ಅನುದಿನದ ಮನ್ನಾ
ಯೇಸುವಿನ ಹೆಸರು.
Tuesday, 27th of February 2024
1
1
298
Categories :
ಯೇಸುವಿನ ಹೆಸರು (Name of Jesus)
ಕರ್ತನು ಇಸ್ರೇಲ್ ಜನಾಂಗದೊಂದಿಗೆ ಮಾತಾಡಿ "ನಾನು ನಿನ್ನನ್ನು ಹೆಸರಿಡಿದು ಕರೆದಿದ್ದೇನೆ, ನೀನು ನನ್ನವನೇ" ಎಂದು ಹೇಳುತ್ತಾನೆ"(ಯೆಶಾಯ 43:1-2) ಒಂದು ಹೆಸರನ್ನುವಂತದ್ದು ಗುಂಪಿನಿಂದ ಒಬ್ಬ ವ್ಯಕ್ತಿಯನ್ನು ಅಥವಾ ಒಂದು ಜನಾಂಗವನ್ನು ಪ್ರತ್ಯೇಕಿಸುವಂಥದ್ದಾಗಿದೆ.
ಇಸ್ರೇಯೆಲ್ಯರಲ್ಲಿ ಆರೋನನ ನಾಯಕತ್ವವನ್ನು ದೃಢಪಡಿಸುವುದಕೋಸ್ಕರ ಕರ್ತನು ಇಸ್ರಾಯೇಲಿನ ಎಲ್ಲಾ ನಾಯಕರನ್ನು ಕರೆದು ಪ್ರತಿಯೊಬ್ಬರೂ ಒಂದೊಂದು ಕೋಲನ್ನು ತರಲು ಹೇಳಿ ಆ ಕೋಲುಗಳ ಮೇಲೆ ಆ ನಾಯಕರುಗಳ ಹೆಸರುಗಳನ್ನು ಕೆತ್ತಲು ಹೇಳಿದನು.(ಅರಣ್ಯಕಾಂಡ 17:1-2) ಹೆಸರೆನ್ನುವಂತದ್ದು ವ್ಯಕ್ತಿಯನ್ನು- ಕುಟುಂಬವನ್ನು- ಕುಲವನ್ನು ಪ್ರತಿನಿಧಿಸುವಂತಹದ್ದಾಗಿದೆ.
ನಾವು ಯಾರನ್ನಾದರೂ ಅವರ ಹೆಸರಿಡಿದು ಕರೆಯುತ್ತಿದ್ದರೆ ನಾವು ಕೇವಲ ವ್ಯಕ್ತಿ ಹೆಸರನ್ನು ಮಾತ್ರ ಹೇಳುತ್ತಿರುವುದಿಲ್ಲ, ಬದಲಾಗಿ ಆ ವ್ಯಕ್ತಿಯ ಕುರಿತು ಏನನ್ನಾದರೂ ತಿಳಿಸುತ್ತಿರುತ್ತೇವೆ. ಇದರಿಂದಲೇ ದೇವರು ಯಾರನ್ನಾದರೂ ಆಶೀರ್ವದಿಸ ಬಯಸಿದರೆ ಮೊದಲು ಅವರ ಹೆಸರನ್ನು ಬದಲಾಯಿಸುವುದನ್ನು ಯಾವಾಗಲೂ ಆಯ್ಕೆ ಮಾಡಿಕೊಳ್ಳುತ್ತಾನೆ.ಉದಾಹರಣೆಗೆ ಅಬ್ರಾಮನನ್ನು ದೇವರು ಅಬ್ರಹಾಮನನ್ನಾಗಿ (ಅನೇಕ ಜನಾಂಗಗಳ ತಂದೆ) ಎಂದು ಬದಲಾಯಿಸಿದನು. ದೇವರು ಯಾಕೋಬನ ಹೆಸರನ್ನು ಇಸ್ರಾಯೇಲ್ಯ (ದೇವರೊಂದಿಗೆ ಹೋರಾಡಿದವನು) ಎಂದು ಬದಲಾಯಿಸಿದನು.
ಅದೇ ರೀತಿಯಲ್ಲಿ ನಾವು ಯೇಸುವಿನ ಹೆಸರನ್ನು ಹೇಳುವಾಗ ನಾವು ಕೇವಲ ಆ ಹೆಸರನ್ನು ಮಾತ್ರ ಹೇಳುತ್ತಿರುವುದಿಲ್ಲ. ಬದಲಾಗಿ ಮನುಷ್ಯ ಬಲವಲ್ಲದ ಆದರೆ ದೇವರ ಅಧಿಕಾರವನ್ನು ಹೊಂದಿರುವ ಬಲದಿಂದ ಕೂಡಿರುವಂತಹ ಹೆಸರನ್ನು ಘೋಷಿಸುತ್ತಿರುತ್ತೇವೆ (ಕೊಲಸ್ಸೆ 2:9-10)
ನಾವು ಹೆಸರನ್ನು ಹೇಳುವಾಗ ನಾವು ಆ ವ್ಯಕ್ತಿಗಳನ್ನು ವರ್ಣಿಸುತ್ತೇವೆ. ಯೇಸು ಎಂದರೆ ರಕ್ಷಕ ಮತ್ತು ನಾವು ಆತನನ್ನು ಆತನು ನಮಗಾಗಿ ಮಾಡಿದ ಕಾರ್ಯವನ್ನು ಅಂದರೆ ನಮ್ಮನ್ನು ಪಾಪದಿಂದ ಬಿಡಿಸಿ, ನಮ್ಮನ್ನು ವೈಫಲ್ಯತೆಗಳಿಂದ ಬಿಡಿಸಿ, ನಮ್ಮ ತಪ್ಪುಗಳಿಂದ ಬಿಡಿಸಿ ಅಷ್ಟೇ ಅಲ್ಲದೆ ಆತನ ಚಿತ್ತವಲ್ಲದ ನಮ್ಮ ಜೀವಿತದ ಎಲ್ಲಾ ಪರಿಸ್ಥಿತಿಗಳಿಂದ ನಮ್ಮನ್ನು ಬಿಡಿಸಿ ರಕ್ಷಿಸಿದ ಆ ಹೆಸರನ್ನು ಕರೆಯುತ್ತಿರುತ್ತೇವೆ.(ಮತ್ತಾಯ1:21ನೋಡಿರಿ)
ಭೂಮಿಯ ಮೇಲಾಗಲಿ ಆಕಾಶದಲ್ಲಿಯೇ ಆಗಲಿ ಯೇಸುವಿನ ನಾಮಕ್ಕೆ ಸರಿಸಾಟಿಯಾದ ಬೇರೆ ಯಾವ ಹೆಸರು ಇಲ್ಲ ಎಂದು ಸತ್ಯವೇದ ನಮಗೆ ಬೋಧಿಸುತ್ತದೆ. ಯೇಸುವೆಂಬ ಹೆಸರು ಒಂದೇ ಭೂಪರ ಲೋಕಗಳಲ್ಲಿರುವ ಪಾತಾಳದಲ್ಲಿರುವ ಎಲ್ಲರೂ ಪ್ರತಿಯೊಂದು ಸೃಷ್ಟಿಯೂ ಅಡ್ಡಬಿದ್ದು ಆರಾಧಿಸಬೇಕಾದ ಹೆಸರು ಎಂದು ಸತ್ಯವೇದ ನಮಗೆ ಬೋಧಿಸುತ್ತದೆ. (ಫಿಲಿಪಿ 2:9-10)
ಅನೇಕ ವರ್ಷಗಳ ಹಿಂದೆ ಭಾರತದ ಗುಡ್ಡಗಾಡು ಪ್ರದೇಶಗಳಲ್ಲಿರುವ ಒಂದು ಸಣ್ಣ ಹಳ್ಳಿಗೆ ಸುವಾರ್ತೆ ಸಾರುವುದಕ್ಕೋಸ್ಕರ ನಾನು ಆಹ್ವಾನಿಸಲ್ಪಟ್ಟಿದ್ದೆ. ಒಂದು ದೊಡ್ಡ ಸಂಖ್ಯೆಯ ಜನರ ಗುಂಪು ಅಲ್ಲಿ ಸೇರಿ ಬಂದಿತ್ತು. ಸುವಾರ್ತೆಗೆ ವೈರಿಗಳಾದ ಜನರ ಗುಂಪು ಸಹ ಅಲ್ಲಿ ಸುವಾರ್ತಕೂಟವನ್ನು ಹಾಳು ಮಾಡುವ ಉದ್ದೇಶದಿಂದ ಕೂಡಿಬಂದಿತ್ತು. ಸುವಾರ್ತ ಕೂಟದ ಆಯೋಜಕರು ಇದರಿಂದಾಗಿ ಸಿಕ್ಕಾಪಟ್ಟೆ ಭಯಗ್ರಸ್ತರಾಗಿದ್ದರು. ಏಕೆಂದರೆ ಆ ವ್ಯಕ್ತಿಗಳು ವಾತಾವರಣವನ್ನು ಹದಗೆಡಿಸಲು ಕೆಟ್ಟ ಮಾತುಗಳನ್ನಾಡುತ್ತಾ ಕೂಗಾಡುತ್ತಿದ್ದರು.ಆ ಕ್ಷಣದಲ್ಲಿ ಕರ್ತನು ಸಂದೇಶವನ್ನು ನಿಲ್ಲಿಸಿ ಆ ಅಂಧಕಾರದ ಬಲವನ್ನು ಯೇಸು ನಾಮದಲ್ಲಿ ಗದರಿಸುವಂತೆ ಹೇಳಿದನು. ಏನನ್ನು ನಿರೀಕ್ಷೆ ಮಾಡಬೇಕೆಂದು ಅರಿಯದವನಾಗಿ ನಾನು ಆಜ್ಞೆಗೆ ವಿಧೇಯನಾದೆ. ಅದಾದ ತಕ್ಷಣವೇ ಒಬ್ಬ ಸ್ತ್ರೀಯು ನನ್ನ ಬಳಿಗೆ ಓಡಿಬಂದು "ನನ್ನ ಕುತ್ತಿಗೆಯಲ್ಲಿ ದೊಡ್ಡ ಗಡ್ಡೆಯಿದ್ದು ಈಗ ಅದು ಮಾಯವಾಗಿದೆ"ಎಂದು ಹೇಳಿದಳು. ಅಲ್ಲಿನ ಅನೇಕ ಜನರಿಗೆ ಈ ಸ್ತ್ರೀಯ ಪರಿಚಯವಿತ್ತು ಆಕೆಗೆ ಗಡ್ಡೆ ಇದ್ದುದ್ದನ್ನು ಈಗ ಅದು ಇಲ್ಲದನ್ನು ಅವರು ಸಹ ದೃಢಪಡಿಸಿದರು. ಆಗ ಇಡೀ ಕೂಟದಲ್ಲಿದ್ದವರ ಮನಸ್ಥಿತಿ ಬದಲಾಯಿತು. ಗಲಾಟೆ ಮಾಡಲು ಬಂದ ಜನರೂ ಸಹ ಆಗ ಸೇವೆಯಲ್ಲಿ ಸುಮ್ಮನೆ ಪಾಲ್ಗೊಂಡು ನಂತರ ತಮಗಾಗಿಯೂ ಪ್ರಾರ್ಥಿಸುವಂತೆ ಬೇಡಿಕೊಂಡರು
ನಾವು ಪೂಜ್ಯಭಾವದಿಂದ ಯೇಸುವಿನ ನಾಮವನ್ನು ಬಳಸುವಾಗ ಇತರರನ್ನು ಆಶೀರ್ವದಿಸುವ ಬಲ, ಸ್ವತಹಃ ನಮಗೆ ಸಹಾಯವನ್ನು ಪಡೆದುಕೊಳ್ಳುವ ಬಲ ನಮಗೆ ದೊರಕುತ್ತದೆ. ಅತ್ಯಮೂಲ್ಯವಾದ ಯೇಸುವಿನ ನಾಮವನ್ನು ನೀವು ಬಳಸುವಂತೆ ನಾನು ನಿಮ್ಮನ್ನು ಒತ್ತಾಯ ಪಡಿಸುತ್ತೇನೆ.ನೀವು ಅದನ್ನು ಬಳಸಿದಾಗ ನಿಮ್ಮ ಪರಿಸ್ಥಿತಿಯು ಆತನ ನಾಮದ ಮುಂದೆ ಮೊಣಕಾಲೂರುತ್ತದೆ.
ಪ್ರಾರ್ಥನೆಗಳು
ತಂದೆಯೇ, ನನ್ನ ಜೀವಿತದಲ್ಲಿ ನಿನ್ನ ವಾಕ್ಯಕ್ಕೆ ವಿರುದ್ಧವಾಗಿರುವ ಎಲ್ಲಾ ಪರಿಸ್ಥಿತಿಗಳನ್ನು ಯೇಸು ನಾಮದಲ್ಲಿ ಯೇಸು ನಾಮದ ಮುಂದೆ ಅಡ್ಡ ಬೀಳುವಂತೆ ಅಜ್ಞಾಪಿಸುತ್ತೇನೆ. ಎಲ್ಲಾ ಘನ ಮಾನ ಮಹಿಮೆಗಳನ್ನು ಯೇಸು ನಾಮದಲ್ಲಿ ನಿನಗೆ ಸಲ್ಲಿಸುತ್ತೇನೆ. ಆಮೆನ್
Join our WhatsApp Channel
Most Read
● ಕಾವಲುಗಾರನು● ದೇವರ ರೀತಿಯ ನಂಬಿಕೆ
● ಕಾಮದ ದುರಿಚ್ಛೆಗಳಿಂದ ಹೊರಬರುವುದು
● ಹೊಗಳಿಕೆವಂಚಿತ ನಾಯಕರು
● ಒತ್ತಡವನ್ನು ಓಡಿಸಲು ಇರುವ ಮೂರು ಶಕ್ತಿಯುತ ಮಾರ್ಗಗಳು
● ಕರ್ತನೊಂದಿಗೆ ನಡೆಯುವುದು
● ಕರ್ತನ ಆಲೋಚನೆಯನ್ನು ಕೇಳಬೇಕಾದ ಅಗತ್ಯತೆ
ಅನಿಸಿಕೆಗಳು