"ನಂಬಿಕೆಯೋ ನಾವು ನಿರೀಕ್ಷಿಸುವವುಗಳ ವಿಷಯವಾಗಿ ಭರವಸದಿಂದಿರುವದೂ ಕಣ್ಣಿಗೆ ಕಾಣದವುಗಳನ್ನು ನಿಜವೆಂದು ತಿಳುಕೊಳ್ಳುವದೂ ಆಗಿದೆ."(ಇಬ್ರಿಯರಿಗೆ 11:1)
ಇಂದಿನ ದೇವರ ವಾಕ್ಯದ ಅದ್ದೂರಿ ಭೋಜನಕ್ಕೆ ಸ್ವಾಗತ. ಇಂದಿನಿಂದ ನಾವು ದೇವರ ವಾಕ್ಯದ ಹೃದಯ ವಿಷಯವಾದ ನಂಬಿಕೆ ಕುರಿತು ನಮ್ಮ ಅಧ್ಯಯನದ ಪಯಣವನ್ನು ಆರಂಭಿಸೋಣ. ನಾವು ಸತ್ಯವೇದದಲ್ಲಿರುವ ನಂಬಿಕೆ ವಿಚಾರದ ವ್ಯಾಖ್ಯಾನ, ಇದರ ಸಾಧ್ಯತೆಗಳು ಮತ್ತು ಇದರ ಮಹತ್ವದ ಕುರಿತು ನೋಡುತ್ತಾ ಹೋಗೋಣ."ನಂಬಿಕೆ ಇರುವವನಿಗೆ ಅದರ ವಿವರಣೆಯ ಅಗತ್ಯವಿಲ್ಲ. ನಂಬಿಕೆ ಇಲ್ಲದವನಿಗೆ ಅದನ್ನು ವಿವರಿಸಲು ಸಾಧ್ಯವೇ ಇಲ್ಲ" ಎಂದು
ಥಾಮಸ್ ಎಕ್ವಿನೋಸ್ ಎಂಬುವರು ನಂಬಿಕೆಯ ತಿರುಳನ್ನು ಕಂಡುಕೊಂಡರು.
ನೀವು ಮೊದಲ ಬಾರಿಗೆ ನಂಬಿಕೆ ಎಂಬ ಪದವನ್ನು ಕೇಳಿದಾಗ ನಿಮ್ಮ ಮನದಲ್ಲಿ ಉಕ್ಕಿಬಂದ ವ್ಯಾಖ್ಯಾನವೇನು? ಮನುಷ್ಯನ ಆತಂಕವನ್ನು ನಿರ್ವಹಿಸಲು ಇರುವ ದೇವರ ಪೂರ್ವ ಸಿದ್ಧತಾ ತರಗತಿ?, ಕುರುಡು ಆಶಾವಾದ ಮತ್ತು ಸಿದ್ದವಾದ ನಿರೀಕ್ಷೆಯ ಭಾವನೆ? ಪ್ರಾಯಶಃ ಬಹುತೇಕರು ನಂಬಿಕೆಯನ್ನು ಅತ್ಯವಶ್ಯಕವಾದ ಒಂದು ಸಿದ್ಧಾಂತವಾಗಿ - ಕ್ರೈಸ್ತರಾಗಿ ನೀವು ವಿಶ್ವಾಸಸಲೇಬೇಕಾದ ಬೌದ್ಧಿಕವಾಗಿ ಒಪ್ಪಿಗೆಯಾದಂತಹ ಬೋಧನೆ ಎಂದು ನೋಡುತ್ತಾರೆ. ಇಂದು ನಾವು ನೋಡಲಿರುವ ವಾಕ್ಯ ಭಾಗವು ನಂಬಿಕೆಯು ನಮ್ಮ ಜೀವನವೆಂಬ ಬಿರುಗಾಳಿಯಿಂದ ತುಂಬಿದ ಸಮುದ್ರದಲ್ಲಿ ಭರವಸೆ ಎಂಬ ಹುಟ್ಟು ಹಾಕುತ್ತಾ ಮಾಡಬೇಕಾದ ಯಾನವಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ.
ನಂಬಿಕೆ ಎಂದರೆ ಯಾವುದೋ "ಭಾವನೆಯೋ - ಮನಸ್ಸಿನ ಉದ್ವೇಗವೋ ಅಲ್ಲ.ನಂಬಿಕೆ ಎಂಬುದು ದೇವರ ವಾಕ್ಯದ ಮೇಲೆ ಆಧಾರ ಗೊಂಡಿರುವ ಕ್ರಿಯೆಯಾಗಿದೆ. ನಾವು ಅಪರಿಚಿತವಾಗಿ ಎರಗುವ ಭಯಗಳನ್ನು ನಿರ್ವಹಿಸಲೆಂದೇ ಉಂಟು ಮಾಡಲ್ಪಟ್ಟಿದ್ದೇವೆ. ನಂಬಿಕೆಯು ದೇವರು ಏನನ್ನು ಹೇಳಿದ್ದಾನೋ ಅಥವಾ ಆತನ ವಾಕ್ಯದಲ್ಲಿ ಪ್ರಕಟಗೊಂಡಿರುವಂತಹ ವಿಚಾರಕ್ಕೆ ವ್ಯಕ್ತಪಡಿಸುವ ಮನುಷ್ಯನ ಪ್ರತಿಕ್ರಿಯೆಯಾಗಿದೆಯೇ ವಿನಃ ಇದು ಮುಸುಕಿನ ಗುದ್ದಾಟವಲ್ಲ.
ಯೇಸುಸ್ವಾಮಿಯು ಮೀನುಗಾರನಾದಂತ ಸೀಮೋನನಿಗೆ ದೋಣಿಯನ್ನು ಆಳವಾದ ಸ್ಥಳಕ್ಕೆ ನಡೆಸಿ ಬಲೆಯನ್ನು ಹಾಕಲು ಹೇಳಿದನು. ಅದಕ್ಕೆ ಪ್ರತಿಸ್ಪಂದಿಸಿದಂತಹ ಪೇತ್ರನು ತಾನು ಮತ್ತು ತನ್ನ ಸಂಗಡಿಗರು ರಾತ್ರಿ ಎಲ್ಲಾ ಪ್ರಯಾಸ ಪಟ್ಟರೂ ಒಂದಾದರೂ ಮೀನು ಸಿಗಲಿಲ್ಲ ಎಂದು ಹೇಳಿದನು. ನಂತರ ಪೇತ್ರನು "ಆದರೆ ನಿನ್ನ ಮಾತಿನ ಮೇಲೆ ಬಲೆಯನ್ನು ಹಾಕುತ್ತೇನೆ" ಎಂದನು.(ಲೂಕ 5:5)
ಪೇತ್ರನು ಕರ್ತನಾದ ಯೇಸುವಿನ ಮಾತಿಗೆ ಕಾರ್ಯೋನ್ಮುಖನಾಗುವ ಮೂಲಕ ಪ್ರತಿಸ್ಪಂದಿಸಿದನು ನಂಬಿಕೆ ಎಂದರೆ ನಮ್ಮ ಅಭಿಪ್ರಾಯ, ನಮ್ಮ ಅನುಭವ ಮತ್ತು ವಿದ್ಯಾರ್ಹತೆಗೆ ಮೀರಿ ದೇವರು ಹೇಳುವುದಕ್ಕೆ ಕಾರ್ಯಪ್ರವೃತ್ತರಾಗುವಂತದ್ದಾಗಿದೆ. ನಂಬಿಕೆ ಎಂದರೆ ನಾವು ಸತ್ಯದ ಭಾವನೆಯನ್ನು ಗ್ರಹಿಸುತ್ತೇವೆಯೋ ಇಲ್ಲವೋ ನಾವು ಸತ್ಯವನ್ನು ಇಷ್ಟಪಡುತ್ತೇವೆಯೋ ಇಲ್ಲವೋ ಮತ್ತು ಸತ್ಯವನ್ನು ಒಪ್ಪಿಕೊಳ್ಳುತ್ತೇವೆಯೋ ಇಲ್ಲವೋ ನಾವು ಆ ಸತ್ಯದ ಮೇಲೆ ಕಾರ್ಯ ಪ್ರವೃತ್ತರಾಗುವಂತದ್ದಾಗಿದೆ.
ಹಾಗೆಯೇ, ಪವಿತ್ರಾತ್ಮನು ನಿಮ್ಮ ಹೃದಯದಲ್ಲಿ ಏನನ್ನು ಹೇಳುತ್ತಾನೋ ಅದರಂತೆ ನೀವು ನಡೆದಾಗ ನಂಬಲರ್ಹವಾದ ಪ್ರತಿಫಲವನ್ನು ಕಾಣುವಿರಿ. ಅದೇ ನಂಬಿಕೆ.
ನನ್ನ ಅನೇಕ ಸೇವೆಗಳಲ್ಲಿ ಅಭಿಷೇಕವು ಬಹಳ ಬಲವಾಗಿ ಚಲಿಸುವಾಗ ದೇವರ ವಾಕ್ಯವು ಎದುರಿಗಿರುವ ವ್ಯಕ್ತಿಯ ಜೀವಿತವನ್ನು ವಿವರಿಸುತ್ತಿರುತ್ತದೆ. ಅವರಲ್ಲಿ ಅನೇಕರು ಇದು ಕರ್ತನೇ ಅವರೊಟ್ಟಿಗೆ ಮಾತನಾಡುತ್ತಿದ್ದಾನೆ ಎಂದು ಪ್ರತಿಸ್ಪಂದಿಸುತ್ತಾರೆ. ಅಷ್ಟು ನಿಖರವಾಗಿ ಹೇಳಲು ನನಗೆ ಅವರ ಬಗ್ಗೆ ತಿಳಿಯುವ ಬೇರೆ ಯಾವ ಮಾರ್ಗವೂ ಇಲ್ಲ. ಆ ರೀತಿ ದೇವರ ವಾಕ್ಯಕ್ಕೆ ಪ್ರತಿ ಸ್ಪಂದಿಸಿದವರು ಕರ್ತನಿಂದ ಸ್ವಸ್ಥತೆಯನ್ನು ಹೊಂದಿಕೊಳ್ಳುತ್ತಾರೆ.
ಇನ್ನು ಕೆಲವರಂತೂ ಅವರ ಪರಿಸ್ಥಿತಿ ಕುರಿತು ಅಷ್ಟೇ ನಿಖರವಾಗಿ ವಿವರಿಸುತ್ತಿದ್ದರೂ ಆ ವಾಕ್ಯಗಳಿಗೆ ಎಂದಿಗೂ ಪ್ರತಿಸ್ಪಂದಿಸುವುದಿಲ್ಲ.ಬಹುಶಃ ಆ ಜನರು ತಮಗೆ ಬೇಕೊ ಬೇಡವೋ ದೇವರ ಶಕ್ತಿ ಹರಿದು ಅವರ ಜೀವಿತದಲ್ಲಿ ಏನಾದರೂ ಆಗುತ್ತದೆ ಎಂದು ಯೋಚಿಸುತ್ತಾರೋ ಏನೋ. ಆ ರೀತಿಯಲ್ಲಿ ಪವಿತ್ರಾತ್ಮನು ಕಾರ್ಯ ಮಾಡುವುದಿಲ್ಲ!
ದುರಾತ್ಮಗಳು ಜನರಿಗೆ ಅವರಿಗೆ ಇಷ್ಟ ಇಲ್ಲದಿದ್ದರೂ ಕಾರ್ಯಗಳನ್ನು ಮಾಡಲೇ ಬೇಕೆಂದು ಬಲತ್ಕರಿಸುತ್ತವೆ. ಆದರೆ ಪವಿತ್ರಾತ್ಮನು ಸಂಭಾವಿತನು. ಆತನು ಎಂದಿಗೂ ನಿಮ್ಮನ್ನು ಏನಾದರೂ ಮಾಡುಲೇ ಬೇಕೆಂದು ಬಲವಂತ ಮಾಡುವುದಿಲ್ಲ. ಮಾಡಿರೆಂದು ತಳ್ಳುವುದೂ ಇಲ್ಲ. ಆತನು ಸಾತ್ವಿಕವಾಗಿ ನಿಮ್ಮನ್ನು ಉತ್ತೇಜಿಸುತ್ತಾನೆ ಆದರೆ ನೀವು ಪ್ರತಿಕ್ರಿಯಿಸಬೇಕಷ್ಟೆ. ದೇವರಿಂದ ಬರುವ ಮಾತುಗಳಿಗೆ ಪ್ರತಿಸ್ಪಂಧಿಸಿ ಕಾರ್ಯೋನ್ಮುಖರಾಗುವಂತದ್ದು ನಿಮಗೆ ಬಿಟ್ಟದ್ದು.
ಪ್ರಾರ್ಥನೆಗಳು
ತಂದೆಯೇ, ನಿನ್ನ ವಾಕ್ಯದಲ್ಲಿರುವ ಆಳತ್ವವನ್ನು ಅರಿತುಕೊಂಡು ಆ ವಾಕ್ಯದ ಮೇಲೆ ಸ್ಥಿರವಾಗಿ ನಿಂತು ಅದಕ್ಕೇ ಲಕ್ಷ್ಯ ಕೊಟ್ಟು ನನ್ನ ಜೀವನದ ಪಯಣವನ್ನು ಧೃಡವಾಗಿ ಸಾಗಿಸಲು ಯೇಸುನಾಮದಲ್ಲಿ ನನಗೆ ಸಹಾಯ ಮಾಡು. ಆಮೇನ್.
Join our WhatsApp Channel
Most Read
● ದೇವರು ಹೇಗೆ ಒದಗಿಸುತ್ತಾನೆ #1● ಇನ್ನೂ ಯಾವುದಕ್ಕಾಗಿ ಕಾಯುತ್ತಿದ್ದೀರಿ?
● ಯೇಸುವಿನ ಕರ್ತತ್ವವನ್ನು ಅರಿಕೆ ಮಾಡುವುದು
● ಇಸ್ಕಾರಿಯೋತ ಯೂದನ ಜೀವನದಿಂದ ಕಲಿಯಬೇಕಾದ ಪಾಠಗಳು- 3
● ದಿನ 11:40 ದಿನಗಳ ಉಪವಾಸ ಪ್ರಾರ್ಥನೆ.
● ಅತ್ಯುನ್ನತವಾದ ರಹಸ್ಯ
● ಅಧರ್ಮದ ಆಳ್ವಿಕೆಯ ಬಲವನ್ನು ಮುರಿಯುವುದು-II
ಅನಿಸಿಕೆಗಳು