ಅನುದಿನದ ಮನ್ನಾ
ಆತ್ಮೀಕ ಬಾಗಿಲುಗಳನ್ನು ಮುಚ್ಚುವುದು
Monday, 21st of October 2024
3
0
211
Categories :
ಮಾನಸಿಕ ಆರೋಗ್ಯ (Mental Health)
"ಮತ್ತು ಸೈತಾನನಿಗೆ ಎಂದಿಗೂ ಅವಕಾಶ ಕೊಡಬೇಡಿರಿ." (ಎಫೆಸ 4:27)
ನಮ್ಮ ಮನಸ್ಸು ಮತ್ತು ಭಾವನೆಗಳಲ್ಲಿ ನಾವು ಎದುರಿಸುವ ಅನೇಕ ಯುದ್ಧಗಳು-ಅದು ಖಿನ್ನತೆ, ಆತಂಕ ಅಥವಾ ಕೋಪವಾಗಿರಬಹುದು- ಇವು ಕೇವಲ ದೈಹಿಕ ಅಥವಾ ಮಾನಸಿಕವಾದದ್ದು ಆಗಿರುವುದಿಲ್ಲ. ಸಾಮಾನ್ಯವಾಗಿ, ನಾವು ತಿಳಿಯದೆ ತೆರೆದಿರುವ ಆತ್ಮೀಕ ಬಾಗಿಲುಗಳಿಂದ ಅವು ಉದ್ಭವಿಸುತ್ತವೆ. ಈ ಬಾಗಿಲುಗಳು ನಮ್ಮ ಜೀವನದಲ್ಲಿ ಶತ್ರುಗಳಿಗೆ ಪ್ರವೇಶವನ್ನು ನೀಡಿ ಅಲ್ಲಿ ಅವನು ಭಯ, ಅನುಮಾನ ಮತ್ತು ಗೊಂದಲದ ಬೀಜಗಳನ್ನು ಬಿತ್ತಲು ಸಹಕರಿಸುತ್ತದೆ ಆದರೆ ಒಳ್ಳೆಯ ಸುದ್ದಿ ಎಂದರೆ ಪಶ್ಚಾತ್ತಾಪದ ಶಕ್ತಿ ಮತ್ತು ದೇವರ ಅನುಗ್ರಹದ ಮೂಲಕ, ಈ ಬಾಗಿಲುಗಳನ್ನು ನಾವು ಮುಚ್ಚಬಹುದು ಮತ್ತು ಶಾಂತಿಯನ್ನು ಪುನಃಸ್ಥಾಪಿಸಬಹುದು.
ಕೆಲವೊಮ್ಮೆ, ನಾವು ಕಡೆಗಣಿಸುವ ಅಥವಾ ಅಲ್ಪ ಎಂದು ಎಣಿಸುವ ಪಾಪಗಳೇ ದೊಡ್ಡ ಸಮಸ್ಯೆಗಳಿಗೆ ಕಾರಣವಾಗುತ್ತವೆ. ವಿಷಕಾರಿ ಸಂಬಂಧಗಳಲ್ಲಿ ತೊಡಗಿಸಿಕೊಳ್ಳುವುದು, ಮಾದಕದ್ರವ್ಯದ ದುರುಪಯೋಗ, ಕ್ಷಮಿಸದಿರುವಿಕೆ, ಅಥವಾ ಕೋಪ ಮತ್ತು ಕಹಿಗಳಲ್ಲಿ ತೊಡಗಿಸಿಕೊಳ್ಳುವುದನ್ನು ಇವುಗಳು ಒಳಗೊಂಡಿರಬಹುದು. ಈ ವಿಷಯಗಳು ಮೊದಲಿಗೆ ಅತ್ಯಲ್ಪವೆಂದು ತೋರುತ್ತಿದ್ದರೂ, ಕಾಲಾನಂತರದಲ್ಲಿ, ಖಿನ್ನತೆ, ಆತಂಕ ಮತ್ತು ಹತಾಶೆಯ ಭಾವನೆಗಳಂತಹ ದೊಡ್ಡ ಸಮಸ್ಯೆಗಳಿಗೆ ಕಾರಣವಾಗುವ ತೆರೆದ ಬಾಗಿಲುಗಳಾಗುತ್ತವೆ.
ಎಫೆಸ 4:27 ರಲ್ಲಿ, ಪೌಲನು "ಸೈತಾನನಿಗೆ ಸ್ಥಳವಾಕಾಶ ಕೊಡಬೇಡಿರಿ " ಎಂದು ಎಚ್ಚರಿಸುತ್ತಾನೆ. ಇದರರ್ಥ ಎಷ್ಟೇ ಚಿಕ್ಕದಾಗಿ ತೋರಿದರೂ - ನಾವು ಪಾಪವನ್ನು ಅನುಮತಿಸುವುದರ ವಿರುದ್ಧ ನಮ್ಮನ್ನು ಕಾಪಾಡಿಕೊಳ್ಳಬೇಕು - ಪಾಪವು ನಮ್ಮ ಜೀವನದ ಮೇಲೆ ಹಿಡಿತವನ್ನು ಪಡೆಯಲು ಬಿಡಬಾರದು. ಪಾಪವು ಬಾಗಿಲಿನಲ್ಲಿನ ಬಿರುಕಿನ ಹಾಗೆ; ಒಮ್ಮೆ ಅದು ತೆರೆದರೆ, ಶತ್ರುವಿಗೆ ಪ್ರವೇಶಿಸಲು ಮತ್ತು ವಿನಾಶವನ್ನು ಉಂಟುಮಾಡಲು ಆ ಸಣ್ಣ ತೆರೆಯುವಿಕೆಯ ಸಾಕು. ಒಂದು ಸಣ್ಣ, ಅಗೋಚರ ಸಮಸ್ಯೆಯಾಗಿ ಪ್ರಾರಂಭವಾಗುವ ಸಂಗತಿಗಳು ದೊಡ್ಡ ಹೋರಾಟವಾಗಿ ಅದು ಬದಲಾಗಬಹುದು.
ಪರಿಹರಿಸಲಾಗದ ಕೋಪವು ಕಹಿಯಾಗಿ ಉಲ್ಬಣಗೊಳ್ಳುತ್ತದೆ. ಕ್ಷಮಿಸದಿರುವುದು ನಮ್ಮ ಹೃದಯವನ್ನು ಕಠಿಣಗೊಳಿಸಬಹುದು ಮತ್ತು ನಮ್ಮ ಶಾಂತಿಯನ್ನು ಕಸಿದುಕೊಳ್ಳಬಹುದು. ನಮ್ಮ ಜೀವನದ ಸಣ್ಣ ಕ್ಷೇತ್ರಗಳಲ್ಲಿ ರಾಜಿ ಮಾಡಿಕೊಳ್ಳುವುದು, ಅನೈತಿಕ ನಡವಳಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಅಥವಾ ನಕಾರಾತ್ಮಕ ಆಲೋಚನೆಗಳು ಬೇರುಬಿಡಲು ಅವಕಾಶ ನೀಡುವುದು, ನಮ್ಮ ಮಾನಸಿಕ ಮತ್ತು ಭಾವನಾತ್ಮಕ ಸ್ವಸ್ಥತೆ ಮೇಲೆ ಆಕ್ರಮಣ ಮಾಡಲು ಶತ್ರುಗಳಿಗೆ ಬಾಗಿಲನ್ನು ತೆರೆದುಕೊಡಲು ಕಾರಣವಾಗಬಹುದು.
ಪಾಪವು ನಮ್ಮನ್ನು ದೇವರಿಂದ ಬೇರ್ಪಡಿಸುತ್ತದೆ ಮತ್ತು ಆ ಪ್ರತ್ಯೇಕತೆಯಲ್ಲಿ ನಾವು ಅಶಾಂತಿ, ಗೊಂದಲ ಮತ್ತು ನೋವನ್ನು ಅನುಭವಿಸುತ್ತೇವೆ ಎಂದು ಸತ್ಯವೇದ ಸ್ಪಷ್ಟವಾಗಿ ಹೇಳುತ್ತದೆ. ಆದಾಗ್ಯೂ, ನಮಗೆ ಒಂದು ನಿರೀಕ್ಷೆಇದೆ . 1 ಯೋಹಾನ 1:9ಹೇಳುವಂತೆ “ನಾವು ನಮ್ಮ ಪಾಪಗಳನ್ನು ಒಪ್ಪಿಕೊಂಡು ಬಿಟ್ಟುಬಿಟ್ಟರೆ ಆತನು ನಂಬಿಗಸ್ತನೂ ನೀತಿವಂತನೂ ಆಗಿದ್ದು ನಮ್ಮ ಪಾಪಗಳನ್ನು ಕ್ಷಮಿಸಿ ನಮ್ಮನ್ನು ಎಲ್ಲಾ ಅನೀತಿಯಿಂದ ಶುದ್ಧೀಕರಿಸುವವನಾಗಿದ್ದಾನೆ.” ಈ ಆತ್ಮೀಕ ಬಾಗಿಲುಗಳನ್ನು ಮುಚ್ಚಲು ಪಶ್ಚಾತ್ತಾಪವೇ ಕೀಲಿಕೈ ಯಾಗಿದೆ. ಇದು ದೀನತೆಯ ಕಾರ್ಯವಾಗಿದ್ದು , ನಾವು ದೇವರ ಮುಂದೆ ನಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುತ್ತಾ , ಆತನ ಕ್ಷಮೆಯನ್ನು ಎದುರು ನೋಡುವವರಾಗುತ್ತೇವೆ ಮತ್ತು ಆತನ ಚಿತ್ತಕ್ಕೆ ಹೊಂದಿಕೆಯಾಗದ ಯಾವುದನ್ನಾದರೂ ದೂರಮಾಡಬಯಸುತ್ತೇವೆ.
ಆದರೆ ಪಶ್ಚಾತ್ತಾಪವು ಕೇವಲ "ನನ್ನನ್ನು ಕ್ಷಮಿಸಿ" ಎಂದು ಹೇಳುವುದಕ್ಕಿಂತ ಮಿಗಿಲಾದದ್ದಾಗಿದೆ ; ಇದು ನಿಜವಾಗಿಯೂ ಪಾಪದಿಂದ ದೂರ ಸರಿಯುವುದು ಮತ್ತು ದೇವರ ಸತ್ಯದ ಬೆಳಕಿನಲ್ಲಿ ನಡೆಯುವುದನ್ನು ಆರಿಸಿಕೊಳ್ಳುವ ಕ್ರಿಯೆಯನ್ನು ಇದು ಒಳಗೊಂಡಿದೆ. ನಾವು ಪಶ್ಚಾತ್ತಾಪಪಟ್ಟಾಗ, ನಾವು ಸೈತಾನನಿಗೆ ತೆರೆದಿರುವ ಬಾಗಿಲುಗಳನ್ನು ಮುಚ್ಚುವುದಷ್ಟೇ ಅಲ್ಲದೆ, ನಾವು ದೇವರ ಪ್ರಸನ್ನತೆ, ಆತನ ಶಾಂತಿ ಮತ್ತು ಆತನಲ್ಲಿನ ಸ್ವಸ್ಥತೆಯನ್ನು ಸಹ ನಮ್ಮ ಜೀವನದಲ್ಲಿ ಆಹ್ವಾನಿಸುತ್ತೇವೆ.
ಪವಿತ್ರಾತ್ಮನು ನಮ್ಮನ್ನು ಅಪರಾಧಿಗಳಾಗಿ ತೋರಿಸುವಾಗ, ಅದು ಯಾವಾಗಲೂ ಪುನಃಸ್ಥಾಪನೆಯ ಗುರಿಯೊಂದಿಗೆ ಇರುತ್ತದೆಯೇ ಹೊರತು ಖಂಡನೆಯಿಂದ ಕೂಡಿರುವುದಿಲ್ಲ. ಸೈತಾನನು ಕ್ಷಮಾಪಣೆ ಹೊಂದಲು ನಮ್ಮನ್ನು ಅನರ್ಹರೆಂದು ಖಂಡಿಸಲು ಪ್ರಯತ್ನಿಸಬಹುದು, ನಾವು ತುಂಬಾ ದೂರ ಹೋಗಿದ್ದೇವೆ ಎಂದು ನಮಗೆ ಹೇಳಬಹುದು, ಆದರೆ ದೇವರ ಅನುಗ್ರಹವು ನಮ್ಮನ್ನು ಶುದ್ಧೀಕರಿಸಲು ಮತ್ತು ನಮ್ಮ ಮನಸ್ಸನ್ನು ನವೀಕರಿಸಲು ಸಾಕಾದದ್ದಾಗಿದೆ . ಪಶ್ಚಾತ್ತಾಪದ ಶಕ್ತಿಯ ಮೂಲಕ, ಶತ್ರುಗಳ ಭದ್ರಕೋಟೆಗಳನ್ನು ಮುರಿಯಬಹುದು ಮತ್ತು ನಾವು ದೇವರೊಂದಿಗೆ ಶಾಂತಿ ಮತ್ತು ಅನ್ಯೋನ್ಯತೆಯನ್ನೂ ಪುನಃಸ್ಥಾಪಿಸಿಕೊಳ್ಳಬಹುದು.
ನಿಮ್ಮ ಜೀವನವನ್ನು ಪರಿಶೋಧಿಸಿಕೊಳ್ಳಲು ಇಂದು ಸ್ವಲ್ಪ ಸಮಯ ತೆಗೆದುಕೊಳ್ಳಿ. ನೀವು ಆತ್ಮೀಕ ಬಾಗಿಲುಗಳನ್ನು ತೆರೆದಿರುವ ಯಾವುದೇ ಕ್ಷೇತ್ರಗಳಿವೆಯೇ? ಬಹುಶಃ ಇದು ಕ್ಷಮೆಯಿಲ್ಲದಿರುವಿಕೆ, ಕಹಿ ಬೆಳೆಯಲು ಅವಕಾಶ ನೀಡಿರುವುದು ಅಥವಾ ದೇವರ ಚಿತ್ತಕ್ಕೆ ಹೊಂದಿಕೆಯಾಗದ ಕ್ರಿಯೆಗಳಲ್ಲಿ ತೊಡಗಿರುವುದು ಯಾವುದಾದರೂ ಆಗಿರಬಹುದು. ಮುಚ್ಚಬೇಕಾದ ಯಾವುದೇ ಬಾಗಿಲುಗಳಿದ್ದರೆ ಅದನ್ನು ಪ್ರಕಟಪಡಿಸಲು ಪವಿತ್ರಾತ್ಮವನ್ನು ಕೇಳಿಕೊಳ್ಳಿ.
ನೀವು ಪಾಪದ ಮೂಲಕ ಆತ್ಮಿಕ ಬಾಗಿಲುಗಳನ್ನು ತೆರೆದಿದ್ದೀರಿ ಎಂದು ನೀವು ಗುರುತಿಸಿದರೆ, ಪಶ್ಚಾತ್ತಾಪದ ಹೃದಯದಿಂದ ದೇವರ ಮುಂದೆ ಬರಲು ಹಿಂಜರಿಯದಿರಿ. ನಿಮ್ಮ ಪಾಪಗಳನ್ನು ಒಪ್ಪಿಕೊಳ್ಳಿ, ಆತನಲ್ಲಿ ಕ್ಷಮೆಯನ್ನು ಬೇಡಿಕೊಳ್ಳಿ ಮತ್ತು ಆ ಬಾಗಿಲುಗಳನ್ನು ಮುಚ್ಚಿ ಮತ್ತು ನಿಮ್ಮ ಹೃದಯ ಮತ್ತು ಮನಸ್ಸಿಗೆ ಶಾಂತಿಯನ್ನು ಮರುಸ್ಥಾಪಿಸಲು ಆತನನ್ನು ಬೇಡಿಕೊಳ್ಳಿ. ತೆರೆದ ಬಾಹುಗಳೊಂದಿಗೆ ನಮ್ಮನ್ನು ಸ್ವಾಗತಿಸಲು ಮತ್ತು ನಮ್ಮ ಆತ್ಮಗಳನ್ನು ನವೀಕರಿಸಲು ದೇವರು ಯಾವಾಗಲೂ ಸಿದ್ಧನಾಗಿದ್ದಾನೆ.
ಮುಂದಿನ ವಾರದಲ್ಲಿ, ವೈಯಕ್ತಿಕ ಜೀವಿತವನ್ನು ಗಮನಿಸಲು ಮತ್ತು ಪ್ರಾರ್ಥನೆಮಾಡಲು ಸಮಯವನ್ನು ಮೀಸಲಿಡಿ. ನಿಮ್ಮ ಜೀವನದಲ್ಲಿ ನೀವು ಶತ್ರುಗಳಿಗೆ ನೆಲೆಯನ್ನು ನೀಡಿದ ಯಾವುದೇ ಪ್ರದೇಶಗಳನ್ನು ಪ್ರಕಟ ಪಡಿಸಲು ದೇವರನ್ನು ಕೇಳಿಕೊಳ್ಳಿ. ಅವುಗಳನ್ನು ಬರೆದುಕೊಂಡು ಪ್ರತಿದಿನ, ಆ ಸಂಗತಿಗಳಿಗಾಗಿ ನಿರ್ದಿಷ್ಟವಾಗಿ ಪ್ರಾರ್ಥಿಸಿ, ದೇವರ ಕ್ಷಮೆ ಮತ್ತು ಆತನ ಮಾರ್ಗಗಳಲ್ಲಿ ನಡೆಯಲು ಶಕ್ತಿಯನ್ನು ಬೇಡಿಕೊಳ್ಳಿ. ನೀವು ಪ್ರಾರ್ಥಿಸುವಾಗ, ದೇವರು ಆ ಆತ್ಮಿಕ ಬಾಗಿಲುಗಳನ್ನು ಮುಚ್ಚುತ್ತಿದ್ದಾನೆ ಮತ್ತು ಆತನ ಶಾಂತಿಯಿಂದ ನಿಮ್ಮನ್ನು ತುಂಬುತ್ತಿದ್ದಾನೆ ಎಂದು ನಂಬಿರಿ.
ಪ್ರಾರ್ಥನೆಗಳು
ತಂದೆಯೇ, ನಾನು ಪಶ್ಚಾತ್ತಾಪದ ಹೃದಯದಿಂದ ನಿಮ್ಮ ಸಮ್ಮುಖಕ್ಕೆ ಬರುತ್ತೇನೆ. ನನ್ನ ಕಾರ್ಯಗಳು ಮತ್ತು ವರ್ತನೆಗಳ ಮೂಲಕ ಸೈತಾನನಿಗೆ ನನ್ನ ಜೀವನದೊಳಗೆ ಪ್ರವೇಶಿಸುವಂತೆ ನಾನು ಬಾಗಿಲುಗಳನ್ನು ತೆರೆದುಕೊಟ್ಟೆನು ಎಂದು ನಾನು ಒಪ್ಪಿಕೊಳ್ಳುತ್ತೇನೆ, ಅದಕ್ಕಾಗಿ ನಾನು ನಿನ್ನ ಕ್ಷಮೆಯನ್ನು ಬೇಡುತ್ತೇನೆ,. ಕರ್ತನೇ, ನಾನು ತೆರೆದಿರುವ ಪ್ರತಿಯೊಂದು ಬಾಗಿಲನ್ನು ಮುಚ್ಚಿ ಮತ್ತು ನಿನ್ನ ಚಿತ್ತಕ್ಕನುಸಾರವಾಗಿ ಇರದ ಎಲ್ಲವುಗಳಿಂದ ನನ್ನನ್ನು ಶುದ್ಧೀಕರಿಸಿ ನಿನ್ನ ಶಾಂತಿಯಿಂದ ನನ್ನನ್ನು ತುಂಬು, ನಿನ್ನ ಮಾರ್ಗಗಳಲ್ಲಿ ನಡೆಯಲು ನನಗೆ ಯೇಸುನಾಮದಲ್ಲಿ ಸಹಾಯ ಮಾಡು. ಆಮೆನ್.
Join our WhatsApp Channel
Most Read
● ದಿನ 13:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.● ನಿಮ್ಮ ಆರಾಮದಾಯಕ ವಲಯದಿಂದ ಹೊರಬನ್ನಿ.
● ಇತರರಿಗಾಗಿ ಪ್ರಾರ್ಥಿಸುವುದು
● ಪವಿತ್ರಾತ್ಮನಿಗಿರುವ ಹೆಸರುಗಳು ಮತ್ತು ಬಿರುದುಗಳು
● ಹಣಕಾಸಿನ ಅದ್ಭುತ ಬಿಡುಗಡೆ.
● ಸಮಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದು ಹೇಗೆ
● ದೇವರು ಹೇಗೆ ಒದಗಿಸುತ್ತಾನೆ #3
ಅನಿಸಿಕೆಗಳು