"ಇಹಲೋಕದ ನಡವಳಿಕೆಯನ್ನು ಅನುಸರಿಸದೆ ನೂತನಮನಸ್ಸನ್ನು ಹೊಂದಿಕೊಂಡು ಪರಲೋಕಭಾವದವರಾಗಿರಿ...."(ರೋಮಾಪುರದವರಿಗೆ 12:2)
ಈ ಲೋಕದಲ್ಲಿ ಯಾವುದೇ ರೀತಿಯ ಮೌಲ್ಯವುಳ್ಳದನ್ನು ಪಡೆದುಕೊಳ್ಳಲು ನೀವು ಹೆಚ್ಚಿನ ಬೆಲೆಯನ್ನು ಕಟ್ಟ ಬೇಕಾಗುತ್ತದೆ. "ಕನಸುಗಳಿಗೆ ಮುಂಗಡ ಪಾವತಿಯನ್ನು ಕಟ್ಟ ಬೇಕಾಗುತ್ತದೆ. ಕನಸುಗಳೇನೋ ಉಚಿತವೇ. ಆದರೆ ಅದನ್ನು ಪೂರೈಸುವ ಹಾದಿ ಉಚಿತವಲ್ಲ. ಅದಕ್ಕೆ ಕಟ್ಟಬೇಕಾದ ಒಂದು ಬೆಲೆ ಇದೆ" ಎಂದು ಒಬ್ಬರು ಹೇಳಿದ್ದಾರೆ.
ಅಷ್ಟೇ ಅಲ್ಲದೆ ಕ್ರಿಸ್ತನ ಶಿಷ್ಯರಾದ ನಾವು ಕರ್ತನೊಂದಿಗೆ ನಿಕಟವಾದ ಅನ್ಯೋನ್ಯತೆಯಲ್ಲಿ ನಡೆಯಲೆಂದೇ ಇದ್ದೇವೆ.
ಇಲ್ಲಿ ಎರಡೂ ರೀತಿಯ ಜೀವನವನ್ನು ನಡೆಸುವ ಪ್ರಶ್ನೆಯೇ ಇಲ್ಲ. ದೇವರ ಪ್ರಸನ್ನತೆಯಲ್ಲಿ ನಡೆಯಬೇಕೆಂದರೆ ತೆತ್ತಬೇಕಾದಂತಹ ಒಂದು ಬೆಲೆ ಇದೆ.
ಯೆರೆಮಿಯನು ಇನ್ನೂ ಯೌವನಸ್ಥನಾಗಿದ್ದಾಗಲೇ ಕರ್ತನಿಂದ ಕರೆಯಲ್ಪಟ್ಟನು. "ನಾನು ವಿನೋದಗಾರರ ಕೂಟದಲ್ಲಿ ಕೂತುಕೊಳ್ಳಲಿಲ್ಲ, ಉಲ್ಲಾಸಪಡಲೂ ಇಲ್ಲ; ನೀನು ನನ್ನ ಮೇಲೆ ಕೈಯಿಟ್ಟಿದ್ದರಿಂದ ಒಂಟಿಗನಾಗಿ ಕೂತೆನು;.... " ಎಂದು ಅವನು ಬರೆಯುತ್ತಾನೆ (ಯೆರೆಮೀಯ 15:17)
ಲೋಕಕ್ಕೆ ಸ್ನೇಹಿತರಾಗಲು ಬಯಸುವಂಥದ್ದು ನಿಮ್ಮನ್ನು ದೇವರಿಗೆ ವೈರಿಯಾಗುವಂತೆ ಮಾಡುತ್ತದೆ. ( ಯಾಕೋಬ 4:4). ಯೆರೇಮೀಯಾನಿಗೆ ಈ ಸತ್ಯವು ಸ್ಪಷ್ಟವಾಗಿ ತಿಳಿದಿತ್ತು. ಆದ್ದರಿಂದಲೇ ಅವನು ಏಕಾಂಗಿಯಾಗಿ ನಡೆದನು. ಇದು ನಿಜಕ್ಕೂ ಕಷ್ಟಕರವಾದದ್ದು. ಆದರೆ ದೇವರೊಂದಿಗೆ ಸ್ನೇಹಿತನಾಗಿ ನಡೆಯುವುದು ಮತ್ತು ಲೋಕದೊಂದಿಗೆ ಮಿಶ್ರ ವಾಗುವಂತದ್ದು ಎರಡನ್ನೂ ಏಕಕಾಲದಲ್ಲಿ ಮಾಡುವುದು ಅಸಾಧ್ಯ ಎಂದು ಅವನು ಅರಿತುಕೊಂಡಿದ್ದನು.
ಎರಡನೆಯದಾಗಿ, ನಾವು ನಮ್ಮ ಆಲೋಚನೆಗಳಲ್ಲಿ ಮತ್ತು ನಮ್ಮ ಜೀವನ ಶೈಲಿಯಲ್ಲಿ ಎಂದಿಗೂ ಸಹ ಈ ಲೋಕದ ಲೌಕಿಕ ತತ್ವಗಳನ್ನು ಅನುಮತಿಸಬಾರದು. ಅದರ ಬದಲಾಗಿ ದೇವರ ವಾಕ್ಯದ ಪ್ರಭಾವ ಮಾತ್ರ ನಮ್ಮ ಜೀವನ ಮತ್ತು ಆಲೋಚನೆಗಳ ಮೇಲೆ ಇರಬೇಕು. ನಾವು ಹೀಗೆ ಮಾಡುವಾಗ ಕೆಲವು ಜನರಿಗೆ ನಮ್ಮ ನಡತೆಯಿಂದ ಬೇಸರವಾಗಬಹುದು. ಆದರೆ ಒಂದು ಕಠಿಣವಾದ ಆಯ್ಕೆಯನ್ನು ನಾವು ಮಾಡಲೇಬೇಕಾಗಿದೆ. ಒಂದು ನಾವು ದೇವರನ್ನು ಮೆಚ್ಚಿಸುವವರಾಗಬೇಕು ಅಥವಾ ಮನುಷ್ಯರನ್ನು ಮೆಚ್ಚಿಸಬೇಕು. ಕರ್ತನಿಗೆ ಮತ್ತು ಕರ್ತನ ವಾಕ್ಯಗಳಿಗೆ ವಿಧೇಯರಾಗಿ ನಡೆಯುವಂತಹದ್ದು ಯಾವಾಗಲೂ ಒಂದು ಬೆಲೆಯನ್ನು ನಿರೀಕ್ಷಿಸುತ್ತದೆ.
ಮೂರನೆಯದಾಗಿ, ನಮ್ಮೆಲ್ಲರಿಗೂ ನಮ್ಮ ಜೀವನದ ಕುರಿತು ನಮ್ಮದೇ ಆದ ಒಂದು ಯೋಜನೆ ಇರುತ್ತದೆ. ಅದರಲ್ಲಿ ತಪ್ಪೇನಿಲ್ಲ ಅಥವಾ ಅದು ಕೆಟ್ಟದ್ದೂ ಅಲ್ಲ. ಆದರೆ ಅದೇ ಸಮಯದಲ್ಲಿ ದೇವರೇನಾದರೂ ನಮ್ಮ ಯೋಜನೆಗಳನ್ನು ಬೇಡವೆಂದರೆ ನಾವು ಆ ಯೋಜನೆಗಳನ್ನು ಬಿಟ್ಟು ಬಿಡುವ ಮನಸ್ಸು ಉಳ್ಳವರಾಗಿರಬೇಕು.
"ತನ್ನ ಪ್ರಾಣದ ಮೇಲೆ ಮಮತೆಯಿಡುವವನು ಅದನ್ನು ಕಳಕೊಳ್ಳುವನು,...." ಎಂದು ಯೇಸು ಹೇಳಿದ್ದಾನೆ (ಯೋಹಾನ 12:25)
ಬೆಳಗ್ಗೆ ಬೇಗನೆ ಎದ್ದು ದೇವರನ್ನು ಎದುರು ನೋಡುವ, ಉಪವಾಸ ಪ್ರಾರ್ಥನೆ ಮಾಡುವ, ಮತ್ತೊಬ್ಬರನ್ನು ಕ್ಷಮಿಸ ಬೇಕಾದ, ಇತ್ಯಾದಿಯಾದ ಬೆಲೆಯನ್ನು ತೆತ್ತಲಾರದ ಅನೇಕ ಮಂದಿ ಇದ್ದಾರೆ. ಈ ರೀತಿ ಮಾಡುತ್ತಾ, ನಾವಿನ್ನು ಯಾಕೆ ನಮ್ಮ ಜೀವಿತದಲ್ಲಿ ದಡ ಸೇರಿಲ್ಲ ಎಂದು ಆಶ್ಚರ್ಯ ಪಡುತ್ತಾರೆ. ಇದು ಮತ್ತೆ ಬಿತ್ತುವ ಮತ್ತು ಕೊಯ್ಯುವ ನಿಯಮಕ್ಕೆ ನಮ್ಮನ್ನು ಕೊಂಡೊಯ್ಯುತ್ತದೆ. ನೀವು ಬೀಜವನ್ನು ಬಿತ್ತದೇ, ಕೊಡಬೇಕಾದ ಬೆಲೆಯನ್ನು ಕಟ್ಟದೇ ಇರುವಾಗ ನಿಮ್ಮ ಜೀವಿತವನ್ನು ಆಮೆಗತಿಯಲ್ಲಿ ನಡೆಸುತ್ತಾ ಬೇರೆಯವರ ವೇಗವಾಗಿ ಚಲಿಸುತ್ತಿರುವ ಜೀವನ ನೋಡಿ ಹತಾಶೆಗೊಳಗಾಗುತ್ತೀರಿ ಅಷ್ಟೇ.
ಬೇರೇ ಯಾವ ದೇವರನ್ನು ಆರಾಧಿಸಬಾರದು. ಆರಾಧಿಸಿದರೆ ಅವರಿಗೆ ಮರಣದಂಡನೆ ವಿಧಿಸಲಾಗುತ್ತದೆ ಎಂಬುದು ರಾಜಾಜ್ಞೆ ಎಂದು ತಿಳಿದಿದ್ದರೂ ದಾನೆಯೇಲನು ತನ್ನ ಮನೆಗೆ ಹೋಗಿ ಯಥಾ ಪ್ರಕಾರ ತನ್ನ ದೇವರಾದ ಯಹೋವನನ್ನು ಪ್ರಾರ್ಥಿಸಿದನು ಎಂದು ದೇವರ ವಾಕ್ಯ ಹೇಳುತ್ತದೆ. (ದಾನಿ 6:10)
ಈ ನಿಯಮವನ್ನು ಮೀರಿದರೆ ಖಂಡಿತವಾಗಿಯೂ ಸಿಂಹದ ಗವಿಗೆ ತನ್ನನ್ನು ಹಾಕಲಾಗುತ್ತದೆ ಎಂದು ದಾನಿಯಲನು ತಿಳಿದಿದ್ದರೂ ಕರ್ತನೊಂದಿಗಿನ ಅನ್ಯೋನ್ಯತೆಗಾಗಿ ಆ ಬೆಲೆಯನ್ನು ಕಟ್ಟಲು ಸಿದ್ದನಾದನು. ಅದಕ್ಕಾಗಿ ಒಂದು ನಾಟಕೀಯ ರೀತಿಯಲ್ಲಿ ದಾನಿಯೇಲನ ಪರವಾಗಿ ದೇವರು ಕಾರ್ಯಮಾಡಿದ್ದರಲ್ಲಿ ಆಶ್ಚರ್ಯವೇನಿದೆ ಅಲ್ಲವೇ?
ಸತ್ಯವೇನೆಂದರೆ ರಹಸ್ಯವಾಗಿ ಹೆಚ್ಚಾದ ಬೆಲೆಯನ್ನು ಕಟ್ಟಿದವರು ಬಹಿರಂಗವಾಗಿ ಕರ್ತನಿಂದ ಪ್ರತಿಫಲವನ್ನು ಹೊಂದುವವರಾಗಿರುತ್ತಾರೆ. ಇಡೀ ಜಗತ್ತೇ ಅವರಿಗೆ ತಲೆಬಾಗುತ್ತದೆ. ನೀವು ನಿತ್ಯವಾದ ವ್ಯತ್ಯಾಸ ಮೂಡಿಸುವಂತಹ ಬೆಲೆಯನ್ನು ಕಟ್ಟಲು ಸಿದ್ದರಿದ್ದೀರಾ?
ಪ್ರಾರ್ಥನೆಗಳು
ತಂದೆಯೇ, ಈ ಅಂತ್ಯಕಾಲದ ಸಮಯದಲ್ಲಿ ನಾನು ಕೇವಲ ವೀಕ್ಷಣೆ ಮಾಡುವ ವ್ಯಕ್ತಿಯಾಗಿರದೇ ಮುಖ್ಯ ಪಾತ್ರಧಾರಿಯಾಗಿ ನಡೆಯಲು ಬೇಕಾದ ಬೆಲೆಯನ್ನು ಕಟ್ಟುವ ಕೃಪೆಯನ್ನು ಯೇಸು ನಾಮದಲ್ಲಿ ನನಗೆ ಅನುಗ್ರಹಿಸು.
Join our WhatsApp Channel
Most Read
● ದೇವರವಾಕ್ಯವನ್ನು ಮಾರ್ಪಡಿಸಬೇಡಿರಿ● ಕರ್ತನಾದ ಯೇಸುಕ್ರಿಸ್ತನನ್ನು ಅನುಕರಣೆ ಮಾಡುವುದು ಹೇಗೆ
● ನಿರುತ್ಸಾಹ ಪಡಿಸುವ ಬಾಣಗಳನ್ನು ಜಯಿಸುವುದು-1
● ಹಣಕಾಸಿನ ಅವ್ಯವಸ್ಥೆಯಿಂದ ಪಾರಾಗುವುದು ಹೇಗೆ?
● ದಿನ 25:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ದೇವರು ಹೇಗೆ ಒದಗಿಸುತ್ತಾನೆ #3
● ಸರ್ವಬೀಗದ ಕೈ
ಅನಿಸಿಕೆಗಳು