ಅನುದಿನದ ಮನ್ನಾ
3
1
74
ಆರ್ಥಿಕ ಸಂಕಷ್ಟದಿಂದ ಹೊರಬರುವುದು ಹೇಗೆ#1
Thursday, 10th of July 2025
Categories :
Financial Deliverance
Money Management
ನಾನೊಬ್ಬ ಪಾಸ್ಟರ್ ಆಗಿರುವುದರಿಂದ, ಜನರು ನನ್ನ ಬಳಿಗೆ ಬಂದು ತಮ್ಮ ಆರ್ಥಿಕ ಪ್ರಗತಿಗಾಗಿ ಪ್ರಾರ್ಥಿಸಲು ಕೇಳಿಕೊಳ್ಳು ತ್ತಾರೆ.
"ಪಾಸ್ಟರ್ ರವರೇ ನನ್ನ ಹಣ ಎಲ್ಲಿಗೆ ಹೋಗುತ್ತದೆ ಎಂದು ನನಗೆ ತಿಳಿದಿಲ್ಲ" ಎಂಬುದು ಎಲ್ಲರ ಒಂದು ಕ್ಲೀಷೆಯಾಗಿದೆ.
ತಮ್ಮ ಆದಾಯದ ಮಟ್ಟ ಏನೇ ಆಗಿದ್ದರೂ , "ನನಗೆ ಇನ್ನೂ ಸ್ವಲ್ಪ ಹೆಚ್ಚು ಇದ್ದರೆ, ನನ್ನ ಹಣಕಾಸಿನಲ್ಲಿ ನಾನು ನಿಜವಾಗಿಯೂ ತೃಪ್ತನಾಗುತ್ತಿದ್ದೆ" ಎಂದು ಅನೇಕರು ಹೇಳುವುದನ್ನು ನಾನು ಕೇಳಿದ್ದೇನೆ.
ಸತ್ಯವೆಂದರೆ, ನಾವು ಎಷ್ಟು ಸಂಪಾದಿಸುತ್ತೇವೆ ಎಂಬುದಕ್ಕೂ ಅದಕ್ಕೂ ಯಾವುದೇ ಸಂಬಂಧವಿಲ್ಲ, ಆದರೆ ನಾವು ನಮ್ಮಲ್ಲಿರುವದನ್ನು ಹೇಗೆ ನಿರ್ವಹಿಸುತ್ತೇವೆ ಎಂಬುದರ ಮೇಲೆಯೇ ಅದು ಬಹಳಷ್ಟು ಪರಿಣಾಮ ಬೀರುತ್ತದೆ. ಆರ್ಥಿಕ ಸ್ವಾಸ್ತ್ಯವೂ ಬಹಳ ಮುಖ್ಯವಾಗಿದೆ ಏಕೆಂದರೆ ಅದು ನಮ್ಮ ಮನೆಗಳಲ್ಲಿನ ವಾತಾವರಣ, ನಮ್ಮ ವೈವಾಹಿಕ ಸಂಬಂಧ ಮತ್ತು ಹೆಚ್ಚಿನ ಮಟ್ಟಿಗೆ ನಮ್ಮ ಆತ್ಮೀಕ ಜೀವನದ ಮೇಲೆಯೂ ನಾಟಕೀಯವಾದ ಪರಿಣಾಮ ಬೀರುತ್ತದೆ.
ಇಂದು ಅದೆಷ್ಟೋ ವೈವಾಹಿಕ ಸಂಬಂಧಗಳು ಹಣಕಾಸಿನ ಸಮಸ್ಯೆಗಳಿಂದಲೇ ಬೇರ್ಪಟ್ಟಿವೆ. ಬಹುತೇಕ ಸೇವಕರು ಆರ್ಥಿಕ ಸಮಸ್ಯೆಗಳಿಂದಾಗಿಯೇ ತಮ್ಮ ಕರೆಗಳನ್ನು ತ್ಯಜಿಸಿದ್ದಾರೆ.
ಹಾಗಾದರೆ, ನಮ್ಮ ವೈಯಕ್ತಿಕ, ತಾತ್ವಿಕ ಮತ್ತು ಭಾವನಾತ್ಮಕ ಸಮಸ್ಯೆಗಳು ಮತ್ತು ಸಾಮರ್ಥ್ಯಗಳೆಲ್ಲ ನಮ್ಮ ಹಣದ ಬಳಕೆಯಲ್ಲಿ ಪ್ರತಿಫಲಿಸುತ್ತದೆ. ಹಣವನ್ನು ನಿರ್ವಹಿಸುವುದನ್ನೂ ಸಹ ಆತ್ಮೀಕ ವಿಷಯ ಎಂಬುದನ್ನು ನಾವು ಗುರುತಿಸಬೇಕು.
“ಒಬ್ಬ ಪುರುಷ ಅಥವಾ ಸ್ತ್ರೀಯ ಆತ್ಮೀಕ ಪರಿಪಕ್ವತೆಯನ್ನು ನೀವು ಅವರ ಚೆಕ್‌ಬುಕ್ ಅಥವಾ ಅವರ ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟ್ ನೋಡುವ ಮೂಲಕ ಹೇಳಬಹುದು"ಎಂದುಯಾರೋ ಒಬ್ಬರು ಹೇಳಿದ್ದಾರೆ.
ಸರಿ, ನಿಮ್ಮ ಸ್ಟೇಟ್ಮೆಂಟ್ ಹೇಗೆ ಕಾಣುತ್ತದೆ? ಅದು ನಿಮ್ಮ ವೈಯಕ್ತಿಕ ಚಿಂತನೆಗೆ ಬಿಟ್ಟ ಒಂದು ಪ್ರಶ್ನೆ. ಕರ್ತನಾದ ಯೇಸು ಬೇರೆ ಯಾವುದೇ ವಿಷಯದ ಬಗ್ಗೆ ಮಾತನಾಡಿದ್ದಕ್ಕಿಂತ ಹಣದ ಕುರಿತು ಹೆಚ್ಚು ಮಾತನಾಡಿದ್ದಾನೆಂದು ನಿಮಗೆ ತಿಳಿದಿದೆಯೇ?
ಕೆಲವು ಸತ್ಯವೇದ ವಿದ್ವಾಂಸರು ಹೇಳುವುದೇನೆಂದರೆ, “ಯೇಸುವಿನ ಎಲ್ಲಾ ದಾಖಲಾದ ಮಾತುಗಳಲ್ಲಿ 15 ಪ್ರತಿಶತವು ಹಣದ ವಿಷಯದ ಕುರಿತಾದ ಬೋದನೆಗಳುಗಳಾಗಿದ್ದು -ಅವು ಪರಲೋಕ ಮತ್ತು ನರಕದ ಕುರಿತಾದ್ದ ಬೋಧನೆಗಳಿಗಿಂತ ಹೆಚ್ಚಾಗಿವೆ ಎನ್ನುತ್ತಾರೆ.
ಯೇಸುವಿಗೆ ಹಣ ಏಕೆ ಹೆಚ್ಚು ಮುಖ್ಯವಾಗಿತ್ತು?
ಸರಳ! ಹಣವು ಆತ್ಮೀಕ ವಿಷಯವಾಗಿದೆ. ವರ್ತಮಾನ ಮತ್ತು ಭೂತಕಾಲದಲ್ಲಿ ನಮ್ಮಲ್ಲಿರುವ ಎಲ್ಲವೂ ದೇವರಿಂದ ಬಂದಿದೆ. ಆತನು ಅದನ್ನು ಹೊಂದಿದ್ದಾನೆ ಮತ್ತು ಅದನ್ನು ತನ್ನ ಉದ್ದೇಶಗಳಿಗಾಗಿ ಬಳಸಲು ನಮಗೆ ಒಪ್ಪಿಸಿದ್ದಾನೆ. ದಾವೀದನು ಈ ರಹಸ್ಯವನ್ನು ಅರ್ಥಮಾಡಿಕೊಂಡು" ಸಮಸ್ತವೂ ನಿನ್ನಿಂದಲೇ ಬಂದಿದ್ದು ನೀನು ಕೊಟ್ಟಿದ್ದನ್ನೇ ನಿನಗೆ ಕೊಟ್ಟೆವು " ಎಂದು ಪ್ರಾರ್ಥಿಸಿದನು, (1 ಪೂರ್ವಕಾಲವೃತ್ತಾಂತ 29:14).
ಇದನ್ನು ತಿಳಿದುಕೊಳ್ಳುವುದು ಮತ್ತು ಅದನ್ನು ನಂಬುವುದು ಆರ್ಥಿಕ ಬಿಡುಗಡೆ ಕಡೆಗೆ ಇಡುವ ಅತ್ಯಂತ ನಿರ್ಣಾಯಕ ಹೆಜ್ಜೆಯಾಗಿದೆ. (ಯೋಹಾನ 8:32)
ದೇವರು ಇದೆಲ್ಲವನ್ನೂ ಹೊಂದಿದ್ದಾನೆ ಮತ್ತು ಆತನು ತನ್ನ ಸ್ವಂತ ಸಮೃದ್ಧಿಯಿಂದಲೇ ನಮಗೆ ನೀಡುತ್ತಾನೆ. ನಾವು ಆಶೀರ್ವದಿಸಲ್ಪಟ್ಟಿದ್ದೇವೆ ಮತ್ತು ಆಶೀರ್ವದಿಸಲ್ಪಡಲು ಬಯಸುವವರಾದ ನಾವು ನಮ್ಮ ಸಂಪನ್ಮೂಲಗಳು ನಿಜವಾಗಿಯೂ ಎಲ್ಲಿಂದ ಬರುತ್ತವೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಮತ್ತು ದೇವರು ನಮಗೆ ನೀಡಿರುವ ಹಣದಿಂದ ದೇವರನ್ನು ಗೌರವಿಸುವ ಮಾರ್ಗಗಳನ್ನು ಯಾವಾಗಲೂ ಹುಡುಕಬೇಕು. ಇದು ಹರಿವನ್ನು ಹರಿಯುವಂತೆ .
ಪ್ರಾರ್ಥನೆಗಳು
1. ತಂದೆಯಾದ ದೇವರೇ, ಇಂದು ನನ್ನ ತಲೆಯನ್ನು ಯೇಸುನಾಮದಲ್ಲಿ ಸಮೃದ್ಧಿಯ ತೈಲದಿಂದ ಅಭಿಷೇಕಿಸು ಇದರಿಂದ ನನ್ನ ಪ್ರತಿಯೊಂದು ಆರ್ಥಿಕ ಪಾತ್ರೆಯು ನಿಮ್ಮ ಸಮೃದ್ಧಿಯಿಂದ ತುಂಬಿ ಹರಿಯಲಿ.
2. ತಂದೆಯಾದ ದೇವರೇ, ನನ್ನ ಕರೆಯ ಉದ್ದೇಶವನ್ನು ಮುನ್ನಡೆಸುವ ಸರಿಯಾದ ಜನರೊಂದಿಗೆ ನನ್ನನ್ನು ಯೇಸುನಾಮದಲ್ಲಿ ಸಂಪರ್ಕಿಸು. ದೇವರು ಕೊಟ್ಟಿರುವ ನನ್ನ ಎಲ್ಲಾ ಗುರಿಗಳನ್ನು ಮತ್ತು ನನ್ನ ಕನಸುಗಳನ್ನು ನಾನು ಯೇಸುನಾಮದಲ್ಲಿ ಸಾಧಿಸುತ್ತೇನೆ ಎಂದು ನಾನು ಅಂಗೀಕರಿಸಿಕೊಳ್ಳುತ್ತೇನೆ. ನನ್ನ ಜೀವನದಲ್ಲಿರುವ ಬಡತನದ ಪ್ರತಿಯೊಂದು ಬೇರನ್ನು ದೇವರ ಬೆಂಕಿಬಿದ್ದು ನಾಶವಾಗಲೆಂದು ಯೇಸುನಾಮದಲ್ಲಿ ನಾನು ಆಜ್ಞಾಪಿಸುತ್ತೇನೆ.
Join our WhatsApp Channel

Most Read
● ದೇವರು ನಿಮ್ಮನ್ನು ಉಪಯೋಗಿಸಲು ಬಯಸುತ್ತಾನೆ.● ಒಳಕೋಣೆ
● ದೇವರಿಗೇ ಪ್ರಥಮ ಸ್ಥಾನ ನೀಡುವುದು #2.
● ದಿನ 34:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ದೈವೀಕ ಶಿಸ್ತಿನ ಸ್ವರೂಪ-1
● ಯಹೂದವು ಮುಂದಾಗಿ ಹೊರಡಲಿ
● ಪವಿತ್ರಾತ್ಮನಿಗಿರುವ ಹೆಸರುಗಳು ಮತ್ತು ಬಿರುದುಗಳು
ಅನಿಸಿಕೆಗಳು