ಅನುದಿನದ ಮನ್ನಾ
1
1
151
ಸುಳ್ಳುಗಳನ್ನು ಬಯಲು ಮಾಡಿ ಸತ್ಯವನ್ನು ಅಪ್ಪಿಕೊಳ್ಳುವುದು.
Wednesday, 22nd of October 2025
"ಅನ್ಯಭಾಷೆಗಳಲ್ಲಿ ಮಾತನಾಡುವುದು ದುರಾತ್ಮನ ಕೃತ್ಯ"ಎಂದು ವೈರಿಯು (ಸೈತಾನನು) ಭಕ್ತರಿಗೆ ಈ ಸುಳ್ಳನ್ನು ಹೇಳುವ ಮೂಲಕ ಕರ್ತನು ಅವರಿಗೆ ನೀಡಿರುವ ದೈವಿಕ ವರಗಳನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಾನೆ. ಸತ್ಯವನ್ನು ಗ್ರಹಿಸುವುದು ಮತ್ತು ದೇವರ ವಾಕ್ಯದಿಂದ ನಮ್ಮನ್ನು ರಕ್ಷಿಸಿಕೊಳ್ಳುವುದು ನಮಗೆ ಎಷ್ಟು ಮುಖ್ಯವೆಂದರೆ, ಇದಿಲ್ಲದೇ ಹೋದರೆ ನಾವು ಈ ವಂಚನೆಗಳಿಗೆ ಬಲಿಯಾಗುತ್ತೇವೆ. ನಮ್ಮ ದಿಕ್ಸೂಚಿಯಾದ ಬೈಬಲ್, ಈ ತಪ್ಪು ಕಲ್ಪನೆಗಳಿಂದ ನಮ್ಮನ್ನು ಬಿಡಿಸಿ ಕರೆದೊಯ್ದು, ನಮ್ಮ ಮಾರ್ಗವನ್ನು ಬೆಳಗಿಸುವಂತದ್ದಾಗಿದೆ.
ಮಹತ್ತರ ಸುಳ್ಳು #1: ಅನ್ಯಭಾಷೆಗಳಲ್ಲಿ ಮಾತನಾಡುವುದು ದುರಾತ್ಮನ ಕಾರ್ಯ.
ಸುಳ್ಳಿನ ಪಿತಾಮಹನಾದ ಸೈತಾನನು (ಯೋಹಾನ 8:44), ಈ ಸುಳ್ಳನ್ನು ಪಿಸುಗುಟ್ಟುತ್ತಾ ನಮ್ಮ ಆತ್ಮೀಕ ಕಿವಿಗಳನ್ನು ನಾಲಿಗೆಯನ್ನು ಸ್ವರ್ಗೀಯ ಸಾಮರಸ್ಯಕ್ಕೆ ಹೊಂದಾಣಿಕೆ ಯಾಗದಂತೆ ಮಂದಗೊಳಿಸುತ್ತಾನೆ.ಆದರೆ ಪವಿತ್ರಾತ್ಮನ ದೀಕ್ಷಾಸ್ನಾನದ ಮೂಲಕ ನಾವು ಅನ್ಯಭಾಷೆಗಳಲ್ಲಿ ಮಾತನಾಡುವ ಅಥವಾ ಪ್ರಾರ್ಥಿಸುವ ಈ ಪ್ರಬಲ ವರವನ್ನು ಪಡೆದುಕೊಳ್ಳುತ್ತೇವೆ."ಆಗ ಅವರೆಲ್ಲರು ಪವಿತ್ರಾತ್ಮಭರಿತರಾಗಿ ಆ ಆತ್ಮ ತಮತಮಗೆ ನುಡಿಯುವ ಶಕ್ತಿಯನ್ನು ಕೊಡುವ ಪ್ರಕಾರ ಬೇರೆಬೇರೆ ಭಾಷೆಗಳಿಂದ ಮಾತಾಡುವದಕ್ಕೆ ಪ್ರಾರಂಭಿಸಿದರು.“ (ಅಪೊಸ್ತಲರ ಕೃತ್ಯಗಳು 2:4)
ಕ್ರಿಸ್ತನ ದೃಢ ಅನುಯಾಯಿಗಳಾದ ಅಪೊಸ್ತಲರಾದ ಪೇತ್ರ ಮತ್ತು ಪೌಲರು ಈ ವರವನ್ನು ಸ್ವೀಕರಿಸಿಕೊಂಡು ಆದಿ ಸಭೆಯು ಈ ವರವನ್ನು ಅಭ್ಯಾಸ ಮಾಡುವಂತೆ ಪ್ರೋತ್ಸಾಹಿಸಿದರು. ಅನ್ಯಭಾಷೆಗಳಲ್ಲಿ ಮಾತನಾಡುವುದು ದೆವ್ವ ಹಿಡಿದ ಕ್ರಿಯೆಯಲ್ಲ, ಬದಲಾಗಿ ಅದು ದೈವಿಕ ಸಂಪರ್ಕಸೇತುವೆ, ಸರ್ವಶಕ್ತನೊಂದಿಗಿನ ಆತ್ಮೀಕ ಸಂಭಾಷಣೆ, ಇದು ನಮ್ಮ ಆತ್ಮವನ್ನು ಬಲಪಡಿಸಿ ನಮ್ಮ ನಂಬಿಕೆಯನ್ನು ಬಲಪಡಿಸುತ್ತದೆ ಎಂದು ಅವರು ಬೋದಿಸಿದರು. “ಯಾಕಂದರೆ ಅನ್ಯಭಾಷೆಯಲ್ಲಿ ಮಾತನಾಡುವವನು ಮನುಷ್ಯರೊಂದಿಗೆ ಮಾತನಾಡದೇ ದೇವರೊಂದಿಗೆ ಮಾತನಾಡುತ್ತಿರುತ್ತಾನೆ..” (1 ಕೊರಿಂಥ 14:2)
ಮಹತ್ತರ ಸುಳ್ಳು #2: ಇದು ಪ್ರತಿಯೊಬ್ಬ ವಿಶ್ವಾಸಿಗೂ ಅಲ್ಲ.
ಈ ವರವು ಕೇವಲ ಸವಲತ್ತು ಪಡೆದ ಕೆಲವರಿಗೆ ಮಾತ್ರ ಎಂಬ ತಪ್ಪು ಕಲ್ಪನೆ ಪಾತಾಳದ ತಗ್ಗಿನಿಂದ ಹುಟ್ಟಿಕೊಂಡ ಮತ್ತೊಂದು ಸುಳ್ಳಾಗಿದೆ. ಅಪೊಸ್ತಲ ಪೌಲನು ತನ್ನ ಆತ್ಮೀಕ ಜ್ಞಾನದಲ್ಲಿ, ಪ್ರತಿಯೊಬ್ಬ ವಿಶ್ವಾಸಿಯೂ ಅನ್ಯಭಾಷೆಗಳಲ್ಲಿ ಮಾತನಾಡಬೇಕೆಂದು ಬಯಸಿದನು, ಏಕೆಂದರೆ ಅದು ನಮ್ಮ ಆತ್ಮಕ್ಕೆ ತರುವ ಆತ್ಮೀಕ ಸುಧಾರಣೆ ಮತ್ತು ಬಲವರ್ಧನೆ ಎಂಥದ್ದು ಎಂದು ಅವನು ಗುರುತಿಸಿದನು (1 ಕೊರಿಂಥ 14:5). ಅನ್ಯಭಾಷೆಗಳ ವರ ಪ್ರತಿಯೊಬ್ಬ ವಿಶ್ವಾಸಿಗೂ ಲಭ್ಯವಿದೆ, ಇದು ನಮ್ಮ ಮಾನವ ಮಿತಿಗಳ ಅಡೆತಡೆಗಳನ್ನು ಮುರಿದು ನಮ್ಮ ಆತ್ಮಗಳನ್ನು ನಮ್ಮ ಸೃಷ್ಟಿಕರ್ತನಾದ ಕರ್ತನೊಂದಿಗೆ ಒಂದುಗೂಡಿಸುವ ಆತ್ಮೀಕ ಭಾಷೆಯಾಗಿದೆ.
ಈ ವರವು ನಮ್ಮ ಮಾನವ ಗಡಿಗಳನ್ನು ಮೀರಲು ಮತ್ತು ಮಾನವ ಅಪೂರ್ಣತೆಯಿಂದ ಕಲುಷಿತವಾಗದ ಭಾಷೆಯಲ್ಲಿ ದೇವರೊಂದಿಗೆ ಸಂವಹನ ನಡೆಸಲು ನಮಗೆ ಅನುವು ಮಾಡಿಕೊಡುತ್ತದೆ. ಶತ್ರುವಿನ ಸುಳ್ಳುಗಳನ್ನು ನಂಬುವಂಥದ್ದು ದೇವರು ನಮಗಾಗಿ ಸಂಯೋಜಿಸಿರುವ ಆತ್ಮೀಕ ಸ್ವರಮೇಳವನ್ನು ತೊಂದರೆಗೊಳುವಂತೆ ಯೂ ಅಸಂಗತ ಟಿಪ್ಪಣಿಗಳನ್ನು ಅನುಮತಿಸಿದಂತೆಯೂ ಇರುತ್ತದೆ.
ಅನ್ಯಭಾಷೆಗಳಲ್ಲಿ ಮಾತನಾಡುವುದು ಆತ್ಮೀಕ ಪರಿಪಕ್ವತೆಯ ಅಳತೆಯಲ್ಲ ಆದರೆ ಆತ್ಮೀಕ ಪಕ್ವತೆಯ ಪ್ರಯಾಣ, ದೇವರೊಂದಿಗಿನ ನಮ್ಮ ಸಂಬಂಧದಲ್ಲಿ ಬೆಳವಣಿಗೆ ಮತ್ತು ಅಭಿವೃದ್ಧಿಯ ನಿರಂತರ ಪ್ರಕ್ರಿಯೆ. ನಾವು ಈ ದೈವಿಕ ವರವನ್ನು ಸ್ವೀಕರಿಸಿದಾಗ, ನಮ್ಮ ಆತ್ಮಗಳು ಆತ್ಮನ ಫಲದಿಂದ ಸಮೃದ್ಧವಾಗುತ್ತಾ, ದೇವರ ಪ್ರತಿರೂಪವನ್ನು ಇನ್ನೂ ಹೆಚ್ಚು ನಿಖರವಾಗಿ ಪ್ರತಿಬಿಂಬಿಸಲು ನಮಗೆ ಅನುವು ಮಾಡಿಕೊಡುತ್ತದೆ. (ಗಲಾತ್ಯ 5:22-23 )
ಸತ್ಯವನ್ನು ಸುಳ್ಳುಗಳಿಂದ ಬೇರ್ಪಡಿಸುವುದು ಬಹಳ ಮುಖ್ಯವಾದದ್ದು. ಹಾಗೆ ಮಾಡುವುದರಿಂದ, ನಾವು ಶತ್ರುವಿನ ಸುಳ್ಳುಗಳನ್ನು ನಿರಾಕರಿಸುವುದಲ್ಲದೆ, ನಮ್ಮ ಸ್ವರ್ಗೀಯ ತಂದೆಯ ಮಿತಿಯಿಲ್ಲದ ಪ್ರೀತಿ ಮತ್ತು ಅಪಾರ ಕೃಪೆಗೆ ನಮ್ಮ ಹೃದಯಗಳನ್ನು ತೆರೆದುಕೊಡುತ್ತೇವೆ.
ಆದ್ದರಿಂದ ನಾವು ಮಾಡಬೇಕಾದದ್ದು ಇಲ್ಲಿದೆ. ಪ್ರತಿದಿನ, ಅನ್ಯಭಾಷೆಗಳಲ್ಲಿ ಮಾತನಾಡಲು ಸಮಯವನ್ನು ಮೀಸಲಿಡ ಬೇಕು. ನಾವು ಹೀಗೆ ಮಾಡುವಾಗ, ಪವಿತ್ರಾತ್ಮನು ನಮ್ಮ ಹೆಜ್ಜೆಗಳನ್ನು ಮಾರ್ಗದರ್ಶಿಸುವುದನ್ನು, ನಮ್ಮ ಹೃದಯಗಳನ್ನು ಸೂಚಿಸುವುದನ್ನು ಮತ್ತು ನಮ್ಮನ್ನು ಎಲ್ಲಾ ಸತ್ಯಕ್ಕೆ ಕರೆದೊಯ್ಯುವುದನ್ನು ನಾವು ನೋಡುತ್ತೇವೆ.
Bible Reading: Mark 6-8
ಪ್ರಾರ್ಥನೆಗಳು
ತಂದೆಯೇ, ಯೇಸುನಾಮದಲ್ಲಿ, ನಾವು ಶತ್ರುವಿನ ಸುಳ್ಳುಗಳನ್ನು ಖಂಡಿಸುತ್ತೇವೆ ಮತ್ತು ಪವಿತ್ರಾತ್ಮನ ವರವನ್ನು ಸ್ವೀಕರಿಸುತ್ತೇವೆ. ನಾವು ನಮ್ಮ ಸ್ವರ್ಗೀಯ ಭಾಷೆಯಲ್ಲಿ ಸಂವಹನ ನಡೆಸುವಾಗ, ನಮ್ಮ ಆತ್ಮಗಳನ್ನು ನಿಮ್ಮೊಂದಿಗೆ ಒಂದುಗೂಡಿಸುವಾಗ ನಮ್ಮನ್ನು ವಿವೇಚನೆ ಮತ್ತು ನಂಬಿಕೆಯಿಂದ ತುಂಬಿಸಿ. ಆಮೆನ್.
Join our WhatsApp Channel
Most Read
● ಹನ್ನಾಳ ಜೀವಿತದಿಂದ ಕಲಿಯಬೇಕಾದ ಪಾಠ● ನಿಮ್ಮ ಆರಾಮದಾಯಕ ವಲಯದಿಂದ ಹೊರಬನ್ನಿ.
● ದೈನಂದಿನ ಮನ್ನಾ
● ಶಾಂತಿಯು ನಿಮ್ಮನ್ನು ಹೇಗೆ ಬದಲಾಯಿಸುತ್ತದೆ ಎಂಬುದನ್ನು ಅರಿತುಕೊಳ್ಳಿ.
● ಅಧರ್ಮದ ಆಳ್ವಿಕೆಯ ಬಲವನ್ನು ಮುರಿಯುವುದು-II
● ದೇವರು ತಾಯಂದಿರನ್ನು ವಿಶೇಷವಾಗಿ ಇರಿಸಿದ್ದಾನೆ
● ನೀವು ದೇವರನ್ನು ಎದುರಿಸುತ್ತಿದ್ದೀರಾ?
ಅನಿಸಿಕೆಗಳು
