ಅನುದಿನದ ಮನ್ನಾ
ಯೇಸು ಮಾಡುವ ಕಾರ್ಯಗಳಿಗಿಂತ ದೊಡ್ಡ ಕಾರ್ಯಗಳನ್ನು ಮಾಡುವುದರ ಅರ್ಥವೇನು?
Wednesday, 20th of November 2024
3
0
107
Categories :
ಕಾರ್ಯಗಳು (Works)
“ನಿಮಗೆ ನಿಜನಿಜವಾಗಿ ಹೇಳುತ್ತೇನೆ. ನನ್ನನ್ನು ನಂಬುವವನು ನಾನು ಮಾಡುವ ಕಾರ್ಯಗಳನ್ನು ತಾನು ಸಹ ಮಾಡುತ್ತಾನೆ; ಮತ್ತು ಇವುಗಳಿಗಿಂತ ಮಹತ್ತಾದ ಕ್ರಿಯೆಗಳನ್ನು ಮಾಡುವನು, ಏಕೆಂದರೆ ನಾನು ತಂದೆಯ ಬಳಿಗೆ ಹೋಗುತ್ತೇನೆ."
(ಯೋಹಾನ 14:12)
1. ಕರ್ತನ ವಾಗ್ದಾನವು ಕೇವಲ ಅಪೊಸ್ತಲರಿಗೆ ಮಾತ್ರವಲ್ಲ, ನಂಬುವ ಎಲ್ಲರಿಗೂ ಮಾಡಲ್ಪಟ್ಟಿದೆ.
2. ಆತನು ಮಾಡಿದ ಕಾರ್ಯಗಳನ್ನು ನಾವು ಮಾಡುತ್ತೇವೆ ಎಂದು ಕರ್ತನು ವಾಗ್ದಾನ ಮಾಡುತ್ತಾನೆ
3.ಯುಗ ಸಮಾಪ್ತಿಯಲ್ಲಿ, ನಾವು ಆತನಿಗಿಂತಲೂ ಹೆಚ್ಚಿನ ಕಾರ್ಯಗಳನ್ನು ಮಾಡುತ್ತೇವೆ ಎಂದು ಕರ್ತನು ನಮಗೆ ಭರವಸೆ ನೀಡುತ್ತಾನೆ. ಯೇಸು ಮಾಡಿದ ಕಾರ್ಯಗಳನ್ನು ಸಹ ನಾವೂ ಮಾಡುತ್ತೇವೆ ಎಂದು ಯೇಸು ವಾಗ್ದಾನ ಮಾಡಿದ್ದಾನೆ.
ಹಾಗಾದರೆ ಆತನು ಮಾಡಿದ ಎಲ್ಲಾ ಅದ್ಭುತಗಳನ್ನು ನಾವು ಮಾಡುತ್ತೇವೆ ಎಂದು ಇದರರ್ಥವೇ?
"ಪ್ರತಿಯೊಬ್ಬರಿಗೂ ಸಾಮಾನ್ಯ ಒಳಿತಿಗಾಗಿ ಆತ್ಮನ ವರಗಳನ್ನು ನೀಡಲಾಗುತ್ತದೆ. ಒಬ್ಬನಿಗೆ ಆತ್ಮನ ಮೂಲಕ ಜ್ಞಾನದ ಬೋಧನೆಯ ವರವನ್ನೂ . . . ಅದೇ ಆತ್ಮದಿಂದ ಇನ್ನೊಬ್ಬನಿಗೆ ನಂಬಿಕೆಯನ್ನೂ , ಮತ್ತೊಬ್ಬನಿಗೆ ಅದೇ ಆತ್ಮದಿಂದ ಗುಣಪಡಿಸುವ ವರಗಳನ್ನು , ಇನ್ನೊಬ್ಬರಿಗೆ ಅದ್ಭುತಗಳನ್ನು ಮಾಡುವ ವರವನ್ನೂ ಅನುಗ್ರಹಿಸಲ್ಪಟ್ಟಿದೆ . ಎಲ್ಲರೂ ಮಹಾತ್ಕಾರ್ಯಗಳನ್ನು ಮಾಡುತ್ತಾರೆಯೇ? ಎಲ್ಲರೂ ಸ್ವಸ್ಥ ಪಡಿಸುವ ವರವನ್ನು ಹೊಂದಿದ್ದಾರೆಯೇ? ಎಲ್ಲರೂ ಅನ್ಯಭಾಷೆಗಳಿಂದ ಮಾತನಾಡುತ್ತಾರೆಯೇ?" ಎಂದು 1 ಕೊರಿಂಥ 12 ರಲ್ಲಿ ಪೌಲನು ಹೇಳುತ್ತಾನೆ, (1 ಕೊರಿಂಥ 12:7-10, 29-30)
ಎಲ್ಲಾ ವಿಶ್ವಾಸಿಗಳು ತನ್ನಂತೆಯೇ ಮಹತ್ಕಾರ್ಯಗಳನ್ನು ಮಾಡುತ್ತಾರೆ ಎಂಬುದು ಯೇಸುವಿನ ಮಾತುಗಳ ಅರ್ಥವಲ್ಲ , "ನನ್ನನ್ನು ನಂಬುವವನು ನಾನು ಮಾಡುವ ಕಾರ್ಯಗಳನ್ನು ಸಹ ಮಾಡುತ್ತಾನೆ" ಎಂದು ಹೇಳುವಾಗ ಆತನು ನಾವು ನಿಜವಾಗಿಯೂ ಏನನ್ನು ಅರ್ಥೈಸಿಕೊಳ್ಳಬೇಕೆಂದು ಆತನು ಬಯಸಿದನು? ಯೋಹಾನ 17 ರಲ್ಲಿ "[ತಂದೆ,] ನಾನು ಭೂಮಿಯಲ್ಲಿ ನಿನ್ನನ್ನು ಮಹಿಮೆಪಡಿಸಿದೆ, ನೀನು ನನಗೆ ನೀಡಿದ ಕೆಲಸವನ್ನು ಪೂರೈಸಿದೆ." ಎಂದು ಕರ್ತನಾದ ಯೇಸು ಪ್ರಾರ್ಥಿಸುತ್ತಾ ಹೇಳಿದನು (ಯೋಹಾನ 17:4) ತನ್ನ ತಂದೆಯ ಮಹಿಮೆಯತ್ತ ನಮ್ಮ ಗಮನ ಸೆಳೆಯುವುದೇ ಆತನು ಮಾಡಬೇಕಾದ ಕಾರ್ಯವಾಗಿತ್ತು . ಆದ್ದರಿಂದ ನಾವು ಕೂಡ ನಮ್ಮ ಮಾತುಗಳು ಮತ್ತು ಕಾರ್ಯಗಳಿಂದ ಯೇಸುಕ್ರಿಸ್ತ ಮತ್ತು ತಂದೆ ದೇವರ ಕಡೆಗೆ ಪ್ರಪಂಚದ ಗಮನವನ್ನು ಸೆಳೆಯಬೇಕಾಗಿದೆ ಎಂಬುದು ಇದರ ಅರ್ಥವಾಗಿದೆ. "ಅದಕ್ಕಿಂತ ಮಹಾತ್ತಾದ ಕಾರ್ಯಗಳು " ಎಂದರೆ "ಹೆಚ್ಚು ಅದ್ಭುತಕಾರ್ಯಗಳು " ಎಂದು ನೀವು ಭಾವಿಸುವುದಾದರೆ, ಐದು ರೊಟ್ಟಿಗಳು ಮತ್ತು ಎರಡು ಮೀನುಗಳಿಂದ 5000 ಕ್ಕೂ ಹೆಚ್ಚು ಜನರಿಗೆ ಹೊಟ್ಟೆತುಂಬಾ ತಿನ್ನಿಸಿದಂತಹ , ಇಲ್ಲವೇ ಸತ್ತು ನಾಲ್ಕು ದಿನವಾಗಿದ್ದ ಲಾಜರಸನನ್ನು ಎಬ್ಬಿಸಿದಂತೆ ಸತ್ತವರನ್ನು ಎಬ್ಬಿಸಿರುವಂತ ವ್ಯಕ್ತಿಯನ್ನು ಇದುವರೆಗೂ ನಾನು ನೋಡಲಿಲ್ಲ. ಹಾಗಾಗಿ ಯೇಸುವು ಹೇಳಿರುವಂತ 'ಮಹತ್ತಾದ ಕಾರ್ಯಗಳಿಗೆ' ಒಂದು ಸುಳಿವು ಎಂದರೆ ಅದು 'ನಾನು ನನ್ನ ತಂದೆಯ ಬಳಿಗೆ ಹೋಗುತ್ತಿದ್ದೇನೆ ' ಎಂಬ ವಾಕ್ಯದಲ್ಲಿ ಅಡಗಿದೆ . ಯೇಸು ಆತನು ತಂದೆಯ ಬಳಿಗೆ ಹಿಂದಿರುಗಿದ ನಂತರ, ಅವರಲ್ಲಿ ನೆಲೆಸಲು ಪವಿತ್ರಾತ್ಮನನ್ನು ತನ್ನನ್ನು ನಂಬುವವರ ಬಳಿಗೆ ಕಳುಹಿಸಿ ಕೊಡುತ್ತೇನೆ ಎಂದು ವಾಗ್ದಾನ ನೀಡಿದನು .
ಅಪೊಸ್ತಲರು ತಮ್ಮ ಸಾಕ್ಷಿಯ ಮೂಲಕವೂ ಪವಿತ್ರಾತ್ಮನ ಬಲದಿಂದಲೂ ಸುವಾರ್ತೆಯನ್ನು ಲೋಕಾದ್ಯಂತ ಹರಡಿದ್ದರಿಂದ ಅನೇಕರ ಜೀವನವನ್ನು ಪರಿವರ್ತಿಸಲು ಸಾಧ್ಯವಾಯಿತು ಎಂದು ದೇವರವಾಕ್ಯ ಹೇಳುತ್ತದೆ . ಪಂಚ ಶತ್ತಾಮ ದಿನದಂದು ಪೇತ್ರನ ಉಪದೇಶದ ಮೂಲಕ, 3,000 ಜನರು ಕರ್ತನನ್ನು ನಂಬಿ ದೀಕ್ಷಾಸ್ನಾನ ಹೊಂದಿದರು, ಬಹುಶಃ ಯೇಸುವಿನ ಸಂಪೂರ್ಣ ಸೇವೆಯ ಅವಧಿಯಲ್ಲಿ ಸಹ ಇಷ್ಟೊಂದು ಮಾನಸಾಂತರದ ಪ್ರಕರಣವನ್ನು ನಾವು ನೋಡಿಯೇ ಇಲ್ಲ!
ಹೀಗೆ ಕರ್ತನು ತನ್ನ ಮರಣ ಮತ್ತು ಪುನರುತ್ಥಾನದ ಸುವಾರ್ತೆಯನ್ನು ಹರಡಲು ನಮ್ಮಲ್ಲಿ ಪ್ರತಿಯೊಬ್ಬರನ್ನು ಬಳಸುವಂತೆ, ನಾವು ಆತನು ಮಾಡಿದ ಕಾರ್ಯಗಳನ್ನು ಮತ್ತು ಹೊಸ ಒಡಂಬಡಿಕೆಯು ಹಳೆಯದಕ್ಕಿಂತ ಶ್ರೇಷ್ಠ ಎನ್ನುವಂತ ಸೇವೆಯನ್ನು ನಾವು ಮಾಡುತ್ತಿದ್ದೇವೆ (ಇಬ್ರಿಯ 8:6) .
ಪ್ರಾರ್ಥನೆಗಳು
ತಂದೆಯೇ, ನೀನು ಅನುಗ್ರಹಿಸಿದ ನಿನ್ನ ಪರಿಶುದ್ಧ ಆತ್ಮನಿಗಾಗಿ ನಾನು ನಿನಗೆ ಸ್ತೋತ್ರ ಸಲ್ಲಿಸುತ್ತೇನೆ . ಯೇಸು ಮಾಡಿದ ಕಾರ್ಯಗಳನ್ನು ಮತ್ತು ಅದಕ್ಕಿಂತ ಇನ್ನೂ ಹೆಚ್ಚಿನ ಕಾರ್ಯಗಳನ್ನು ಮಾಡಲು ನಾನು ಎಲ್ಲವನ್ನೂ ಯೇಸುನಾಮದಲ್ಲಿ ಹೊಂದಿದ್ದೇನೆ. ಆಮೆನ್.
Join our WhatsApp Channel
Most Read
● ಕ್ರಿಸ್ತನಲ್ಲಿ ಅರಸರೂ ಯಾಜಕರೂ..● ಸರಿಯಾದ ಸಂಬಂಧಗಳನ್ನು ಬೆಳೆಸಿಕೊಳ್ಳುವುದು ಹೇಗೆ
● ಕೊಡುವ ಕೃಪೆ - 1
● ನಂಬಿಕೆಯ ಮೂಲಕ ಕೃಪೆಯನ್ನು ಪಡೆದುಕೊಳ್ಳುವುದು
● ದೇವರ ಯೋಜನೆಯಲ್ಲಿರುವ ತಂತ್ರಗಾರಿಕೆಯ ಶಕ್ತಿ
● ಹೊಗಳಿಕೆವಂಚಿತ ನಾಯಕರು
● ದಿನ 29:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
ಅನಿಸಿಕೆಗಳು