english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ಪವಿತ್ರಾತ್ಮನ ಇತರ ಪ್ರಕಟನಾತ್ಮಕ ವರಗಳಿಗೆ ಪ್ರವೇಶಹೊಂದಿ.
ಅನುದಿನದ ಮನ್ನಾ

ಪವಿತ್ರಾತ್ಮನ ಇತರ ಪ್ರಕಟನಾತ್ಮಕ ವರಗಳಿಗೆ ಪ್ರವೇಶಹೊಂದಿ.

Saturday, 28th of June 2025
2 0 115
Categories : Gifts of the Holy Spirit
"ಒಬ್ಬನಿಗೆ ದೇವರಾತ್ಮನ ಮೂಲಕ ಜ್ಞಾನವಾಕ್ಯವು ಮತ್ತೊಬ್ಬನಿಗೆ ಆ ಆತ್ಮನಿಂದಲೇ ತಿಳಿವಳಿಕೆಯ ವಾಕ್ಯವು 
ಮತ್ತೊಬ್ಬನಿಗೆ ಮಹತ್ಕಾರ್ಯಗಳನ್ನು ಮಾಡುವ ವರವು, ಇನ್ನೊಬ್ಬನಿಗೆ ಪ್ರವಾದನೆಯ ವರವು, ಒಬ್ಬನಿಗೆ ಆತ್ಮವನ್ನು ವಿವೇಚಿಸುವ ವರವು, ಮತ್ತೊಬ್ಬನಿಗೆ ವಿವಿಧ ಭಾಷೆಗಳನ್ನಾಡುವ ವರವು, ಒಬ್ಬನಿಗೆ ಭಾಷೆಗಳ ಅರ್ಥವನ್ನು ಬಿಡಿಸಿ ಹೇಳುವ ವರವು ಕೊಡಲ್ಪಡುತ್ತದೆ. (1 ಕೊರಿಂಥ 12: 8, 10,).

ಅನ್ಯಭಾಷೆಯಲ್ಲಿ ಪ್ರಾರ್ಥಿಸುವುದರಿಂದ ನಿಮ್ಮ ಜೀವನದಲ್ಲಿ ಪವಿತ್ರಾತ್ಮನ ಇತರ ಪ್ರಕಟನಾತ್ಮಕ ವರಗಳು ತೆರೆದುಕೊಳ್ಳುತ್ತವೆ, ಅವುಗಳೆಂದರೆ ಜ್ಞಾನವಾಕ್ಯ, ವಿವೇಕದ ವಾಕ್ಯ, ಪ್ರವಾದನೆ ಮತ್ತು ಆತ್ಮಗಳ ವಿವೇಚನೆ. 

ಒಂದು ಎಚ್ಚರಿಕೆ ಮಾತು: ನೀವು ಅನ್ಯಭಾಷೆಗಳಲ್ಲಿ ಪ್ರಾರ್ಥಿಸಲು ಪ್ರಾರಂಭಿಸಿದಾಗ, ಆರಂಭದಲ್ಲಿ ಏನೂ ಸಹ ನಡೆಯುವುದನ್ನೂ ನೀವು ಕಾಣದಿರಬಹುದು ಆದರೆ ನಿಮ್ಮ ಧೈರ್ಯವನ್ನು ಬಿಟ್ಟುಕೊಡಬೇಡಿ. ಅಮೆರಿಕವನ್ನು ಅನ್ವೇಷಿಸುವ ಪ್ರಯಾಣದಲ್ಲಿ, ದಿನಗಳು ಕಳೆದರೂ ಯಾವುದೇ ಭೂಪ್ರದೇಶ ಕಾಣಿಸದೇ ಅವನ ನಾವಿಕರು ಮತ್ತೆ ಮತ್ತೆ ದಂಗೆಯನ್ನು ಎಬ್ಬಿಸಿ ಅವನನ್ನು ಹಿಂತಿರುಗುವಂತೆ ಮನವೊಲಿಸಲು ಪ್ರಯತ್ನಿಸಿದರು.ಆದರೆ ಕೊಲಂಬಸ್ ಅವರ ಮನವಿಗಳನ್ನು ಕೇಳಲು ನಿರಾಕರಿಸಿದರು ಮತ್ತು ಪ್ರತಿದಿನ ಹಡಗಿನ ಲಾಗ್-ಬುಕ್‌ನಲ್ಲಿ ಎರಡು ಪದಗಳನ್ನು ನಮೂದಿಸಿದರು. "ಸಾಗರಯಾನ!" 

ಅಲ್ಲದೆ, ಏನೂ ನಡೆಯುತ್ತಿಲ್ಲವಾದ್ದರಿಂದ ಆತ್ಮನ ವರಗಳನ್ನು ನಕಲಿ ಮಾಡಲು ಪ್ರಯತ್ನಿಸಬೇಡಿ. (ದುಃಖಕರವೆಂದರೆ ಅನೇಕರು ಈಗ ಮಾಡುವಂತೆ). ಇದನ್ನು ಅರ್ಥಮಾಡಿಕೊಳ್ಳಿ, ಮೊದಲು, ಒಂದು ಅಡಿಪಾಯವನ್ನು ನಿರ್ಮಿಸಬೇಕು. ನಿಯಮಿತವಾಗಿ ಅನ್ಯಭಾಷೆಗಳಲ್ಲಿ ಪ್ರಾರ್ಥಿಸುವುದರಲ್ಲಿ ನಂಬಿಗಸ್ತರಾಗಿರಿ ಮತ್ತು ಆತ್ಮನ ವರಗಳು ಪ್ರವಾಹದೋಪಾದಿಯಲ್ಲಿ ಪ್ರಕಟವಾಗುವುದನ್ನು ನೀವು ನೋಡುತ್ತೀರಿ. 

ಒಂದು ದಿನ ಹಲವಾರು ಗಂಟೆಗಳ ಕಾಲ ಅನ್ಯಭಾಷೆಗಳಲ್ಲಿ ಪ್ರಾರ್ಥಿಸಿದ ನಂತರ, ತನ್ನ ಕೋಣೆಯ ಬಾಗಿಲಿನ ಹೊರಗೆ ದುಷ್ಟಶಕ್ತಿಗಳು ನಿಂತಿರುವುದನ್ನು ಮತ್ತು ಅವುಗಳ ಭಯಾನಕ ಕೂಗುಗಳನ್ನು ಕೇಳಿದಾಗ ಆಘಾತಕ್ಕೊಳಗಾದ ಒಬ್ಬ ದೇವರ ಮನುಷ್ಯನಿದ್ದನು. ಇದು ಅವನಿಗೆ ಒಂದು ಭಯಾನಕ ಹೊಸ ಅನುಭವವಾಗಿತ್ತು ಮತ್ತು ಆತ್ಮಗಳ ವಿವೇಚನೆಯು ಕಾರ್ಯನಿರ್ವಹಿಸುತ್ತಿದೆ ಎಂಬುದು ಆಗ ಅವನಿಗೆ ತಿಳಿದಿರಲಿಲ್ಲ. ಇನ್ನೊಂದು ಸಂದರ್ಭದಲ್ಲಿ, ಆತ್ಮೀಕ ಇಂದ್ರಿಯಗಳಿಂದ ಆತ್ಮೀಕ ಲೋಕದಲ್ಲಿ ವಾಕ್ಯಗಳನ್ನು ಗ್ರಹಿಸಿದಾಗ ಅವನಿಗೆ ಆಘಾತವಾಯಿತು. ಅದು ಕಾರ್ಯನಿರ್ವಹಿಸುತ್ತಿರುವ ಜ್ಞಾನದ ವಾಕ್ಯ ಎಂಬುದು ಅವನಿಗೆ ಆಗ ತಿಳಿದಿರಲಿಲ್ಲ. 

ನಂತರ, ಒಂದು ಭಾನುವಾರದ ಸೇವೆಯ ಸಮಯದಲ್ಲಿ, ಅವನು ತನ್ನ ಸಭೆಯಲ್ಲಿ ಯಾರಾದರೂ ಹೊಸ ಸಂದರ್ಶಕರನ್ನು ಹುಡುಕಲು ತಿರುಗಿದನು. ಒಬ್ಬ ಮಹಿಳೆಯ ಮೇಲೆ ಬರೆಯಲ್ಪಟ್ಟ ನಿರ್ದಿಷ್ಟ ಪಾಪದ ವಾಕ್ಯಗಳನ್ನು ನೋಡಿ ಅವನಿಗೆ ಆಘಾತವಾಯಿತು. ಅದು ಕಾರ್ಯನಿರ್ವಹಿಸುತ್ತಿರುವ ಜ್ಞಾನದ ಗಮನಾರ್ಹ ವಾಕ್ಯವಾಗಿತ್ತು.

ನೆನಪಿಡಿ, ನೀವು ನೈಸರ್ಗಿಕ ಆಯಾಮದಲ್ಲಿ ಪ್ರಾರ್ಥಿಸುತ್ತಿಲ್ಲ, ಬದಲಾಗಿ ಸಂಪೂರ್ಣವಾಗಿ ಆತ್ಮೀಕ ಆಯಾಮದಲ್ಲಿ ಅನ್ಯಭಾಷೆಯಲ್ಲಿ ಪ್ರಾರ್ಥಿಸುವಾಗನಿಮ್ಮನ್ನು ತೊಡಗಿಸಿಕೊಂಡಿದ್ದೀರಿ.ನಾನು ನಿಮಗೆ ಯಾವುದಾದರೂ ಒಂದು ವಿಷಯದ ಕುರಿತು ಅಲೌಕಿಕ ಒಳನೋಟವನ್ನು ನೀಡಿದರೆ, ಜನರಿಗಾಗಿ ಪ್ರಾರ್ಥಿಸಲು ನಿಮ್ಮನ್ನು ಕರೆದೊಯ್ಯುವಾಗ ಜನರು, ಸನ್ನಿವೇಶಗಳು ಮತ್ತು ಪ್ರದೇಶಗಳ ಕುರಿತು ಸ್ಪಷ್ಟವಾದ ಅನಾವರಣ ಉಂಟಾಗಿ ಪರಿಣಾಮಕಾರಿಯಾಗಿ ಪ್ರಾರ್ಥಿಸಲು ಮತ್ತು ಅವರ ಮೇಲೆ ಪ್ರಭಾವ ಬೀರುತ್ತಿರುವ ಆತ್ಮೀಕ ಕೋಟೆಗಳನ್ನು ಮುರಿಯಲು ಅದು ನಿಮಗೆ ಅನುವು ಮಾಡಿಕೊಡುತ್ತದೆ.

ಪವಿತ್ರಾತ್ಮನು ಡೇವ್ ರಾಬರ್ಸನ್ (ಕುಟುಂಬ ಪ್ರಾರ್ಥನಾ ಕೇಂದ್ರ, ಟಲ್ಸಾ) ಮೂರು ತಿಂಗಳುಗಳ ಕಾಲ ಪ್ರತಿದಿನ ಎಂಟು ಗಂಟೆಗಳ ಕಾಲ ಅನ್ಯಭಾಷೆಯಲ್ಲಿ ಪ್ರಾರ್ಥಿಸುತ್ತಿದ್ದರು. ಒಂದು ದಿನ ಅವರು ಚರ್ಚ್‌ನಲ್ಲಿ ಕುಳಿತಿದ್ದಾಗ, ಕರ್ತನು ಅವರ ಆತ್ಮೀಕ ಕಣ್ಣುಗಳನ್ನು ತೆರೆದು ಸೊಂಟದ ಸಾಕೆಟ್‌ನ ಎಕ್ಸ್-ರೇ ನಂತಹದ್ದನ್ನು ನೋಡಿದರು. ಆ ಸಾಕೆಟ್‌ನಲ್ಲಿ ಚೆಂಡಿನ ಕೀಲು ಸುತ್ತಲೂ ಕಪ್ಪು ವಸ್ತುವಿತ್ತು, ಅದು ಕಾಲಿನ ಕೆಳಗೆ ಮೂರರಿಂದ ನಾಲ್ಕು ಇಂಚುಗಳಷ್ಟು ವಿಸ್ತರಿಸಿತ್ತು. ಇದು ಅವನ ಪಕ್ಕದಲ್ಲಿ ಕುಳಿತಿದ್ದ ವೃದ್ಧ ಮಹಿಳೆಯ ಸ್ಥಿತಿ ಎಂದು ಅವರಿಗೆ ಆತ್ಮನ ಮೂಲಕ ತಿಳಿಸಿದರು.

ಕರ್ತನು ಅವರಿಗೆ ತೋರಿಸಿದ್ದನ್ನು ಹಂಚಿಕೊಳ್ಳಲು ಅವರು ಅಡ್ಡಲಾಗಿ ಬಾಗಿದಂತೆ, "ಸಂಧಿವಾತ" ಎಂಬ ಪದವು ಅವರ ಬಾಯಿಂದ ಹೊರಬಂದಿತು. ವೈದ್ಯರು ವರದಿಯಲ್ಲಿಯೂ ಇದನ್ನು ಉಲ್ಲೇಖಿಸಿದ್ದರಿಂದ ಅವಳು ಇದನ್ನು ಸರಿ ಎಂದು ದೃಢಪಡಿಸಿದಳು. ಡೇವ್ ಯೇಸುನಾಮದಲ್ಲಿ ಪ್ರಾರ್ಥಿಸುತ್ತಿದ್ದಂತೆ,  ಮೊದಲ ಉಲ್ಲೇಖದ ಪ್ರಕಾರ ಮಹಿಳೆಯ ಚಿಕ್ಕ ಕಾಲು ಬಿರುಕು ಬಿಟ್ಟಿತು ಮತ್ತು ಅದು ಇದ್ದಕ್ಕಿದ್ದಂತೆ ಬೆಳೆಯಿತು, ಅದು ಇನ್ನೊಂದು ಕಾಲಿನ ಅಳತೆಗೆ ಸಮನಾಗಲಾರಾಂಭಿಸಿತು. ಆ ಮಹಿಳೆ ತಕ್ಷಣವೇ ಸಂಪೂರ್ಣವಾಗಿ ಗುಣಮುಖಳಾಗಿದ್ದಳು. 

Bible Reading: Psalms 35-39
ಅರಿಕೆಗಳು
ನಾನು ಅನ್ಯಭಾಷೆಗಳಲ್ಲಿ ಮಾತನಾಡುವಾಗ, ಜ್ಞಾನದ ವಾಕ್ಯವರವೂ, ತಿಳುವಳಿಕೆಯ ವರವೂ, ಪ್ರವಾದನಾ ವರವೂ ಮತ್ತು ಆತ್ಮಗಳನ್ನು ವಿವೇಚಿಸುವ ವರವೂ ನನ್ನಲ್ಲಿ ಮತ್ತು ನನ್ನ ಮೂಲಕ ಕಾರ್ಯನಿರ್ವಹಿಸುತ್ತದೆ ಮತ್ತು ಕಾರ್ಯ ಮಾಡುತ್ತದೆ ಎಂದು ಯೇಸುನಾಮದಲ್ಲಿ ನಾನು ಆಜ್ಞಾಪಿಸುತ್ತೇನೆ ಮತ್ತು ಘೋಷಿಸುತ್ತೇನೆ. 


Join our WhatsApp Channel


Most Read
● ಪುರಾತನ ಮಾರ್ಗಗಳನ್ನು ವಿಚಾರಿಸಿ
● ಕ್ರಿಸ್ತನ ರಾಯಭಾರಿಗಳು
● ನೀವು ಪಾವತಿಸಬೇಕಾದ ಬೆಲೆ
● ದಿನ 06: 40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಸಮರುವಿಕೆಯ( ಕಳೆ ಕೀಳುವ ) ಕಾಲ -1
● ದ್ವಾರ ಪಾಲಕರು / ಕೋವರ ಕಾಯುವವರು
● ದೇವರಿಗಾಗಿ ದಾಹದಿಂದಿರುವುದು
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2025 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್