ಅನುದಿನದ ಮನ್ನಾ
3
1
96
ಭವ್ಯಭವನದ ಹಿಂದಿರುವ ಮನುಷ್ಯ
Tuesday, 11th of February 2025
Categories :
ಎಸ್ತರ್ ರಹಸ್ಯಗಳು: ಸರಣಿ (Secrets of Esther: Series)
"ಯಾವನು ದುಷ್ಟರ ಆಲೋಚನೆಯಂತೆ ನಡೆಯದೆ ಪಾಪಾತ್ಮರ ಮಾರ್ಗದಲ್ಲಿ ನಿಂತುಕೊಳ್ಳದೆ ಧರ್ಮನಿಂದಕರೊಡನೆ ಕೂತುಕೊಳ್ಳದೆ ಯೆಹೋವನ ಧರ್ಮಶಾಸ್ತ್ರದಲ್ಲಿ ಆನಂದ ಪಡುವವನಾಗಿ ಅದನ್ನೇ ಹಗಲಿರುಳು ಧ್ಯಾನಿಸುತ್ತಿರುವನೋ ಅವನು ಎಷ್ಟೋ ಧನ್ಯನು."(ಕೀರ್ತನೆ 1:1-2)
ಈ ಪ್ರಾಚೀನ ಪ್ರಪಂಚದ ಅತ್ಯಂತ ಪ್ರಮುಖವಾದ ಸೌಂದರ್ಯ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ಬಹುಪಾಲು ಕನ್ಯೆಯರು (ಅದರಲ್ಲಿ ಎಸ್ತರಳು ಕೂಡ ಒಬ್ಬ ಅಭ್ಯರ್ಥಿಯಾಗಿದ್ದಳು ) ಅರಸನ ಅರಮನೆ ಕಂಡು ಆಕರ್ಷಿತರಾಗುವುದರಲ್ಲಿ ಆಶ್ಚರ್ಯವೇನೂ ಇರಲಾರದು. ನಾನು ಅವರನ್ನು ಖಂಡಿತವಾಗಿಯೂ ದೂಷಿಸುವುದಿಲ್ಲ. ಶೂಷನ್ ನಗರವು ಅರಸನಾದ ಅಹಶ್ವರೋಶನ ಕುಟುಂಬಕ್ಕೆ ವಂಶ ಪಾರಂಪರ್ಯಾದಿಂದ ಬಂದ ಪರ್ಷಿಯಾದ ಬೇಸಿಗೆಯ ರಾಜಧಾನಿಯಾಗಿತ್ತು. ಅರಮನೆಯ ಉದ್ಯಾನದಲ್ಲಿರುವ ಅಂಗಳದ ವಿವರವಾದ ಒಂದು ಕಿರು ಚಿತ್ರಣವನ್ನು ಸತ್ಯವೇದವು ಹೀಗೆ ನಮಗೆ ನೀಡುತ್ತದೆ.
"ಈ ದಿನಗಳಾದನಂತರ ಅರಸನು ಶೂಷನ್ ಕೋಟೆಯಲ್ಲಿದ್ದ ಎಲ್ಲಾ ಶ್ರೇಷ್ಠರಿಗೂ ಕನಿಷ್ಠರಿಗೂ ಅರಮನೆಯ ತೋಟದ ಬೈಲಿನಲ್ಲಿ ಏಳು ದಿನಗಳವರೆಗೂ ಔತಣಮಾಡಿಸಿದನು. ಅಲ್ಲಿ ಬಿಳೀ ನೂಲಿನ ಬಟ್ಟೆಗಳೂ ನೀಲಿಬಟ್ಟೆಗಳೂ ಧೂಮ್ರವರ್ಣವುಳ್ಳ ನಾರಿನ ದಾರದಿಂದ ಸಂಗಮೀರ ಕಲ್ಲು ಕಂಬಗಳಲ್ಲಿನ ಬೆಳ್ಳಿಯ ಉಂಗುರಗಳಿಗೆ ಕಟ್ಟಲ್ಪಟ್ಟಿದ್ದವು. ಜರತಾರೆಯ ಕಸೂತಿ ಹಾಕಿರುವ ಲೋಡುಗಳು ಕೆಂಪು ಬಿಳಿ ಹಳದಿ ಕಪ್ಪು ಬಣ್ಣಗಳುಳ್ಳ ಸಂಗಮೀರ ಕಲ್ಲುಗಳಿಂದ ರಚಿತವಾದ ನೆಲಗಟ್ಟಿನ ಮೇಲೆ ಇಡಲ್ಪಟ್ಟಿದ್ದವು. ಪಾನಪಾತ್ರೆಗಳು ಬಂಗಾರದವುಗಳೂ ನಾನಾ ಆಕಾರದವುಗಳೂ ಆಗಿದ್ದವು. ರಾಜದ್ರಾಕ್ಷಾರಸವು ಅರಸರ ಔದಾರ್ಯಕ್ಕೆ ತಕ್ಕಂತೆ ಧಾರಾಳವಾಗಿತ್ತು."(ಎಸ್ತೇರ್ 1:5-7).
ಅರಮನೆಯಲ್ಲಿದ್ದ ಅಲಂಕರಣವನ್ನು ನೀವು ಊಹಿಸಬಹುದು. ಇದು ಕೇವಲ ರಾಜನ ಅರಮನೆಯ ಹಿಂಬದಿಯ ಉದ್ಯಾನವನದ ವಿವರಣೆಯಾಗಿದ್ದರೆ, ಅವನ ಸಿಂಹಾಸನದ ಭವನ ಮತ್ತು ಅರಮನೆಯು ಇನ್ನೂ ಹೇಗೆ ಕಾಣಬಹುದಿತ್ತು ಎಂದು ನೀವು ಊಹಿಸಬಲ್ಲಿರಾ? ಆ ಅರಮನೆಯ ಒಂದು ಸಾರಿ ನೋಡಿದವರು ತಾವು ಯಾರೆಂಬುದನ್ನೇ ಒಂದು ಕ್ಷಣ ಮರೆತುಬಿಡುವಂತಿತ್ತು.
ಇಂದು ಅನೇಕ ಕ್ರೈಸ್ತರು ಕೂಡ ಅವರ ಅರಸನ ಬದಲಿಗೆ ದೇವರ ರಾಜ್ಯದ ಸೀಮಿತವಾದ ಸೂಕ್ಷ್ಮತೆ ಮತ್ತು ಐಹಿಕ ಪ್ರಯೋಜನಗಳಿಗೆ ಆಕರ್ಷಿತರಾಗಿ ಹೋಗಿದ್ದಾರೆ. ನಾವೂ ಆ ಭವ್ಯ ಭವನದ ಹಿಂದೆ ಇರುವ ಮನುಷ್ಯನನ್ನು ನಿರ್ಲಕ್ಷಿಸುತ್ತಿದ್ದೇವೆ . ನಾವು ಸ್ಥಳವನ್ನು ನೋಡುತ್ತಾ ಅದರ ಹಿಂದೆ ಯಾರಿದ್ದಾರೋ ಅವರ ಮುಖವನ್ನು ನಿರ್ಲಕ್ಷಿಸುತ್ತಿದ್ದೇವೆ. ದೇವರು ಏನಾದರೂ ಕೊಡುತ್ತಾನೋ ಎಂದು ನಾವು ಬಯಸುತ್ತಿದ್ದೇವೆಯೇ ಹೊರತು ಆತನೊಂದಿಗೆ ನಿಜವಾಗಿ ಇರಬೇಕಿದ್ದ ಸಂಬಂಧವನ್ನು ಬಯಸುತ್ತಿಲ್ಲ. ವಾಗ್ದಾನ ನೀಡಿದ ದೇವರಿಗೆ ವಿಧೇಯರಾಗುವುದಕ್ಕಿಂತ ಹೆಚ್ಚಾಗಿ ಧರ್ಮಗ್ರಂಥದಲ್ಲಿರುವ ವಾಗ್ದಾನಗಳನ್ನು ಹೊಂದಿಕೊಳ್ಳಲು ನಾವು ಇಷ್ಟಪಡುತ್ತಿದ್ದೇವೆ.
ನನಗೆ ಪ್ರಿಯರಾದ ಸ್ನೇಹಿತರೇ , ದೇವರು , ನೀನು ನನ್ನನ್ನು ಕಂಡುಕೊ ನೀನು ಮೆಚ್ಚುವ ಎಲ್ಲವನ್ನೂ ನಾನು ನಿಮಗೆ ಕೊಡುತ್ತೇನೆ ಎಂದು ನಿನಗೆ ಹೇಳುತ್ತಾನೆ. ಜ್ಞಾನೋಕ್ತಿ 23:26 ರಲ್ಲಿ "ಕಂದಾ, ನನ್ನ ಕಡೆಗೆ ಮನಸ್ಸುಕೊಡು, ನಿನ್ನ ಕಣ್ಣುಗಳು ನನ್ನ ಮಾರ್ಗಗಳಲ್ಲಿ ಆನಂದಿಸಲಿ." ಎಂದು ಸತ್ಯವೇದ ಹೇಳುತ್ತದೆ, " ನಿಮ್ಮ ಹೃದಯವು ಕೈಯಲ್ಲಿರುವುದನ್ನು ಎದುರು ನೋಡದೆ ದೇವರ ಮುಖವನ್ನೇ ಎದುರು ನೋಡಲಿ. ನೀವು ಬಯಸುವ ಎಲ್ಲವನ್ನೂ ನಿಮಗೆ ನೀಡಲು ಆತನಿಗೆ ಸಮಸ್ಯೆ ಇಲ್ಲ, ಆದರೆ ನೀವು ನಿಮ್ಮ ಹೃದಯವನ್ನು ಆತನಿಗೆ ನೀಡುತ್ತೀರಾ?
Bible Reading: Leviticus 26-27
ಪ್ರಾರ್ಥನೆಗಳು
ತಂದೆಯೇ, ನೀನು ಇಂದು ನನ್ನ ಹೃದಯವನ್ನು ತುಂಬಬೇಕೆಂದು ಯೇಸುನಾಮದಲ್ಲಿ ಪ್ರಾರ್ಥಿಸುತ್ತೇನೆ. ಇಂದು ನಿನಗಿಂತ ಹೆಚ್ಚಾಗಿ ವಸ್ತುಗಳನ್ನೇ ಹುಡುಕುವಂತ ನನ್ನ ಎಲ್ಲಾ ಆಸೆಗಳನ್ನು ತ್ಯಜಿಸುತ್ತೇನೆ. ನನ್ನ ತುಟಿಗಳು ಮಾತ್ರ ನಿನ್ನನ್ನು ಸ್ತುತಿಸಿ ನನ್ನ ಹೃದಯವು ನಿನಗೆ ದೂರ ಮಾಡಿಕೊಳ್ಳದಂತೆ ಯೇಸುನಾಮದಲ್ಲಿ ನನಗೆ ಸಹಾಯ ಮಾಡಿ. ನಿನ್ನ ಬಲವಾದ ಹಸ್ತವು ನಿನ್ನ ಸಾಮಿಪ್ಯದಲ್ಲಿಯೇ ನನ್ನನ್ನು ಹಿಡಿದಿಟ್ಟುಕೊಳ್ಳಲಿ ಎಂದು ಯೇಸುನಾಮದಲ್ಲಿ ಪ್ರಾರ್ಥಿಸುತ್ತೇನೆ. ಆಮೆನ್.
Join our WhatsApp Channel

Most Read
● ದಿನ 21:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.● ಪುರುಷರು ಏಕೆ ಪತನಗೊಳ್ಳುವರು -6
● ಅನುಕರಣೆ
● ಇಸ್ಕಾರಿಯೋತಾ ಯೂದನ ಜೀವನದಿಂದ ಕಲಿಯಬೇಕಾದ ಪಾಠಗಳು - 1
● ನಿಮ್ಮ ಸಂಪರ್ಕವನ್ನು ಕಳೆದುಕೊಳ್ಳಬೇಡಿರಿ
● ಸ್ವಸ್ಥ ಚಿತ್ತತೆ ಎಂಬುದು ಒಂದು ವರ
● ಆಳವಾದ ನೀರಿನೊಳಗೆ
ಅನಿಸಿಕೆಗಳು