ಅನುದಿನದ ಮನ್ನಾ
ಎಲ್ಲಾಮನುಷ್ಯರಿಗಾಗಿ ಇರುವ ಕೃಪೆ
Friday, 7th of June 2024
3
2
370
Categories :
ಅನುಗ್ರಹ (Grace)
"ಯಾಕಂದರೆ ಎಲ್ಲಾ ಮನುಷ್ಯರಿಗೆ ರಕ್ಷಣೆಯನ್ನುಂಟುಮಾಡುವ ದೇವರ ಕೃಪೆಯು ಪ್ರತ್ಯಕ್ಷವಾಯಿತು;" (ತೀತನಿಗೆ 2:11)
ಕೃಪಾಸನದ ಸಾನಿಧ್ಯವನ್ನು ಪ್ರವೇಶಿಸುವ ಹಾಗೂ ಕ್ರಿಸ್ತನಲ್ಲಿ ಐಕ್ಯವಾಗಿರುವ ಅಮಿತವಾದ ಸಾಧ್ಯತೆಗಳನ್ನು ಹೊಂದಿಕೊಳ್ಳುವ ಹಕ್ಕು ಪ್ರತಿಯೊಬ್ಬ ಮನುಷ್ಯನಿಗೂ ಸಮಾನವಾಗಿ ದೊರಕಬೇಕೆಂಬ ವಿಶೇಷವಾದ ಸೌಲಭ್ಯವು ಪರಲೋಕದಲ್ಲುಂಟು. ಪ್ರತಿಯೊಬ್ಬ ಮನುಷ್ಯನಿಗೂ ಎಂದಿಗೂ ಅಪಮೌಲ್ಯವಾಗದಂತಹ ಸವಕಳಿ ಹೊಂದದಂತಹ ದೈವಿಕವಾದ ನಾಣ್ಯವನ್ನು ಕಳುಹಿಸಿಕೊಡಲ್ಪಟ್ಟಿದೆ. ಅದರಲ್ಲಿ ಹೆಚ್ಚು ಕಡಿಮೆ ಏನೂ ಇಲ್ಲ. ಯಾವ ಪಕ್ಷಪಾತವಾಗಲಿ, ಮುಖದಾಕ್ಷಿಣ್ಯವಾಗಲಿ ಇಲ್ಲ. ಇದನ್ನು ಹೊಂದಿಕೊಳ್ಳಲು ಯಾರೂ ದೊಡ್ಡವರು ಅಲ್ಲ.ಸಣ್ಣವರೂ ಅಲ್ಲ. ಇದನ್ನು ಪಡೆಯಲು ಒಬ್ಬರಿಗೆ ಹೆಚ್ಚು ದಯೆ ಮತ್ತು ಮತ್ತೊಬ್ಬರಿಗೆ ಕಡಿಮೆ ಇತ್ಯಾದಿ ಇಲ್ಲವೇ ಇಲ್ಲ. ದೇವರ ಕೃಪೆಯು ಪ್ರತಿಯೊಬ್ಬರಲ್ಲೂ ಪರಿಪೂರ್ಣವಾಗಿ ಕಾರ್ಯ ಮಾಡುವಂಥದ್ದಾಗಿದೆ.
ನಿಮ್ಮ ಜೀವನದ ಒಂದಲ್ಲ ಒಂದು ಹಂತದಲ್ಲಿ ಈ ಕೃಪೆಯ ಒಂದು ಭಾಗವನ್ನು ಆದರೂ ನೀವು ಪಡೆದುಕೊಂಡೇ ಇರುತ್ತೀರಿ. ಅದನ್ನು ಅನುಭವಿಸಿಯೇ ತೀರಿರುತ್ತೀರಿ ಮತ್ತು ಆ ಕೃಪೆಯಿಂದ ದೊರೆತ ಪ್ರಯೋಜನಗಳನ್ನು ಪಡೆದುಕೊಂಡಿರುತ್ತೀರಿ. ದೇವರ ಕೃಪೆಯಲ್ಲಿರುವ ಒಂದು ಪ್ರಯೋಜನವೆಂದರೆ ಅದು ಎಲ್ಲವನ್ನು ಮರು- ಸ್ಥಾಪನೆ ಮಾಡುತ್ತದೆ. ಅದು ದೇವರ ಮತ್ತು ನಮ್ಮ ನಡುವೆ ಇರಬೇಕಾಗಿದ್ದ ತಂದೆ -ಮಕ್ಕಳ ಸಂಬಂಧವನ್ನು ಮತ್ತೆ ಪುನರ್ ಸ್ಥಾಪಿಸುವಂತಹದ್ದಾಗಿದೆ.
ನೀವು ಕ್ರಿಸ್ತನಲ್ಲಿರುವ ರಕ್ಷಣೆಯನ್ನು ಹೊಂದಿಕೊಳ್ಳುವ ಮೊದಲೇ ದೇವರ ವಾಕ್ಯದ ಮೂಲಕ ದೊರೆತ ಆತನ ಕೃಪಾ ಹಸ್ತದ ವಿಸ್ತರಣೆಯನ್ನು ಅನುಭವಿಸಿದ್ದೀರಿ. ನೀವು ಆ ಮೌಲ್ಯವುಳ್ಳ ಕೃಪೆಯನ್ನು ಅನುಭವಿಸುವ ಸಮಯದಲ್ಲಿ ನಿಮಗೆ ತಿಳಿಯದೇ ಇದ್ದಿರಬಹುದು. ಆದರೂ ನೀವು ಅದನ್ನು ಹೊಂದಿಕೊಂಡೆ ಇದ್ದೀರಿ. ಪ್ರತಿಯೊಬ್ಬ ಮನುಷ್ಯನು ತನ್ನ ರಕ್ಷಣೆಯನ್ನೋ ಅಥವಾ ಖಂಡನೆಯನ್ನೋ ಆಯ್ಕೆ ಮಾಡಿಕೊಳ್ಳುವಂತಹ ದೇವರ ಕೃಪೆಯು ಪ್ರತ್ಯಕ್ಷವಾಯಿತು ಎಂದು ದೇವರ ವಾಕ್ಯವು ಪ್ರಕಟಿಸುತ್ತದೆ. (ತೀತ 2:11).
ದೇವರು ಎಲ್ಲಾ ಮನುಷ್ಯರು ರಕ್ಷಣೆ ಹೊಂದಬೇಕೆಂದು ಎಷ್ಟೇ ಬಯಸಿದರೂ, ಅದರ ಆಯ್ಕೆಯನ್ನು ನಮಗೆ ಬಿಟ್ಟು ಕೊಟ್ಟಿದ್ದಾನೆ. ಅದು ಕೂಡ ಆತನ ಕೃಪೆಯ ರೂಪದಲ್ಲಿಯೇ ಇದೆ. ವಿಶ್ವಾಸಿಗಳಾಗಿ ನಮ್ಮ ಜೀವಿತವು ಕೃಪೆಯ ಮೇಲೆಯೇ ಕಟ್ಟಲ್ಪಡುತ್ತದೆ. ಕೆಲವರು ಇದು ನಂಬಿಕೆಯ ಜೀವನ ಎಂದು ತಮ್ಮ ವಾದವನ್ನು ಮಂಡಿಸಬಹುದು. ಆದರೆ ಅದು ಲೆಕ್ಕಕ್ಕೆ ಬರುವುದಿಲ್ಲ. ನಾವಿಂದು ನಂಬಿಕೆ ಜೀವಿತ ಜೀವಿಸಲು ಪ್ರಯುಕ್ತಶೀಲರಾಗಿರುವಂತದ್ದು ಸಹ ದೇವರ ಕೃಪೆಯಿಂದ ಉಂಟಾದ ಫಲವೇ ಆಗಿದೆ.
ಕೃಪೆಯ ಮೂಲಕವೇ ರಕ್ಷಣಾ ವರವನ್ನು ಹೊಂದಿದವರಿಗೆಲ್ಲಾ ಕೃಪಾಸನವೂ ಲಭ್ಯವಾಗಿದೆ. ತಪ್ಪು ಮಾಡುವುದು ಬೇಡ. ದೇವರ ಕೃಪೆ ಎಂಬುದು ಪಾಪದಲ್ಲೇ ಜೀವಿಸುವುದಕ್ಕೆ ಕೊಡುವ ಪರವಾನಿಗೆಯಲ್ಲ ಬದಲಾಗಿ ನಾವು ದೇವರನ್ನು ಮೆಚ್ಚಿಸಲು ನೀತಿವಂತರಾಗಿ ಜೀವಿಸಲು ಇರುವ ಒಂದು ಅನುಕೂಲತೆಯಾಗಿದೆ.ನಾವು ಮನುಷ್ಯರಾಗಿ ನಮ್ಮ ಶರೀರಾಧೀನ ಸ್ವಭಾವಕ್ಕಿಂತಲೂ ಉನ್ನತವಾದಂತ ನೀತಿವಂತಿಕೆಯ ಜೀವಿತ ಜೀವಿಸಲು ನಾವು ಅಸಮರ್ತರಾಗಿದ್ದೇವೆ ಎಂದು ದೇವರು ತಿಳಿದೇ ಇದ್ದಾನೆ. ಅದಕ್ಕಾಗಿಯೇ ಆತನು ನಾವು ಯಾವುದೇ ಮಿತಿ ಇಲ್ಲದ ನೀತಿವಂತಿಕೆಯ ಜೀವಿತವನ್ನು ನಿರಂತರವಾಗಿ ಜೀವಿಸಲು ಕೃಪೆಯೆಂಬ ಒಂದು ತಂತ್ರೋಪಾಯವನ್ನು ಕಲ್ಪಿಸಿದ್ದಾನೆ. ಇದೊಂದು ನಗದಿನ ಮೇಲೆ ಯಾವುದೇ ಮಿತಿ ಇಲ್ಲದ ಕ್ರೆಡಿಟ್ ಕಾರ್ಡ್ ಅನ್ನು ಕೊಟ್ಟ ಹಾಗೆ.
ದೇವರ ಕೃಪೆಯು ನಮಗೆ ಧೈರ್ಯವಾಗಿ ಕೃಪಾಸನದ ಮುಂದೆ ಬರುವ ಹಾಗೂ ಕೃಪೆಯನ್ನು ಬೇಡಿಕೊಳ್ಳುವಂತ ಪ್ರವೇಶ ಮಾರ್ಗವನ್ನು ದೊರಕಿಸಿ ಕೊಟ್ಟಿದೆ ಎಂದು ಸತ್ಯವೇದ ನಮಗೆ ಹೇಳುತ್ತದೆ. ಇಬ್ರಿಯ 4:16 ನಮಗೆ ಹೇಳುವುದೇನೆಂದರೆ... "ಆದದರಿಂದ ನಾವು ಕರುಣೆಯನ್ನು ಹೊಂದುವಂತೆಯೂ ಆತನ ದಯೆಯಿಂದ ಸಮಯೋಚಿತವಾದ ಸಹಾಯವು ನಮಗೆ ದೊರೆಯುವಂತೆಯೂ ಧೈರ್ಯದಿಂದ ಕೃಪಾಸನದ ಮುಂದೆ ಬರೋಣ." ಎಂದು.
ದೇವರ ಕೃಪೆಯು ಪ್ರತಿಯೊಬ್ಬರಿಗೂ ಹುದುವಾಗಿ ದೊರಕುವಂತೆ ಇದ್ದರೂ, ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳದಿದ್ದರೆ ಅಥವಾ ಅಂಗೀಕರಿಸಿಕೊಳ್ಳದಿದ್ದರೆ ಅದನ್ನು ಹಿಂಪಡೆಯಬಹುದ್ದಾಗಿದೆ. ದೇವರ ಮಗುವೇ, ನಿನ್ನ ಎಲ್ಲಾ ಪರಿಸ್ಥಿತಿಯಲ್ಲಿಯೂ ದೇವರ ಕೃಪೆಯು ದೊರಕುವಂಥದ್ದು ಮತ್ತು ನಿನಗೆ ಸಾಕಾಗುವಂಥದ್ದು ಆಗಿದೆ. ನೀವು ಬಯಸಿದಂತೆ ಅದು ಯಾವಾಗಲೂ ನಿಮಗೆ ಕಾಣಿಸದಿದ್ದರೂ ಅದನ್ನು ನಿಮ್ಮ ಬಳಿ ಬರುವಂತದ್ದಾಗಿದೆ. ಈ ಅಮಿತವಾದ ಅರ್ಥ ವ್ಯವಸ್ಥೆಯಲ್ಲಿ ಪಾಲುಗಾರರಾಗಲು ಇಂದೇ ಕೃಪೆಯನ್ನು ಆಯ್ಕೆ ಮಾಡಿಕೊಳ್ಳಿ ಹಾಗೂ ಲೋಕಕ್ಕೆ ಆಶೀರ್ವಾದನಿಧಿಯಾಗಿರ್ರಿ.
ಪ್ರಾರ್ಥನೆಗಳು
ತಂದೆಯೇ, ನಾನು ಅಂಗೀಕರಿಸಿಕೊಳ್ಳದೆ -ತಿರಸ್ಕರಿಸುವ ಸಮಯದಲ್ಲೂ ನನ್ನ ಜೀವಿತವು ನಿನ್ನ ಕೃಪೆಗೆ ಸಾಕ್ಷಿಯಾಗಿ ನಿಂತಿದೆ. ಈ ಆರ್ಥಿಕ ಕೃಪೆಯ ದೈವಿಕ ಪೂರೈಕೆಗಾಗಿ ನಿನಗೆ ಸ್ತೋತ್ರ. ನಾನು ಎಂದಿಗೂ ಈ ಕೃಪೆಯನ್ನು ದುರುಪಯೋಗಪಡಿಸಿಕೊಳ್ಳದಂತೆಯೂ ನನ್ನ ಜೀವಿತದಲ್ಲಿ ಕೃಪೆಯು ಕಾರ್ಯ ಮಾಡುವಾಗ ಹತಾಶೆಗೊಳಗಾಗದಂತೆಯೂ ಯೇಸು ನಾಮದಲ್ಲಿ ನನಗೆ ಸಹಾಯ ಮಾಡು. ಆಮೆನ್.
Join our WhatsApp Channel
Most Read
● ನಿಮ್ಮ ಗುರಿಯನ್ನು ತಲುಪಲು ಬಲವನ್ನು ಹೊಂದಿಕೊಳ್ಳಿರಿ.● ಎದುರಾಗುವ ವಿರೋಧಗಳನ್ನು ನಂಬಿಕೆಯಿಂದ ಎದುರಿಸುವುದು.
● ಮನುಷ್ಯರಿಂದ ಬರುವ ಹೊಗಳಿಕೆಗಿಂತಲೂ ದೇವರು ಕೊಡುವ ಪ್ರತಿಫಲವನ್ನು ಎದುರು ನೋಡುವುದು.
● ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ಕೊಟ್ಟನು
● ಒಂದು ಗಂಟೆ ಹಾಗೂ ಒಂದು ದಾಳಿಂಬ ಹಣ್ಣು
● ದೇವರು ಹೇಗೆ ಒದಗಿಸುತ್ತಾನೆ #2
● ಯೇಸುವಿನ ಕರ್ತತ್ವವನ್ನು ಅರಿಕೆ ಮಾಡುವುದು
ಅನಿಸಿಕೆಗಳು