ಅನುದಿನದ ಮನ್ನಾ
1
0
144
ಪರ್ವತಗಳನ್ನೇ ಕದಲಿಸಬಲ್ಲ ಗಾಳಿ
Monday, 20th of October 2025
Categories :
ನಂಬಿಕೆ (Faith)
ರೂಪಾಂತರ(transformation)
"ಅಲ್ಲಿಗೆ ಯೇಸು ಬಂದಾಗ ಹಾಸಿಗೆಯ ಮೇಲೆ ಬಿದ್ದುಕೊಂಡಿದ್ದ ಒಬ್ಬ ಪಾರ್ಶ್ವವಾಯು ರೋಗಿಯನ್ನು ಆತನ ಬಳಿಗೆ ಹೊತ್ತುಕೊಂಡು ಬಂದರು. ಯೇಸು ರೋಗಿಯನ್ನು ಹೊತ್ತುಕೊಂಡು ಬಂದವರ ನಂಬಿಕೆಯನ್ನು ನೋಡಿ ಪಾರ್ಶ್ವವಾಯು ರೋಗಿಗೆ, “ಮಗನೇ ಧೈರ್ಯವಾಗಿರು, ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ” ಎಂದು ಹೇಳಿದನು. (ಮತ್ತಾಯ 9:2)
ನಂಬಿಕೆಯ ಅದೃಶ್ಯ ಶಕ್ತಿ ಹೊಂದಿರುವ ಗಾಳಿಯಂತಿದೆ. ಅದು ಅದೃಶ್ಯವಾಗಿದ್ದರೂ, ಅದು ಗೋಚರ ಪರಿಣಾಮಗಳನ್ನು ವ್ಯಕ್ತಪಡಿಸುತ್ತದೆ. ಎಲೆಗಳನ್ನು ತೂರುವ, ಮರಗನ್ನೂ ಅಲ್ಲಾಡಿಸುವ ಮತ್ತು ಗಾಳಿಪಟಗಳನ್ನು ಆಕಾಶಕ್ಕೆ ಒಯ್ಯುವ ಗಾಳಿಯ ಈ ಚಲಿಸುವ ಶಕ್ತಿ ಇದು.
ಗಾಳಿಯಂತೆಯೇ, ನಂಬಿಕೆಯನ್ನು ಅದರ ಪ್ರಭಾವಗಳ ಮೂಲಕ ಗ್ರಹಿಸಲಾಗುತ್ತದೆ. ಇದು ದೇವರ ವಾಗ್ದಾನಗಳ ಮೇಲೆ ದೃಢವಾಗಿಡುವ ಭರವಸೆಯಾಗಿದ್ದು, ಆತನ ವಾಕ್ಯದ ಮೇಲಿಡುವ ಸಂಪೂರ್ಣ ವಿಶ್ವಾಸದ ಮೇಲೆ ಬೇರೂರಿದೆ.
ನಂಬಿಕೆಯೋ ನಾವು ನಿರೀಕ್ಷಿಸುವವುಗಳ ವಿಷಯವಾಗಿ ಭರವಸದಿಂದಿರುವದೂ ಕಣ್ಣಿಗೆ ಕಾಣದವುಗಳನ್ನು ನಿಜವೆಂದು ತಿಳುಕೊಳ್ಳುವದೂ ಆಗಿದೆ.(ಇಬ್ರಿಯ 11:1).
ಮತ್ತಾಯ 9:2 ರಲ್ಲಿರುವ ಮನುಷ್ಯರ ನಂಬಿಕೆ ನಿಷ್ಕ್ರಿಯವಾಗಿರಲಿಲ್ಲ. ಅದು ಧೈರ್ಯಶಾಲಿಯಾಗಿತ್ತು. ಅವರು ಛಾವಣಿಯ ಮೇಲೆ ಹತ್ತಿ, ಅದರ ಅಂಚುಗಳನ್ನು ತೆಗೆದು, ತಮ್ಮ ಸ್ನೇಹಿತನನ್ನು ಯೇಸುವಿನ ಬಳಿಗೆ ಇಳಿಸಿ, ಜನಸಮೂಹದ ನಿಂದನೀಯ ಕಣ್ಣುಗಳಿಂದ ಅಥವಾ ಮನೆಯ ಮಾಲೀಕರಿಂದ ಸಂಭವನೀಯ ಪ್ರತಿಕ್ರಿಯೆ ಪಡೆದರೂ ಅವರು ವಿಚಲಿತರಾಗಲಿಲ್ಲ.
ಛಾವಣಿಯನ್ನು ಒಡೆದು ಹಾಕುವ ಆಮೂಲಾಗ್ರ ಕ್ರಿಯೆಯು ಯೇಸುವಿನ ಗುಣಪಡಿಸುವ ಶಕ್ತಿಯ ಮೇಲೆ ಅವರಿಟ್ಟ ಬಗ್ಗದ ನಂಬಿಕೆಯನ್ನು ಸಂಕೇತಿಸುತ್ತದೆ, ಅಡೆತಡೆಗಳನ್ನು ಕೆಡವಲು ಸಾಕಷ್ಟು ಬಲವಾದ ದೃಢನಿಶ್ಚಯವನ್ನು ಸಂಕೇತಿಸುತ್ತದೆ. ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಅವರ ದೃಢನಿಶ್ಚಯದ ಕ್ರಮಗಳು ಅವರ ಅದೃಶ್ಯ ನಂಬಿಕೆಯ ಗೋಚರ ಅಭಿವ್ಯಕ್ತಿಗಳಾಗಿದ್ದವು, ಇದುವೇ ಯೇಸುವಿಗೆ ಅವರ ನಂಬಿಕೆ ಕಾರ್ಯರೂಪಕ್ಕೆ ಬರುವುದನ್ನು ನೋಡಲು ಅವರಿಗೆ ಅವಕಾಶ ಮಾಡಿಕೊಟ್ಟಿತು.
ಈ ಮನುಷ್ಯರು ಕೇವಲ ನಂಬಿಕೆ ಇದ್ದರೆ ಮಾತ್ರ ಸಾಲದು ; ಅದಕ್ಕೆ ತಕ್ಕಂತ ಕ್ರಿಯೆಯೊಂದಿಗೆ ಸಂಯೋಜಿಸಲ್ಪಡಬೇಕು ಎಂಬುದನ್ನು ಅರ್ಥಮಾಡಿಕೊಂಡರು. ಅವರು ಜನಸಮೂಹದ ಹೊರವಲಯದಲ್ಲಿಯೇ ಇದ್ದು, ಯೇಸು ತಮ್ಮ ಸ್ನೇಹಿತನನ್ನು ಗುಣಪಡಿಸುತ್ತಾನೆ ಎಂಬ ಭರವಸೆಗೆ ಅಂಟಿಕೊಂಡಿರಬಹುದಿತ್ತು ಅದರ ಕುರಿತು ಏನನ್ನೂ ಮಾಡದೆ ಕೂಡ ಇರಬಹುದು. ಆದರೆ ಅವರು ನಂಬಿಕೆಯನ್ನು ವ್ಯಕ್ತಪಡಿಸಲು ಅದಕ್ಕೆ ತಕ್ಕಂತ ಹೆಜ್ಜೆಗಳು ಬೇಕು ಎಂಬುದನ್ನು ಅರಿತುಕೊಂಡರು. "ಹಾಗೆಯೇ ಕ್ರಿಯೆಗಳಿಲ್ಲದಿದ್ದರೆ ನಂಬಿಕೆಯು ತನ್ನಲ್ಲಿ ಜೀವವಿಲ್ಲದ್ದು." ಎಂದು ಹೇಳುವ ಮೂಲಕ ಯಾಕೋಬನೂ ಇದನ್ನು ಬಲಪಡಿಸುತ್ತಾನೆ.(ಯಾಕೋಬ 2:17).ಯೇಸು ಮತ್ತು ಆತನ ಮಾತುಗಳಲ್ಲಿ ಅವರಿಗಿದ್ದ ಅಚಲ ನಂಬಿಕೆಯು ದಿಟ್ಟ ಕ್ರಿಯೆಯೊಂದಿಗೆ ಸೇರಿಕೊಂಡು ದೈವಿಕ ಸ್ವಸ್ಥತೆ ಅಲ್ಲಿ ಪ್ರಕಟವಾಗಲು ಕಾರಣವಾಯಿತು.
ಇದನ್ನು ಪ್ರತಿಬಿಂಬಿಸುತ್ತಾ, ನಾನು ಒಂದು ಪ್ರಶ್ನೆಯನ್ನು ಕೇಳಬೇಕೆಂದು ಒತ್ತಾಯಿಸಲ್ಪಡುತ್ತಿದ್ದೇನೆ. ಅದೇನೆಂದರೆ - ನಮ್ಮ ಸನ್ನಿವೇಶಗಳಲ್ಲಿ ನಿಜವಾದ ಬೈಬಲ್ ಅನುಸಾರವಾದ ನಮ್ಮ ನಂಬಿಕೆ ಹೇಗಿರುತ್ತದೆ? ದೇವರನ್ನು ನಂಬುವುದು ಮತ್ತು ನಮ್ಮ ಕ್ರಿಯೆಗಳನ್ನು ಈ ನಂಬಿಕೆಯೊಂದಿಗೆ ಜೋಡಿಸುವುದಕ್ಕೆ ಅದು ಬದ್ಧವಾಗಿದೆಯಾ?
ನಂಬಿಕೆಯೆಂದರೆ ಸಂದರ್ಭಗಳು ಬೇರೆ ರೀತಿಯಲ್ಲಿ ನಿರ್ದೇಶಿಸುವಂತೆ ತೋರುತ್ತಿದ್ದರೂ ಸಹ, ಅದು ದೇವರ ವಾಗ್ದಾನಗಳ ಮೇಲೆ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿದು ಆತನನ್ನು ಸಕ್ರಿಯವಾಗಿ ಹುಡುಕುವುದು ಪರಿಶ್ರಮದಿಂದ ಪರಲೋಕದ ಬಾಗಿಲನ್ನು ತಟ್ಟುವುದು, ಬಿರುಗಾಳಿಯ ನಡುವೆಯೂ ಯೇಸುವಿನ ಕಡೆಗೆ ನೀರಿನ ಮೇಲೆ ನಡೆಯುವುದು ಆಗಿದೆ.
ಇದು ಹೇಗೆಂದರೆ ಅಬ್ರಹಾಮನು ಇಸಾಕನನ್ನು ಬಲಿಕೊಡಲು ಸಿದ್ಧನಾಗಿದ್ದರೂ, ದೇವರ ವಾಗ್ದಾನದಲ್ಲಿಯೇ ನಂಬಿಕೆ ಇಟ್ಟಂತೆ(ಆದಿಕಾಂಡ 22:1-18). ಇದು ಪೇತ್ರನು ದೋಣಿಯಿಂದ ಹೊರಬರುತ್ತಿದ್ದಾಗ, ಅವನ ಕಣ್ಣುಗಳು ಯೇಸುವಿನ ಮೇಲೆ ನೆಟ್ಟಂತೆ(ಮತ್ತಾಯ 14:29).
ಇಂದು, ನಿಮ್ಮನ್ನು ನೀವು ಪರೀಕ್ಷಿಸಿಕೊಂಡು : ನನ್ನ ಕ್ರಿಯೆಗಳು ನನ್ನ ನಂಬಿಕೆಯ ನಿವೇದನೆಗೆ ಹೊಂದಿಕೆಯಾಗುತ್ತವೆಯೇ? ನಾನು ದೇವರ ವಾಗ್ದಾನಗಳಲ್ಲಿ ನಂಬುವ ಯಾವುದೇ ಗೋಚರ ಚಿಹ್ನೆಗಳು (ಬಾಹ್ಯ ಚಿಹ್ನೆಗಳು) ಕಾಣಿಸುತ್ತಿದೆಯೇ?ಎಂದು ಕೇಳಿಕೊಳ್ಳಿ.
ನಿಮ್ಮ ಜೀವನದಲ್ಲಿ ನಿಮ್ಮ ನಂಬಿಕೆಯೊಂದಿಗೆ ನಿಮ್ಮ ಕ್ರಿಯೆಗಳನ್ನು ಹೆಚ್ಚು ನಿಕಟವಾಗಿ ಜೋಡಿಸಲು ಪ್ರಾರಂಭಿಸಬಹುದಾದ ಒಂದು ಕ್ಷೇತ್ರವನ್ನು ಗುರುತಿಸಿಕೊಳ್ಳಬೇಕೆಂದು ನಾನು ನಿಮ್ಮನ್ನು ಪ್ರೋತ್ಸಾಹಿಸುತ್ತೇನೆ.ನೀವು ಇದನ್ನು ಮಾಡಿದ ನಂತರ, ನಿಮ್ಮ ಜೀವನದ ಇತರ ಕ್ಷೇತ್ರಗಳೊಂದಿಗೂ ಅದೇ ರೀತಿ ಮಾಡಲು ಪ್ರಾರಂಭಿಸಿ.
Bible Reading : Mark 1-3
ಪ್ರಾರ್ಥನೆಗಳು
ತಂದೆಯೇ, ಅಡೆತಡೆಗಳನ್ನು ಕದಲಿಸುವ ಅಚಲ ನಂಬಿಕೆಯನ್ನು ನಮ್ಮಲ್ಲಿ ಬೆಳಗಿಸಿ. ನಮ್ಮ ನಂಬಿಕೆಯನ್ನು ಪ್ರತಿಬಿಂಬಿಸಲು ನಮ್ಮ ಹೆಜ್ಜೆಗಳನ್ನು ಬಲಪಡಿಸಿ ನಮ್ಮ ಜೀವನವು ನಿಮ್ಮ ವಾಗ್ದಾನಗಳೆಲ್ಲ ಈಡೇರಿಸಲ್ಪಟ್ಟಂತೆ ಮಧುರವಾಗಿ ಪ್ರತಿಧ್ವನಿಸಲಿ. ಪ್ರತಿದಿನ ನಿಮ್ಮೊಂದಿಗೆ ಅನ್ಯೋನ್ಯತೆಯಿಂದ ಬೆಳೆಯಲು ಯೇಸುನಾಮದಲ್ಲಿ ನಮಗೆ ಮಾರ್ಗದರ್ಶನ ನೀಡಿ. ಆಮೆನ್.
Join our WhatsApp Channel
Most Read
● ಯೂದ ಮಾಡಿದ ದ್ರೋಹಕ್ಕೆ ಇರುವ ನಿಜವಾದ ಕಾರಣ● ಮೂರು ಆಯಾಮಗಳು
● ಭಸ್ಮವಾಗುವಿಕೆಯ ( ಅತಿಯಾದ ಆಯಾಸದಿಂದಾಗುವ ದೈಹಿಕ ಬಳಲಿಕೆ ಮತ್ತು ಮಾನಸಿಕ ಖಿನ್ನತೆ) ವ್ಯಾಖ್ಯಾನ
● ಕ್ರಿಸ್ತನಲ್ಲಿ ನಿಮ್ಮ ದೈವಿಕ ಗಮ್ಯಸ್ಥಾನವನ್ನು ಪ್ರವೇಶಿಸುವುದು
● ಹೋರಾಡಿ
● ದೇವರು ನಿಮ್ಮಿಂದ ದೂರವಾಗಿದ್ದಾನೆ ಎಂದು ಎನಿಸುವಾಗ ಹೇಗೆ ಪ್ರಾರ್ಥಿಸಬೇಕು?
● ದೇವರನ್ನು ಸ್ತುತಿಸಲು ಇರುವ ಸತ್ಯವೇದಕ್ಕನುಸಾರವಾದ ಕಾರಣಗಳು
ಅನಿಸಿಕೆಗಳು
