಲ. ಇದುವೇ ಪೂರ್ವ ಸಿದ್ಧತೆಯಾಗಿದೆ.ಅನೇಕ ದೇವ ಮನುಷ್ಯರಿಗೆ ಇರುವಂತಹ ಪೂರ್ವ ಸಿದ್ಧತೆ ಇದುವೇ ಆಗಿದೆ. ಯೋಸೇಫನನ್ನು ತೆಗೆದುಕೊಳ್ಳಿರಿ ಅವನು ಫರೋಹನ ಸೇವಕನಾಗಿದ್ದನು. ದಾವಿದನನ್ನು ತೆಗೆದುಕೊಳ್ಳಿರಿ ಅವನು ಸೌಲನ ಸೇವಕನಾಗಿದ್ದನು.
ಮೂರನೇದಾಗಿ, ಎಲೀಷನು ತನ್ನ ಕರೆಗೆ ತನ್ನನ್ನು ಸಂಪೂರ್ಣವಾಗಿ ಒಪ್ಪಿಸಿಕೊಟ್ಟಿದ್ದನು. ದೇವರ ವಾಕ್ಯ ಹೇಳುತ್ತದೆ ಎಲೀಷನು ಎಲೀಯನನ್ನು ಹಿಂಬಾಲಿಸಲು ಕರೆಯಲ್ಪಟ್ಟಾಗ ಯೌವನಸ್ತನಾದ ಅವನು ತನ್ನ ವ್ಯವಸಾಯವನ್ನು ಸಂಪೂರ್ಣವಾಗಿ ತ್ಯಜಿಸಿ ಎಲೀಯನನ್ನು ಕೂಡಿಕೊಂಡನು ಎಂದು. ಅವನು ತಾನು ಉಳುತ್ತಿದ್ದ ಎತ್ತುಗಳನ್ನೇ ಕಡಿದು ಎಲ್ಲರಿಗೂ ಆಹಾರ ಮಾಡಿ ಊಟ ಬಡಿಸಿದನು. ಇದುವೇ ಎಲ್ಲವೂ ಅಥವಾ ಇನ್ನೇನೂ ಉಳಿದೇ ಇಲ್ಲ ಎನ್ನುವಂಥದ್ದು. ಅವನು ಹೊಸದಾಗಿ ಆರಂಭಿಸಿದ ಸೇವೆ ಕೈಗೂಡದಿದ್ದಲ್ಲಿ ಅವನು ಮತ್ತೆ ತಿರುಗಿ ತನ್ನ ವ್ಯವಸಾಯ ಕಾರ್ಯಕ್ಕೆ ಹೋಗಲು ಸಾಧ್ಯವಿಲ್ಲದಾಗಿತ್ತು. ಇದು ಮುಂದೇನಾಗುವುದೆಂಬುದನ್ನು ಸಹ ತಿಳಿಯದೆ ಎಲ್ಲವನ್ನು ಬಿಟ್ಟು ಆತ್ಮಕ್ಕೆ ವಿಧೇಯನಾಗಿ ಮುಂಚೂಣಿ ಸೈನಿಕನ ಹಾಗೆ ನಡೆಯುವಂಥ ಅವನ ಮನೋಭಾವವನ್ನು ಪ್ರದರ್ಶಿಸುತ್ತದೆ.
ಅವನು ತನ್ನ ವ್ಯವಸಾಯದ ನೊಗಗಳನ್ನೆಲ್ಲಾ ಮುರಿದು ಸುಟ್ಟು ಹಾಕಿದಂತದ್ದು ನಾನಿನ್ನು ಎಂದಿಗೂ ಹಿಂದೆ ತಿರುಗಿ ನೋಡುವುದೇ ಇಲ್ಲ ಎಂಬುದನ್ನು ಸೂಚಿಸುತ್ತದೆ.
ನೀವು ದೇವರು ಅನುಗ್ರಹಿಸುವ ಮಹತ್ತರವಾದ ಅಭಿಷೇಕಕ್ಕೆ ತೆರಳಲು ಇಚ್ಛಿಸುವಿರಾ?"ನೀವು ನನ್ನನ್ನು ಹುಡುಕುವಿರಿ, ಮನಃಪೂರ್ವಕವಾಗಿ ಹುಡುಕಿದಾಗ ನನ್ನನ್ನು ಕಂಡುಕೊಳ್ಳುವಿರಿ."(ಯೆರೆಮೀಯ 29:13).ದೇವರ ಅಭಿಷೇಕಕ್ಕಾಗಿ ನಿಮ್ಮ ಹೃದಯದಲ್ಲಿ ದಾಹ ಪಡಲು ಆರಂಭಿಸಿರಿ. ಇದುವೇ ಮಹತ್ತರ ಕಾರ್ಯಗಳು ಜರಗಲು ಆರಂಭ ಬಿಂದುವಾಗಿದೆ.
ಪ್ರಾರ್ಥನೆಗಳು
ತಂದೆಯೇ, ನಿನ್ನ ಪ್ರಸನ್ನತೆಗಾಗಿಯೂ ನಿನ್ನ ವಾಕ್ಯಕ್ಕಾಗಿಯೂ ಹಂಬಲಿಸುವ ದಾಹವನ್ನು ನನ್ನಲ್ಲಿ ಯೇಸು ನಾಮದಲ್ಲಿ ಸೃಷ್ಟಿಸು. ಆಗ ನಾನು ನಿನ್ನನ್ನು ಸೇರಿಕೊಳ್ಳುವೆನು. ಆಮೇನ್.
Join our WhatsApp Channel
Most Read
● ನಿಮ್ಮ ಸಂಪರ್ಕವನ್ನು ಕಳೆದುಕೊಳ್ಳಬೇಡಿರಿ● ದಿನ 24:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಆತ್ಮೀಕ ಬಾಗಿಲುಗಳನ್ನು ಮುಚ್ಚುವುದು
● ತುರ್ತು ಪ್ರಾರ್ಥನೆ.
● ಅಭಿಷೇಕಕ್ಕಿರುವ ಪ್ರಪ್ರಥಮ ಶತೃ
● ಕರ್ತನ ಆನಂದ
● ದಿನ 27:40 ದಿನಗಳ ಉಪವಾಸ ಪ್ರಾರ್ಥನೆ.
ಅನಿಸಿಕೆಗಳು