english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ಮೋಸದ ಜಗತ್ತಿನಲ್ಲಿ ಸತ್ಯವನ್ನು ವಿವೇಚಿಸಿ ತಿಳಿಯುವುದು.
ಅನುದಿನದ ಮನ್ನಾ

ಮೋಸದ ಜಗತ್ತಿನಲ್ಲಿ ಸತ್ಯವನ್ನು ವಿವೇಚಿಸಿ ತಿಳಿಯುವುದು.

Thursday, 23rd of October 2025
0 1 152
Categories : ದೇವರವಾಕ್ಯ ( Word of God ) ಬುದ್ಧಿವಂತಿಕೆ (Wisdom) ವಂಚನೆ (Deception)
ನಂಬಿಕೆಯ ನಿರಂತರ ತಿರುಚುವ ಪ್ರಯಾಣದಲ್ಲಿ, ವಂಚನೆಯ ಕಾರ್ಗತ್ತಲಿನಿಂದ ಸತ್ಯದ ಬೆಳಕನ್ನು ವಿವೇಚಿಸುವುದು ಬಹಳ ಮುಖ್ಯ. ದೇವರ ಶಾಶ್ವತ ವಾಕ್ಯವಾದ ಬೈಬಲ್, ಮಹಾ ಮೋಸಗಾರನಾದ ಸೈತಾನನ ಕುರಿತು ನಮಗೆ ಎಚ್ಚರಿಕೆ ನೀಡುತ್ತದೆ, ಅವನು ಬೆಳಕಿನ ದೇವದೂತನಂತೆ ವೇಷ ಧರಿಸಿ ಬಂದು (2 ಕೊರಿಂಥ 11:14), ದೇವರ ಮಕ್ಕಳನ್ನು ದಾರಿ ತಪ್ಪಿಸಲು ಸುಳ್ಳಿನ ಹೆಣಿಗೆಯನ್ನು ಹೆಣೆಯುತ್ತಾನೆ ಎಂದು ಅದು ಹೇಳುತ್ತದೆ. 

ಸೈತಾನನು ಎಂದಿಗೂ ಭೀಕರ ರೂಪಗಳಲ್ಲಿ ನಮಗೆ ಕಾಣಿಸಿಕೊಳ್ಳುವುದಿಲ್ಲ. ಬದಲಾಗಿ ತೋರಿಕೆಯಲ್ಲಿ ದೈವಿಕ ಕಾಂತಿಯಿಂದ ಮುಸುಕುಧರಿಸಿ ಬರುತ್ತಾನೆ, ಇದರಿಂದಾಗಿ ಲಕ್ಷಾಂತರ ಜನರು ನೀತಿಯ ಮಾರ್ಗದಿಂದ ದಾರಿ ತಪ್ಪುತ್ತಾರೆ. ಆದ್ದರಿಂದ, ಪ್ರತಿಯೊಬ್ಬ ವಿಶ್ವಾಸಿಯು ದೇವರ ವಾಕ್ಯದಲ್ಲಿ ನೆಲೆಗೊಳ್ಳಬೇಕಾದ್ದು ವಂಚನೆಯಿಂದ ಸತ್ಯವನ್ನು ವಿವೇಚಿಸಿ ಪ್ರತ್ಯೇಕಿಸಿ ಕೊಂಡು ಕರ್ತನ ಶಾಶ್ವತ ಸತ್ಯದ ಬೆಳಕಿನಲ್ಲಿ ನಡೆಯುವುದು ಬಹಳ ಅವಶ್ಯಕ. " ಇದೇನೂ ಆಶ್ಚರ್ಯವಲ್ಲ; ಸೈತಾನನು ತಾನೇ ಪ್ರಕಾಶರೂಪವುಳ್ಳ ದೇವದೂತನ ವೇಷವನ್ನು ಹಾಕಿಕೊಳ್ಳುವಾಗ.... " ( ಕೊರಿಂಥ 11:14 NIV) 

ಸೈತಾನನ ಮಹಾ ವಂಚನೆಯೆಂದರೆ ತನ್ನನ್ನು ಸುಳ್ಳಿನ ಪಿತಾಮಹನಾಗಿ ಅಲ್ಲದೇ, ಬದಲಾಗಿ ದೈವಿಕ ಪ್ರಕಟಣೆ ಮೂಲವಾಗಿ ತೋರಿಸಿಕೊಳ್ಳುವ ಅವನ ಸಾಮರ್ಥ್ಯ.ದೇವರ ವಾಕ್ಯದ ಮೇಲೆ ಆಧಾರಗೊಳ್ಳದವರನ್ನು ಬಲೆಗೆ ಬೀಳಿಸುವ ಆಶಯದೊಂದಿಗೆ ಅವನು ಜ್ಞಾನೋದಯದ ಸೋಗಿನಲ್ಲಿ ತನ್ನ ಮೋಸದ ಉದ್ದೇಶವನ್ನು ಮರೆಮಾಚುತ್ತಾನೆ. ಹಿಂದೆ  ಇತಿಹಾಸದಲ್ಲಿ ಅವನು ಇದನ್ನು ಹಲವು ಬಾರಿ ಮಾಡಿ, ಲಕ್ಷಾಂತರ ಕ್ರೈಸ್ತರನ್ನು ನಿಜವಾದ ನಂಬಿಕೆಯಿಂದ ದೂರವಿಟ್ಟಿದ್ದಾನೆ.

ಆದಿಕಾಂಡ 27 ರಲ್ಲಿ, ಏಸಾವನ ವಸ್ತ್ರಗಳನ್ನು ಧರಿಸಿದ ಯಾಕೋಬನು ತನ್ನ ತಂದೆ ಇಸಾಕನನ್ನು ವಂಚಿಸಿದನು. ಯಾಕೋಬನು ಏಸಾವನನ್ನು ಅನುಕರಿಸಿದ್ದು ನಿಜವಾದ ವರ ಅಥವಾ ನಿಜವಾದ ಗುರುತನ್ನು ಕೂಡ ತಪ್ಪಾಗಿ ಅನುಕರಿಸಬಹುದಾಗಿದ್ದು, ಇದು ಒಂದು ಗ್ರಹಿಕೆಗೂ ಮತ್ತು ವಾಸ್ತವಕ್ಕೂ ನಡುವೆ ಬಿರುಕು ಉಂಟುಮಾಡುತ್ತದೆ ಎಂಬುದನ್ನು ಸೂಚಿಸುತ್ತದೆ. ಯಾಕೋಬನ ವಂಚಿಸುವ ಕೃತ್ಯವು ಬಾಹ್ಯ ನೋಟವನ್ನು ಮೀರಿ ನೋಡಬೇಕಾದ ಮತ್ತು ಆಧಾರಗೊಳ್ಳಬೇಕಾದ ಸತ್ಯವನ್ನು ಗ್ರಹಿಸಬೇಕೆಂಬವಿವೇಚನೆಯ ಅಗತ್ಯವನ್ನು ಬಲಪಡಿಸುತ್ತದೆ


"ದೇವರ ಉಪದೇಶವನ್ನೂ ದೇವರ ಬೋಧನೆಯನ್ನೂ ವಿಚಾರಿಸುವ ಎಂದು ಅವರು ಹೇಳದಿದ್ದರೆ ಅವರಿಗೆ ಎಂದಿಗೂ ಬೆಳಗಾಗುವದಿಲ್ಲ." (ಯೆಶಾಯ 8:20 NIV) ದೇವರ ವಾಕ್ಯದ ಸತ್ಯದಿಂದ ಬೇರ್ಪಟ್ಟವರು ಶಾಶ್ವತ ಕತ್ತಲೆಯಲ್ಲಿ ಅಲೆದಾಡುತ್ತಿರುತ್ತಾ ಶತ್ರುಗಳ ಸುಳ್ಳುಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ಕಾರ್ಗತ್ತಲಿನಲ್ಲಿ ಕಳೆದುಹೋದವರು ದೇವರಿಂದ ದೂರವಾದವರೂ ಮತ್ತು ಆತ್ಮೀಕ ಶೂನ್ಯತೆಯ ಹಸಿವಿನೊಂದಿಗೆ ಹೋರಾಡುವ ಆತ್ಮಗಳ ದುಃಖದ ಚಿತ್ರಣವನ್ನು ಯೆಶಾಯ ಚಿತ್ರಿಸುತ್ತಾನೆ. ಅಂಥವರು ಕಹಿತನದಿಂದ, ದೇವರನ್ನು ಶಪಿಸುತ್ತಾ  ಆತನ ದೈವಿಕ ಸಾನಿಧ್ಯದಿಂದ ಹೊರಗೆ ಸಾಂತ್ವನವನ್ನು ಹುಡುಕುತ್ತಾರೆ. ದೇವರ ವಾಕ್ಯವನ್ನು ತಿರಸ್ಕರಿಸುವ ಪರಿಣಾಮವಾಗಿ ಉಂಟಾಗುವ ಆತ್ಮೀಕ ಕುರುಡುತನವು ಆಗಾಗ್ಗೆ ದೇವರ ವಿರುದ್ಧ ಕೋಪ ಮತ್ತು ಅಸಮಾಧಾನಕ್ಕೆ ಕಾರಣವಾಗಿ ಅದು ಅಂತಹ ವ್ಯಕ್ತಿಗಳನ್ನು ದೇವರಿಂದ ಮತ್ತಷ್ಟು ದೂರ ಮಾಡುತ್ತದೆ.

ಈ ಸಂಗತಿಗಳನ್ನು ಕೇಳಿ ಕಂಡವನು ಯೋಹಾನನೆಂಬ ನಾನೇ. ನಾನು ಕೇಳಿ ಕಂಡಾಗ ಈ ಸಂಗತಿಗಳನ್ನು ನನಗೆ ತೋರಿಸಿದ ದೇವದೂತನಿಗೆ ನಮಸ್ಕಾರಮಾಡಬೇಕೆಂದು ಅವನ ಪಾದಕ್ಕೆ ಬಿದ್ದೆನು. ಅವನು ನನಗೆ - ಮಾಡಬೇಡ ನೋಡು; ನಾನು ನಿನಗೂ ಪ್ರವಾದಿಗಳಾಗಿರುವ ನಿನ್ನ ಸಹೋದರರಿಗೂ ಈ ಪುಸ್ತಕದಲ್ಲಿ ಬರೆದಿರುವ ಮಾತುಗಳನ್ನು ಕೈಕೊಂಡು ನಡೆಯುವವರಿಗೂ ಜೊತೆಯ ದಾಸನಾಗಿದ್ದೇನೆ; ದೇವರಿಗೇ ನಮಸ್ಕಾರಮಾಡು ಎಂದು ಹೇಳಿದನು.(ಪ್ರಕಟನೆ 22:8-9 NIV)

ಇಲ್ಲಿ ದೇವದೂತನ ಪರಲೋಕದ ಮಹಿಮೆಯನ್ನು ನೋಡಿ ಅಪೊಸ್ತಲ ಯೋಹಾನನು ಕೂಡ ಒಂದು ಕ್ಷಣ ಪ್ರಭಾವಿತನಾಗಿಬಿಡುತ್ತಾನೆ,.ಇದು ಮನುಷ್ಯನ ದುರ್ಬಲತೆಯನ್ನು ವಿವರಿಸುತ್ತದೆ. ದೇವದೂತನ ಉಪದೇಶವು ದೇವರನ್ನು ಮಾತ್ರ ಆರಾಧಿಸುವ ನಮ್ಮ ಉದ್ದೇಶವನ್ನು ಒತ್ತಿಹೇಳುತ್ತದೆ, ನಮ್ಮ ಭಕ್ತಿ ಮತ್ತು ಆರಾಧನೆಯನ್ನು ನಮ್ಮ ಸೃಷ್ಟಿಕರ್ತ ದೇವರಿಗೆ ಮಾತ್ರ ಸಲ್ಲಿಸತಕ್ಕದ್ದು ಎಂದು ಹೇಳುತ್ತದೆ.

ನಾವು ವಂಚನೆಯನ್ನು ಹೇಗೆ ಜಯಿಸುತ್ತೇವೆ? "ನಿನ್ನ ವಾಕ್ಯವೇ ನನ್ನ ಕಾಲಿಗೆ ದೀಪ, ನನ್ನ ದಾರಿಗೆ ಬೆಳಕು." (ಕೀರ್ತನೆ 119:105) 

ವಾಕ್ಯದ ದೈವಿಕ ಪ್ರಕಟಣೆಗಳಲ್ಲಿ ನಾವು ಮುಳುಗುವ ಮೂಲಕ, ನಾವು ಸತ್ಯದ ಬೆಳಕಿನಿಂದ ಪ್ರಕಾಶಿಸಲ್ಪಡುತ್ತೇವೆ, ನಮ್ಮ ಹೆಜ್ಜೆಗಳನ್ನು ನೀತಿಯ ಹಾದಿಯಲ್ಲಿ ಮಾರ್ಗದರ್ಶಿಸುತ್ತ ವಂಚನೆಯ ಬಲೆಗಳಿಂದ ನಮ್ಮನ್ನು ರಕ್ಷಿಸಿಕೊಳ್ಳುತ್ತೇವೆ.

Bible Reading: Mark 9-10
ಪ್ರಾರ್ಥನೆಗಳು
ಶಾಶ್ವತ ತಂದೆಯೇ, ವಂಚನೆಯನ್ನು ಪ್ರಕಟಪಡಿಸಿ ನಿಮ್ಮ ಶಾಶ್ವತ ಸತ್ಯವನ್ನು ನೋಡಲು ನಮಗೆ ವಿವೇಚನೆಯನ್ನು ನೀಡು. ನಿಮ್ಮ ವಾಕ್ಯವು ನಮ್ಮ ಹೆಜ್ಜೆಗಳನ್ನು ಮಾರ್ಗದರ್ಶಿಸುವ ದೀಪವಾಗಲಿ, ಕಾರ್ಗತ್ತಲನ್ನು ಹೋಗಲಾಡಿಸುವ ಬೆಳಕಾಗಿ, ನಮ್ಮನ್ನು ನೀತಿ ಮತ್ತು ತಿಳುವಳಿಕೆಯಲ್ಲಿ ನಡೆಯುವಂತೆ ಕರೆದೊಯ್ಯಲಿ. ಯೇಸುವಿನ ಹೆಸರಿನಲ್ಲಿ ನಾವು ಪ್ರಾರ್ಥಿಸುತ್ತೇವೆ ತಂದೆಯೇ. ಆಮೆನ್.

Join our WhatsApp Channel


Most Read
● ಹನ್ನೆರಡು ಮಂದಿಯಲ್ಲಿ ಒಬ್ಬರು.
● ನಮ್ಮ ರಕ್ಷಕನ ಬೇಷರತ್ತಾದ ಪ್ರೀತಿ
● ಕರ್ತನನ್ನು ಮೆಚ್ಚಿಸಲಿರುವ ಖಚಿತವಾದ ಮಾರ್ಗ.
● ಓಟವನ್ನು ಗೆಲ್ಲಲು ಇರುವ ದೀರ್ಘ ತಾಳ್ಮೆ ಮತ್ತು ದೀರ್ಘ ಪ್ರಯತ್ನ ಎಂಬ ಎರಡು ಪದಗಳು.
● ಸತ್ಯವೇದ ಆಧಾರಿತ ಸಮೃದ್ಧಿಯನ್ನು ಹೊಂದಲಿರುವ ರಹಸ್ಯ
● ಕನಸುಗಳ ಕೊಲೆಪಾತಕರು
● ದೇವರ 7 ಆತ್ಮಗಳು
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2025 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್