ಅನುದಿನದ ಮನ್ನಾ
ನೀವು ಎಷ್ಟು ಜೋರಾಗಿ ಮಾತಾಡ ಬಲ್ಲಿರಿ?
Friday, 19th of July 2024
3
1
172
Categories :
ದೇವರವಾಕ್ಯದ ಅರಿಕೆ(Confessing the word)
ನಾನೊಮ್ಮೆ ದಡೂತಿ ಬಾಕ್ಸರ್ ಗಳ ಪಂದ್ಯಕ್ಕೇ ಮುನ್ನ ನಡೆಯುವ ಅವರ ಸಂದರ್ಶನವನ್ನು ನೋಡುತ್ತಿದ್ದೆ. ಸರಿ ಎಲ್ಲಾ ಜನಪ್ರಿಯ ಜನಸಂಧಿತ ಸ್ಪರ್ಧೆಗಳಲ್ಲಿ ಇರುವಂತೆಯೇ ತಮ್ಮ ವಿಜಯದ ಕುರಿತು ಧೈರ್ಯವಾಗಿ ಅವರು ಮಾತನಾಡುತ್ತಿದ್ದರು. ವಾಸ್ತವವಾಗಿ ಅವರ ಮಾತುಗಳನ್ನು ಕೇಳಿದ ಮೇಲೆ ಯಾರು ಗೆಲ್ಲಬಹುದು ಎಂದು ನಮ್ಮಲ್ಲಿ ಬಹುತೇಕರು ಯೋಚಿಸಿರುತ್ತೇವೆ.
ಅವರ ಮಾತುಗಳು ಬಿಸಿಬಿಸಿಯಾಗಿಯೂ ಬಿರುಸಾಗಿಯೂ ಇದ್ದವು. ಅವರಿಬ್ಬರೂ ಬಾಕ್ಸಿಂಗ್ ರಿಂಗ್ ಗೆ ಕಾಲಿಡುವ ಮೊದಲು ಅಥವಾ ದಾಳಿ ಮಾಡುವ ಮೊದಲು ನೀಡುವ ಪ್ರತಿ ಹೇಳಿಕೆಯೂ ಆತ್ಮವಿಶ್ವಾಸದಿಂದ ತಳತಳಿಸುತ್ತಿತ್ತು. ಪ್ರಪಂಚದಾದ್ಯಂತ ಲಕ್ಷಾಂತರ ಜನರು ವೀಕ್ಷಿಸುತ್ತಿರುವ ಕ್ಯಾಮರಗಳ ಮುಂದೆ ಅವರು ಮಾತನಾಡುವಾಗ ಅವರ ಮನಸ್ಸಿನಲ್ಲಿ ಏನಾಗುತ್ತಿರಬಹುದು ಎಂದು ಯೋಚಿಸಿ ಈ ಬಾಕ್ಸಿಂಗ್ ಹೋರಾಟವನ್ನು ಯಾರು ಗೆಲ್ಲಬಹುದು ಎಂದು ನಾನು ಆಶ್ಚರ್ಯ ಚಕಿತನಾಗಿದ್ದೆ.
ಅವರು ಯಾಕಷ್ಟು ಜೋರಾಗಿ ಆತ್ಮ ವಿಶ್ವಾಸದಿಂದ ಮಾತನಾಡುತ್ತಾರೆ ನಿಮಗೆ ಗೊತ್ತೇ? ಯಾಕೆಂದರೆ ಅವರಲ್ಲಿ ಪ್ರತಿಯೊಬ್ಬರೂ ಗೆಲುವು ತಮ್ಮದೇ ಎಂದು ನಂಬಿರುತ್ತಾರೆ. ಅದಕ್ಕಾಗಿ ಅವರು ಅಷ್ಟು ಜೋರಾಗಿ ಧೈರ್ಯದಿಂದ ಹೇಳು ತ್ತಿರುತ್ತಾರೆ. ನೋಡಿ, ನಮಗೆ ಯಾವುದೋ ಅಥವಾ ಒಂದು ನಿರ್ದಿಷ್ಟ ಫಲಿತಾಂಶಕ್ಕಾಗಿ ದೇವರನ್ನು ನಂಬಬೇಕೆಂದು ಕಲಿಸಲಾಗುತ್ತದೆ. ಆದರೆ ನಾವು ಯಾವುದನ್ನು ನಂಬುತ್ತೇವೋ ಅದರ ಕುರಿತು ಜೋರಾಗಿ ಮಾತನಾಡುವುದನ್ನು ನಮಗೆ ಕಲಿಸುವುದು ಅಪರೂಪ.
"ಹೃದಯದಿಂದ ನಂಬುವದರ ಮೂಲಕ ನೀತಿಯು ದೊರಕುತ್ತದೆ. ಬಾಯಿಂದ ಅರಿಕೆಮಾಡುವದರ ಮೂಲಕ ರಕ್ಷಣೆಯಾಗುತ್ತದೆ." ಎಂದು ಸತ್ಯವೇದ ಹೇಳುತ್ತದೆ. (ರೋಮಾಪುರದವರಿಗೆ 10:10)
ನಿಮಗಿದರ ಅರ್ಥಗೊತ್ತೇ? ರಕ್ಷಣೆಯು ಕೇವಲ ಹೃದಯದಲ್ಲಿ ನಂಬಿದ್ದರಿಂದ ಮಾತ್ರ ಬರುವುದಿಲ್ಲ. ಆದರೆ ನೀವು ಅದನ್ನು ಹೇಳಬೇಕು ಮತ್ತು ನೀವು ಕೇಳುವಂತ ಎಲ್ಲರ ಮುಂದೆ ಧೈರ್ಯವಾಗಿ ಜೋರಾಗಿ ಅದನ್ನು ಅರಿಕೆ ಮಾಡಬೇಕು. "ಹೀಗಿದ್ದರೂ - ನಂಬಿದೆನು, ಆದದರಿಂದ ಮಾತಾಡಿದೆನು ಎಂಬ ಶಾಸ್ತ್ರೋಕ್ತಿಯಲ್ಲಿ ಕಾಣುವ ನಂಬಿಕೆಯ ಭಾವವನ್ನೇ ಹೊಂದಿ ನಾವೂ ನಂಬಿದವರು, ಆದದರಿಂದ ಮಾತಾಡುತ್ತೇವೆ." ಎಂದು ಅಪೋಸ್ತಲನಾದ ಪೌಲನು 2 ಕೊರಿಂಥದವರಿಗೆ 4:13ರಲ್ಲಿ ಹೇಳುತ್ತಾನೆ. ನಾವು ಅರಿಕೆ ಮಾಡುವವರೆಗೂ ನಮ್ಮ ನಂಬಿಕೆಯು ಸಮೀಕರಣವು ಸಂಪೂರ್ಣ ಹೊಂದುವುದೇ ಇಲ್ಲ.
ಮಿತ್ರರೇ, ನಿಮ್ಮ ಆರೋಗ್ಯದ ಕುರಿತು ನೀವು ಏನನ್ನು ನಂಬಿದ್ದೀರಿ? ನಿಮ್ಮ ಆರ್ಥಿಕ ಸ್ಥಿತಿ ಕುರಿತು, ನಿಮ್ಮ ಮದುವೆ ಕುರಿತು, ನಿಮ್ಮ ಶಿಕ್ಷಣ ಅಥವಾ ನಿಮ್ಮ ಸಂಗಾತಿಯ ಕುರಿತು ಏನನ್ನು ನಂಬುತ್ತಿದ್ದೀರಿ? ನೀವು ನಿಜಕ್ಕೂ ಯೇಸು ಸ್ವಸ್ತಗೊಳಿಸುವನು ಎಂದು ನಂಬುತ್ತೀರಾ? ನೀವು ನಿಜಕ್ಕೂ ನಿಮ್ಮ ಸಂಗಾತಿ ಉತ್ತಮವಾಗಿ ಬದಲಾಗುವರು ಎಂದು ನಂಬುತ್ತೀರಾ? ನಿಮ್ಮ ಮಗುವು ದುಷ್ಟಚಟದಿಂದ ಬಿಡುಗಡೆ ಹೊಂದುವುದು ಎಂದು ನಂಬುತ್ತೀರಾ? ನೀವು ಈ ಸಾಲಗಳಿಂದ ಹೊರ ಬರುತ್ತೀರಿ ಎಂದು ನಂಬುತ್ತೀರಾ? ನೀವು ಹಾಗೆ ಮಾಡುವುದಾದರೆ ಅದನ್ನು ಜೋರಾಗಿ ಅರಿಕೆ ಮಾಡಿರಿ. "ನಾವು ನಂಬಿದೆವು, ಅದಕ್ಕಾಗಿ ಮಾತನಾಡಿದೆವು" ಎಂದು ಪೌಲನು ಹೇಳಿದ್ದಾನೆ.
ನೀವು ಈಗ ಏನನ್ನು ನೋಡುತ್ತಿದ್ದೀರೋ ಅದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ವರದಿಗಳನ್ನೆಲ್ಲ ನೋಡಿ ಕೈ ಚೆಲ್ಲಬೇಡಿರಿ. ಕೇವಲ ನೀವೇನನ್ನು ನಂಬಿದ್ದೀರೋ ಅದನ್ನೇ ಅರಿಕೆ ಮಾಡುತ್ತಾ ಇರಿ. "...ದುರ್ಬಲನೂ ಶೂರನೆಂದುಕೊಳ್ಳಲಿ" ಎಂದು ಸತ್ಯವೇದ ಹೇಳುತ್ತದೆ. (ಯೋವೇಲ 3:10). ಅವನು ಬಲಹೀನ ನಾಗಿದ್ದರೂ ತಾನು ಬಲಶಾಲಿ ಎಂದು ಘೋಷಿಸಲಿ. ಆಗ ಬಲವು ಅವನಲ್ಲಿ ಕಾರ್ಯ ಮಾಡುತ್ತದೆ. ಇದುವೇ ನಿಮ್ಮ ಇಂದಿನ ಕಾರ್ಯ ಯೋಜನೆ ಆಗಲಿ. ನೀವು ಏನನ್ನು ನೋಡಲು ಬಯಸುತ್ತಿದ್ದೀರೋ ಅದನ್ನು ಧೈರ್ಯವಾಗಿ ಘೋಷಿಸಿರಿ ನಿಮ್ಮನ್ನು ಗೇಲಿ ಮಾಡುವವರ ಮಧ್ಯದಲ್ಲಿ ನೀವದನ್ನು ಕಂಡೆ ಕಾಣುವಿರಿ.
ಪ್ರಾರ್ಥನೆಗಳು
ತಂದೆಯೇ, ಈ ದಿನದ ನಿನ್ನ ವಾಕ್ಯಕ್ಕಾಗಿ ಸ್ತೋತ್ರ. ನೀನು ನನ್ನ ಜೀವಿತಕಾಗಿ ಅನುಗ್ರಹಿಸಿರುವ ವಾಗ್ದಾನಗಳನ್ನು ನನ್ನ ಹೃದಯದಲ್ಲಿ ಒಂದಿಷ್ಟೂ ಸಂದೇಹ ಪಡದೆ ಧೈರ್ಯವಾಗಿ ಹೇಳುವಂತ ಧೈರ್ಯದ ಆತ್ಮವನ್ನು ನನಗೆ ಅನುಗ್ರಹಿಸಬೇಕೆಂದು ಯೇಸು ನಾಮದಲ್ಲಿ ಬೇಡುತ್ತೇನೆ. ಆಮೇನ್.
Join our WhatsApp Channel
Most Read
● ಯಜಮಾನನ ಬಯಕೆ● ಪರಿಸ್ಥಿತಿಯ ದಯೆಯಲ್ಲಿ ಇರಬೇಡಿರಿ
● ಬೀಜದಲ್ಲಿರುವ ಶಕ್ತಿ-1
● ಸಭೆಯಲ್ಲಿ ಐಕ್ಯತೆಯನ್ನು ಕಾಪಾಡಿಕೊಳ್ಳುವುದು
● ಚಾಡಿಮಾತು ಸಂಬಂಧಗಳನ್ನು ಹಾಳುಮಾಡುತ್ತದೆ
● ದಿನ 07 : 40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಮನುಷ್ಯನ ಹೃದಯ
ಅನಿಸಿಕೆಗಳು