ಅನುದಿನದ ಮನ್ನಾ
2
0
28
ಪ್ರತಿದಿನ ತಿಳುವಳಿಕೆ ಯಲ್ಲಿ ಬೆಳೆಯುವುದು ಹೇಗೆ?
Sunday, 28th of September 2025
Categories :
ಬುದ್ಧಿವಂತಿಕೆ (Wisdom)
ಜ್ಞಾನಿಯು ಕೇಳಿ ಕಲಿಕೆಯಲ್ಲಿ ವೃದ್ಧಿಯಾಗುತ್ತಾನೆ ಮತ್ತು ತಿಳುವಳಿಕೆಯುಳ್ಳ ವ್ಯಕ್ತಿಯು ಕೌಶಲ್ಯವನ್ನು ಗಳಿಸುತ್ತಾನೆ ಮತ್ತು ಉತ್ತಮ ಸಲಹೆಯನ್ನು ಪಡೆಯುತ್ತಾನೆ [ಇದರಿಂದ ಅವನು ತನ್ನ ಮಾರ್ಗವನ್ನು ಸರಿಯಾದ ದಿಕ್ಕಿನಲ್ಲಿ ನಡೆಸಲು ಸಾಧ್ಯವಾಗುತ್ತದೆ] (ಜ್ಞಾನೋಕ್ತಿ 1:5 ವರ್ಧಿತ)
ಜ್ಞಾನಿಯು ಕೇಳಿ ಕಲಿಕೆಯಲ್ಲಿ ವೃದ್ಧಿಯಾಗುವನು. ಬೇರೆ ರೀತಿಯಲ್ಲಿ ಹೇಳುವುದಾದರೆ, ಬುದ್ಧಿವಂತ ವ್ಯಕ್ತಿಯು ಕೇಳಿಸಿಕೊಳ್ಳುವ ಮೂಲಕ ಬುದ್ಧಿವಂತನಾಗುತ್ತಾನೆ. ಮುಖ್ಯ ವಿಷಯ ಸರಳವಾಗಿದೆ: ಬುದ್ಧಿವಂತ ಜನರು ಮಾತನಾಡುವುದಕ್ಕಿಂತ ಹೆಚ್ಚು ಕೇಳಿಸಿಕೊಳ್ಳುತ್ತಾರೆ.
ಜ್ಞಾನದಲ್ಲಿ ಬೆಳೆಯುವ ಒಂದು ಮಾರ್ಗವೆಂದರೆ ಜ್ಞಾನಿಗಳಿಂದ ಅವರ ಸಂದೇಶಗಳನ್ನು ಕೇಳುವ ಮೂಲಕ, ಅವರ ಪುಸ್ತಕಗಳನ್ನು ಓದುವ ಮೂಲಕ ಕಲಿಯುವುದಾಗಿರುತ್ತದೆ.
ಜ್ಞಾನಕ್ಕಾಗಿ ಓದಲು ಉತ್ತಮ ಪುಸ್ತಕವೆಂದರೆ ಜ್ಞಾನೋಕ್ತಿಗಳ ಪುಸ್ತಕ. ಜ್ಞಾನೋಕ್ತಿಗಳ ಪುಸ್ತಕವು 31 ಅಧ್ಯಾಯಗಳನ್ನು ಹೊಂದಿದೆ, ಮತ್ತು ನೀವು ದಿನಕ್ಕೆ ಒಂದು ಅಧ್ಯಾಯವನ್ನುಆ ದಿನದ ದಿನಾಂಕಕ್ಕೆ ಅನುಗುಣವಾದ ಅಧ್ಯಾಯದ ಹಾಗೆ ಓದಬಹುದು. ಉದಾಹರಣೆಗೆ, ಇಂದು 4 ನೇ ತಾರೀಖು ಆಗಿದ್ದರೆ, ನೀವು ಜ್ಞಾನೋಕ್ತಿಗಳ 4 ನೇ ಅಧ್ಯಾಯವನ್ನು ಓದಬಹುದು.
ಹೀಗೆ ನೀವು ಪ್ರತಿ ಅಧ್ಯಾಯವನ್ನು ಓದುವಾಗ, ಅದು ನಿಮ್ಮ ಆಂತರಿಕ ಮನುಷ್ಯನೊಂದಿಗೆ ಮಾತನಾಡುವುದನ್ನು ನೀವು ಕೇಳಬೇಕು. ಇದನ್ನು ನಿಯಮಿತವಾಗಿ ಮಾಡುವುದರಿಂದ, ನೀವು ಮಾತ್ರ ವಿವೇಕಿಗಳಾಗುತ್ತೀರಿ.
ದೈವಿಕ ಜ್ಞಾನವನ್ನು ಪಡೆಯುವ ಇನ್ನೊಂದು ಮಾರ್ಗವೆಂದರೆ ನೀವು ಪ್ರಾರ್ಥಿಸುವಾಗ ಕರ್ತನು ಮಾತನಾಡುವುದನ್ನು ಕೇಳುವುದು. ಅನೇಕ ಜನರು ಪ್ರಾರ್ಥನೆಯನ್ನು ಸ್ವಗತವಾಗಿ ಪರಿಗಣಿಸುತ್ತಾರೆ. ಸರಳ ಪದಗಳಲ್ಲಿ ಹೇಳುವುದಾದರೆ, ಅವರು ತಮ್ಮ ಹೃದಯದ ಮಾತುಗಳನ್ನೇ ವ್ಯಕ್ತಪಡಿಸುತ್ತಾ ಕರ್ತನಿಂದ ಅವರಿಗೆ ಏನು ಹೇಳಬೇಕೆಂದು ಇದ್ದಾನೋ ಅದನ್ನು ಕೇಳಿಸಿಕೊಳ್ಳಲು ಕಾಯದೆ ಹೊರಟು ಹೋಗುತ್ತಾರೆ.
ಆದ್ದರಿಂದ ನೀವು ಮುಂದಿನ ಬಾರಿ ಪ್ರಾರ್ಥಿಸುವಾಗ, ನಿಮ್ಮೊಂದಿಗೆ ಮಾತನಾಡುವಂತೆ ಕರ್ತನನ್ನು ಬೇಡಿಕೊಳ್ಳಿ ನಂತರ ಆತನು ಮಾತನಾಡುವವರೆಗೂ ಮೌನವಾಗಿ ಕಾಯಿರಿ. ಆತನು ಖಂಡಿತವಾಗಿಯೂ ಮಾತನಾಡುತ್ತಾನೆ. ಜ್ಞಾನವನ್ನು ಬಾಯಿಯಿಂದಲ್ಲ, ಕಿವಿಗಳಿಂದ ಪಡೆಯಲಾಗುತ್ತದೆ. ನಿಮಗೆ ಎರಡು ಕಿವಿಗಳಿವೆ ಆದರೆ ಒಂದು ಬಾಯಿ ಇದೆ. ಬೇರೆ ರೀತಿಯಲ್ಲಿ ಹೇಳುವುದಾದರೆ," ಪ್ರತಿಯೊಬ್ಬನು ಕಿವಿಗೊಡುವದರಲ್ಲಿ ತೀವ್ರವಾಗಿಯೂ ಮಾತಾಡುವದರಲ್ಲಿ ನಿಧಾನವಾಗಿಯೂ ಇರಲಿ. ಕೋಪಿಸುವದರಲ್ಲಿಯೂ ನಿಧಾನವಾಗಿರಲಿ; (ಯಾಕೋಬ 1:19) ದೈವಿಕ ಆಲಿಸುವ ಕಲೆಯನ್ನು ಪ್ರತಿದಿನ ಅಭ್ಯಾಸ ಮಾಡಿ, ಆಗ ನಿಮ್ಮ ಜೀವನದಲ್ಲಿ ಗಮನಾರ್ಹ ಬದಲಾವಣೆಗಳನ್ನು ನೀವು ನೋಡುತ್ತೀರಿ.
Bible Reading: Joel 2-3; Amos 1-2
ಪ್ರಾರ್ಥನೆಗಳು
ತಂದೆಯೇ, ನನಗೆ ಕೇಳಿಸಿಕೊಳ್ಳುವ ಕಿವಿಗಳನ್ನು ಮತ್ತು ವಿಧೇಯವಾಗುವ ಹೃದಯವನ್ನು ಯೇಸುನಾಮದಲ್ಲಿ ಅನುಗ್ರಹಿಸಿ. ನನ್ನ ಕಿವಿಯನ್ನು ಜ್ಞಾನದ ಕಡೆಗೆ ಗಮನ ಹರಿಸುವಂತೆ ಮತ್ತು ನನ್ನ ಹೃದಯವನ್ನು ತಿಳುವಳಿಕೆಯ ಕಡೆಗೆ ಒಲವು ತೋರಿಸುವಂತೆ ಅನುಗ್ರಹಿಸಿ. ಆಮೆನ್
Join our WhatsApp Channel

Most Read
● ಹನ್ನಾಳ ಜೀವಿತದಿಂದ ಕಲಿಯಬೇಕಾದ ಪಾಠ● ಉಪವಾಸದ ಮೂಲಕ ದೇವದೂತರ ಸಂಚಲನೆಯನ್ನು ಉಂಟು ಮಾಡುವುದು.
● ಸಫಲತೆ ಎಂದರೇನು?
● ದೈತ್ಯರ ಜನಾಂಗ
● ಸ್ಥಿರತೆಯಲ್ಲಿರುವ ಶಕ್ತಿ
● ಕ್ರೈಸ್ತರು ದೇವದೂತರಿಗೆ ಆಜ್ಞೆ ನೀಡಬಹುದೇ?
● ನೀವು ಎಷ್ಟು ವಿಶ್ವಾಸಾರ್ಹರು?
ಅನಿಸಿಕೆಗಳು