english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ಪೂಜೆಯ ಎರಡು ಅಗತ್ಯಗಳು
ಅನುದಿನದ ಮನ್ನಾ

ಪೂಜೆಯ ಎರಡು ಅಗತ್ಯಗಳು

Friday, 15th of August 2025
1 0 121
Categories : ಕೊಡುವ (Giving)
I. ನಾವು ನಮಗೆ ದೇವರು ಕೊಟ್ಟ ಸಮಯದಿಂದ ಆತನನ್ನು ಆರಾಧಿಸುತ್ತೇವೆ.
"ಆರು ದಿನಗಳು ಕೆಲಸನಡೆಯಬೇಕು; ಏಳನೆಯ ದಿನವು ಪರಿಶುದ್ಧವಾದ ದಿನ; ಅದು ಯೆಹೋವನಿಗೆ ಮೀಸಲಾದ ಸಬ್ಬತ್ ದಿನವಾದ್ದರಿಂದ ಅದರಲ್ಲಿ ನೀವು ಸಂಪೂರ್ಣವಾಗಿ ಕೆಲಸವನ್ನು ನಿಲ್ಲಿಸಿಬಿಡಬೇಕು". (ವಿಮೋಚನಕಾಂಡ 35:2) 

ನೀವು ಯಾರನ್ನಾದರೂ "ಜೀವನ ಹೇಗಿದೆ?" ಎಂದು ಕೇಳಿದಾಗ ಅವರು "ನಾನು ಬ್ಯುಸಿ" ಎಂದು ಉತ್ತರಿಸುವ ಸಾಧ್ಯತೆಯಿದೆ. ನೀವು ಜಾಗರೂಕರಾಗಿಲ್ಲದಿದ್ದರೆ, ಈ ಕಾರ್ಯನಿರತತೆಯು ಕರ್ತ ನೊಂದಿಗಿನ ನಮ್ಮ ಸಂಬಂಧಕ್ಕೂ ನುಸುಳಬಹುದು. ನಾವು ಆತ ಕೊಟ್ಟ ನಮ್ಮ ಸಮಯದಿಂದ ದೇವರನ್ನು ಆರಾಧಿಸಬೇಕು. ನಾವು ಅದನ್ನು  ಮಾಡುವುದು ಹೇಗೆ?

1. ಸಮಯವು ದೇವರ ಕೊಡುಗೆಯಾಗಿದೆ ಎಂಬ ಅಂಶವನ್ನು ಒಪ್ಪಿಕೊಳ್ಳಿರಿ. 

2. ಈ ಭೂಮಿಯ ಮೇಲಿನ ನಮ್ಮ ಸಮಯವು ಶಾಶ್ವತತೆಗೆ ಹೋಲಿಸಿದರೆ ಮಿತವಾದದ್ದು ಎಂದು ತಿಳಿಯಿರಿ.

 ಆದ್ದರಿಂದ, ದೇವರು ನಮ್ಮನ್ನು ಏನು ಮಾಡಲು ಕರೆದಿದ್ದಾನೆ ಎಂಬುದನ್ನು ಸಾಧಿಸಲು ನಾವು ಜ್ಞಾನದಿಂದ ಮತ್ತು ಉದ್ದೇಶಪೂರ್ವಕವಾಗಿ ಬದುಕಬೇಕು. 

ಕೀರ್ತನೆಗಾರನು ಇದನ್ನು ಒಪ್ಪಿಕೊಂಡನು.

" ನಾನಾದರೋ ಯೆಹೋವನೇ, ನಿನ್ನಲ್ಲೇ ಭರವಸವಿಟ್ಟಿದ್ದೇನೆ; ನೀನೇ ನನ್ನ ದೇವರೆಂದು ಹೇಳಿಕೊಂಡಿದ್ದೇನೆ. 

ನನ್ನ ಆಯುಷ್ಕಾಲವು ನಿನ್ನ ಕೈಯಲ್ಲಿದೆ;...

 (ಕೀರ್ತನೆ 31:14-15)

ನಮ್ಮ ಸಮಯದಿಂದ ದೇವರನ್ನು ಆರಾಧಿಸಲು, ನಾವು ಆತನಿಗಾಗಿ ಸಮಯವನ್ನು ಮೀಸಲಿಡಲು ಕಲಿಯಬೇಕು. ಸಮಯವನ್ನು ಮೀಸಲಿಡುವುದು ಎಂದರೆ ಲಭ್ಯವಿರುವ ಸಮಯವನ್ನು ಪರಿಣಾಮಕಾರಿಯಾಗಿ ಬಳಸಲು ಕಲಿಯುವುದು. 

ನೀವು ಪ್ರತಿದಿನ ಈ ಕೆಳಗಿನ ಪ್ರಾರ್ಥನೆಯನ್ನು ಪ್ರಾರ್ಥಿಸಬೇಕು: .
ನಮ್ಮ ದಿನಗಳು ಕೊಂಚವೇ ಎಂದು ಎಣಿಸಿಕೊಳ್ಳುವ ಹಾಗೆ ನಮಗೆ ಕಲಿಸು; ಆಗ ಜ್ಞಾನದ ಹೃದಯವನ್ನು ಪಡಕೊಳ್ಳುವೆವು.(ಕೀರ್ತನೆ 90:12) 

II. ಆರಾಧನೆ ಎಂದರೆ ನಮ್ಮಲ್ಲಿನ ಅತ್ಯುತ್ತಮವಾದದ್ದನ್ನು ನೀಡುವುದು ಎಂದರ್ಥ.

 ಸರ್ವಶಕ್ತನಾದ ದೇವರು, ಸಂಪೂರ್ಣವಾಗಿ ಸ್ವಾವಲಂಬಿಯಾಗಿರುವವನು ಆತನು ಆತನ ಜೀವನ ಸಾಗಿಸಲು ಯಾವುದೇ ರೀತಿಯಲ್ಲಿ ನಮ್ಮಿಂದ ಯಾವುದೇ ಉಡುಗೊರೆಯನ್ನು ಬಯಸುವುದಿಲ್ಲ. 

”ತಾನೇ ಎಲ್ಲರಿಗೂ ಜೀವಶ್ವಾಸ ಮುಂತಾದದ್ದೆಲ್ಲವನ್ನೂ ಕೊಡುವವನಾಗಿರಲಾಗಿ ಕೊರತೆಯಿದ್ದವನಂತೆ ಮನುಷ್ಯರ ಕೈಗಳಿಂದ ಸೇವೆಹೊಂದುವವನೂ ಅಲ್ಲ". (ಅ. ಕೃ 17:25 ) 

ಪೂರ್ವ ದೇಶದಿಂದ ಬಂದ ಜ್ಞಾನಿಗಳು (ಜೋಯೀಷರು) ಕರ್ತನಾದ ಯೇಸುವನ್ನು ಆರಾಧಿಸಲು ಬಂದಾಗ, “ಅವರು ಅಡ್ಡಬಿದ್ದು ಆತನನ್ನು ಆರಾಧಿಸಿದರು. ನಂತರ ಅವರು ತಮ್ಮ ನಿಧಿಯ ಪೆಟ್ಟಿಗೆಗಳನ್ನು ತೆರೆದು ಚಿನ್ನ, ಧೂಪ ಮತ್ತು ರಕ್ತಬೋಳವನ್ನು ಕಾಣಿಕೆಯಾಗಿ ಅರ್ಪಿಸಿದರು.” (ಮತ್ತಾಯ 2:11)

ಸ್ಪಷ್ಟವಾಗಿ, ಆರಾಧನೆ ಮತ್ತು ಕಾಣಿಕೆ ಇವು ಪರಸ್ಪರ ಸಂಬಂಧ ಹೊಂದಿವೆ. ಕಾಣಿಕೆಯು ಆರಾಧನೆಯ ಅಭಿವ್ಯಕ್ತಿಯಾಗಿದೆ. ಫಿಲಿಪ್ಪಿಯ ಸಭೆಯ ಸದಸ್ಯರು ಅಪೊಸ್ತಲ ಪೌಲನ ಸೇವೆಯನ್ನು ಬೆಂಬಲಿಸಲು ತಮ್ಮ ಹಣವನ್ನು ನೀಡಿದಾಗ, ದೇವರು ಅದನ್ನು "ದೇವರಿಗೆ ಮೆಚ್ಚಿಕೆಯಾದದ್ದು, ಸುಗಂಧವಾಸನೆಯೇ, ಇಷ್ಟ ಯಜ್ಞವೇ." ಎಂದು ಪರಿಗಣಿಸಿದನು (ಫಿಲಿಪ್ಪಿ 4:18).

Bible Reading: Jeremiah 13-15
ಅರಿಕೆಗಳು
ನನ್ನ ದೇವರಾದ ಕರ್ತನನ್ನು ನಾನು ಘನಪಡಿಸುತ್ತೇನೆ ಮತ್ತು ಆತನ ಪಾದಪೀಠದಲ್ಲಿ  ಅಡಬಿದ್ದು ಆರಾಧಿಸುತ್ತೇನೆ, ಏಕೆಂದರೆ ಆತನು ಪರಿಶುದ್ಧನು. (ಕೀರ್ತನೆ 99:5)

Join our WhatsApp Channel


Most Read
● ದಿನ 19:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಅನಂತವಾದ ಕೃಪೆ
● ಸ್ಥಿರತೆಯಲ್ಲಿರುವ ಶಕ್ತಿ
● ವಾಗ್ದತ್ತ ದೇಶವನ್ನು ಸುತ್ತುವರೆದಿರುವ ಕೋಟೆಗಳೊಂದಿಗೆ ವ್ಯವಹರಿಸುವುದು.
● ಸುಮ್ಮನೆ ಓಡಬೇಡಿ.
● ನಿಮ್ಮ ಕೆಲಸದ ಕುರಿತ ಒಂದು ರಹಸ್ಯ
● ದೋಷರೋಪದ ವರ್ಗಾವಣೆ
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2025 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್