"ಆದರೆ ಮೊದಲು ಆತನು ಬಹು ಕಷ್ಟಗಳನ್ನನುಭವಿಸಿ ಈಗಿನ ಕಾಲದ ಸಂತತಿಯಿಂದ ತಿರಸ್ಕರಿಸಲ್ಪಡಬೇಕು.” (ಲೂಕ 17:25)
ಪ್ರತಿಯೊಂದು ಪ್ರಯಾಣಕ್ಕೂ ಅದರದ್ದೇ ಆದ ಶಿಖರಗಳು ಮತ್ತು ಕಣಿವೆಗಳಿರುತ್ತವೆ. ನಮ್ಮ ನಂಬಿಕೆಯ ಪ್ರಯಾಣವೂ ಸಹ ಇದಕ್ಕಿಂತ ಭಿನ್ನವಾಗಿರುವುದಿಲ್ಲ. ದೇವರ ರಾಜ್ಯವನ್ನು ಸ್ಥಾಪಿಸುವ ಕ್ರಿಸ್ತನ ಮಾರ್ಗವು ನೇರವಾದದ್ದೂ ಮತ್ತು ಸಣ್ಣದಾಗಿಯೂ ಇರಲಿಲ್ಲ, ಬದಲಿಗೆ ಅದು ದುಃಖದಿಂದಲೂ ಮತ್ತು ನಿರಾಕರಣೆಗಳಿಂದಲೂ ತುಂಬಿತ್ತು. ಆತನ ಅನುಯಾಯಿಗಳಾದ ನಮಗೂ ಸಹ, ಆತ್ಮೀಕ ಬೆಳವಣಿಗೆ ಮತ್ತು ರೂಪಾಂತರದ ನಮ್ಮ ಮಾರ್ಗವು ಆಗಾಗ್ಗೆ ಸವಾಲಿನ ಭೂಪ್ರದೇಶಗಳ ಮೂಲಕ ನಾವು ಸಾಗಬೇಕಾಗುತ್ತದೆ ಎಂಬುದನ್ನು ನೆನಪಿಸುತ್ತದೆ.
"ಆದರೆ ಮೊದಲು, ಆತನು ಬಹುಕಷ್ಟಗಳನ್ನು ಅನುಭವಿಸಬೇಕು..." ಎಂಬುದರಲ್ಲಿ ಒಂದು ಆಳವಾದ ಸತ್ಯವಿದೆ. ಸಾಮಾನ್ಯವಾಗಿ, ನಾವು ಕಷ್ಟಗಳನ್ನು ಎದುರಿಸದೆಯೇ ದೇವರ ಪ್ರಸನ್ನತೆ, ಆಶೀರ್ವಾದ ಮತ್ತು ಕೃಪೆಯನ್ನು ಅನುಭವಿಸಬೇಕೆಂದು, ದೇವರ ರಾಜ್ಯದ ಮಹಿಮೆಯಲ್ಲಿ ಮುಳುಗಬೇಕು ಎಂದು ಬಯಸುತ್ತೇವೆ. ಆದರೆ ದೇವರು ತನ್ನ ಅನಂತ ಜ್ಞಾನದಲ್ಲಿ, ಪುನರುತ್ಥಾನ ಸಂಭವಿಸಬೇಕಾದರೆ, ಮೊದಲು ಶಿಲುಬೆಗೇರಿಸುವಿಕೆ ಅಗತ್ಯವಿದೆ ಎಂಬುದಾಗಿ ನಮಗೆ ನೆನಪಿಸುತ್ತಾನೆ.
ಅಪೊಸ್ತಲ ಪೌಲನು ರೋಮನ್ನರು 8:17 ರಲ್ಲಿ ಇದನ್ನು ಒತ್ತಿಹೇಳುತ್ತಾನೆ, "..... ಹೇಗೆಂದರೆ ಕ್ರಿಸ್ತನ ಕಷ್ಟಗಳಲ್ಲಿ ನಾವು ಪಾಲುಗಾರರಾಗುವುದಾದರೆ ಆತನ ಮಹಿಮೆಯಲ್ಲಿಯೂ ಪಾಲುಗಾರರಾಗುವೆವು."
ಕ್ರಿಸ್ತನ ಕಷ್ಟಗಳಲ್ಲಿ ಪಾಲುಗಾರರಾಗುವುದು ಎಂದರೆ ತ್ಯಾಗ, ಪ್ರೀತಿ ಮತ್ತು ವಿಮೋಚನೆಯ ಮಹತ್ವ ಎನ್ನುವ ಶಿಲುಬೆಯ ಸಾರವನ್ನು ಅರ್ಥಮಾಡಿಕೊಳ್ಳುವುದಾಗಿದೆ. "ಆತನು ಇನ್ನೆಷ್ಟೋ ವಿಷಯಗಳನ್ನು ಅನುಭವಿಸಿದನು..." ಇದು ಕೇವಲ ಒಂದು ಸವಾಲಿಗೋ, ಒಂದು ನಿರಾಕರಣೆಗೋ ಅಥವಾ ಒಂದು ದ್ರೋಹಕ್ಕೋ ಸೀಮಿತವಾಗಿರಲಿಲ್ಲ. ನಮ್ಮ ಪಾಪಗಳ ಭಾರ ಮತ್ತು ಲೋಕದ ಶಾಪವು ಆತನ ಮೇಲೆ ಇತ್ತು.
"ಅವನು ಧಿಕ್ಕರಿಸಲ್ಪಟ್ಟವನು, ಮನುಷ್ಯರು ಸೇರಿಸಿಕೊಳ್ಳದವನು, ಸಂಕಟಪಡುವವನು, ವ್ಯಾಧಿಪೀಡಿತನು, ಜನರು ಮುಖವನ್ನು ಓರೆಮಾಡಿಕೊಳ್ಳುವ ಧಿಕ್ಕಾರಕ್ಕೆ ಒಳಗಾದವನೂ ಆಗಿದ್ದನು."ಎಂದು ಯೆಶಾಯ 53:3 ನಮಗೆ ನೆನಪಿಸುತ್ತದೆ. ಅವನ ನೋವುಗಳು ಬಹುಸಂಖ್ಯಾತವಾಗಿದ್ದು,ಈ ಪ್ರತಿಯೊಂದೂ ಸಹ ದೇವರು ನಮ್ಮ ಮೇಲೆ ಹೊಂದಿರುವ ಅನುಪಮ ಪ್ರೀತಿಗೆ ಸಾಕ್ಷಿಯಾಗಿದೆ.
ಆದರೂ, ಯೇಸು ಪ್ರತಿಯೊಂದು ಸವಾಲನ್ನು ದೇವರ ಚಿತ್ತಕ್ಕೆ ಮತ್ತು ಮಾನವೀಯತೆಯ ಮೇಲಿನ ಆತನ ಪ್ರೀತಿಗೆ ಸಾಕ್ಷಿಯಾಗಿ ಅಚಲ ನಂಬಿಕೆಯಿಂದ ಎದುರಿಸಿದನು. ಆತನ ಸಂಕಟವು ಕೇವಲ ಒಂದು ಘಟನೆಯಾಗಿರಲಿಲ್ಲ; ಅದು ನೆರವೇರುತ್ತಿರುವ ಪ್ರವಾದನೆಯಾಗಿ, ರಕ್ಷಣೆಯ ಭವ್ಯ ವಿನ್ಯಾಸದಲ್ಲಿ ರಚಿಸಲ್ಪಡುತ್ತಿದ್ದ ಒಂದು ಸಂಕೀರ್ಣವಾದ ತುಣುಕಾಗಿತ್ತು.
"...ಈಗಿನ ಕಾಲದ ಸಂತತಿಯಿಂದ ತಿರಸ್ಕರಿಸಲ್ಪಡಬೇಕು." ನಮ್ಮಲ್ಲಿ ಅತ್ಯುತ್ತಮರಾದವರೇ ಹೆಚ್ಚಾಗಿ ಟೀಕೆಗಳನ್ನು ಎದುರಿಸುತ್ತಾರೆ ಎಂಬುದು ಆಕರ್ಷಕವಲ್ಲವೇ? ಬೆಳಕು ಕತ್ತಲೆಯನ್ನು ಹೋಗಲಾಡಿಸುವಂತೆಯೇ, ಯೇಸುವಿನ ಬೋಧನೆಗಳ ಶುದ್ಧತೆ ಮತ್ತು ಜ್ಞಾನವು ಆತನ ಕಾಲದ ಸ್ಥಾಪಿತ ಸಂಪ್ರದಾಯಗಳಿಗೆ ಬೆದರಿಕೆ ಹುಟ್ಟಿಸಿತ್ತು. ಪ್ರೀತಿ, ಕ್ಷಮೆ ಮತ್ತು ಸೇವೆಯನ್ನು ಒತ್ತಿಹೇಳಿದ ಆತನ ಕ್ರಾಂತಿಕಾರಿ ಬೋಧನೆಗಳು ಅನೇಕರಿಗೆ ಸ್ವೀಕರಿಸಲು ನುಂಗಲಾರದ ತುತ್ತಗಿದ್ದವು.
ಯೋಹಾನ 3:19 ಹೇಳುವಂತೆ, "ಆ ತೀರ್ಪು ಏನೆಂದರೆ ಬೆಳಕು ಲೋಕಕ್ಕೆ ಬಂದಿದ್ದರೂ ಮನುಷ್ಯರ ಕೃತ್ಯಗಳು ಕೆಟ್ಟವುಗಳಾಗಿರುವುದರಿಂದ ಅವರು ಬೆಳಕಿಗಿಂತ ಕತ್ತಲೆಯನ್ನೇ ಪ್ರೀತಿಸಿದರು."
ಅನುಯಾಯಿಗಳಾಗಿ ನಾವು ಅಂತಹ ನಿರಾಕರಣೆಗಳಿಂದ ಮುಕ್ತರಾಗಿಲ್ಲ. ನಾವು ಕ್ರಿಸ್ತನಂತಹ ಜೀವನವನ್ನು ನಡೆಸಲು ಶ್ರಮಿಸುವಾಗ, ಲೋಕವು ನಮ್ಮನ್ನು ಅಪಹಾಸ್ಯ ಮಾಡಬಹುದು, ನಮ್ಮನ್ನು ಲೇಬಲ್ ಮಾಡಬಹುದು ಅಥವಾ ನಮ್ಮನ್ನು ದೂರ ತಳ್ಳಬಹುದು. ಆದರೆ ನಾವು ಯೋಹಾನ 15:18 ರಲ್ಲಿರುವ ಯೇಸುವಿನ ಮಾತುಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು, "ಲೋಕವು ನಿಮ್ಮನ್ನು ದ್ವೇಷಿಸಿದರೆ, ಅದು ಮೊದಲು ನನ್ನನ್ನು ದ್ವೇಷಿಸಿತು ಎಂಬುದನ್ನು ನೆನಪಿನಲ್ಲಿಡಿ." ತಿರಸ್ಕಾರವು ನಮ್ಮ ವೈಫಲ್ಯದ ಸಂಕೇತವಲ್ಲ, ಬದಲಾಗಿ ನಾವು ಕರ್ತನಾದ ಯೇಸು ನಮಗಾಗಿ ಹಾಕಿದ ಹಾದಿಯಲ್ಲಿ ನಡೆಯುತ್ತಿದ್ದೇವೆ ಎಂಬುದರ ದೃಢೀಕರಣವಾಗಿದೆ.
ಈ ಸಂಕಟ ಮತ್ತು ನಿರಾಕರಣೆಯ ಹಾದಿಯನ್ನು ಅಪ್ಪಿಕೊಳ್ಳುವುದು ಎಂದರೆ ನೋವುಗಳನ್ನೇ ಎದುರು ನೋಡುವುದು ಅಥವಾ ಸ್ವ-ಅನುತಾಪಲ್ಲಿ ಆನಂದಿಸುವುದು ಎಂದಲ್ಲ. ಇದರರ್ಥ ಪರೀಕ್ಷೆಗಳು ಬಂದೇ ಬರುತ್ತವೆ ಎಂಬುದನ್ನು ಗುರುತಿಸಿಕೊಂಡು ಅವು ಬಂದಾಗ, ನಮ್ಮ ಬಲಕ್ಕಾಗಿ ದೇವರ ಮೇಲೆ ಅವಲಂಬಿತರಾಗಬೇಕು. ಇದರರ್ಥ ನಿರಾಕರಣೆಗಳು ಮತ್ತು ಸವಾಲುಗಳು ಪರಿಷ್ಕರಣಾ ಪ್ರಕ್ರಿಯೆಯ ಭಾಗವಾಗಿದೆ ಎಂದು ಅರ್ಥಮಾಡಿಕೊಳ್ಳುವುದಾಗಿದ್ದು, ನಮ್ಮನ್ನು ಆತ್ಮೀಕ ದೈತ್ಯರನ್ನಾಗಿ ರೂಪಿಸಿ ಕ್ರಿಸ್ತನ ಪ್ರತಿರೂಪದಲ್ಲಿ ನಮ್ಮನ್ನು ರೂಪಿಸುತ್ತದೆ ಎಂದರ್ಥ.
ನಮ್ಮ ಪರಿಶೋಧನೆಗಳಲ್ಲಿ, ಕ್ರಿಸ್ತನ ಪ್ರಯಾಣವನ್ನು ನೆನಪಿಸಿಕೊಳ್ಳೋಣ. ಆತನ ನೋವುಗಳು ಆತನನ್ನು ನಾಶನಕ್ಕೆ ಎಡೆ ಮಾಡದೇ, ಹೆಚ್ಚಿನ ಮಹಿಮೆಗೆ ತರುವುದಕ್ಕೆ ಸಾಧನವಾಗಿದ್ದವು. ಕಲ್ವಾರಿಯ ಒಂದು ಬದಿಯಲ್ಲಿ ಖಾಲಿ ಸಮಾಧಿ ಇತ್ತು. ನಿರಾಕರಣೆಯ ಇನ್ನೊಂದು ಬದಿಯಲ್ಲಿ ಆರೋಹಣವಿತ್ತು. ಮರಣದ ಮತ್ತೊಂದು ಬದಿಯಲ್ಲಿ ನಿತ್ಯಜೀವವಿತ್ತು. ಅದೇ ರೀತಿ, ನಮ್ಮ ನೋವುಗಳ ಮತ್ತೊಂದು ಬದಿಯಲ್ಲಿ ಆತ್ಮೀಕ ಬೆಳವಣಿಗೆ, ಆಳವಾದ ನಂಬಿಕೆ ಮತ್ತು ನಮ್ಮ ರಕ್ಷಕನೊಂದಿಗೆ ನಿಕಟ ಸಂಬಂಧಕ್ಕೆ ನಮ್ಮನ್ನು ಕೊಂಡೋಯ್ಯುತ್ತದೆ.
Bible Reading: Luke 20-21
ಪ್ರಾರ್ಥನೆಗಳು
ಪರಲೋಕದಲ್ಲಿರುವ ಪ್ರೀತಿಯುಳ್ಳ ತಂದೆಯೇ, ನಂಬಿಕೆ ಮತ್ತು ನಿರೀಕ್ಷೆಯೊಂದಿಗೆ ಸವಾಲುಗಳನ್ನು ಎದುರಿಸುತ್ತಾ ನಾವು ನಿಮ್ಮ ಮಗನಾದ ಯೇಸುವಿನ ಹೆಜ್ಜೆಜಾಡಿನಲ್ಲಿ ನಡೆಯುವಾಗ ನಮಗೆ ಮಾರ್ಗದರ್ಶನ ನೀಡು. ದುಃಖದ ಮತ್ತು ನಿರಾಕರಣೆಯ ಕ್ಷಣಗಳಲ್ಲಿ, ಕ್ರಿಸ್ತನ ಪ್ರಯಾಣವನ್ನೂ ಮತ್ತು ನಮ್ಮ ಪರಿಶೋಧನೆಗಳಿಗೆ ಮೀರಿ ಸಿಗುವ ಮಹಿಮೆಯನ್ನು ನಮಗೆ ಯೇಸುನಾಮದಲ್ಲಿ ನೆನಪಿಸು. ಆಮೆನ್.
Join our WhatsApp Channel
Most Read
● ಒಂದು ಹೊಸ ಪ್ರಭೇದ● ನಡೆಯುವುದನ್ನು ಕಲಿಯುವುದು
● AI ಎಂಬುದು ಕ್ರಿಸ್ತವಿರೋಧಿಯ ಆತ್ಮವೇ?
● ಸ್ವಸ್ಥ ಚಿತ್ತತೆ ಎಂಬುದು ಒಂದು ವರ
● ದಿನ 03:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಇತರರೊಂದಿಗೆ ಸಮಾಧಾನದಿಂದ ಜೀವಿಸಿರಿ
● ಭಸ್ಮವಾಗುವಿಕೆಯ ( ಅತಿಯಾದ ಆಯಾಸದಿಂದಾಗುವ ದೈಹಿಕ ಬಳಲಿಕೆ ಮತ್ತು ಮಾನಸಿಕ ಖಿನ್ನತೆ) ವ್ಯಾಖ್ಯಾನ
ಅನಿಸಿಕೆಗಳು
