ಅನುದಿನದ ಮನ್ನಾ
ಅಪರಾಧಗಳಿಗಿರುವ ಪರಿಪೂರ್ಣ ಪರಿಹಾರ.
Wednesday, 13th of March 2024
1
1
348
Categories :
ಪಾಪ (sin)
"ಯಾವನ ದ್ರೋಹವು ಪರಿಹಾರವಾಗಿದೆಯೋ ಯಾವನ ಪಾಪವು ಕ್ಷವಿುಸಲ್ಪಟ್ಟಿದೆಯೋ ಅವನೇ ಧನ್ಯನು.2ಯೆಹೋವನು ಯಾವನ ಲೆಕ್ಕಕ್ಕೆ ಅಪರಾಧವನ್ನು ಎಣಿಸುವದಿಲ್ಲವೋ ಯಾವನ ಹೃದಯದಲ್ಲಿ ಕಪಟವಿರುವದಿಲ್ಲವೋ ಅವನು ಧನ್ಯನು."(ಕೀರ್ತನೆಗಳು 32:1-2)
ಒಂದು ಸಾರಿ ಒಬ್ಬ ವ್ಯಕ್ತಿಯು ತನ್ನ ಕನಸಿನಲ್ಲಿ ಯೇಸುವನ್ನು ಯಾರೋ ಕಂಬಕ್ಕೆ ಕಟ್ಟಿಹಾಕಿ ಕೊರಡೆಗಳಿಂದ ಒಂದಿಷ್ಟೂ ಕರುಣೆಯೇ ಇಲ್ಲದೇ ಹೊಡೆಯುತ್ತಿರುವುದನ್ನು ಕಂಡನು. ಆ ವ್ಯಕ್ತಿಗೆ ಯೇಸುವನ್ನು ಹೊಡೆಯುತ್ತಿರುವುದನ್ನು ನೋಡಿ ಯೇಸುವಿನ ದೇಹದಿಂದ ಮಾಂಸವು ಚಿದ್ರ ಚಿದ್ರವಾಗಿ ಸುರಿಯುತ್ತಿರುವುದನ್ನು ನೋಡಲಾಗದೆ ಆ ವ್ಯಕ್ತಿಯು ಓಡಿ ಹೋಗಿ ಕೊರಡೆಗಳಿಂದ ಹೊಡೆಯುತ್ತಿದ್ದ ವ್ಯಕ್ತಿಯ ಕೈಗಳನ್ನು ಹಿಡಿದು ನಿಲ್ಲಿಸಿ ಹೊಡೆಯುವವನ ಮುಖವನ್ನು ನೋಡಿದನು. ಆದರೆ ಆ ಹೊಡೆಯುವವನ ಮುಖವು ತಡೆಯಲು ಹೋದ ಆ ವ್ಯಕ್ತಿಯದೇ ಮುಖ ಆಗಿತ್ತು.
" ನಾವೆಲ್ಲರೂ ಕುರಿಗಳಂತೆ ದಾರಿತಪ್ಪಿ ತೊಳಲುತ್ತಿದ್ದೆವು, ಪ್ರತಿಯೊಬ್ಬನೂ ತನ್ನ ತನ್ನ ದಾರಿಯನ್ನು ಹಿಡಿಯುತ್ತಿದ್ದನು; ನಮ್ಮೆಲ್ಲರ ದೋಷಫಲವನ್ನೂ ಯೆಹೋವನು ಅವನ ಮೇಲೆ ಹಾಕಿದನು."(ಯೆಶಾಯ 53:6)
ನಮ್ಮ ಅಪರಾಧಗಳ ಸಮಸ್ಯೆಗೆ ಇರುವ ಪರಿಹಾರವೇನು? ಯೇಸುವೇ ನಮ್ಮ ಅಪರಾಧಗಳ ಸಮಸ್ಯೆಗಳಿಗೆ ಇರುವ ಏಕೈಕ ಪರಿಹಾರ. "ಯೆಹೋವನು ನಮ್ಮೆಲ್ಲರ ಅಪರಾಧಗಳನ್ನು ಆತನ ಮೇಲೆ ಹಾಕಿದನು" ಎಂಬ ವಾಕ್ಯವನ್ನು ಗಮನವಿಟ್ಟು ನೋಡಿರಿ. ನಮ್ಮೆಲ್ಲ ಅಪರಾಧಗಳಿಗೆ ಆತನೇ ಅಂತಿಮವಾದ ವಿಮೋಚನೆ ಕ್ರಯವನ್ನು ಕೊಟ್ಟು ತೀರಿಸಿದನು
ಇನ್ಯಾವುದೇ ಯಜ್ಞವು ಮಾಡಲಾಗದಂತಹ ಒಂದು ಪರಿಪೂರ್ಣವಾದ ಯಜ್ಞದ ಅವಶ್ಯಕತೆ ಪ್ರತಿಯೊಬ್ಬ ವ್ಯಕ್ತಿಯೂ ಮಾಡಿದ ಪಾಪಗಳನ್ನು ಪರಿಹರಿಸಲು ಬೇಕಿತ್ತು.
ಆದ್ದರಿಂದಲೇ ಯೇಸುವಿನ ಶಿಲುಬೆಯ ಮರಣದ ಯಜ್ಞವು ಅತ್ಯಾವಶ್ಯಕವಾಗಿ ಆಗಬೇಕಿತ್ತು.
ಅತ್ಯಂತ ಅಪರಿಪೂರ್ಣವಾದ ಜನರನ್ನು ಪರಿಪೂರ್ಣರನ್ನಾಗಿ ಮಾಡಲು ಅತ್ಯಂತ ಪರಿಪೂರ್ಣವಾದಂತಹ ವ್ಯಕ್ತಿ ಒಬ್ಬನಿಂದಾದ ಅತ್ಯಂತ ಪರಿಪೂರ್ಣವಾದ ಯಜ್ಞವು ಇದಾಗಿದೆ. (ಇಬ್ರಿಯ 10:14-25).
"ನಮ್ಮ ದ್ರೋಹಗಳ ದೆಸೆಯಿಂದ ಅವನಿಗೆ ಗಾಯವಾಯಿತು, ನಮ್ಮ ಅಪರಾಧಗಳ ನಿವಿುತ್ತ ಅವನು ಜಜ್ಜಲ್ಪಟ್ಟನು; ನಮಗೆ ಸುಕ್ಷೇಮವನ್ನುಂಟುಮಾಡುವ ದಂಡನೆಯನ್ನು ಅವನು ಅನುಭವಿಸಿದನು; ಅವನ ಬಾಸುಂಡೆಗಳಿಂದ ನಮಗೆ ಗುಣವಾಯಿತು."(ಯೆಶಾಯ 53:5)
ನಮ್ಮ ಪಾಪ ಅಪರಾಧಗಳಿಗಾಗಿ ಯೇಸುವಿಗೆ ಗಾಯವಾಯಿತು. ದೇಹದ ಮೇಲೆ ಆದಂತಹ ಗಾಯಗಳು ಸುಲಭವಾಗಿ ಕಾಣಿಸುತ್ತದೆ. ಆದರೆ ಜಜ್ಜಲ್ಪಟ್ಟರೆ ಅವು ದೇಹದ ಒಳಗಾದಂತಹ ಗಾಯಗಳಾಗಿರುತ್ತದೆ. ನಮ್ಮ ಅಪರಾಧಗಳ ನಿಮಿತ್ತ ಆತನುಈ ರೀತಿ ಜಜ್ಜಲ್ಪಟ್ಟನು.
ಒಂದು ನಂಬಲಾಗದಂತಹ ಬೆಲೆಯನ್ನು ತಂದೆ ದೇವರು ತನ್ನ ವೈಯಕ್ತಿಕ ವೆಚ್ಚವನ್ನಾಗಿ ಪರಿಗಣಿಸಿ ನಮ್ಮೆಲ್ಲರ ಪಾಪದ ಸಮಸ್ಯೆಗೆ ಪರಿಹಾರವನ್ನಾಗಿ ಇತ್ತನು.ಆದರೆ ಆತನ ಈ ಪರಿಹಾರವನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ಆಯ್ಕೆಯನ್ನು ಮಾತ್ರ ನಮಗೇ ಬಿಟ್ಟನು. ನಮ್ಮ ಜೀವಿತದಲ್ಲಿ ಯೇಸು ಕ್ರಿಸ್ತನ ಶಿಲುಬೆಯ ಮರಣದ ಮೇಲೆ ನಂಬಿಕೆ ಇಡುವಂತದ್ದೇ ಆತನು ಕೊಟ್ಟಿರುವ ಪಾಪ ಪರಿಹಾರವನ್ನು ಹೊಂದಿಕೊಳ್ಳುವಂಥ ನಿರ್ಣಾಯಕವಾದಂತಹ ಅಂಶವಾಗಿದೆ.
ನೀವು ದೇವರು ಅನುಗ್ರಹಿಸಿರುವ ಈ ಪರಿಹಾರವನ್ನು ಸ್ವೀಕರಿಸಿ ನಿಮ್ಮ ಜೀವಿತದಲ್ಲಿ ಅಳವಡಿಸಿಕೊಳ್ಳುವುದಾದರೆ ಈ ಮುಂದಿನ ಸಂಗತಿಗಳು ನಿಮ್ಮ ಜೀವಿತದಲ್ಲಿ ಸಾಕಾರಗೊಳ್ಳುತ್ತದೆ.
"ಹೀಗಿರಲಾಗಿ ಯಾವನಾದರೂ ಕ್ರಿಸ್ತನಲ್ಲಿದ್ದರೆ ಅವನು ನೂತನಸೃಷ್ಟಿಯಾದನು. ಇಗೋ, ಪೂರ್ವಸ್ಥಿತಿ ಹೋಗಿ ಎಲ್ಲಾ ನೂತನವಾಯಿತು."(2 ಕೊರಿಂಥದವರಿಗೆ 5:17)
ಪ್ರಾರ್ಥನೆಗಳು
ಕರ್ತನಾದ ಯೇಸುವೇ,ನೀನೇ ದೇವರ ಮಗನೆಂದು ನೀನು ನನಗಾಗಿ ಸತ್ತು ಹೂಣಲ್ಪಟ್ಟು ತಿರುಗಿ ಮೂರನೆಯ ದಿನದಲ್ಲಿ ಜೀವಂತವಾಗಿ ಎದ್ದು ಬಂದಿರುವೆ ಎಂದು ನಾನು ನಂಬುತ್ತೇನೆ. ನಿನ್ನ ಕರುಣೆಯು ನನ್ನ ಮೇಲಿರಲಿ. ನನ್ನ ಎಲ್ಲಾ ಪಾಪಗಳನ್ನು ಕ್ಷಮಿಸು. ನಿನ್ನ ಪರಿಶುದ್ಧ ರಕ್ತದಿಂದ ನನ್ನನ್ನು ಶುದ್ಧೀಕರಿಸು. ನನ್ನ ಹೃದಯದಲ್ಲಿ ಬಂದು ವಾಸ ಮಾಡು. ನನ್ನ ಜೀವನದಲ್ಲಿನ ಎಲ್ಲಾ ಕ್ಷೇತ್ರಗಳನ್ನು ಆಳ್ವಿಕೆ ಮಾಡು.
ಯೇಸುಕ್ರಿಸ್ತನ ಪರಿಶುದ್ಧ ರಕ್ತದ ಮೂಲಕ ನಾನು ಮತ್ತು ನನ್ನ ಕುಟುಂಬದವರು ಸೈತಾನನ ಕೈಗಳಿಂದ ವಿಮೋಚಿಸಲ್ಪಟ್ಟಿದ್ದೇವೆ.
ನನ್ನ ಜೀವಿತದಲ್ಲಿ ಕಾರ್ಯ ಮಾಡುತ್ತಿರುವ ಯಾವುದೇ ದುರಾತ್ಮನ ಮಾದರಿಗಳಾಗಲಿ ಯೇಸು ನಾಮದಲ್ಲಿ ಅವು ಮುರಿದು ಬೀಳಲಿ.
ನನ್ನ ಉನ್ನತಿಯನ್ನು ತಡೆಯುತ್ತಿರುವ ಯಾವುದೇ ದುಷ್ಟ ಬಲವಾಗಲಿ ಯೇಸುವಿನ ನಾಮದಲ್ಲಿ ಸುಟ್ಟು ಬೂದಿಯಾಗಲಿ.
ದೇವರ ಬೆಂಕಿಯೇ, ನನಗೆ ವಿರುದ್ಧವಾಗಿ ಕಾರ್ಯ ಮಾಡುವ ಎಲ್ಲಾ ದುಷ್ಟ ಬಲಗಳನ್ನು ಯೇಸು ನಾಮದಲ್ಲಿ ಸುಟ್ಟು ಚದುರಿಸು. ಆಮೆನ್.
ಯೇಸುಕ್ರಿಸ್ತನ ಪರಿಶುದ್ಧ ರಕ್ತದ ಮೂಲಕ ನಾನು ಮತ್ತು ನನ್ನ ಕುಟುಂಬದವರು ಸೈತಾನನ ಕೈಗಳಿಂದ ವಿಮೋಚಿಸಲ್ಪಟ್ಟಿದ್ದೇವೆ.
ನನ್ನ ಜೀವಿತದಲ್ಲಿ ಕಾರ್ಯ ಮಾಡುತ್ತಿರುವ ಯಾವುದೇ ದುರಾತ್ಮನ ಮಾದರಿಗಳಾಗಲಿ ಯೇಸು ನಾಮದಲ್ಲಿ ಅವು ಮುರಿದು ಬೀಳಲಿ.
ನನ್ನ ಉನ್ನತಿಯನ್ನು ತಡೆಯುತ್ತಿರುವ ಯಾವುದೇ ದುಷ್ಟ ಬಲವಾಗಲಿ ಯೇಸುವಿನ ನಾಮದಲ್ಲಿ ಸುಟ್ಟು ಬೂದಿಯಾಗಲಿ.
ದೇವರ ಬೆಂಕಿಯೇ, ನನಗೆ ವಿರುದ್ಧವಾಗಿ ಕಾರ್ಯ ಮಾಡುವ ಎಲ್ಲಾ ದುಷ್ಟ ಬಲಗಳನ್ನು ಯೇಸು ನಾಮದಲ್ಲಿ ಸುಟ್ಟು ಚದುರಿಸು. ಆಮೆನ್.
Join our WhatsApp Channel
Most Read
● ಸಾಲದಿಂದ ಹೊರಬನ್ನಿ : ಕೀಲಿಕೈ # 1● ದೇವರ ಕೃಪೆಯನ್ನು ಸೇದುವುದು
● ದಿನ 10:40 ದಿನಗಳ ಉಪವಾಸ ಪ್ರಾರ್ಥನೆ.
● ಉತ್ತಮವು ಅತ್ಯುತ್ತಮವಾದದಕ್ಕೆ ಶತೃ
● ನೀವು ಎಷ್ಟು ವಿಶ್ವಾಸಾರ್ಹರು?
● ನೂತನ ಆತ್ಮೀಕ ವಸ್ತ್ರಗಳನ್ನು ಧರಿಸಿಕೊಳ್ಳಿ
● ಹನ್ನಾಳ ಜೀವಿತದಿಂದ ಕಲಿಯಬೇಕಾದ ಪಾಠ
ಅನಿಸಿಕೆಗಳು