ಅನುದಿನದ ಮನ್ನಾ
ನಿಮ್ಮನ್ನು ನಡೆಸುತ್ತಿರುವವರು ಯಾರು?
Tuesday, 2nd of July 2024
1
0
279
Categories :
ಭಾವನೆ (Emotion)
"ದೇವರು ಮನುಷ್ಯನಂತೆ ಎರಡು ಮಾತಿನವನಲ್ಲ; ಮಾನವನಂತೆ ಮನಸ್ಸನ್ನು ಬೇರೆ ಮಾಡಿಕೊಳ್ಳುವವನಲ್ಲ. ತಾನು ಹೇಳಿದ ಮೇರೆಗೆ ನಡೆಯುವದಿಲ್ಲವೋ; ಮಾತು ಕೊಟ್ಟನಂತರ ನೆರವೇರಿಸುವದಿಲ್ಲವೋ."(ಅರಣ್ಯಕಾಂಡ 23:19)
"ನಿಮ್ಮ ಹೃದಯಕ್ಕೆ ಕಿವಿಗೊಡಿರಿ", "ನಿಮಗೆ ಒಳ್ಳೆಯದು ಎನಿಸಿದರೆ ಅದನ್ನೇ ಮಾಡಿರಿ" ಚಿಕ್ಕ ಮಕ್ಕಳ ಕಾರ್ಟೂನ್ ನಿಂದ ಹಿಡಿದು ಇಂದಿನ ನವಯುಗದ ಸಾಮಾಜಿಕ ಚಲನಚಿತ್ರ ಗೀತೆಗಳವರೆಗೂ ನಿರಂತರವಾಗಿ ಇಂತಹ ಸಂದೇಶಗಳು ನಮ್ಮ ಕಿವಿಗಳಲ್ಲಿ ಸ್ಪೋಟಗೊಳ್ಳುತ್ತಲೇ ಇದೆ. ಇಂದಿನ ದಿನಗಳಲ್ಲಿ ನಾವು ಬಾಳುತ್ತಿರುವ ಈ ಸಮಾಜವು ನಮ್ಮ ಆಯ್ಕೆಗಳನ್ನು, ಜೀವನದ ನಿರ್ಧಾರಗಳನ್ನು ನಮ್ಮ ಹೃದಯಕ್ಕೆ ಸಮಾಧಾನ ಎನಿಸುವ ಹಾಗೆ ತೆಗೆದುಕೊಳ್ಳಬೇಕೆಂದು ಬಹಳವಾಗಿ ಪ್ರೋತ್ಸಾಹಿಸುತ್ತದೆ ಮತ್ತು ಪ್ರಚಾರ ಮಾಡುತ್ತಿದೆ.
ಇದು ಕೇಳಲು ನೋಡಲು ಮನೋಹರವಾಗಿ ಕಂಡರೂ ನಮ್ಮ ಆತ್ಮಿಕ ಜೀವಿತಕ್ಕೆ ಇವುಗಳನ್ನು ಅಳವಡಿಸಿಕೊಳ್ಳುವಂಥದ್ದು ಅದಕ್ಕೆ ಮೊರೆ ಹೋಗುವಂಥದ್ದು ಬಹಳ ಆಪತ್ತುಕಾರಿಯಾಗಿದೆ.
"ಹೃದಯವು ಎಲ್ಲಕ್ಕಿಂತಲೂ ವಂಚಕ; ಗುಣವಾಗದ ರೋಗಕ್ಕೆ ಒಳಗಾಗಿದೆ; ಅದನ್ನು ಯಾರು ತಿಳಿದಾರು?" ಎಂದು ಸತ್ಯವೇದವು ನಮ್ಮನ್ನು ಎಚ್ಚರಿಸುತ್ತದೆ (ಯೆರೆಮೀಯ 17:9)
ನಾವು ನಮ್ಮ ಜೀವಿತವನ್ನು ಆಳ್ವಿಕೆ ಮಾಡಲು ನಮ್ಮ ಭಾವನೆಗಳಿಗೆ - ಅನಿಸಿಕೆಗಳಿಗೆ ಅನುವು ಮಾಡಿಕೊಟ್ಟರೆ ನಾವು ನಮ್ಮ ಜೀವಿತದಲ್ಲಿ ಅವಿವೇಕದ, ಭಕ್ತಿ ಹೀನವಾದ ಸ್ವಹಿತ ಧೋರಣೆಯ ನಿರ್ಧಾರಗಳನ್ನು ತೆಗೆದುಕೊಂಡು ನಮ್ಮ ಜೀವಿತವನ್ನೇ ಹಾಳು ಮಾಡಿಕೊಳ್ಳುತ್ತೇವೆ. ನಮ್ಮ ಹೃದಯ ಹೇಳುವ ಮಾತನ್ನು ಹಿಂಬಾಲಿಸುವಂಥದ್ದು ಶರಣಾಗತಿಯ ಜೀವಿತವನ್ನು ನಡೆಸುವುದಕ್ಕಿಂತಲೂ ಸ್ವಾರ್ಥತೆಯ ಸ್ವಭಾವವನ್ನು ನಮ್ಮಲ್ಲಿ ಬೆಳೆಸುತ್ತದೆ.
ನಾವು ನಮ್ಮ ಭಾವನೆಗಳು ಮತ್ತು ಅನಿಸಿಕೆಗಳನ್ನು ನಿಯಂತ್ರಿಸಿಕೊಳ್ಳದೇ ಹೋದರೆ, ನಾವು ಕ್ರಿಸ್ತನ ನಿಜವಾದ ದಾಸರಾಗಲು ಸಾಧ್ಯವಿಲ್ಲ. ಯಾವನಾದರೂ ತನ್ನ ಜೀವಿತವನ್ನು ಸಂಪೂರ್ಣವಾಗಿ ತನ್ನ ಭಾವನೆಗಳು ಮತ್ತು ಅನಿಸಿಕೆಗಳ ಮೂಲಕ ನಡೆಸುತ್ತಿದ್ದರೆ ಯಾಕೋಬ1:6-8 ಅದನ್ನು ಸ್ಪಷ್ಟವಾಗಿ ವಿವರಿಸುವುದು ಹೇಗೆಂದರೆ
"..... ಸಂದೇಹಪಡುವವನೋ ಗಾಳಿಯಿಂದ ಬಡಿಯಲ್ಪಟ್ಟ ಸಮುದ್ರದ ತೆರೆಯಂತೆ ಅಲೆಯುತ್ತಿರುವನು. ಆ ಮನುಷ್ಯನು ತಾನು ಕರ್ತನಿಂದ ಏನಾದರೂ ಹೊಂದುವೆನೆಂದು ಭಾವಿಸದೆ ಇರಲಿ; ಅವನು ಎರಡು ಮನಸ್ಸುಳ್ಳವನೂ ತನ್ನ ನಡತೆಯಲ್ಲೆಲ್ಲಾ ಚಂಚಲನೂ ಆಗಿದ್ದಾನೆ." ಎಂದು.
ಒಬ್ಬ ವ್ಯಕ್ತಿಯು ತನ್ನ ಭಾವನೆಗಳು ಮತ್ತು ಅನಿಸಿಕೆಗಳ ಮೇಲೆ ತನ್ನ ಜೀವಿತವನ್ನು ನಡೆಸುತ್ತಿದ್ದರೆ ಅವನೆಂದಿಗೂ ಸ್ಥಿರತೆಯನ್ನು ಸಾಧಿಸಲು ಸಾಧ್ಯವಿಲ್ಲ. ಹಾಗಾದರೆ ಇದಕ್ಕೆ ಪರಿಹಾರವೇನು? "ತನ್ನಲ್ಲೇ ಭರವಸೆ ಇಡುವವನು ಮೂರ್ಖನು. ಆದರೆ ಜ್ಞಾನದಿಂದ ನಡೆಯುವವನು ಉದ್ದಾರವನ್ನು ಪಡೆಯುವನು" (ಜ್ಞಾನೋಕ್ತಿ 28:26).
ಇಂದಿನಿಂದ ದೇವರ ಜ್ಞಾನದಲ್ಲಿ (ಆತನ ವಾಕ್ಯದಲ್ಲಿ) ನಡೆಯುವ ಪ್ರತಿಯೊಂದು ಪ್ರಯತ್ನವನ್ನು ಮಾಡೋಣ.
ನಿಮ್ಮ ಜೀವಿತವು ಆಶೀರ್ವಾದ ಹೊಂದಲಿ ಮತ್ತು ಬೇಗನೆ ನೀವು ಇತರ ಅನೇಕರಿಗೂ ಆಶೀರ್ವಾದನಿಧಿಯಾಗುವಿರಿ.
ಪ್ರಾರ್ಥನೆಗಳು
"ಓ ಕರ್ತನೆ, ನಿನ್ನ ನೀತಿಗೆ ಸರಿಯಾಗಿ ನನ್ನನ್ನು ನಡೆಸು. ನನ್ನ ಮುಂದೆ ನಿನ್ನ ಮಾರ್ಗವನ್ನು ಸರಾಗ ಮಾಡು" ಎಂದು ಯೇಸು ನಾಮದಲ್ಲಿ ಪ್ರಾರ್ಥಿಸುತ್ತೇನೆ. ಆಮೇನ್. (ಕೀರ್ತನೆಗಳು 5:8 ಆಧಾರದಲ್ಲಿ)
Join our WhatsApp Channel
Most Read
● ಕೆಂಪು ದೀಪದ ಎಚ್ಚರಿಕೆ ಗಂಟೆ● ದಿನ 15:40 ದಿನಗಳ ಉಪವಾಸ ಮತ್ತು ಪಾರ್ಥನೆ
● ದಿನ 17:40 ದಿನಗಳ ಉಪವಾಸ ಪ್ರಾರ್ಥನೆ
● ಕೊರತೆಯಿಲ್ಲ
● ಒತ್ತಡವನ್ನು ಓಡಿಸಲು ಇರುವ ಮೂರು ಶಕ್ತಿಯುತ ಮಾರ್ಗಗಳು
● ದಿನ 19:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಆತ್ಮೀಕ ನಿಯಮ : ಸಹವಾಸ ನಿಯಮ
ಅನಿಸಿಕೆಗಳು