ಅನುದಿನದ ಮನ್ನಾ
ನಿರುತ್ಸಾಹದ ಬಾಣಗಳನ್ನು ಗೆಲ್ಲುವುದು -II
Wednesday, 12th of June 2024
6
3
209
Categories :
ನಿರುತ್ಸಾಹ ಪಡಿಸು (Discouragement)
ಬಿಡುಗಡೆ (Deliverance)
ನಿರುತ್ಸಾಹದ ದುರಾತ್ಮವೇ ಅನೇಕರು ಇಂದು ತಮ್ಮ ಜೀವನದಲ್ಲಿ ಮುನ್ನಡೆ ಸಾಧಿಸಲು ಸಾಧ್ಯವಾಗದಕ್ಕೆ ಮುಖ್ಯ ಕಾರಣವಾಗಿದೆ. ನಿರುತ್ಸಾಹವು ಅಷ್ಟು ಕೆಟ್ಟದಾಗಿ ಮೇಲೆ ಪರಿಣಾಮ ಬೀರದ್ದರಿಂದಲೇ ಅನೇಕರು ಶಾಲೆ- ಕಾಲೇಜನ್ನು ತೊರೆಯುತ್ತಾರೆ, ತಮ್ಮ ಜೀವನೋಪಾಯಗಳನ್ನೇ ನಾಶಪಡಿಸಿಕೊಳ್ಳುತ್ತಾರೆ, ಕರ್ತನ ಸೇವೆ ಮಾಡುವುದರಿಂದ ಹಿನ್ನಡೆದಿದ್ದಾರೆ ಮತ್ತು ಇನ್ನೂ ಕೆಲವರು ಆತ್ಮಹತ್ಯೆಗೂ ಶರಣಾಗಿದ್ದಾರೆ.
ಈ ನಿರುತ್ಸಾಹದ ದುರಾತ್ಮವು ಯಾರ ಮೇಲೆ ಬೇಕಾದರೂ ದಾಳಿ ಮಾಡಬಹುದು. ಅದಕ್ಕೆ ಲಿಂಗ ಭೇದವಿಲ್ಲ. ಎಲೀಯನು ಆಕಾಶದಿಂದ ಬೆಂಕಿ ಬೀಳುವಂತೆ ಅಜ್ಞಾಪಿಸಿದನು ಮತ್ತು ಹಾಗೆಯೇ ಅದು ಆಯಿತು. ಆದರೆ ಅಂತಹ ಮಹಾನ್ ಪ್ರವಾದಿ ಕೂಡ ನಿರುತ್ಸಾಹಕ್ಕೆ ಒಳಗಾಗಿ ದೇವರಿಗೆ ತನ್ನನ್ನು ಕೊಲ್ಲುವಂತೆ ಮೊರೆ ಇಟ್ಟನು.
"ತರುವಾಯ ತಾನೊಬ್ಬನಾಗಿ ಅರಣ್ಯದೊಳಗೆ ಒಂದು ದಿವಸದ ಪ್ರಯಾಣದಷ್ಟು ದೂರ ಹೋಗಿ ಒಂದು ಜಾಲೀಗಿಡದ ಕೆಳಗೆ ಕೂತುಕೊಂಡು ಮರಣವನ್ನು ಅಪೇಕ್ಷಿಸಿದನು. ಅವನು - ಯೆಹೋವನೇ, ನನಗೆ ಸಾಕಾಯಿತು; ನನ್ನ ಪ್ರಾಣವನ್ನು ತೆಗೆದುಬಿಡು; ನಾನು ನನ್ನ ಪಿತೃಗಳಿಗಿಂತ ಉತ್ತಮನಲ್ಲ ಎಂದು ದೇವರನ್ನು ಪ್ರಾರ್ಥಿಸಿ "(1 ಅರಸುಗಳು 19:4 )
ಸೈತಾನನು ಒಬ್ಬ ಸುಳ್ಳುಗಾರ ಮತ್ತು ಸುಳ್ಳಿಗೆ ತಂದೆಯೂ ಆಗಿದ್ದಾನೆ. ಆದರೆ ಅದೇ ಸಮಯದಲ್ಲಿ ಅವನು ಮೂರ್ಖನಲ್ಲ. ಸೈತಾನನು ಎಂದಿಗೂ ನಿಮ್ಮ ಜೀವನದಲ್ಲಿ ಎಲ್ಲವೂ ಸುಗಮವಾಗಿ ಹೋಗುತ್ತಿರುವಾಗ ನಿಮ್ಮನ್ನು ಖಿನ್ನತೆಯ ಮೂಲಕ ದಾಳಿ ಮಾಡುವುದಿಲ್ಲ. ನಿಮ್ಮ ಜೀವನದ ಔನತ್ಯದ ಸಮಯದಲ್ಲಿ 'ಅಹಂಕಾರ' ಎನ್ನುವ ಆಯುದವನ್ನು ಬಳಸುತ್ತಾನೆಯೇ ವಿನಹ ನಿರುತ್ಸಾಹದ ಮೂಲಕ ದಾಳಿ ಮಾಡುವುದಿಲ್ಲ. ಆದರೆ ನಿಮ್ಮ ಸುತ್ತಮುತ್ತಲೂ ತೊಂದರೆಗಳು- ವೈಫಲ್ಯತೆಗಳು ನಡೆಯುವಾಗ ಸೈತಾನನು ತನ್ನ ನಿರುತ್ಸಾಹದ ಬಾಣವನ್ನು ನಿಮ್ಮ ಮೇಲೆ ಪ್ರಯೋಗಿಸಿ ನಿಮ್ಮನ್ನು ಪೀಡಿಸುತ್ತಾನೆ.
ಆದರೆ ಒಬ್ಬ ವ್ಯಕ್ತಿಯು ತನ್ನ ವಿರುದ್ಧ ಈ ನಿರುತ್ಸಾಹದ ಬಾಣವು ತಿರುಗುತ್ತಿದೆಯೇ ಎಂದು ಹೇಗೆ ಅರಿತುಕೊಳ್ಳಬಹುದು? ಅದಕ್ಕೆ ಕೆಲವೊಂದು ಲಕ್ಷಣಗಳನ್ನು ನಾವು ಗಮನವಿಟ್ಟು ನೋಡಬೇಕಾಗುತ್ತದೆ.
1. ವಿಪರೀತವಾಗಿ ಚಿಂತಿಸುವುದು.
ಚಿಂತೆ ಮಾಡುವಂತದ್ದು ದೇವರ ವಾಕ್ಯಕ್ಕೆ ತದ್ವಿರುದ್ದವಾದ ಕಾರ್ಯ. ನಿಮ್ಮ ಭರವಸೆಯನ್ನೆಲ್ಲ ನಿಮ್ಮಿಂದ ತೆಗೆಯಲ್ಪಟ್ಟ ಮೇಲೆ ನಿಮಗೆ ನಿಮ್ಮ ಸುತ್ತಲೂ ಏನಾಗುತ್ತಿದೆ ಎನ್ನುವ ಪರಿವೇ ಇರುವುದಿಲ್ಲ. ಈಗ ನೀವು ಕೇವಲ ಚಿಂತಿಸಲಾರಂಭಿಸುತ್ತೀರಿ. ಚಿಂತಿಸುವುದರ ಕುರಿತು ದೇವರ ವಾಕ್ಯ ಏನು ಹೇಳುತ್ತದೆ ನೋಡೋಣ ಬನ್ನಿರಿ :
"ಈ ಕಾರಣದಿಂದ - ನಮ್ಮ ಪ್ರಾಣಧಾರಣೆಗೆ ಏನು ಊಟಮಾಡಬೇಕು, ಏನು ಕುಡಿಯಬೇಕು, ನಮ್ಮ ದೇಹರಕ್ಷಣೆಗೆ ಏನು ಹೊದ್ದುಕೊಳ್ಳಬೇಕು ಎಂದು ಚಿಂತೆಮಾಡಬೇಡಿರಿ ಎಂಬದಾಗಿ ನಿಮಗೆ ಹೇಳುತ್ತೇನೆ. ಊಟಕ್ಕಿಂತ ಪ್ರಾಣವು ಉಡುಪಿಗಿಂತ ದೇಹವು ಮೇಲಾದದ್ದಲ್ಲವೇ.
ಹೀಗಿರುವದರಿಂದ - ಏನು ಊಟಮಾಡಬೇಕು, ಏನು ಕುಡಿಯಬೇಕು, ಏನು ಹೊದ್ದುಕೊಳ್ಳಬೇಕು ಎಂದು ಚಿಂತೆಮಾಡಬೇಡಿರಿ. ಇವೆಲ್ಲವುಗಳಿಗಾಗಿ ಅಜ್ಞಾನಿಗಳು ತವಕಪಡುತ್ತಾರೆ. ಇದೆಲ್ಲಾ ನಿಮಗೆ ಬೇಕಾಗಿದೆ ಎಂದು ಪರಲೋಕದಲ್ಲಿರುವ ನಿಮ್ಮ ತಂದೆಗೆ ತಿಳಿದದೆಯಷ್ಟೆ."(ಮತ್ತಾಯ 6:25, 31-34)
ನಿಮ್ಮ ಶಾಂತಿಯನ್ನು - ಆನಂದವನ್ನು ಕದ್ದುಕೊಳ್ಳಲಿರುವ ಒಂದು ಮೂಲಭೂತ ಅಂಶವೆಂದರೆ ಅದು ಚಿಂತೆ. ಈ ಚಿಂತೆಯು ನಿಮ್ಮನ್ನು ಸಂಪೂರ್ಣವಾಗಿ ಎದೆಗುಂದುವಂತೆ ಮಾಡುತ್ತದೆ.
2. ಎಲ್ಲವನ್ನೂ ದೂರುವುದು.
ಜನರು ನಿರುತ್ಸಾಹದ ದುರಾತ್ಮಕ್ಕೆ ಸಿಲುಕಿದಾಗ ಅವರು ಎಲ್ಲಾ ವಿಚಾರದ ಕುರಿತೂ ದೂರು ಹೇಳುವುದನ್ನು ನೀವು ನೋಡಿರಬಹುದು. ಎಸಿ ಚಾಲನೆಯಲ್ಲಿದ್ದರೆ ಸಿಕ್ಕಾಪಟ್ಟೆ ತಂಡಿಯನ್ನುವರು. ನೀವದನ್ನು ಆಫ್ ಮಾಡಿದರೆ ಶೆಕೆ ಎನ್ನುವರು. ನೀವು ಎಸಿಯನ್ನು ಕಡಿಮೆ ಮಾಡಿದರೆ "ಎಸಿ ಸರಿಯಾಗಿ ಕೆಲಸ ಮಾಡುತ್ತಿಲ್ಲವೇ" ಎನ್ನುವರು. ನಾನೇನನ್ನು ಹೇಳಲು ಬಯಸುತ್ತಿರುವೆ ಎಂಬುದನ್ನು ನೀವು ಅರ್ಥ ಮಾಡಿಕೊಂಡಿರಿ ಎಂದು ನಾನು ನೆನೆಸುತ್ತೇನೆ.
ನೀವು ನಿರುತ್ಸಾಹದ ದುರಾತ್ಮನ ದಾಳಿಗೆ ತುತ್ತಾದಾಗ ನೀವು "ಏಕೆ ಹೀಗೆಲ್ಲ ನಡೆಯುತ್ತಿದೆ" ಎಂದು ದೇವರನ್ನೂ ಸಹ ದೂರಲಾರಂಭಿಸುತ್ತೀರಿ. ದೂರುವ ಸ್ವಭಾವಕ್ಕೆ ಉತ್ತಮ ಮದ್ದೆಂದರೆ ಸ್ತೋತ್ರ ಸಲ್ಲಿಸುವುದಾಗಿದೆ. ಕರ್ತನು ನಿಮ್ಮ ಜೀವಿತದಲ್ಲಿ ಮಾಡಿರುವ ಎಲ್ಲ ಒಳ್ಳೆಯದಕ್ಕಾಗಿ ಆತನನ್ನು ಸ್ತುತಿಸಿರಿ. (ಯಾಕೋಬ 1:17)
" ಗುಣುಗುಟ್ಟದೆಯೂ ವಿವಾದವಿಲ್ಲದೆಯೂ ಎಲ್ಲವನ್ನು ಮಾಡಿರಿ. ಹೀಗೆ ನೀವು ನಿರ್ದೋಷಿಗಳೂ ಯಥಾರ್ಥಮನಸ್ಸುಳ್ಳವರೂ ಆಗಿದ್ದು ವಕ್ರಬುದ್ಧಿಯುಳ್ಳ ಮೂರ್ಖಜಾತಿಯ ಮಧ್ಯದಲ್ಲಿ ದೇವರ ನಿಷ್ಕಳಂಕರಾದ ಮಕ್ಕಳಾಗಿರುವಿರಿ."(ಫಿಲಿಪ್ಪಿಯವರಿಗೆ 2:14-15).
ಪ್ರಸ್ತುತ ನಿಮ್ಮ ಜೀವನ ಎಷ್ಟೇ ಕಲ್ಲು ಮುಳ್ಳುಗಳಿಂದ ತುಂಬಿದ್ದರೂ ಸರಿಯೇ. ನಿಮ್ಮ ಜೀವಿತದಲ್ಲಿ ಎಂತಹ ಬಿರುಗಾಳಿ ಬೀಸುತ್ತಿದ್ದರೂ ಸರಿಯೇ ನಿಮ್ಮ ಜೀವಿತದಲ್ಲಿ ಆತನು ಮಾಡಿದ ಒಳ್ಳೆಯ ಕಾರ್ಯಗಳಿಗಾಗಿ ಆತನಿಗೆ ಸ್ತೋತ್ರ ಸಲ್ಲಿಸಿರಿ. ನಮ್ಮ ಬಾಯಿಯಲ್ಲಿ ಆತನ ಸ್ತೋತ್ರವು ತುಂಬಿದ್ದರೆ ದೂರು ಹೇಳಲು ಅದನ್ನು ಬಳಸಲಿಕ್ಕಾಗುವುದಿಲ್ಲವಲ್ಲಾ.
ಅರಿಕೆಗಳು
ಯೇಸುಕ್ರಿಸ್ತನು ಶಿಲುಬೆಯ ಮೇಲೆ ನನಗಾಗಿ ಮಾಡಿದ ಕಾರ್ಯದಿಂದಾಗಿ ನಾನು ಜಯಶಾಲಿಯಾಗಿದ್ದೇನೆ ಹೊರತು ತಪ್ಪಿತಸ್ಥನಲ್ಲ /ಳಲ್ಲ. ನನ್ನೊಳಗಿರುವ ಕ್ರಿಸ್ತನೇ ಮಹಿಮೆಯ ನಿರೀಕ್ಷೆಯಾಗಿದ್ದಾನೆ.
ತಂದೆಯೇ ನನಗೋಸ್ಕರ ನೀನು ಮಾಡಿದ ಎಲ್ಲಾ ಕಾರ್ಯಗಳಿಗಾಗಿ ನಿನಗೆ ವಂದನೆ ಸಲ್ಲಿಸುತ್ತೇನೆ. ನೀನು ನನಗಾಗಿ ಇಲ್ಲದಿದ್ದರೇ ನಾನು ಇಷ್ಟೊತ್ತಿಗೆ ಯಾವಾಗಲೋ ನಾಶವಾಗಿ ಹೋಗುತ್ತಿದ್ದೆ. ನಿನ್ನ ಪ್ರಸನ್ನತೆಯು ನನ್ನ ಜೀವಿತದಲ್ಲಿರುವ ಕಾರಣದಿಂದಲೇ ಮಹತ್ತಾದ ಕಾರ್ಯಗಳನ್ನು ನಾನು ನೋಡುವೆನು.ಯೇಸು ನಾಮದಲ್ಲಿ ಪ್ರಾರ್ಥಿಸುವೆನು ತಂದೆಯೇ, ಆಮೆನ್.
ತಂದೆಯೇ ನನಗೋಸ್ಕರ ನೀನು ಮಾಡಿದ ಎಲ್ಲಾ ಕಾರ್ಯಗಳಿಗಾಗಿ ನಿನಗೆ ವಂದನೆ ಸಲ್ಲಿಸುತ್ತೇನೆ. ನೀನು ನನಗಾಗಿ ಇಲ್ಲದಿದ್ದರೇ ನಾನು ಇಷ್ಟೊತ್ತಿಗೆ ಯಾವಾಗಲೋ ನಾಶವಾಗಿ ಹೋಗುತ್ತಿದ್ದೆ. ನಿನ್ನ ಪ್ರಸನ್ನತೆಯು ನನ್ನ ಜೀವಿತದಲ್ಲಿರುವ ಕಾರಣದಿಂದಲೇ ಮಹತ್ತಾದ ಕಾರ್ಯಗಳನ್ನು ನಾನು ನೋಡುವೆನು.ಯೇಸು ನಾಮದಲ್ಲಿ ಪ್ರಾರ್ಥಿಸುವೆನು ತಂದೆಯೇ, ಆಮೆನ್.
Join our WhatsApp Channel
Most Read
● ದೈವೀಕ ಅನುಕ್ರಮ -2● ಅನುಕರಣೆ
● ಸಫಲತೆ ಎಂದರೇನು?
● ಸ್ಥಿರತೆಯಲ್ಲಿರುವ ಶಕ್ತಿ
● ಕೃತಜ್ಞತೆಯ ಯಜ್ಞ
● ನಂಬಿಕೆಯ ಮೂಲಕ ಕೃಪೆಯನ್ನು ಪಡೆದುಕೊಳ್ಳುವುದು
● ನಿಮ್ಮ ರೂಪಾಂತರವನ್ನು ತಡೆಯುತ್ತಿರುವುದೇನು ಎಂಬುದನ್ನು ತಿಳಿದುಕೊಳ್ಳಿರಿ.
ಅನಿಸಿಕೆಗಳು