ಒಂದು ಪ್ರವಾದನೆಗೆ ಎರಡು ರೀತಿಯ ಪ್ರತಿಕ್ರಿಯೆಗಳು
ಅರಸನಾದ ಹೆರೋದನನ್ನಾಗಿ ನೀವು ನಿಮ್ಮನ್ನು ಕಲ್ಪಿಸಿಕೊಳ್ಳಿ. ಈಗ ನಿಮಗೆ ಬಲ, ಸಂಪತ್ತು ಮತ್ತು ಅಧಿಕಾರವಿದೆ. ನಂತರ ನೀವು ಹೊಸ “ಯೆಹೂದ್ಯರ ರಾಜ”ನ ಜನನದ ಕುರಿತು ಜನರು ಆಡುವ ಪಿಸುಮಾತುಗಳನ್ನು ಕೇಳುತ್ತೀರಿ ಎಂದುಕೊಳ್ಳಿ.
"ಇದನ್ನು ಕೇಳಿ ಅರಸನಾದ ಹೆರೋದನೂ ಅವನ ಕೂಡ ಯೆರೂಸಲೇವಿುನವರೆಲ್ಲರೂ ಕಳವಳಪಟ್ಟರು." (ಮತ್ತಾಯ 2:3).
ಆದ್ದರಿಂದ ಅವನು ಶಾಸ್ತ್ರಿಗಳನ್ನು - ಮುಖ್ಯ ಯಾಜಕರು ಎಲ್ಲರನ್ನು ಒಟ್ಟುಗೂಡಿಸಿ - ಈ ಹೊಸ ಅರಸನು, ಕ್ರಿಸ್ತನು ಎಲ್ಲಿ ಜನಿಸುತ್ತಾನೆಂದು ಪ್ರವಾದಿಸಲಾಗಿದೆ ಎಂದು ಕೇಳಿದನು.ಆಗ ಅವರು
“ಯೂದಾಯ ದೇಶದ ಬೆಥ್ಲೆಹೆಮ್ ನಲ್ಲಿ,”ಎಂದು ಪ್ರಾಚೀನ ಪ್ರವಾದನೆಗಳನ್ನು ಉಲ್ಲೇಖಿಸುತ್ತಾ ಉತ್ತರಿಸಿದರು (ಮತ್ತಾಯ 2:5).
ಅವರು ಉಲ್ಲೇಖಿಸಿದ ಶಾಸ್ತ್ರವು
ಮೀಕ 5:2:
"ಎಫ್ರಾತದ ಬೇತ್ಲೆಹೇಮೇ,
ನೀನು ಯೆಹೂದದ ಗ್ರಾಮಗಳಲ್ಲಿ ಚಿಕ್ಕದ್ದಾಗಿದ್ದರೂ ಇಸ್ರಾಯೇಲನ್ನು ಆಳತಕ್ಕವನು ನಿನ್ನೊಳಗಿಂದ ನನಗಾಗಿ ಹೊರಡುವನು;
ಆತನ ಹೊರಡೋಣದ ಮೂಲವು ಪುರಾತನವೂ ಅನಾದಿಯೂ ಆದದ್ದು."
ಅಧಿಕಾರ ಮತ್ತು ಪ್ರತಿಷ್ಠೆಯಿಂದ ಮತ್ತನ್ನಾಗಿದ್ದ ಹೆರೋದನಿಗೆ ಈ ಪ್ರವಾದನೆಯಿಂದ ಬೆದರಿಕೆ ಬಂತು - ಇದು ಐಹಿಕ ಅಧಿಕಾರವು ಕ್ಷಣಿಕವಾಗಿದೆ ಎಂಬುದನ್ನು ನೆನಪಿಸುತ್ತದೆ. ಆದರೆ ಜೋಯೀಷರಿಗೆ, ಈ ಪ್ರವಾದನೆಯು ಭರವಸೆಯ ದಾರಿದೀಪವಾಗಿತ್ತು. ಅವರು ಬೆಥ್ಲೆಹೆಮ್‌ನಲ್ಲಿ ಜನಿಸಲಿರುವ ಈ ದೀನ ಅರಸನನ್ನು ಹುಡುಕುತ್ತಾ ನಕ್ಷತ್ರಗಳು ಮತ್ತು ದೇವರವಾಕ್ಯಗಳಿಂದ ಮಾರ್ಗದರ್ಶಿಸಲ್ಪಟ್ಟು ಪೂರ್ವದಿಂದ ಪ್ರಯಾಣಿಸಿ ಬಂದಿದ್ದರು. ಹೆರೋದನಿಗೆ ಉಂಟಾದ ಬೆದರಿಕೆಯನ್ನು ಅವನು ತೊಡೆದುಹಾಕಲು ಪ್ರಯತ್ನಿಸುತ್ತಿರುವಾಗ ಜೋಯೀಷರು ಆರಾಧಿಸಲು ಪ್ರಯತ್ನಿಸಿದರು.
ಒಂದೇ ಪ್ರವಾದನೆಗೆ ಇಷ್ಟೊಂದು ವಿಭಿನ್ನ ಪ್ರತಿಕ್ರಿಯೆಗಳು ಏಕೆ? ಮೂಡಣದ ಜೋಯೀಷರು ನಕ್ಷತ್ರಗಳ ಜ್ಞಾನದಿಂದ ಮಾತ್ರವಲ್ಲದೆ ದೇವರ ವಾಕ್ಯದ ಅಧ್ಯಯನದಿಂದಲೂ ಜ್ಞಾನವನ್ನು ಪಡೆದರು.
ದೇವರ ವಾಕ್ಯದಿಂದ ಬಂದ ಜ್ಞಾನದ ಗುಣಲಕ್ಷಣಗಳು
1. ಅದು ದೈವಿಕ ಪ್ರೇರಿತವಾಗಿರುತ್ತದೆ.
ದೇವರ ವಾಕ್ಯದಿಂದ ಬಂದ ಜ್ಞಾನವು ಮಾನವ ನಿರ್ಮಿತವಲ್ಲ, ಬದಲಾಗಿ ಪವಿತ್ರಾತ್ಮನಿಂದ ಪ್ರೇರಿತವಾಗಿರುತ್ತದೆ. ಅದು ಮಾನವ ತಿಳುವಳಿಕೆ ಮತ್ತು ತಾರ್ಕಿಕತೆಯನ್ನು ಮೀರಿದ್ದಾಗಿರುತ್ತದೆ. (2 ತಿಮೊಥೆಯ 3:16; 2 ಪೇತ್ರ 1:21)
2. ಮಾನಸಾಂತರಪಡಿಸುವಂತದ್ದು.
ಈ ಜ್ಞಾನವು ಹೃದಯಗಳನ್ನು ಬದಲಾಯಿಸುವ, ಮನಸ್ಸುಗಳನ್ನು ನವೀಕರಿಸುವ ಮತ್ತು ವ್ಯಕ್ತಿಗಳನ್ನು ನೀತಿಯ ಜೀವನದ ಕಡೆಗೆ ಮಾರ್ಗದರ್ಶನ ಮಾಡುವ ಶಕ್ತಿಯನ್ನು ಹೊಂದಿದೆ. ಇದು ಒಬ್ಬರ ಜೀವನ ಮತ್ತು ಆದ್ಯತೆಗಳ ಆಮೂಲಾಗ್ರ ಮರುಹೊಂದಿಕೆಗೆ ಕಾರಣವಾಗಬಹುದು. (ರೋಮನ್ನರು 12:2; ಎಫೆಸ 4:23)
3. ನಿತ್ಯವಾದ ದೃಷ್ಟಿಕೋನ.
ಸಾಮಾನ್ಯವಾಗಿ ಅಲ್ಪಾವಧಿಯ ಲಾಭಗಳು ಅಥವಾ ತಕ್ಷಣದ ಫಲಿತಾಂಶಗಳ ಮೇಲೆ ಕೇಂದ್ರೀಕರಿಸುವ ಲೌಕಿಕ ಜ್ಞಾನಕ್ಕಿಂತ ಭಿನ್ನವಾಗಿ, ದೇವರ ವಾಕ್ಯದಿಂದ ಬರುವ ಜ್ಞಾನವು ಶಾಶ್ವತವಾದ ದೃಷ್ಟಿಕೋನವನ್ನು ಹೊಂದಿದೆ. ಇದು ಶಾಶ್ವತವಾದ ಮಹತ್ವವನ್ನು ಹೊಂದಿರುವ ಆಯ್ಕೆಗಳು ಮತ್ತು ಕ್ರಿಯೆಗಳ ಕಡೆಗೆ ನಮ್ಮನ್ನು ಮಾರ್ಗದರ್ಶಿಸುತ್ತದೆ. (ಮತ್ತಾಯ 6:19–21; ಕೊಲೊಸ್ಸೆ 3:2)
ಈ ಗುಣಲಕ್ಷಣಗಳು ದೇವರ ವಾಕ್ಯದಿಂದ ಬರುವ ಜ್ಞಾನವನ್ನು ಅಮೂಲ್ಯ ಮತ್ತು ಯಾವುದೇ ರೀತಿಯ ಜ್ಞಾನಕ್ಕೆ ಹೋಲಿಸಲಾಗದಂತೆ ಮಾಡುತ್ತದೆ.
ವೈಯಕ್ತಿಕ ಚಿಂತನೆ
ಈಗ ನಿಮ್ಮ ಸ್ವಂತ ಜೀವನದ ಕುರಿತು ಯೋಚಿಸಿ. ಬೈಬಲ್‌ನ ಬೋಧನೆಗಳನ್ನು ನೀವು ನೋಡುವಾಗ ನೀವು ಹೆರೋದನಂತೆ ವರ್ತಿಸುವಿರಾ ಅಥವಾ ಮೂಡಣ ಜೋಯೀಶರಂತೆ ವರ್ತಿಸುವಿರಾ?
ಅದರ ಸತ್ಯಗಳಿಂದ ನೀವು ಬೆದರಿಕೆಗೆ ಒಳಗಾಗುತ್ತೀರಾ ಅಥವಾ ಅವುಗಳನ್ನು ಮಾರ್ಗದರ್ಶಿ ನಕ್ಷತ್ರವೆಂದು ನೀವು ನೋಡುತ್ತೀರಾ?
ದೇವರ ಜ್ಞಾನವು ಸಾಮಾನ್ಯವಾಗಿ ಲೌಕಿಕ ಜ್ಞಾನಕ್ಕೆ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತದೆ, ನಮ್ಮ ಯಥಾಸ್ಥಿತಿಯನ್ನು ಅಸಮಾಧಾನಗೊಳಿಸಿ ನಮ್ಮ ಸೌಕರ್ಯ ವಲಯಗಳ ಮೇಲೆ ಸವಾಲು ಎಸೆಯುತ್ತದೆ. ಆದರೂ ಆ ಜ್ಞಾನವು ಶಾಶ್ವತ ಜೀವನಕ್ಕೆ ಮಾರ್ಗವಾಗಿದೆ.
"ಲೋಕದವರು ದೇವರಲ್ಲಿ ಯಾವದನ್ನು ಬುದ್ಧಿಹೀನತೆಯೆಂದು ಎಣಿಸುತ್ತಾರೋ ಅದು ಮನುಷ್ಯರ ಜ್ಞಾನಕ್ಕಿಂತಲೂ ಶ್ರೇಷ್ಠ ಜ್ಞಾನವಾಗಿದೆ. ಅವರು ದೇವರಲ್ಲಿ ಯಾವದನ್ನು ಬಲಹೀನತೆಯೆಂದು ಎಣಿಸುತ್ತಾರೋ ಅದು ಮನುಷ್ಯರ ಬಲಕ್ಕಿಂತಲೂ ಬಲವುಳ್ಳದ್ದಾಗಿದೆ." (1 ಕೊರಿಂಥ 1:25)
ದೇವರವಾಕ್ಯವು ನಮ್ಮನ್ನು ಮೂಡಣದ ಜೋಯೀಷರ ಕುತೂಹಲ,ಶ್ರದ್ಧೆ ಮತ್ತು ರಾಜರ ರಾಜ ಮತ್ತು ಪ್ರಭುಗಳ ಪ್ರಭುವನ್ನು ಭೇಟಿ ಮಾಡಲು ದೈಹಿಕ ಮತ್ತು ಆತ್ಮೀಕ ಎರಡೂ ಪ್ರಯಾಣವನ್ನು ತೆಗೆದುಕೊಳ್ಳಲು ಸಿದ್ಧರಿರುವವರ ಹಾಗೆ ಇರಲು ಕರೆಯುತ್ತದೆ. ಈ ದೀನ ಕುರುಬ ಐಹಿಕ ಮಹಿಮೆಯ ವೈಭವದೊಂದಿಗಲ್ಲದೆ ನಿತ್ಯತ್ವದ ನಿರೀಕ್ಷೆಯ ಭರವಸೆಯೊಂದಿಗೆ ಜನಿಸಿದನು ಈ ನಮ್ಮ ಅರಸನು ಅರಮನೆಯಲ್ಲಿ ಜನಿಸದೇ ಗೋದಲಿಯಲ್ಲಿ ಜನಿಸಿದನು.
ಇಂದು, ನಮ್ಮ ಜೀವನದಲ್ಲಿ ಯೇಸುವನ್ನು ಹುಡುಕಲು ಜ್ಞಾನಕ್ಕಾಗಿ ಪ್ರಾರ್ಥಿಸೋಣ, ಪ್ರೀತಿ, ಕರುಣೆ ಮತ್ತು ನ್ಯಾಯದಿಂದ ನಮ್ಮನ್ನು ಪಾಲಿಸುವ ಅಂತಿಮ ಆಡಳಿತಗಾರನೆಂದು ಆತನನ್ನು ಗುರುತಿಸೋಣ.
ಕೀರ್ತನೆಗಾರ ಬರೆದಂತೆ, "ಕರ್ತನು ನನ್ನ ಕುರುಬನು; ಕೊರತೆಪಡೆವು" (ಕೀರ್ತನೆ 23:1).
Bible Reading: Number
ಪ್ರಾರ್ಥನೆಗಳು
ಪರಲೋಕದ ತಂದೆಯೇ, ನಿನ್ನ ಅಧಿಕಾರದ ಪ್ರವಾದನೆಗಳಿಗೆ ಬೆದರದೆ , ನಿನ್ನ ವಾಕ್ಯದಿಂದ ಪ್ರೇರಿತನಾಗಿ ಮೂಡಣದ ಜೋಯೀಷರು ಮಾಡಿದಂತೆ ನಿನ್ನನ್ನು ಹುಡುಕುವ ಜ್ಞಾನವನ್ನು ನಮಗೆ ಅನುಗ್ರಹಿಸು.ನಮ್ಮನ್ನು ದೀನತೆಯ ಗೋದಲಿ ಕಡೆಗೂ ಮತ್ತು ಅದ್ಭುತ ಶಿಲುಬೆ ಬಳಿಗೂ ಕರೆದೊಯ್ಯಿರಿ, ಆಗ ನಾವು ನಮ್ಮ ರಕ್ಷಣೆಯ ಮತ್ತು ನಮ್ಮ ಆತ್ಮಗಳ ನಿಜವಾದ ಕುರುಬನನ್ನು ಕಂಡುಕೊಳ್ಳುತ್ತೇವೆ. ಯೇಸುನಾಮದಲ್ಲಿ ಆಮೆನ್.
Join our WhatsApp Channel
Most Read
● ಸ್ತ್ರೀ ಪುರುಷರು ಏಕೆ ಪತನಗೊಳ್ಳುವರು- 5● ನಾನು ಧೈರ್ಯಗೆಡುವುದಿಲ್ಲ.
● ಹೊಟ್ಟೆಕಿಚ್ಚು ಎಂಬ ಪೀಡೆ.
● ಪವಿತ್ರಾತ್ಮನ ಇತರ ಪ್ರಕಟನಾತ್ಮಕ ವರಗಳಿಗೆ ಪ್ರವೇಶಹೊಂದಿ.
● ಭವ್ಯಭವನದ ಹಿಂದಿರುವ ಮನುಷ್ಯ
● ಇದು ನಿಮಗಾಗಿ ಬದಲಾಗುತ್ತಿದೆ
● ಪುರುಷರು ಏಕೆ ಪತನಗೊಳ್ಳುವರು -3
ಅನಿಸಿಕೆಗಳು
