ಅನುದಿನದ ಮನ್ನಾ
ದೇವರು ಹೇಗೆ ಒದಗಿಸುತ್ತಾನೆ #2
Saturday, 14th of September 2024
1
0
147
Categories :
ಉಪಕಾರಸ್ತುತಿ (Thanksgiving)
ನಿಬಂಧನೆ (Provision)
ಕರ್ತನಲ್ಲಿ ನಾವು ಬೇಡುವುದಕ್ಕೆ ಮುಂಚಿತವಾಗಿಯೇ ನಮಗೆ ಏನು ಅಗತ್ಯವಿದೆ ಎಂಬುದು ಆತನಿಗೆ ತಿಳಿದಿದೆ ಮತ್ತು ನಮ್ಮ ಅಗತ್ಯಗಳನ್ನೆಲ್ಲಾ ಆತನು "ಪೂರೈಸುವೆನು"ಎಂದು ವಾಗ್ದಾನ ಮಾಡಿದ್ದಾನೆ. ದೇವರು ತನ್ನ ಜನರ ಅಗತ್ಯಗಳನ್ನು ವೈವಿಧ್ಯಮಯವಾದ ರೀತಿಯಲ್ಲಿ ಪೂರೈಸುವವನಾಗಿದ್ದಾನೆ.
ಆತನು ಒದಗಿಸುವ ಕೆಲವು ಮಾರ್ಗಗಳು ಈ ರೀತಿಯಾಗಿದೆ:
1). ಮನುಷ್ಯರ ಕೈಗಳಿಂದ.
" ನಿಮ್ಮ ಜನವು ಭೂವಿುಯ ಮೇಲೆ ಉಳಿಯುವಂತೆಯೂ ನೀವು ಈ ವಿಪತ್ತಿಗೆ ಸಿಕ್ಕದೆ ಬಹುಜನವಾಗುವಂತೆಯೂ ದೇವರು ನನ್ನನ್ನು ನಿಮ್ಮ ಮುಂದೆ ಕಳುಹಿಸಿದನು. "(ಆದಿಕಾಂಡ 45:7)
ಯೋಸೆಫನ ಕಾಲದಲ್ಲಿ ಲೋಕದಾದ್ಯಂತ ಕಠಿಣವಾದ ಬರಗಾಲವಿತ್ತು. ಅವನನ್ನು ಮಾರಿಬಿಟ್ಟ ಅವನ ಸ್ವಂತ ಸಹೋದರರೇ ದವಸ ಧಾನ್ಯ ಕೊಂಡುಕೊಳ್ಳಲು ಐಗುಪ್ತಕ್ಕೆ ಬಂದು ಅವರು ತಮ್ಮ ಸ್ವಂತ ಸಹೋದರನ ಮುಂದೆ ನಿಂತು ತಾವೆಂತಹ ನಾಚಿಗೇಡಿನ ಕೆಲಸ ಮಾಡಿದೆವು ಎಂದು ಪಶ್ಚಾತಾಪ ಪಡುತ್ತಾರೆ.
ಆದಾಗಿಯೂ ಯೋಸೇಫನು, ಅವರನ್ನೂ ಮತ್ತು ಅವರ ಕುಟುಂಬವನ್ನೂ ತಾನು ನೋಡಿಕೊಳ್ಳುವುದಾಗಿ ಭರವಸೆ ನೀಡುತ್ತಾನೆ. ದೇವರು ತನ್ನ ಜನರಾದ ಇಸ್ರಾಯೇಲ್ಯರನ್ನು ಪರಾಂಬರಿಸಲು ಮನುಷ್ಯನ (ಯೋಸೇಫನ) ಹಸ್ತವನ್ನು ಇಲ್ಲಿ ಬಳಸಿದನು.ದೇವರು ತನ್ನ ಜನರಿಗೆ ಒದಗಿಸುವ ಮಾರ್ಗಗಳಲ್ಲಿ ಇದೂ ಒಂದು.
"ಕೊಡಿರಿ, ಆಗ ನಿಮಗೂ ಕೊಡುವರು; ಜಡಿದು ಅಲ್ಲಾಡಿಸಿ ಹೊರಚೆಲ್ಲುವ ಹಾಗೆ ತುಂಬಾ ಅಳತೆಯನ್ನು ಅಳೆದು ನಿಮ್ಮ ಸೆರಗಿಗೆ ಹಾಕುವರು. ನೀವು ಅಳೆಯುವ ಅಳತೆಯಿಂದಲೇ ನಿಮಗೂ ಅಳೆಯುವರು ಅಂದನು."(ಲೂಕ 6:38)
"ಮನುಷ್ಯರು ನಿಮ್ಮ ಹುಡಿ ತುಂಬಿಸುತ್ತಾರೆ"ಎಂದು ದೇವರ ವಾಕ್ಯ ಹೇಳುವುದನ್ನು ಗಮನಿಸಿ.
ದೇವರು ನಿಮ್ಮ ಕೆಲಸದಲ್ಲಿ ಯಜಮಾನರನ್ನು, ಸಹೋದ್ಯೋಗಿಗಳನ್ನು, ಸಂಬಂಧಿಕರನ್ನು ಅಥವಾ ಯಾವುದೇ ಒಬ್ಬ ಮನುಷ್ಯನನ್ನು ನಿಮಗಾಗಿ ಆಶೀರ್ವದಿಸಲೆಂದು ಬಳಸಬಹುದು. ಆದರೆ ನೀವಿಲ್ಲಿ ಅರ್ಥ ಮಾಡಿಕೊಳ್ಳಬೇಕಾದ ಸಂಗತಿ ಏನೆಂದರೆ ದೇವರು ನಿಮ್ಮನ್ನು ಆಶೀರ್ವದಿಸಲು ಯಾವುದೇ ಮನುಷ್ಯನನ್ನು ಬಳಸಿದರೂ ಆ ಆಶೀರ್ವಾದದ ಮೂಲ ದೇವರೇ.
2) ದೇವರು ತನ್ನ ಸ್ವಂತ ಕೈಗಳಿಂದ :
"ತರುವಾಯ ಯೋಸೇಫನನ್ನು ಅರಿಯದ ಬೇರೊಬ್ಬ ಅರಸನು ಐಗುಪ್ತದೇಶದ ಆಳಿಕೆಗೆ ಬಂದನು.
ಐಗುಪ್ತ್ಯರು ಇಸ್ರಾಯೇಲ್ಯರ ಕೈಯಿಂದ ಕ್ರೂರವಾಗಿ ಸೇವೆಮಾಡಿಸಿಕೊಂಡು.." (ವಿಮೋಚನಕಾಂಡ 1:8, 13)
ಇಸ್ರಾಯೆಲ್ಯಾರನ್ನು ಪೋಷಿಸುತಿದ್ದ ಕೈ ಈಗ ಇಲ್ಲ -ಏಕೆಂದರೆ ಯೋಸೆಫನು ಸತ್ತನು. ಇಸ್ರೇಲ್ ಮಕ್ಕಳಿಗೆ ಅನುಕೂಲಕರವಾಗಿದ್ದ ರಾಜಕೀಯ ವಾತಾವರಣವು ಈಗ ಬದಲಾಯಿತು. ಈಗ ಅವರು ತಮಗೆ ಒದಗಿಸುವಾತನು ದೇವರು ಮಾತ್ರವೇ ಎಂದು ಅರಿತುಕೊಂಡು ಆತನನ್ನೇ ಎದುರು ನೋಡುವಂತೆ ಇದು ಮಾಡಿತು ಮತ್ತು ದೇವರೂ ಸಹ ಅವರ ಈ ನಿರೀಕ್ಷೆಯನ್ನು ಆಶಾಭಂಗ ಪಡಿಸಲಿಲ್ಲ.
"ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಈ ನಾಲ್ವತ್ತು ವರುಷ ಅರಣ್ಯದಲ್ಲಿ ನಡಿಸಿದ್ದನ್ನೂ ನೀವು ತನ್ನ ಆಜ್ಞೆಗಳನ್ನು ಕೈಕೊಳ್ಳುವವರೋ ಅಲ್ಲವೋ ಎಂದು ತಿಳಿದುಕೊಳ್ಳುವದಕ್ಕೆ ನಿಮ್ಮನ್ನು ಕಷ್ಟಕ್ಕೆ ಒಳಪಡಿಸಿ ನಿಮ್ಮ ಮನೋಭಾವವನ್ನು ಪರೀಕ್ಷಿಸಿದ್ದನ್ನೂ ನೆನಪಿಗೆ ತಂದುಕೊಳ್ಳಿರಿ. [3] ಮನುಷ್ಯರು ಆಹಾರಮಾತ್ರದಿಂದಲ್ಲ, ಯೆಹೋವನ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೂ ಬದುಕುತ್ತಾರೆಂಬದು ನಿಮಗೆ ತಿಳಿಯುವಂತೆ ಆತನು ನಿಮ್ಮನ್ನು ಕಷ್ಟಕ್ಕೆ ಒಳಪಡಿಸಿ ಹಸಿವೆಯಿಂದ ಬಳಲಿಸಿ ನಿಮಗೂ ನಿಮ್ಮ ಪೂರ್ವಿಕರಿಗೂ ಗೊತ್ತಿಲ್ಲದ ಮನ್ನವನ್ನು ಕೊಟ್ಟು ಪೋಷಿಸಿದನು. [4] ಈ ನಾಲ್ವತ್ತು ವರುಷ ನಿಮ್ಮ ಮೈಮೇಲಿದ್ದ ಉಡುಪು ಜೀರ್ಣವಾಗಲಿಲ್ಲ; ನಿಮ್ಮ ಕಾಲುಗಳು ಬಾತುಹೋಗಲಿಲ್ಲ."(ಧರ್ಮೋಪದೇಶಕಾಂಡ 8:2-4)
ಅಪೋಸ್ತಲನಾದ ಪೌಲನು ದೇವರೇ ತಮ್ಮ ಅಗತ್ಯಗಳಲ್ಲಿ ಅದ್ಬುತವಾಗಿ ಅಲೌಕಿಕವಾಗಿ ಒದಗಿಸುವವನು ಎಂಬುದನ್ನು ಗುರುತಿಸಿಕೊಂಡು ಫಿಲಿಪ್ಪಿ 4:19ರಲ್ಲಿ ಹೀಗೆ ಬರೆಯುತ್ತಾನೆ.
"ನನ್ನ ದೇವರು ಕ್ರಿಸ್ತ ಯೇಸುವಿನ ಮೂಲಕ ತನ್ನ ಪ್ರಭಾವದ ಐಶ್ವರ್ಯಕ್ಕೆ ತಕ್ಕ ಹಾಗೆ ನಿಮ್ಮ ಪ್ರತಿಯೊಂದು ಕೊರತೆಯನ್ನು ನೀಗಿಸುವನು."(ಫಿಲಿಪ್ಪಿಯವರಿಗೆ 4:19 )
ಒಂದು ಶುಭ ಶುಕ್ರವಾರದ ಸೇವೆಯ ಸಮಯದಲ್ಲಿ "ನಮ್ಮ ಕರ್ತನಾದ ಯೇಸುಕ್ರಿಸ್ತನು ಕೇವಲ ನಮ್ಮ ಪಾಪಗಳಿಗೆ ಮಾತ್ರ ಬೆಲೆಯನ್ನು ತೆತ್ತದೆ ಎಲ್ಲದಕ್ಕೂ ಬೆಲೆ ಕಟ್ಟಿದ್ದಾನೆ" ಎಂದು ನಾನು ಘೋಷಿಸಿದೆನು.ಈ ಹೇಳಿಕೆಯನ್ನು ಹಲವರು ಟೀಕಿಸಿದರು ಮತ್ತು ವಿರೋಧಿಸಿದರು. ಆದರೆ ಅತ್ಯುತ್ತಮವಾದದ್ದು ಇನ್ನೂ ಬರಬೇಕಿತ್ತು. ಸುಮಾರು ಒಂದು ವಾರದ ನಂತರ ಒಬ್ಬ ಮಹಿಳೆಯು ವೇದಿಕೆಯ ಮೇಲೆ ನಿಂತು ತಮ್ಮ ಸಾಕ್ಷಿಯನ್ನು ಹೀಗೆ ನೀಡಿದರು.
" ನಾನೊಂದು ಸಂಸ್ಥೆಯಲ್ಲಿ ಸುಮಾರು 30 ಲಕ್ಷದಷ್ಟು ಸಾಲವನ್ನು ಪಡೆದಿದ್ದೆ ಸುಮಾರು ಮೂರು ವರ್ಷಗಳವರೆಗೂ ಸಾಲದ ಮೊತ್ತವನ್ನು ಪ್ರಾಮಾಣಿಕವಾಗಿ ತೀರಿಸುತ್ತಾ ಬರುತ್ತಿದ್ದೆ. ಆದರೆ ನಂತರ ನಾನು ಕೆಲಸ ಕಳೆದುಕೊಂಡದ್ದರಿಂದ ಎಲ್ಲಾ ಸಂಗತಿಗಳು ಬದಲಾದವು. ಆ ಸಂಸ್ಥೆಯು ನಮ್ಮ ಮನೆಯನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ನೋಟಿಸ್ ಕೊಟ್ಟರು. ಅಂತಹ ಪರಿಸ್ಥಿತಿಯಲ್ಲಿ ನಾನು ಕರ್ತನಿಗೆ ಮೊರೆ ಇಡುತ್ತಾ "ನೀವು ಎಲ್ಲವನ್ನು ಪಾವತಿಸಿದ್ದೀರಿ ಎಂದು ನಂಬುತ್ತೇನೆ ನನಗೂ ನನ್ನ ಮಕ್ಕಳಿಗೂ ಸಹಾಯ ಮಾಡಿರಿ ನಾನೊಬ್ಬಳು ವಿಧವೆಯಾಗಿದ್ದೇನೆ"ಎಂದು ಕಣ್ಣೀರಿನಿಂದ ಪ್ರಾರ್ಥಿಸಿದೆ.
ನಂತರ ನಾನು ಆ ಬ್ಯಾಂಕಿಗೆ ಹೋಗಿ ಸ್ವಲ್ಪ ಸಮಯಾವಕಾಶವನ್ನು ಕೇಳಬೇಕೆಂದು ನಿರ್ಧರಿಸಿದೆ. ನಾನು ಬ್ಯಾಂಕಿಗೆ ಹೋದಾಗ ಒಬ್ಬ ವ್ಯಕ್ತಿಯು ಬಂದು ಕಾಗದಪತ್ರಗಳನ್ನು ಕೊಟ್ಟು "ಕಂಪನಿಯು ಆಂತರಿಕ ಕಾರಣಗಳಿಂದ ಮುಚ್ಚಲ್ಪಟ್ಟಿದೆ ನೀವಿನ್ನು ಹೋಗಬಹುದು" ಎಂದರು. ನಾನು ಇನ್ನೇನು ತಲೆ ತಿರುಗಿ ಬೀಳಲಿದ್ದೆ ಆದರೆ "ಯೇಸುವೇ ನಿಮಗೆ ಸ್ತೋತ್ರ" ಎಂದು ಜೋರಾಗಿ ಕೂಗಿಕೊಂಡೆ.
ನಾನು ಈ ಸಾಕ್ಷಿಯನ್ನು ಕೇಳಿದಾಗ ಆ ದೇವರು ತನ್ನ ಜನರ ಬಗ್ಗೆ ಎಷ್ಟೊಂದು ಕಾಳಜಿವಹಿಸುವವನಾಗಿದ್ದಾನೆ ಎಂದು ನೆನೆದು ನನ್ನ ಕಣ್ಣಾಲಿಗಳಿಂದ ನೀರು ಸರಿಯಲಾರಂಭಿಸಿತು.
ಅರಿಕೆಗಳು
(ನೀವು ಈ ಪ್ರಾರ್ಥನೆಯನ್ನು ಬಿಡದೆ ಏಳು ದಿನಗಳವರೆಗೂ ಮಾಡಿರಿ. ಅದ್ಭುತವಾದ ಪ್ರತಿಫಲವನ್ನು ಕಾಣುವಿರಿ)
1). ಕರ್ತನೇ, ಯೇಸು ನಾಮದಲ್ಲಿ ನಿನ್ನ ಮಾರ್ಗದಲ್ಲಿಯೇ ನನಗೆ ನಿನ್ನಿಂದ ಸೌಲಭ್ಯ ಒದಗುತ್ತದೆ.
2).ಕರ್ತನೇ, ನನ್ನ ಅಗತ್ಯಗಳಿಂದ ನನ್ನ ಬಯಕೆಗಳ ಕಡೆಗೆ ನನ್ನನ್ನು ಯೇಸುನಾಮದಲ್ಲಿ ಕರೆದೊಯ್ಯಿರಿ.
3). ಕರ್ತನೇ, ಯೇಸು ನಾಮದಲ್ಲಿ ನನ್ನನ್ನು ಸರಿಯಾದ ದಿಕ್ಕಿನಲ್ಲಿ ನಡೆಸಿರಿ.
4). ತಂದೆಯೇ, ಯೇಸುನಾಮದಲ್ಲಿ ದೈವೀಕ ಸಂಪನ್ಮೂಲಗಳನ್ನು ನನಗೆ ಅನುಗ್ರಹಿಸಿರಿ.
5). ಕರ್ತನೇ,ಯೇಸು ನಾಮದಲ್ಲಿ ನಾನು ಸರಿಯಾದ ಜನರೊಡನೆ ಸಂಪರ್ಕಿಸುವಂತೆ ಮಾಡಿರಿ.
6). ಕರ್ತನೇ, ಯೇಸುವಿನ ಹೆಸರಲ್ಲಿ ನನಗಾಗಿ ಅವಕಾಶಗಳ ದೈವೀಕ ಬಾಗಿಲುಗಳನ್ನು ತೆರೆಯಿರಿ.
1). ಕರ್ತನೇ, ಯೇಸು ನಾಮದಲ್ಲಿ ನಿನ್ನ ಮಾರ್ಗದಲ್ಲಿಯೇ ನನಗೆ ನಿನ್ನಿಂದ ಸೌಲಭ್ಯ ಒದಗುತ್ತದೆ.
2).ಕರ್ತನೇ, ನನ್ನ ಅಗತ್ಯಗಳಿಂದ ನನ್ನ ಬಯಕೆಗಳ ಕಡೆಗೆ ನನ್ನನ್ನು ಯೇಸುನಾಮದಲ್ಲಿ ಕರೆದೊಯ್ಯಿರಿ.
3). ಕರ್ತನೇ, ಯೇಸು ನಾಮದಲ್ಲಿ ನನ್ನನ್ನು ಸರಿಯಾದ ದಿಕ್ಕಿನಲ್ಲಿ ನಡೆಸಿರಿ.
4). ತಂದೆಯೇ, ಯೇಸುನಾಮದಲ್ಲಿ ದೈವೀಕ ಸಂಪನ್ಮೂಲಗಳನ್ನು ನನಗೆ ಅನುಗ್ರಹಿಸಿರಿ.
5). ಕರ್ತನೇ,ಯೇಸು ನಾಮದಲ್ಲಿ ನಾನು ಸರಿಯಾದ ಜನರೊಡನೆ ಸಂಪರ್ಕಿಸುವಂತೆ ಮಾಡಿರಿ.
6). ಕರ್ತನೇ, ಯೇಸುವಿನ ಹೆಸರಲ್ಲಿ ನನಗಾಗಿ ಅವಕಾಶಗಳ ದೈವೀಕ ಬಾಗಿಲುಗಳನ್ನು ತೆರೆಯಿರಿ.
Join our WhatsApp Channel
Most Read
● ಅಂತ್ಯದಿನಗಳ ಕುರಿತು ಪ್ರವಾದನ ಯುಕ್ತ ಗೂಡಾರ್ಥ ವಿವರಣೆ● ಕೃತಜ್ಞತಾ ಸ್ತೋತ್ರ ಸಲ್ಲಿಸುವುದರಲ್ಲಿರುವ ಬಲ
● ದಿನ 05:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ದಿನ 31:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಹಣಕಾಸಿನ ಅದ್ಭುತ ಬಿಡುಗಡೆ.
● ದೇವರು ನಿಮ್ಮ ಶರೀರದ ಕುರಿತು ಚಿಂತಿಸುತ್ತಾನಾ?
● ಕೆಟ್ಟ ನಡವಳಿಕೆಗಳಿಂದ ಬಿಡುಗಡೆ
ಅನಿಸಿಕೆಗಳು