ಅನುದಿನದ ಮನ್ನಾ
ಕರ್ತನನ್ನು ಮೆಚ್ಚಿಸಲಿರುವ ಖಚಿತವಾದ ಮಾರ್ಗ.
Monday, 8th of July 2024
2
1
227
Categories :
ನಂಬಿಕೆ (Faith)
"ಆದರೆ ನಂಬಿಕೆಯಿಲ್ಲದೆ ದೇವರನ್ನು ಮೆಚ್ಚಿಸುವದು ಅಸಾಧ್ಯ; ದೇವರ ಬಳಿಗೆ ಬರುವವನು ದೇವರು ಇದ್ದಾನೆ, ಮತ್ತು ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ ಎಂದು ನಂಬುವದು ಅವಶ್ಯ."(ಇಬ್ರಿಯರಿಗೆ 11:6)
ನಂಬಿಕೆಯು ಪತನದ ನಂತರ ಮನುಷ್ಯನ ಮುರಿದು ಹೋದ ಆತ್ಮದ ತುಣುಕುಗಳನ್ನು ಒಟ್ಟುಗೂಡಿಸುವಂತಹ ಒಂದು ಅಂಟಾಗಿದೆ. ಇದು ದೇವರಿಗೆ ಸಂಬಂಧಿಸಿದ ಎಲ್ಲದಕ್ಕೂ ಸಂಬಂಧ ಕಲ್ಪಿಸುವ ಮಾರ್ಗವಾಗಿದೆ! ನಂಬಿಕೆಯ ಅಡಿಪಾಯವನ್ನು ಎಚ್ಚರಿಕೆಯಿಂದ ಹಾಕದೇ ಯಾವುದೇ ಕ್ರಿಸ್ತೀಯ ಜೀವನ ಸಾಗಲು ಸಾಧ್ಯವಿಲ್ಲ (ಎಫಸ್ಸೆ 2:8)
ಹೇಗೆ ಮನುಷ್ಯನು ತನ್ನ ಸಾಂಗತ್ಯದಲ್ಲಿ ಸಂತೋಷಪಡುವ ಭರವಸೆ ಇಡುವ ವ್ಯಕ್ತಿಗಳೊಂದಿಗೆ ಪ್ರಯಾಣ ಮಾಡಲು ಯೋಚಿಸುತ್ತಾನೆಯೋ ಹಾಗೆಯೇ ದೇವರು ಸಹ ಆತನ ಮೇಲೆ ಭರವಸೆ ಇಡುವವರಿಗೆ ಮಾತ್ರ ಲಭ್ಯವಾಗುತ್ತಾನೆ. ನಂಬಿಕೆ ಇಲ್ಲದೆ ನಾವು ಏನೇ ಮಾಡಿದರೂ ಅದು ಹೃದಯದಿಂದ ಬಂದದ್ದಲ್ಲ! ಅದು ನೋಡುವುದಕ್ಕೆ ಮಾತ್ರ ವಿಶ್ವಾಸಿಸುವಂತೆ ಕಾಣುತ್ತದೆ ಅಥವಾ ಅದು ಕೇವಲ ನೋಟಕ್ಕೆ ಸೀಮಿತವಾದದಷ್ಟೇ. ಹೃದಯದಿಂದ ಬರುವ ನಂಬಿಕೆಯು ಬಹು ಬಲವುಳ್ಳದ್ದು.
ನಾನು ಭಾರತ ದೇಶದ ಒಂದು ನಿರ್ದಿಷ್ಟ ರಾಜ್ಯದಲ್ಲಿ ಸುವಾರ್ತೆ ಪ್ರಚಾರ ಸೇವೆಗಾಗಿ ಹೋಗಿದ್ದೆ. ನಾನು ಅಲ್ಲಿದ್ದ ನೂರಾರು ಜನರಿಗಾಗಿ ವೈಯಕ್ತಿಕವಾಗಿ ಪ್ರಾರ್ಥಿಸುವಷ್ಟರಲ್ಲಿ ನಾನು ಶಾರೀರಿಕವಾಗಿ ಬಹಳ ಬಳಲಿ ಹೋಗಿದ್ದೆನು. ಪ್ರಾರ್ಥನೆ ಮುಗಿದ ಮೇಲೆ ನಾನು ಹೊರಟು ಇನ್ನೇನು ನನ್ನ ಕಾರನ್ನು ಹತ್ತಿ ಕೂರಬೇಕು ಅಷ್ಟರಲ್ಲಿ ಒಬ್ಬ ಸ್ತ್ರೀಯು ತನ್ನ ಮಗಳನ್ನು ಪ್ರಾರ್ಥನೆಗಾಗಿ ಕರೆತಂದಳು. ತನ್ನ ಮನೆಯಲ್ಲಿನ ಕೆಲ ಸಮಸ್ಯೆಗಳ ಕಾರಣದಿಂದಾಗಿ ಸೇವಾ ಸಮಯದಲ್ಲಿ ಆಕೆ ಪ್ರಾರ್ಥನೆಯಲ್ಲಿ ಭಾಗಿಯಾಗಲು ಸಾಧ್ಯವಾಗಿರಲಿಲ್ಲ. ಆಕೆಯೂ ತನ್ನ ಮಗಳ ಎಲ್ಲಾ ವೈದ್ಯಕೀಯ ವರದಿಗಳನ್ನು ನನ್ನ ಗುಂಪಿನ ಸದಸ್ಯರಿಗೆ ತೋರಿಸುತ್ತಿದ್ದಳು. ನೋಡಲು ಆ ವರದಿಯಲ್ಲಿ ಯಾವುದೇ ಸಮಸ್ಯೆ ಕಾಣುತ್ತಿರಲಿಲ್ಲ. ಆದರೆ ಆಕೆಯ ಮಗಳ ಹೊಟ್ಟೆಯಲ್ಲಿ ಸಹಿಸಲಾರದಂತ ನೋವಿನ ಶೂಲವು ಅನೇಕ ತಿಂಗಳುಗಳಿಂದ ಆ ಹುಡುಗಿಯನ್ನು ಬಾದಿಸುತಿತ್ತು.
ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನನ್ನ ಶಾರೀರಿಕ ಬಳಲಿಕೆ ಕಾರಣದಿಂದಾಗಿ ಆಕೆಯ ಚಿಕ್ಕಮಗಳಿಗಾಗಿ ನಾನು ಅಷ್ಟೇನೂ ನಂಬಿಕೆಯಿಂದ ಪ್ರಾರ್ಥಿಸಲಾಗದಿದ್ದರೂ ಆತ್ಮನು ನನ್ನ ಕಿವಿಗಳಲ್ಲಿ "ಮಗನೇ, ನಿನಗೆ ಏನನಿಸುತ್ತಿದೆಯೋ ಅದರ ಮೇಲೆ ಆಧಾರಗೊಳ್ಳದೆ ನನ್ನೊಂದಿಗೆ ನಿನಗೆ ಇರುವ ಬಾಂಧವ್ಯದ ಮೇಲೆ ಭರವಸೆ ಇಟ್ಟು ದೇವರ ಬಲವನ್ನು ಸೆಳೆ" ಎಂದನು.
ಹಾಗಾಗಿ, ನಾನು ನನ್ನ ಕಣ್ಣುಗಳನ್ನು ಮುಚ್ಚಿ ಸರಳವಾಗಿ "ತಂದೆಯೇ, ಈ ಚಿಕ್ಕ ಮಗಳಿಗೆ ಸಹಾಯ ಮಾಡು. ಆಕೆಗೆ ನಿನ್ನ ಸ್ಪರ್ಶದ ಅಗತ್ಯವಿದೆ ಯೇಸು ನಾಮದಲ್ಲಿ ಪ್ರಾರ್ಥಿಸುತ್ತೇನೆ" ಎಂದಷ್ಟೇ ಪ್ರಾರ್ಥಿಸಿದೆ. ಆ ಚಿಕ್ಕ ಹುಡುಗಿಯು ಆ ಅಭಿಷೇಕದ ಭಾರದಿಂದಾಗಿ ಕೆಳಗೆ ಬಿದ್ದಳು. ಅಷ್ಟೇ. ನಿಜ ಹೇಳಬೇಕೆಂದರೆ ನಾನು ಅದನ್ನು ನಿರೀಕ್ಷಿಸಿಯೇ ಇರಲಿಲ್ಲ. ಆ ಹುಡುಗಿಯು ತನ್ನ ತಾಯಿಗೆ ತನ್ನ ದೇಹದಲ್ಲೆಲ್ಲಾ ವಿದ್ಯುತ್ ಸಂಚಾರವಾದಂತ ಅನುಭವವನ್ನು ನಾನು ಅನುಭವಿಸಿದೆ ಎಂದು ಹೇಳುತ್ತಿದ್ದಳು.
ಆ ತಿಂಗಳು ಕಳೆದ ಮೇಲೆ ನಾನು ಆ ಪ್ರದೇಶಕ್ಕೆ ಮತ್ತೆ ಹೋದಾಗ ತಾಯಿ ಮತ್ತು ಮಗಳಿಬ್ಬರು ವೇದಿಕೆ ಮೇಲೆ ಬಂದು ಕರ್ತನು ಹೇಗೆ ದಯಾಪೂರ್ವಕವಾಗಿ ಅವರನ್ನು ಸಂಧಿಸಿದನೆಂದು ಸಾಕ್ಷಿ ಹೇಳಿದರು. ಆ ಚಿಕ್ಕ ಹುಡುಗಿಗೆ ಸಂಪೂರ್ಣವಾದ ಸ್ವಸ್ತತೆ ಸಿಕ್ಕಿತ್ತು. ಅನೇಕ ತಿಂಗಳಿಗಳಿಂದ ಆ ಮಗಳನ್ನು ಬಾಧಿಸುತ್ತಿದ್ದ ಉದರ ಶೂಲವು ಅವಳನ್ನು ಬಿಟ್ಟು ಹೋಗಿ, ತಿರುಗಿ ಎಂದಿಗೂ ಬಂದಿರಲಿಲ್ಲ.
ಹಾಗಾಗಿ ನೀವು ಕರ್ತನೊಂದಿಗೆ ನಿಮ್ಮ ವೈಯಕ್ತಿಕ ಬಾಂದವ್ಯವನ್ನು ಬೆಳೆಸಿಕೊಳ್ಳಬೇಕೆಂದು ನಿಮ್ಮನ್ನು ನಾನು ಉತ್ತೇಜಿಸುತ್ತೇನೆ. ನೀವು ಹೀಗೆ ಮಾಡುವಾಗ ನೀವು ಈ ಮೊದಲಿದ್ದ ನಂಬಿಕೆಗಿಂತಲೂ ಇನ್ನು ಹೆಚ್ಚಿನ ನಂಬಿಕೆಗೆ ನೀವು ಹೆಜ್ಜೆ ಇಡುವಿರಿ. ಏಕೆ? ಏಕೆಂದರೆ ನೀವೀಗ ನೀವು ನಂಬಿದಾತನನ್ನು ತಿಳಿದುಕೊಂಡಿದ್ದೀರಿ. (2ತಿಮೋತಿ 1:12 ಓದಿರಿ) ನೀವೀಗ ಆತನೊಂದಿಗೆ ವೈಯಕ್ತಿಕವಾದ ಬಾಂಧವ್ಯ ಹೊಂದಿದ್ದೀರಿ. ಹಾಗಾಗಿ ಇನ್ನು ನಿಮಗೆ ಸಮಸ್ಯೆ ಇಲ್ಲ.
ಪ್ರಾರ್ಥನೆಗಳು
ತಂದೆಯೇ, ನೀನು ನಿಜವಾಗಿ ಏನಾಗಿದೆಯೋ ಆ ಒಂದು ಪ್ರಕಟಣೆಯು ನನ್ನಲ್ಲಿ ಇರುವಂತಹ ಎಲ್ಲಾ ಅಪನಂಬಿಕೆಗಳನ್ನು ಯೇಸು ನಾಮದಲ್ಲಿ ನುಂಗಿಬಿಡಲಿ. ಆಮೆನ್.
Join our WhatsApp Channel
Most Read
● ಕೃಪೆಯಿಂದಲೇ ರಕ್ಷಣೆ● ದಿನ 23:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ದಿನ 27:40 ದಿನಗಳ ಉಪವಾಸ ಪ್ರಾರ್ಥನೆ.
● ಪ್ರತಿಫಲಿಸಲು ಸಮಯ ತೆಗೆದುಕೊಳ್ಳುವುದು.
● ಭಾನುವಾರದ ಬೆಳಗ್ಗೆ ನಿಗದಿತ ಸಮಯಕ್ಕೆ ಸಭೆಗೆ ಹೋಗುವುದು ಹೇಗೆ
● ಆತನ ಬಲದ ಉದ್ದೇಶ.
● ದೇವರ ಪರಿಪೂರ್ಣ ಚಿತ್ತಕ್ಕಾಗಿ ಪ್ರಾರ್ಥಿಸಿರಿ
ಅನಿಸಿಕೆಗಳು