ಅನುದಿನದ ಮನ್ನಾ
ದೈವಿಕ ಅನುಕ್ರಮ - 1
Saturday, 2nd of November 2024
4
2
120
Categories :
ದೈವಿಕ ಅನುಕ್ರಮ (Divine Order)
ಸತ್ಯವೇದದ 1 ಕೊರಿಂಥ 14:33 ರಲ್ಲಿ , "ದೇವರು ಸಮಾಧಾನಕ್ಕೆ ಕಾರಣನೇ ಹೊರತು ಗಲಿಬಿಲಿಗೆ ಕಾರಣನಲ್ಲ." ಎಂದು ದೇವರವಾಕ್ಯ ಹೇಳುತ್ತದೆ.
ಗೊಂದಲ ಎಂದರೇನು? ಗೊಂದಲವು ದೈವಿಕ ಅನುಕ್ರಮದ ಅನುಪಸ್ಥಿತಿಯೇ ಹೊರತು ಬೇರೇನೂ ಅಲ್ಲ. ಇಂದು ಅನೇಕ ಮನೆಗಳು, ಅನೇಕ ಕುಟುಂಬಗಳು, ಸಂಸ್ಥೆಗಳು, ವ್ಯವಹಾರಗಳು, ಚರ್ಚ್‌ಗಳು ಮತ್ತು ಪ್ರಾರ್ಥನಾ ಗುಂಪುಗಳು ಗೊಂದಲ, ಕಲಹ ಮತ್ತು ವಿಭಜನೆಯ ಮನೋಭಾವದ ದಾಳಿಗೊಳಗಾಗುತ್ತಿವೆ.
ಇಂತಹ ಅವ್ಯವಸ್ಥೆಗೆ ಕಾರಣವೇನು?
ಒಂದೇ ಒಂದು ಕಾರಣವೆಂದರೆ ಸಂಗತಿಗಳ ದೈವಿಕ ಅನುಕ್ರಮದ ಅನುಪಸ್ಥಿತಿ. ನೀವಿಂದು ನಿಮ್ಮ ಸುತ್ತಲೂ ತುಂಬಾ ಒತ್ತಡ ಮತ್ತು ಹತಾಶೆ ಹೊಂದಿರುವಂತಹ ಜನರನ್ನೇ ನೋಡುತ್ತೀರಿ.ಮತ್ತೊಮ್ಮೆ, ಇದಕೆ ಕಾರಣ ಎಂದರೆ ಅವರ ಜೀವನದಲ್ಲಿ ದೈವಿಕ ಅನುಕ್ರಮದ ಕೊರತೆಯೇ ಆಗಿದೆ .
ಆ ಕಾಲದಲ್ಲಿ ಹಿಜ್ಕೀಯನು ಮರಣಕರ ರೋಗದಲ್ಲಿ ಬಿದ್ದನು. ಆಗ ಆಮೋಚನ ಮಗನೂ ಪ್ರವಾದಿಯೂ ಆದ ಯೆಶಾಯನು ಅವನ ಬಳಿಗೆ ಬಂದು ಅವನಿಗೆ, “ನಿನ್ನ ಮನೆಯ ವಿಷಯವಾಗಿ ವ್ಯವಸ್ಥೆ ಮಾಡು. ಏಕೆಂದರೆ ನೀನು ಉಳಿಯುವ ಹಾಗಿಲ್ಲ, ಸಾಯಬೇಕಾಗಿದೆ ಎಂಬುದಾಗಿ ಯೆಹೋವನು ಹೇಳುತ್ತಾನೆ” ಎಂದು ಹೇಳಿದನು.(ಯೆಶಾಯ 38:1)
ದೇವರು ಅರಸನಾದ ಹಿಜ್ಕೀಯನಿಗೆ ಅವನ ಮನೆಯ ವ್ಯವಸ್ಥೆಯು ಕ್ರಮವಾಗಿಲ್ಲ ಎಂದು ಹೇಳಿದನು ಮತ್ತು ಅವನು ಬದುಕುವುದಿಲ್ಲ ಎಂದು ಸಹ ಹೇಳಿದನು. ಆದರೆ ಅದುವೇ ಅವನು ಸಾಯಲು ಕಾರಣ ಆಗಿತ್ತು. ದೇವ ಜನರೇ, ನಮ್ಮ ಜೀವನವನ್ನು ದೈವಿಕ ಮಾದರಿಯ ಪ್ರಕಾರ (ದೇವರ ಚಿತ್ತಕ್ಕನುಸಾರ) ಹೊಂದಾಣಿಕೆಗೊಳಿಸದೇ ಹೋದರೆ , ನಾವು ನಮ್ಮ ಜೀವಿತದಲ್ಲಿ ಎಲ್ಲೆಡೆ ಸಾವು ಮತ್ತು ಸೋಲನ್ನು ಮಾತ್ರ ನೋಡುವವರಾಗುತ್ತೇವೆ. ನನಗೆ ಇದನ್ನು ವಿವರಿಸಲು ಅನುಮತಿಸಿ.
"ಆ ದಿನಗಳಲ್ಲಿ ಶಿಷ್ಯರು ಹೆಚ್ಚುತ್ತಾ ಬರಲಾಗಿ ಅವರೊಳಗೆ ಗ್ರೀಕ್ ಭಾಷೆಯವರು ಇಬ್ರಿಯ ಭಾಷೆಯವರ ಮೇಲೆ ದೂರು ನೀಡುತ್ತಾ ಅನುದಿನದ ಉಪಚಾರದಲ್ಲಿ ನಮ್ಮ ವಿಧವೆಯರನ್ನು ಸರಿಯಾಗಿ ಪರಾಂಬರಿಸುವುದಿಲ್ಲವೆಂದು ಗೊಣಗುಟ್ಟಿದರು."(ಅ. ಕೃ. 6:1 )
ಆದಿಸಭೆಯಲ್ಲಿ , ದೈನಂದಿನ ಆಹಾರದ ವಿತರಣೆಯ ಕ್ರಮದಲ್ಲಿ ಸಮಸ್ಯೆ ಉಂಟಾಗಿತ್ತು. ಅದು ದೊಡ್ಡ ಗೊಂದಲ ಮತ್ತು ಕಲಹಕ್ಕೆ ಕಾರಣವಾಯಿತು. ಆಗ ದೇವರ ಆತ್ಮದ ಮೂಲಕ ನೇತೃತ್ವ ಹೊಂದಿದ ಅಪೊಸ್ತಲರು ಈ ಕೆಲಸವನ್ನು ಮೇಲ್ವಿಚಾರಣೆ ಮಾಡಲು ಏಳು ಜನರನ್ನು ನೇಮಿಸಿ ಅವರಾದರೋ ಪ್ರಾರ್ಥನೆ ಮತ್ತು ಸುವಾರ್ತೆ ಪ್ರಚಾರ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.
ಇದರ ಪರಿಣಾಮವಾಗಿ "ದೇವರ ವಾಕ್ಯವು ಪ್ರಬಲವಾಯಿತು; ಶಿಷ್ಯರ ಸಂಖ್ಯೆಯು ಯೆರೂಸಲೇಮಿನಲ್ಲಿ ಬಹಳವಾಗಿ ಹೆಚ್ಚುತ್ತಾ ಬಂದಿತು. ಯಾಜಕರಲ್ಲಿಯೂ ಬಹುಜನರು ಕ್ರಿಸ್ತ ನಂಬಿಕೆಗೆ ಒಳಗಾಗುತ್ತಾ ಬಂದರು." ಎಂದು ದೇವರ ವಾಕ್ಯ ಹೇಳುತ್ತದೆ.(ಅ. ಕೃ. 6:7)
ಹೌದು! ಸಹಜವಾಗಿ, ಯೆರುಸಲೆಮಿನಲ್ಲಿ ಸಭೆಯ ಬೆಳವಣಿಗೆಗೆ ಕಾರಣವಾದ ಹಲವಾರು ಇತರ ಅಂಶಗಳೂ ಸಹ ಇವೆ. ಆದರೆ ನಿರ್ವಿವಾದವಾಗಿ, ವಿಷಯಗಳನ್ನು ಕ್ರಮವಾಗಿ ಹೊಂದಿಸುವುದು ಸಭೆಯ ಬೆಳವಣಿಗೆಗೆ ಮುಖ್ಯ ಕಾರಣವಾಯಿತು.
ನೀವೂ ಸಹ ದೈವೀಕ ಆದ್ಯತೆಗಳ ಮೇಲೆ ಕೆಲಸ ಮಾಡಿ.ಆಗ ನಿಮ್ಮ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ದೈವಿಕ ಕ್ರಮವು ಹರಿದು ಬರುತ್ತದೆ.
ಪ್ರಾರ್ಥನೆ
ತಂದೆಯೇ, ಸರಿಯಾದ ಸಮಯದಲ್ಲಿ ಸರಿಯಾದ ಕೆಲಸಗಳನ್ನು ಮಾಡಲು ನಿಮ್ಮ ದೈವಿಕ ಜ್ಞಾನವನ್ನೂ ಮತ್ತು ತಿಳುವಳಿಕೆಯನ್ನೂ ಯೇಸುನಾಮದಲ್ಲಿ ನನಗೆ ಅನುಗ್ರಹಿಸಿ ಆಮೆನ್.
ಪ್ರಾರ್ಥನೆಗಳು
ತಂದೆಯೇ, ಸರಿಯಾದ ಸಮಯದಲ್ಲಿ ಸರಿಯಾದ ಕೆಲಸಗಳನ್ನು ಮಾಡಲು ನಿಮ್ಮ ದೈವಿಕ ಜ್ಞಾನವನ್ನೂ ಮತ್ತು ತಿಳುವಳಿಕೆಯನ್ನೂ ಯೇಸುನಾಮದಲ್ಲಿ ನನಗೆ ಅನುಗ್ರಹಿಸಿ ಆಮೆನ್.
Join our WhatsApp Channel
Most Read
● ದೈವಿಕ ಶಾಂತಿಯನ್ನು ಪ್ರವೇಶಿಸುವುದು ಹೇಗೆ● ಕರ್ತನೇ ನನ್ನ ದೀಪವನ್ನು ಬೆಳಗಿಸು.
● ದೇವರ ಎಚ್ಚರಿಕೆಗಳನ್ನು ಕಡೆಗಣಿಸಬೇಡಿರಿ
● ದಿನ 03 : 40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಮನುಷ್ಯನ ಹೃದಯ
● ನಿರ್ಣಾಯಕ ಅಂಶವಾಗಿರುವ ವಾತಾವರಣದ ಒಳನೋಟಗಳು-1
● ಸರ್ವಬೀಗದ ಕೈ
ಅನಿಸಿಕೆಗಳು