english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ಕ್ರೈಸ್ತರು ವೈದ್ಯರ ಬಳಿಗೆ ಹೋಗಬಹುದೇ?
ಅನುದಿನದ ಮನ್ನಾ

ಕ್ರೈಸ್ತರು ವೈದ್ಯರ ಬಳಿಗೆ ಹೋಗಬಹುದೇ?

Thursday, 29th of January 2026
2 2 56
Categories : ಆರೋಗ್ಯ ಮತ್ತು ಸ್ವಸ್ಥತೆ - Health and Healing
ಅನೇಕ ಕ್ರೈಸ್ತರು ಈ ಪ್ರಶ್ನೆಯೊಂದಿಗೆ ಸದ್ದಿಲ್ಲದೆ ಹೋರಾಡುತ್ತಿದ್ದಾರೆ: ನನಗೆ ನಂಬಿಕೆಯಿದ್ದರೆ, ನಾನು ವೈದ್ಯರ ಬಳಿಗೆ ಹೋಗಬೇಕೇ? ಕೆಲವರು ಆಸ್ಪತ್ರೆಗೆ ಭೇಟಿ ನೀಡುವುದು ದೇವರಲ್ಲಿ ನಂಬಿಕೆಯ ಕೊರತೆ ಎಂದು ಭಾವಿಸುತ್ತಾರೆ. ಇತರರು ಔಷಧಿ ತೆಗೆದುಕೊಳ್ಳುವಾಗ ತಪ್ಪಿತಸ್ಥರೆಂದು ಭಾವಿಸಿ  ಸ್ವಸ್ತತೆಗೆಗಾಗಿ ಪ್ರಾರ್ಥಿಸುತ್ತಾರೆ. ನಂಬಿಕೆ ಮತ್ತು ಔಷಧವು ಶತ್ರುಗಳಲ್ಲ. ಅವು ಜೊತೆಯಾಗಿ ಕೆಲಸ ಮಾಡಬೇಕೆಂದು ಉದ್ದೇಶಿಸಲಾಗಿದೆ.

ದೇವರು ಗುಣಪಡಿಸಲು ಪ್ರಾಯೋಗಿಕ ವಿಧಾನಗಳನ್ನು ಬಳಸುತ್ತಾನೆ.

ಕರ್ತನಾದ ಯೇಸು ಸ್ವತಃ ಈ ಸತ್ಯವನ್ನು ಒಂದು ಸಾಮ್ಯದ ಮೂಲಕ ಬೋದಿಸಿದನು. ಒಳ್ಳೆಯ  ಸಮಾರ್ಯದವನ ಕಥೆಯಲ್ಲಿ, ಗಾಯಗೊಂಡ ಮನುಷ್ಯನನ್ನು ಪ್ರಾರ್ಥನೆಯಿಂದ ಮಾತ್ರ ಗುಣಪಡಿಸಲಾಗಲಿಲ್ಲ. ಅವನನ್ನು ಪ್ರಾಯೋಗಿಕವಾಗಿ ಆರೈಕೆ ಮಾಡಲಾಯಿತು
"ಅವನ ಹತ್ತಿರಕ್ಕೆ ಹೋಗಿ ಅವನ ಗಾಯಗಳಿಗೆ ಎಣ್ಣೆಯನ್ನೂ ದ್ರಾಕ್ಷಾರಸವನ್ನೂ ಹೊಯ್ದು ಗಾಯವನು ಕಟ್ಟಿ ತನ್ನ ಸ್ವಂತ ವಾಹನ ಪಶುವಿನ ಮೇಲೆ ಹತ್ತಿಸಿಕೊಂಡು ಛತ್ರಕ್ಕೆ ಕರೆದುಕೊಂಡು ಹೋಗಿ ಅವನನ್ನು ಆರೈಕೆಮಾಡಿದನು."
ಲೂಕ 10:34

ಎಣ್ಣೆ ಮತ್ತು ದ್ರಾಕ್ಷಾರಸವು ಆ ಕಾಲದ ಸಾಮಾನ್ಯ ಔಷಧಿಗಳಾಗಿದ್ದವು. ಚಿಕಿತ್ಸೆಯನ್ನು ಬಳಸಿದ್ದಕ್ಕಾಗಿ ಯೇಸು ಸಮಾರ್ಯಾನನ್ನು ಟೀಕಿಸಲಿಲ್ಲ. ಬದಲಾಗಿ, ಆತನು ಅವನನ್ನು ಹೊಗಳಿದನು. ಇದು ನಮಗೆ ಸ್ಪಷ್ಟವಾಗಿ ತೋರಿಸುತ್ತದೆ: ವೈದ್ಯಕೀಯ ಸಹಾಯವನ್ನು ಬಳಸುವುದು ಆತ್ಮೀಕ ಕ್ರಿಯೆಯಾಗಿರದೆ - ಅದು ಪ್ರೀತಿ ಮತ್ತು ಜ್ಞಾನದ ಕ್ರಿಯೆಯಾಗಿ ಬಳಸಬಹುದು

ಲೂಕನು ವೈದ್ಯನಾಗಿದ್ದನು
ಹೊಸ ಒಡಂಬಡಿಕೆಯ ಬರಹಗಾರರಲ್ಲಿ  ಲೂಕನು ಒಬ್ಬನು ಮತ್ತು ಬೈಬಲ್ ಅವನು ವೈದ್ಯನಾಗಿದ್ದನೆಂದು ನಮಗೆ ಬಹಿರಂಗವಾಗಿ ಹೇಳುತ್ತದೆ. 
“ಪ್ರಿಯ ವೈದ್ಯ ಲೂಕನೂ ದೇಮನೂ ನಿಮ್ಮನ್ನು ಅಭಿನಂದಿಸುತ್ತಾರೆ.” ಕೊಲೊಸ್ಸೆ 4:14

ಅಪೊಸ್ತಲ ಪೌಲನು “ ವೈದ್ಯ ವೃತ್ತಿ ಬಿಟ್ಟುಬಂದ ಲೂಕನೂ” ಎಂದು ಹೇಳಲಿಲ್ಲ. ಅವನು ಲೂಕನನ್ನು "ಪ್ರಿಯನು" ಎಂದು ಕರೆದನು. ಹೊಸ ಒಡಂಬಡಿಕೆಯ ಹೆಚ್ಚಿನ ಭಾಗವನ್ನು ಬರೆಯಲು ದೇವರು ಒಬ್ಬ ವೈದ್ಯಕೀಯ ವೃತ್ತಿಪರನನ್ನು ಆರಿಸಿಕೊಂಡನು. ವೈದ್ಯಕೀಯ ವೃತ್ತಿಯನ್ನು ದೇವರು ಗೌರವಿಸುತ್ತಾನೆ ಎಂದು ಅದೊಂದೇ ನಮಗೆ ಹೇಳುತ್ತದೆ. 

ಈಗ, ಕೆಲವರು ರಾಜ ಆಸನ ಚರಿತ್ರೆ ತೆಗೆದುಕೊಂಡು ವಿಶ್ವಾಸಿಗಳು ವೈದ್ಯರನ್ನು ನೋಡಬಾರದು ಎಂಬುದಕ್ಕೆ ಪುರಾವೆಯಾಗಿ ಉಲ್ಲೇಖಿಸುತ್ತಾರೆ. ಆದರೆ ನಾವು ಎಚ್ಚರಿಕೆಯಿಂದ ಓದಿದಾಗ, ವಿಷಯವು ಅದು ವೈದ್ಯರದಲ್ಲ - ಅದು ಆಸನ ಹೃದಯದಾಗಿತ್ತು. 
"ಆಸನ ಆಳ್ವಿಕೆಯ ಮೂವತ್ತೊಂಬತ್ತನೆಯ ವರ್ಷದಲ್ಲಿ ಅವನ ಕಾಲುಗಳಿಗೆ ಬಹು ಕಠಿಣವಾದ ರೋಗ ತಗಲಿತು. ಈ ರೋಗದಲ್ಲೂ ಅವನು ಯೆಹೋವನ ಸಹಾಯವನ್ನು ಕೋರದೆ ವೈದ್ಯರ ಸಹಾಯವನ್ನೇ ಕೋರಿದನು." 2 ಪೂರ್ವಕಾಲವೃತ್ತಾಂತ 16:12 

ಆಸನ ತಪ್ಪು ವೈದ್ಯರನ್ನೇ  ನಂಬಿ ದೇವರನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವುದಾಗಿತ್ತು. ಇಲ್ಲಿ ಕಲಿಯ ಬೇಕಾದ ಪಾಠವು “ವೈದ್ಯರ ಬಳಿಗೆ ಹೋಗಬೇಡಿ” ಎಂಬುದಲ್ಲ. ಪಾಠವು “ದೇವರನ್ನು ಬಿಡಬೇಡಿ” ಎಂಬುದು.

ಎಲ್ಲಾ ಸ್ವಸ್ತತೆಗೂ ಮೂಲ ಕಾರಣ ದೇವರೇ
ಬೈಬಲ್ ಸ್ಪಷ್ಟವಾಗಿ ನೆನಪಿಸುತ್ತದೆ ಎಲ್ಲಾ ಸ್ವಸ್ಥತೆಯೂ ಅಂತಿಮವಾಗಿ ದೇವರಿಂದಲೇ ಬರುತ್ತದೆ. ಔಷಧವು ಕೆಲಸ ಮಾಡಿದರೂ ಸಹ,  ಅದರ ಹಿಂದೆ ಇದ್ದು ಗುಣಪಡಿಸುವವನು ದೇವರೇ 
ನಾವು ಪಾಪದ ಪಾಲಿಗೆ ಸತ್ತು ನೀತಿವಂತರಾಗಿ ಜೀವಿಸುವಂತೆ ಆತನು ನಮ್ಮ ಪಾಪಗಳನ್ನು ತಾನೇ ತನ್ನ ದೇಹದಲ್ಲಿ ಹೊತ್ತುಕೊಂಡು ಶಿಲುಬೆಯನ್ನು ಏರಿ ಮರಣ ಹೊಂದಿದನು. ಆತನ ಬಾಸುಂಡೆಗಳಿಂದ ನಮಗೆ ಗುಣವಾಯಿತು. 1 ಪೇತ್ರ 2:24 

ಒಮ್ಮೆ ನನ್ನನ್ನು ಐಸಿಯುನಲ್ಲಿರುವ ಒಬ್ಬರಿಗಾಗಿ ಪ್ರಾರ್ಥಿಸಲು ಕರೆಯಲಾಯಿತು. ಅವರ ಸುತ್ತಲಿದ್ದ ಮುಖ್ಯ ವೈದ್ಯರು "ನಾವು ಶಸ್ತ್ರಚಿಕಿತ್ಸಕರಷ್ಟೇ ಕತ್ತರಿಸಿ ಹೊಲಿಯುತ್ತೇವೆ, ಆದರೆ ದೇವರು ಗುಣಪಡಿಸುತ್ತಾನೆ. ನಾವೂ ದೇವರಿಗಾಗಿ ಕೆಲಸ ಮಾಡುತ್ತೇವೆ."ಎಂದು ಹೇಳಿದರು.

ಈ ಹೇಳಿಕೆಯಿಂದ ನಾನು ತುಂಬಾ ಸ್ಪರ್ಶಿಸಲ್ಪಟ್ಟೆ. ವೈದ್ಯರು ನಿಜವಾಗಿಯೂ ದೇಹಕ್ಕೆ ಚಿಕಿತ್ಸೆ ನೀಡುತ್ತಾರೆ, ಆದರೆ ದೇವರು ಜೀವವನ್ನು ಪುನಃಸ್ಥಾಪಿಸುತ್ತಾನೆ. ಪ್ರತಿಯೊಂದು ಯಶಸ್ವಿ ಶಸ್ತ್ರಚಿಕಿತ್ಸೆ, ಪ್ರತಿಯೊಂದು ಚೇತರಿಕೆ ಮತ್ತು ಪ್ರತಿಯೊಂದು ಪರಿಣಾಮಕಾರಿ ಔಷಧವು ದೇವರ ಕರುಣೆಯ ಪ್ರತಿಬಿಂಬವಾಗಿದೆ. 

ಕ್ರಿಯೆಯಲ್ಲಿ ನಂಬಿಕೆ ತೋರುವುದೇ ವಿನಃ ನಿರಾಕರಣೆಯಲ್ಲಿ ನಂಬಿಕೆ ಯಲ್ಲ ಎಂಬುದಾಗಿ ಯಾಕೋಬನು ನಮಗೆ ಸಮತೋಲನದ ಸುಂದರ ಚಿತ್ರಣವನ್ನು ನೀಡುತ್ತಾನೆ 

"ನಿಮ್ಮಲ್ಲಿ ಯಾವನಾದರೂ ಅಸ್ವಸ್ಥನಾಗಿರುವವನು ಇದ್ದರೆ, ಅವನು ಸಭೆಯ ಹಿರಿಯರನ್ನು ಕರೆದು ಪ್ರಾರ್ಥಿಸುವಂತೆ ವಿನಂತಿಸಲಿ. ಅವರು ಕರ್ತನ ಹೆಸರಿನಲ್ಲಿ ಅವನಿಗೆ ಎಣ್ಣೆ ಹಚ್ಚಿ ಅವನಿಗೋಸ್ಕರ ದೇವರನ್ನು ಪ್ರಾರ್ಥಿಸಲಿ." ಯಾಕೋಬ 5:14

ಗಮನಿಸಿ: ಪ್ರಾರ್ಥನೆ, ಅಭಿಷೇಕ, ಆರೈಕೆ - ಎಲ್ಲವೂ ಒಟ್ಟಾಗಿದೆ. ದೇವರು ಪ್ರಾರ್ಥನೆ ಮತ್ತು ಜ್ಞಾದ ನಡುವೆ ಆಯ್ಕೆ ಮಾಡಲು ಎಂದಿಗೂ ನಮ್ಮನ್ನು ಕೇಳಲಿಲ್ಲ. ಎರಡನ್ನೂ ಬಳಸಬೇಕೆಂದು ಆತನು ನಮ್ಮನ್ನು ಆಹ್ವಾನಿಸುತ್ತಾನೆ.

ದೇವರು ಕೊಡುವದನ್ನು ಬಳಸಿಕೊಂಡು ಆತನನ್ನು ನಂಬಿರಿ 
ದೇವರು ಭೂಮಿಯನ್ನು ಜ್ಞಾನ, ಕೌಶಲ್ಯ ಮತ್ತು ಸಂಪನ್ಮೂಲಗಳಿಂದ ತುಂಬಿದ್ದಾನೆ. ವೈದ್ಯರು ಮತ್ತು ಔಷಧಿಗಳು ದೇವರಿಗೆ ಬದಲಿಯಲ್ಲ -ಆದರೆ ಅವು ಆತನ ಕೈಯಲ್ಲಿರುವ ಸಾಧನಗಳಾಗಿವೆ. 

ವಿಶ್ವಾಸಿಗಳಾಗಿ, ನಾವು ಪ್ರಾರ್ಥಿಸಬೇಕು. ನಾವು ನಂಬಬೇಕು ಮತ್ತು ನಾವು ಜ್ಞಾನದಿಂದ ವರ್ತಿಸಬೇಕು. ಈ ಸರಳ ಸತ್ಯವನ್ನು ನೆನಪಿಡಿ: ವೈದ್ಯರು ಚಿಕಿತ್ಸೆ ನೀಡಬಹುದು, ಆದರೆ ದೇವರು ಗುಣಪಡಿಸುತ್ತಾನೆ. ನೀವು ಆಸ್ಪತ್ರೆಗೆ ಹೋದಾಗ, ನಂಬಿಕೆಯಿಂದ ಒಳಗೆ ನಡೆಯಿರಿ. ನೀವು ಔಷಧಿ ತೆಗೆದುಕೊಂಡಾಗ, ಅದನ್ನು ಪ್ರಾರ್ಥನೆಯೊಂದಿಗೆ ತೆಗೆದುಕೊಳ್ಳಿ. ನಿಮ್ಮ ಗುಣಪಡಿಸುವ ಪ್ರಯಾಣದ ಪ್ರತಿಯೊಂದು ಹೆಜ್ಜೆಯನ್ನೂ ಮಾರ್ಗದರ್ಶಿಸುವ ಮಹಾನ್ ವೈದ್ಯ ಆತನೇ ಎಂದು ತಿಳಿದುಕೊಂಡು ದೇವರ ಮೇಲೆ ನಿಮ್ಮ ದೃಷ್ಟಿಯನ್ನು ಇರಿಸಿ. 
ಪ್ರಾರ್ಥನೆಗಳು
ತಂದೆಯೇ, ನಿಮ್ಮ ಔಷಧದ ವರದಾನದ ಮೂಲಕ ಸ್ವಸ್ತತೆ ಪಡೆಯಲು ಜ್ಞಾನವನ್ನೂ ಮತ್ತು ನಿಮ್ಮ ಸಾರ್ವಭೌಮ ಆರೈಕೆಯಲ್ಲಿ ನಂಬಿಕೆ ಇಡಲು ನಂಬಿಕೆಯನ್ನು ನಮಗೆ ಅನುಗ್ರಹಿಸಿ. ಪ್ರತಿಯೊಂದು ಪರೀಕ್ಷೆಯಲ್ಲೂ, ನಮಗೆ ಆದರಿಕನ್ನಾಗಿದ್ದು ಮಾರ್ಗದರ್ಶಿಯಾಗಿರಿ. ಯೇಸುವಿನ ಹೆಸರಿನಲ್ಲಿ ಬೇಡುತ್ತೇವೆ ತಂದೆಯೇ. ಆಮೆನ್.





Join our WhatsApp Channel


Most Read
● ನಿಮ್ಮ ಆರಾಮದಾಯಕ ವಲಯದಿಂದ ಹೊರಬನ್ನಿ.
● ಕರ್ತನಲ್ಲಿ ನಿಮ್ಮನ್ನು ನೀವು ಬಲಪಡಿಸಿಕೊಳ್ಳುವುದು ಹೇಗೆ
● ವಿವೇಚನೆ v/s ತೀರ್ಪು
● ಆತನ ಪರಿಪೂರ್ಣ ಪ್ರೀತಿಯಲ್ಲಿರುವ ಬಿಡುಗಡೆಯನ್ನು ಕಂಡುಕೊಳ್ಳುವುದು
● ದಿನ 02:40 ದಿನಗಳ ಉಪವಾಸ ಪ್ರಾರ್ಥನೆ ದಿನಗಳು
● ಕನಸುಗಳ ಕೊಲೆಪಾತಕರು
● ನಿಮ್ಮ ಅನುಭವವನ್ನು ವ್ಯರ್ಥ ಮಾಡಿಕೊಳ್ಳಬೇಡಿರಿ
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2026 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್