ಅನುದಿನದ ಮನ್ನಾ
ನಿರ್ಣಾಯಕ ಅಂಶವಾಗಿರುವ ವಾತಾವರಣದ ಒಳನೋಟಗಳು -4
Monday, 29th of April 2024
3
1
280
Categories :
ವಾತಾವರಣ (Atmosphere)
ಪವಿತ್ರಾತ್ಮನ ಆಳ್ವಿಕೆಯನ್ನು ಹೊಂದಿರುವಂತಹ,
ಅದ್ಭುತಗಳಿಗೆ ಅನುಕೂಲವಾದ ವಾತಾವರಣವನ್ನು ಸಿದ್ಧಪಡಿಸುವುದು ಹೇಗೆ ಎಂಬುದನ್ನು ಕಲಿಯುತ್ತಿರುವ ಸರಣಿಯನ್ನು ನಾವಿಲ್ಲಿ ಮುಂದುವರಿಸುತ್ತಿದ್ದೇವೆ.
ಹೇಗೆ ಗಾಳಿಯು ಭೂಮಿಯ ಮೇಲಿನ ಭೌತಿಕ ವಾತಾವರಣವಾಗಿದೆಯೋ, ಹಾಗೆಯೇ ದೇವರ ಮಹಿಮೆ ಎಂಬುದು ಪರಲೋಕದ ಆತ್ಮಿಕ ವಾತಾವರಣವಾಗಿದೆ. ಏದೇನು ತೋಟದಲ್ಲಿ ಆದಾಮ -ಹವ್ವರು ದೇವರ ಮಹಿಮೆಯ ವಾತಾವರಣದಲ್ಲಿ ವಾಸಿಸಲು ದೇವರಿಂದ ಸೃಷ್ಟಿಸಲ್ಪಟ್ಟವರಾಗಿದ್ದರು. ಆದಾಗಿಯೂ ಆದಮ ಹವ್ವರು ದೇವರ ಆಜ್ಞೆಗಳಿಗೆ ತಿರುಗಿ ಬೀಳುವ ಮೂಲಕ ಪಾಪ ಮಾಡಿದ್ದರಿಂದ ಅವರು ವಾಸಸುತ್ತಿದ್ದ ವಾತಾವರಣವು ತೀವ್ರವಾಗಿ ಘಾಸಿಗೊಳಗಾಯಿತು.
" ಮತ್ತು ಪುರುಷನಿಗೆ - ತಿನ್ನಬಾರದೆಂದು ನಾನು ನಿನಗೆ ಆಜ್ಞಾಪಿಸಿದ ಮರದ ಫಲವನ್ನು ನೀನು ಹೆಂಡತಿಯ ಮಾತು ಕೇಳಿ ತಿಂದಕಾರಣ ನಿನ್ನ ನಿವಿುತ್ತ ಭೂವಿುಗೆ ಶಾಪ ಬಂತು. ನಿನ್ನ ಜೀವಮಾನವೆಲ್ಲಾ ದುಡಿದು ದುಡಿದು ಭೂವಿುಯ ಹುಟ್ಟುವಳಿಯನ್ನು ತಿನ್ನಬೇಕು. 18ಆ ಭೂವಿುಯಲ್ಲಿ ಮುಳ್ಳುಗಿಡಗಳೂ ಕಳೆಗಳೂ ಬಹಳವಾಗಿ ಹುಟ್ಟುವವು. ಹೊಲದ ಬೆಳೆಯನ್ನು ಅನುಭವಿಸುವಿ."ಎಂದು ದೇವರು ಹೇಳಿದನು (ಆದಿಕಾಂಡ 3:17-18 ).
ಆದಾಮ ಹವ್ವರು ಈಗ ಮಹಿಮೆಯ ವಾತಾವರಣದಿಂದ ಸಂಪರ್ಕ ಕಳೆದುಕೊಂಡರು. (ರೋಮ 3:23). ಇದಾಗಿ ಸಾವಿರಾರು ವರ್ಷಗಳ ನಂತರ ಅಪೋಸ್ತಲನಾದ ಪೌಲನು ಇಡೀ ಸೃಷ್ಟಿಯು ಪಾಪದ ಹೊರೆಯಿಂದ ಬಿಡುಗಡೆಯಾಗಲು ಹಂಬಲಿಸುತ್ತಿದೆ ಎಂದೂ, ವಿಮೋಚನೆಗಾಗಿ ಎದುರು ನೋಡುತ್ತಿದೆ ಎಂದೂ ಬರೆಯುತ್ತಾನೆ(ರೋಮ 8:22)
ದೇವರಿಂದ ಸೃಷ್ಟಿಯಾದವುಗಳೆಲ್ಲವೂ ಆದಾಮ ಹವ್ವರ ಪಾಪದ ಭಾರದ ದೆಸೆಯಿಂದ ನೆರಳುತ್ತಿದೆ.
ಆದರೆ ನಮ್ಮ ರಕ್ಷಕನು ವಿಮೋಚಕನು ಆದ ಕರ್ತನಾದ ಯೇಸುಕ್ರಿಸ್ತನ ಮೂಲಕ ನಾವೀಗ ಮತ್ತೊಮ್ಮೆ ದೇವರ ಮಹಿಮೆಯ ವಾತಾವರಣದಲ್ಲಿ ಬದುಕುವ ಅವಕಾಶ ಹೊಂದಿರುವುದಕ್ಕಾಗಿ ನಾನು ದೇವರಿಗೆ ಸ್ತೋತ್ರ ಸಲ್ಲಿಸುತ್ತೇನೆ.
1.ಯಾರು ಸೋತ್ರವನ್ನು ಸಲ್ಲಿಸುತ್ತಾರೋ ಅವರು ದೇವರನ್ನು ಮಹಿಮೆ ಪಡಿಸುವವರಾಗಿರುತ್ತಾರೆ. (ಕೀರ್ತನೆಗಳು 50-23)
ನಾವು ನಮ್ಮ ಸುತ್ತಲಿರುವ ವಾತಾವರಣವನ್ನು ದೇವರ ಮಹಿಮೆಯಿಂದ ತುಂಬಿಸುವ ಒಂದು ಮಾರ್ಗವೆಂದರೆ, ನಮ್ಮ ಜೀವನ ಶೈಲಿಯನ್ನು ನಿರಂತರವು ದೇವರ ಸ್ತುತಿ ಮತ್ತು ಆರಾಧನೆಯಿಂದ ತುಂಬಿಸುವಂತಹದ್ದಾಗಿದೆ. ನಾವು ಹಾಗೆ ಮಾಡುವಾಗ ಸತ್ಯವೇದದಲ್ಲಿ ಹೇಳಿರುವಂತಹ "ಸತ್ಯವಾದ ಆರಾಧಕರೆಂದು" ಕರೆಯಲ್ಪಡುತ್ತೇವೆ. (ಯೋಹಾನ 4:23) ಕೇವಲ ಇದನ್ನು ಚೆನ್ನಾಗಿ ಹಾಡುವ ಮುಖಾಂತರ ಕಾರ್ಯಗತಗೊಳಿಸಬಹುದು. ಆರಾಧನೆಯ ಯಥಾರ್ಥವಾದ ಪ್ರಕಟಣೆಯನ್ನು ಹೊಂದಿರುವವರು ಮಾತ್ರ ಸತ್ಯವಾದ ಆರಾಧಕರಾಗಬಹುದು. ನಿಮ್ಮ ಮನೆಗಳಲ್ಲಿ ಕರ್ತನನ್ನು ವೈಯಕ್ತಿಕವಾಗಿಯೂ ಕುಟುಂಬವಾಗಿಯೂ ನಿಯಮಿತವಾಗಿ ಆರಾಧಿಸಿರಿ. ನೀವು ಯಾವುದೇ ಕಾರ್ಯ ಮಾಡುತ್ತಿದ್ದರೂ ನಿಮ್ಮ ಬಾಯಿಗಳಲ್ಲಿ ಆತನ ಸ್ತುತಿಯು ನಿರಂತರವಾಗಿ ಹೊರಡುತ್ತಿರಲಿ ಮತ್ತು ನಿಮ್ಮ ಹೃದಯಗಳಲ್ಲಿ ಆತನ ಆರಾಧನೆಯು ನಿಲ್ಲದಿರಲಿ.
ಪ್ರಾಯೋಗಿಕವಾದ ಒಂದು ಸಂಗತಿ ಎಂದರೆ ನೀವು ನಿಮ್ಮ ಮನೆಗಳಲ್ಲಿ ನಿರಂತರವಾಗಿ ಆರಾಧನೆ ಗೀತೆಗಳನ್ನು ಕೇಳುತ್ತಲೇ ಇರಿ. ಅದು ಪ್ರಕಟಣೆಗಳ ಆತ್ಮವನ್ನು ಮತ್ತು ಸಾಕ್ಷಿಯ ಆತ್ಮವನ್ನು ಆಮಂತ್ರಿಸಿ ನಿಮ್ಮ ಮನೆಯ ವಾತಾವರಣವನ್ನು ಬದಲಾಯಿಸುತ್ತದೆ. ನೀವು ಹೀಗೆ ನಿಯಮಿತವಾಗಿ ಮಾಡುವಾಗ ಗಮನಾರ್ಹ ಬದಲಾವಣೆಯನ್ನು ಕಾಣಲು ಆರಂಭಿಸುವಿರಿ.
ಪ್ರಾರ್ಥನೆಗಳು
ತಂದೆಯೇ ನೀನು ಯಾರಾಗಿದ್ದೆಯೋ ಅದಕ್ಕಾಗಿ ನಿನ್ನನ್ನು ಸ್ತುತಿಸುತ್ತೇನೆ. ನೀನು ಒಳ್ಳೆಯವನೂ - ಕೃಪಾ ಸಂಪೂರ್ಣನೂ ಆದ ತಂದೆಯಾಗಿದ್ದೀಯ. ನೀನು ನನ್ನಲ್ಲೂ ನನ್ನ ಕುಟುಂಬದಲ್ಲೂ ತೋರಿಸಿರುವ ಅಪ್ರಮೇಯವಾದ ನಿನ್ನ ನಂಬಿಗಸ್ತಿಕೆಗಾಗಿ ಯೇಸು ನಾಮದಲ್ಲಿ ನಿನ್ನನ್ನು ಸ್ತುತಿಸಿ ಸ್ತೋತ್ರ ಸಲ್ಲಿಸುವೆನು. ಆಮೆನ್.
Join our WhatsApp Channel
Most Read
● ನಾವು ದೇವದೂತರಿಗೆ ಪ್ರಾರ್ಥನೆ ಮಾಡಬಹುದೇ● ಕೊಡುವ ಕೃಪೆ -2
● ಶ್ರೇಷ್ಠತೆಯ ಬೆನ್ನಟ್ಟುವಿಕೆ.
● ಸರಿಯಾದ ಸಂಬಂಧಗಳನ್ನು ಬೆಳೆಸಿಕೊಳ್ಳುವುದು ಹೇಗೆ
● ವ್ಯರ್ಥವಾದದಕ್ಕೆ ಹಣ
● ದಿನ 03:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಆತ್ಮಕ್ಕೆ ದೇವರ ಔಷಧಿ
ಅನಿಸಿಕೆಗಳು