ಅನುದಿನದ ಮನ್ನಾ
ಮರೆತುಹೋದ ಆಜ್ಞೆ.
Friday, 20th of September 2024
2
0
171
Categories :
ಶಿಷ್ಯತ್ವ (Discipleship)
"ಬಳಿಕ ಹನ್ನೊಂದು ಮಂದಿ ಶಿಷ್ಯರು ಗಲಿಲಾಯಕ್ಕೆ ಹೋಗಿ ಯೇಸು ತಮಗೆ ಗೊತ್ತು ಮಾಡಿದ್ದ ಬೆಟ್ಟಕ್ಕೆ ಸೇರಿದರು. ಅಲ್ಲಿ ಆತನನ್ನು ಕಂಡು ಆತನಿಗೆ ಅಡ್ಡಬಿದ್ದರು; ಆದರೆ ಕೆಲವರು ಸಂದೇಹಪಟ್ಟರು. ಆಗ ಯೇಸು ಹತ್ತರಕ್ಕೆ ಬಂದು - ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ಎಲ್ಲಾ ಅಧಿಕಾರವು ನನಗೆ ಕೊಡಲ್ಪಟ್ಟಿದೆ. ಆದ್ದರಿಂದ ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನಮಾಡಿಸಿ"(ಮತ್ತಾಯ 28:16-19)
ಮತ್ತಾಯ ಸುವಾರ್ತೆಯಲ್ಲಿರುವ ಈ ಮಹಾ ಸೇವಾಆಜ್ಞೆಯು ಯೇಸು ತನ್ನ ಶಿಷ್ಯರಿಗೆ ಭೂಮಿ ಮೇಲೆ ಕೊಟ್ಟ ಕಡೆಯ ಸಂದೇಶವಾಗಿದೆ. ನಾವು ಇಂದಿಗೂ ಕರ್ತನಿಗೆ ಆತನ ಮಾರ್ಗದರ್ಶನಕ್ಕಾಗಿ ಸ್ತೋತ್ರ ಸಲ್ಲಿಸುವಾಗ ನಾವು ಆತ ಕೊಟ್ಟ ವಿದಾಯದ ಆಜ್ಞೆಯಂತೆ ಇದನ್ನು ನೆನಪಿನಲ್ಲಿಟ್ಟುಕೊಳ್ಳಬೇಕೆಂದು ಆತನು ಬಯಸುತ್ತಿರುವ ಪ್ರಮುಖ ಸಂದೇಶವಾಗಿದೆ.
ಶಿಷ್ಯತ್ವ ಎಂದರೇನು?
ಯಾವೊಬ್ಬ ವ್ಯಕ್ತಿಯು ಶಿಸ್ತುಬದ್ಧವಾಗಿ ಯೇಸುವನ್ನು ಹಿಂಬಾಲಿಸಲು ಯೇಸುವಿನಿಂದ ಮಾರ್ಪಟ್ಟು ಯೇಸುವಿನ ಮಾತುಗಳಿಗೆ ಬದ್ದವಾಗಿರುವುದೇ ಶಿಷ್ಯತ್ವವಾಗಿದೆ.
ಶಿಷ್ಯರನ್ನಾಗಿ ಮಾಡುವುದು ಎಂದರೇನು?
ಶಿಷ್ಯರನ್ನಾಗಿ ಮಾಡುವುದು ಎಂದರೆ ಜನರು ಯೇಸುವನ್ನು ಅರಿತುಕೊಂಡು ಆತನನ್ನು ನಂಬಿ ಆತನೊಂದಿಗೆ ಆತ್ಮಿಕ ಬಾಂಧವ್ಯಕ್ಕೆ ಪ್ರವೇಶಿಸುವಂತೆ ಅವರಿಗೆಸಹಾಯ ಮಾಡುವುದಾಗಿದೆ. (ಮತ್ತಾಯ 28:18-20)
ಮೂಲಭೂತವಾಗಿ ಒಬ್ಬನನ್ನು ವ್ಯಕ್ತಿಗತವಾಗಿ ಗಮನಹರಿಸಿ ಕ್ರೈಸ್ತ ಮಾರ್ಗದರ್ಶನದ ಮೂಲಕ ಅವನಿಗೆ ಆತ್ಮಿಕ ಪೋಷಣೆ ನೀಡುವುದಾಗಿರುತ್ತದೆ. ಶಿಷ್ಯರನ್ನಾಗಿ ಮಾಡುವುದೆಂದರೆ ಜನರೊಂದಿಗೆ ಬೆರೆಯುವುದಾಗಿದೆ.
ಇಂದು ಸಭೆಗಳು ಎಷ್ಟೋ ಸತ್ಕಾರ್ಯಗಳನ್ನು ಮಾಡುತ್ತಾ ಬರುತ್ತಿವೆ. ಮತ್ತದರಲ್ಲಿ ತಪ್ಪೇನಿಲ್ಲ. ಆದಾಗಿಯೂ ಸತ್ಯ ಏನೆಂದರೆ ತಾವೇ ಸ್ವತಃ ಶಿಷ್ಯರಾಗಿ ಇಲ್ಲದೆ ಹೋಗುವುದು ಅಥವಾ ಶಿಷ್ಯರನ್ನಾಗಿ ಮಾಡಲು ವಿಫಲರಾಗಿರುವಂತದ್ದು ಅಸ್ಥಿವಾರದ ವೈಫಲ್ಯವನ್ನು ಬಿಂಬಿಸುತ್ತದೆ.
ಇದಕ್ಕೆ ಕಾರಣ #1
ಏಕೆ ಬಹುತೇಕ ಕ್ರೈಸ್ತರು ಶಿಷ್ಯರನ್ನು ಮಾಡುವುದಿಲ್ಲ?
ಏಕೆಂದರೆ ಅವರೇ ಮೊದಲಾಗಿ ಶಿಷ್ಯರಾಗಿರುವುದಿಲ್ಲ.
ಕಾರಣ #2
ಏಕೆ ಬಹುತೇಕ ಕ್ರೈಸ್ತರು ಶಿಷ್ಯರನ್ನು ಮಾಡುವುದಿಲ್ಲ?
ಏಕೆಂದರೆ ಶಿಷ್ಯರನ್ನಾಗಿ ಮಾಡುವ ಕಾರ್ಯಕ್ಕಾಗಿ ಅವರು ತಮ್ಮ ಆರಾಮ ವಲಯದಿಂದ ಹೊರ ಬರಬೇಕಾಗಿರುತ್ತದೆ ಮತ್ತು ಅದಕ್ಕೆ ಪ್ರಯಾಸದ ಅಗತ್ಯ.
ದೇವರು ನಮ್ಮ ಜೀವಿತದಲ್ಲಿ ಒಳ್ಳೆಯ ಸಂಗತಿಗಳೇ ಇರಬೇಕೆಂದು ಬಯಸುತ್ತಾನೆ. ಆದರೂಕ್ರಿಸ್ತನ ಆಜ್ಞೆಯ ಈ ಆರಾಮದ ಕುರ್ಚಿಯನ್ನು ಎಳೆದಾಗ ಆರಾಮವೂ ವಿಗ್ರಹವಾಗಿ ಬಿಡುತ್ತದೆ. ಜೀವಿತದ ಸೌಲಭ್ಯಾಕಾಂಕ್ಷೆಯು ನಮ್ಮನ್ನು ಕ್ರಿಸ್ತನ ಸೇವಾ ಕಾರ್ಯದಲ್ಲಿ ಆಲಸಿಗಳನ್ನಾಗಿ ಎಂದಿಗೂ ಮಾಡಬಾರದು.
ಒಬ್ಬ ಕ್ರೈಸ್ತ ಶಿಷ್ಯರನ್ನು ಏಕೆ ಮಾಡಲಾರನೆಂದರೆ ಅವನು ಕರ್ತನ ಸೇವ ಕಾರ್ಯಕ್ಕಿಂತ ಇತರೆ ಚಟುವಟಿಕೆಗಳಲ್ಲಿಯೇ ಮಗ್ನ ನ್ನಾಗಿರುವಂತದ್ದು ಎಂದು ಭಾವಿಸಬಹುದು. ಇಂತಹ ಸಂದರ್ಭದಲ್ಲಿ ಅಂಥವರು ಕರ್ತನಿಗೆ ನಿನ್ನ ಸೇವಾ ಕಾರ್ಯಕ್ಕಿಂತ "ನನ್ನ ಸಂಗತಿಗಳೇ" ನನಗೆ ಬಹಳ ಮುಖ್ಯವಾದವು ಎಂದು ಮೌನವಾಗಿ ಸಂದೇಶ ಕಳಿಸುತ್ತಿರುತ್ತಾರೆ ಎಂದು ಪರಿಗಣಿಸಬಹುದು.
ಒಳ್ಳೆಯ ಸಮಾರ್ಯನ ಪ್ರೀತಿಯು ಕಾರ್ಯರೂಪದಲ್ಲಿ ಹೊರ ಪಟ್ಟು ಬೀದಿಯಲ್ಲಿ ಗಾಯಗೊಂಡು ಬಿದ್ದಿದ್ದವನ್ನು ರಕ್ಷಿಸಿತು(ಲೂಕ 10:33-34). ನೀವು ಕರ್ತನನ್ನು ನಿಜವಾಗಿ ಪ್ರೀತಿಸುವುದಾದರೆ ನೀವು ಆತನ ಜನರನ್ನು ಪ್ರೀತಿಸುವವರಾಗಿರುತ್ತೀರಿ. ಮತ್ತದು ದೇವರ ಮಾರ್ಗದಲ್ಲಿ ಅವರನ್ನು ಮುನ್ನಡೆಸುವಂತೆಯೂ ಅವರಿಗೆ ಸಹಾಯ ಮಾಡುವಂತೆಯೂ ನಿಮ್ಮನ್ನು ಅದು ಒತ್ತಾಯ ಪಡಿಸುತ್ತದೆ.
ಪ್ರಾರ್ಥನೆಗಳು
ಕರ್ತನಾದ ಯೇಸುವೇ, ನಿನ್ನ ಕೃಪೆಯನ್ನು ಪ್ರತಿಬಿಂಬಿಸುವಂತಹ ಜೀವಿತವನ್ನು ಜೀವಿಸುವಂತೆ ನನಗೆ ಸಹಾಯ ಮಾಡು. ನಿನಗಾಗಿ ಶಿಷ್ಯರನ್ನು ಮಾಡಲು ಬೇಕಾದ ಕೃಪೆಯನ್ನು ಮತ್ತು ಬಲವನ್ನು ಯೇಸು ನಾಮದಲ್ಲಿ ನನಗೆ ಅನುಗ್ರಹಿಸು ಆಮೆನ್.
Join our WhatsApp Channel
Most Read
● ಕರ್ತನ ಆಲೋಚನೆಯನ್ನು ಕೇಳಬೇಕಾದ ಅಗತ್ಯತೆ● ದಿನ 10:40 ದಿನಗಳ ಉಪವಾಸ ಪ್ರಾರ್ಥನೆ.
● ಕರ್ತನನ್ನು ಮೆಚ್ಚಿಸಲಿರುವ ಖಚಿತವಾದ ಮಾರ್ಗ.
● ಹಣಕಾಸಿನ ಅದ್ಭುತ ಬಿಡುಗಡೆ.
● ದಿನ 17:40 ದಿನಗಳ ಉಪವಾಸ ಪ್ರಾರ್ಥನೆ
● ನಿಮ್ಮ ಆರಾಮದಾಯಕ ವಲಯದಿಂದ ಹೊರಬನ್ನಿ.
● ಬದಲಾಗಲು ಇನ್ನೂ ತಡವಾಗಿಲ್ಲ
ಅನಿಸಿಕೆಗಳು