english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ದೇವರು ಹೇಗೆ ಒದಗಿಸುತ್ತಾನೆ #1
ಅನುದಿನದ ಮನ್ನಾ

ದೇವರು ಹೇಗೆ ಒದಗಿಸುತ್ತಾನೆ #1

Friday, 13th of September 2024
1 0 455
Categories : ಉಪಕಾರಸ್ತುತಿ (Thanksgiving) ನಿಬಂಧನೆ (Provision)
"ನಾನು ಬಾಲಕನಾಗಿದ್ದೆನು, ಈಗ ವೃದ್ಧನಾಗಿದ್ದೇನೆ; ಈವರೆಗೂ ನೀತಿವಂತನು ದಿಕ್ಕಿಲ್ಲದೆ ಬಿದ್ದಿರುವದನ್ನಾಗಲಿ ಅವನ ಸಂತತಿಯವರು ಭಿಕ್ಷೆಬೇಡಿ ತಿನ್ನುವದನ್ನಾಗಲಿ ನೋಡಲಿಲ್ಲ."(ಕೀರ್ತನೆಗಳು 37:25)

ಇದು ತನ್ನ ಜೀವನದ ಅಂತ್ಯಾವಸ್ಥೆಯಲ್ಲಿದ್ದ ದಾವೀದನ ಸಾಕ್ಷಿಯ ನುಡಿಗಳು. ಇದುವೇ ಯೇಸು ನಾಮದಲ್ಲಿ ನಿಮ್ಮ ಸಾಕ್ಷಿಯೂ ಕೂಡ ಆಗಲಿ. ದೇವರು ನಾನು ಮತ್ತು ನೀವು ಯೋಚಿಸುವುದಕ್ಕಾಗದ ರೀತಿಯಲ್ಲಿ ಮಾರ್ಗದಲ್ಲಿ ತನ್ನ ಜನರಿಗೆ ಒದಗಿಸುವವನಾಗಿದ್ದಾನೆ. ಆತನು ನಂಬಿಗಸ್ತನಾದ ದೇವರು (ಧರ್ಮೋಪದೇಶ ಕಾಂಡ 7:9)

430 ವರ್ಷಗಳ ಕಾಲದಷ್ಟು ಐಗುಪ್ತದಲ್ಲಿ ಗುಲಾಮಗಿರಿಯಲ್ಲಿದ್ದ ಇಸ್ರಾಯೆಲ್ಯರನ್ನು ಅಲ್ಲಿಂದ ಬಿಡಿಸಿ ಕರೆದುಕೊಂಡು ಬರುವಾಗ  ಎದುರಿಸಿದ ದೊಡ್ಡ ಸವಾಲೆಂದರೆ- ಆಹಾರ ಪೂರೈಕೆ

ಆ ಅಪಾರ ಸಂಖ್ಯೆಯಲ್ಲಿದ್ದ ಜನರು ಅರಣ್ಯವನ್ನು ಹಾದು ಹೋಗುತ್ತಿದ್ದದ್ದು ಇನ್ನಷ್ಟು ಸವಾಲನ್ನೊಡ್ಡಿತ್ತು. ದೇವ ಮನುಷ್ಯನಾದ ಮೋಷೆ ಕೂಡ ಒಮ್ಮೆ ಕರ್ತನನ್ನು ಹೇಗೆ ಪ್ರಶ್ನೆಸಿದನು : " ನನ್ನ ಸಂಗಡ ಇರುವ ಜನರು ಆರು ಲಕ್ಷ ಕಾಲಾಳುಗಳು; ಆದಾಗ್ಯೂ ನೀನು - ಇವರು ಪೂರಾ ಒಂದು ತಿಂಗಳು ತಿನ್ನುವಷ್ಟು ಮಾಂಸವನ್ನು ಕೊಡುತ್ತೇನೆ ಎಂದು ಹೇಳಿದ್ದೀ. [22] ಅವರಿಗೆ ಬೇಕಾದಷ್ಟು ಸಿಕ್ಕುವಂತೆ ನಾವು ಆಡುಕುರಿಗಳನ್ನೂ ದನಗಳನ್ನೂ ಕೊಯ್ಯಬೇಕನ್ನುತ್ತಿಯೋ? ಇಲ್ಲವೆ ಸಮುದ್ರದಲ್ಲಿರುವ ಎಲ್ಲಾ ಮೀನುಗಳನ್ನೂ ಹಿಡುಕೊಳ್ಳಬೇಕೋ? ಎಂದು.. "(ಅರಣ್ಯಕಾಂಡ 11:21-22)

ಆದರೂ, ಸಮಯದಿಂದ ಸಮಯಕ್ಕೆ ದೇವರು ತನ್ನ ಜನರಿಗೆ ಅದ್ಭುತವಾಗಿ ಒದಗಿಸುತ್ತಾ ಬಂದನು. ಆತನು ಆ ಮರುಭೂಮಿಯ ಮಧ್ಯದಲ್ಲೇ ಸಾವಿರಾರು ಜನರಿಗೆ ಒದಗಿಸಬಲ್ಲವನಾದರೆ ಖಂಡಿತವಾಗಿಯೂ ಆತನು ನಿಮಗಾಗಿಯೂ ನಿಮ್ಮ ಪ್ರೀತಿ ಪಾತ್ರರಿಗೂ ಸಹ ಒದಗಿಸುವಾತನಾಗಿದ್ದಾನೆ.

ಆದರೆ ದೇವರು ಆ ಅರಣ್ಯದಲ್ಲೂ ಒದಗಿಸುತ್ತಿದ್ದರೂ  ಇಸ್ರೇಲ್ ಜನರು ದೂರು ಹೇಳುವರಾದರು- ಗೊಣಗುಟ್ಟುವವರಾದರು. ಅವರು ಐಗುಪ್ತದಲ್ಲಿ ಬಿಟ್ಟು ಬಂದ ಆಹಾರಕ್ಕಾಗಿ ಹಾತೊರೆಯುತ್ತಿದ್ದರು.
 "ಅವರ ಮಧ್ಯದಲ್ಲಿದ್ದ ಇತರ ಜನರು ಮಾಂಸವನ್ನು ಆಶಿಸಿದರು. ಇಸ್ರಾಯೇಲ್ಯರು ಕೂಡ ತಿರಿಗಿ ಅತ್ತುಕೊಂಡು - ಮಾಂಸವು ನಮಗೆ ಹೇಗೆ ಲಭಿಸೀತು; [5] ಐಗುಪ್ತದೇಶದಲ್ಲಿ ನಾವು ಬಿಟ್ಟಿಯಾಗಿ ತಿನ್ನುತ್ತಿದ್ದ ಮೀನು, ಸವತೆಕಾಯಿ, ಕರ್ಬೂಜು, ಉಳ್ಳಿಗಡ್ಡೆ, ನೀರುಳ್ಳಿ, ಬೆಳ್ಳುಳ್ಳಿ ಇವು ನೆನಪಿಗೆ ಬರುತ್ತವಲ್ಲಾ; [6] ಇಲ್ಲಿಯಾದರೋ ನಮ್ಮ ಜೀವ ಬತ್ತಿಹೋಯಿತು; ಈ ಮನ್ನವೇ ಹೊರತು ನಮಗೆ ಇನ್ನೇನೂ ಸಿಕ್ಕಲಿಕ್ಕಿಲ್ಲ ಅಂದುಕೊಳ್ಳುತ್ತಿದ್ದರು."(ಅರಣ್ಯಕಾಂಡ 11:4-6)

ಕರ್ತನು ಅಕ್ಷರಶಃ ಅವರಿಗೆ ಆ ದಿನಕ್ಕೆ ಸಾಕಾಗುವಷ್ಟು ರೊಟ್ಟಿಯನ್ನು ಆ ದಿನದಲ್ಲೇ ಪರಲೋಕದಿಂದ ಒದಗಿಸುತ್ತಿದ್ದನು. ಆದರೂ ಅವರು ಅವರು ಬಯಸಿದ ರೀತಿಯಲ್ಲಿ ಆ ಒದಗಿಸುವಿಕೆಯು ಬರಬೇಕೆಂದು ನಿರೀಕ್ಷಿಸಿದರು. ಬಹುಶಃ  ನೀವು ಒಂದು ಕೆಲಸಕ್ಕಾಗಿ ಪ್ರಾರ್ಥಿಸುತ್ತಿದ್ದೀರಿ ಎಂದಿಟ್ಟುಕೊಳ್ಳಿ ಮತ್ತು ಆ ಕೆಲಸ ಸಿಗದೇ ಹೋದರೆ ಅದಕ್ಕಾಗಿ ದೇವರನ್ನು ದೂರ ಬೇಡಿರಿ -ಗುಣಗುಟ್ಟ ಬೇಡಿರಿ. ಅದಕ್ಕಿಂತ ಅತ್ಯುತ್ತಮವಾದದ್ದು ನಿಮಗೆ ಸಿಗಲಿದೆ!

ಬಹುಶಃ ನಿಮ್ಮ ಕೆಲಸದ ಸ್ಥಳದಲ್ಲಿ ನಿಮ್ಮ ಸಹೋದ್ಯೋಗಿಗಳು ನಿಮ್ಮೊಡನೆ  ಒರಟಾಗಿ ನಡೆದುಕೊಳ್ಳುತ್ತಿರಬಹುದು. ಅದಕ್ಕಾಗಿ ನಿಮ್ಮಲ್ಲಿ ಕಹಿತನ ಬೆಳೆಸಿಕೊಳ್ಳಬೇಡಿರಿ. ಸಾವಿರಾರು ಜನರು ಕೆಲಸ ಕಳೆದುಕೊಳ್ಳುತ್ತಿರುವ ಈ ಸಮಯದಲ್ಲಿ ಕನಿಷ್ಠ ಪಕ್ಷ ಈ ಕೆಲಸವಾದರೂ ನಿಮಗೆ ಇದೆಯಲ್ಲ ಎಂದು ಕೃತಜ್ಞತೆಯಿಂದ ಇರಿ.

ನೀವು ದೇವರ ಒದಗಿಸುವಿಕೆಯನ್ನು ನಿರಂತರವಾಗಿ ನೋಡಬಯಸಿದರೆ ಆತನಿಗೆ ಸೂಕ್ತ ಎನಿಸುವ ರೀತಿಯಲ್ಲಿ ಆತನು ಅದನ್ನು ಒದಗಿಸುವಂತೆ ಆತನಲ್ಲಿ ಬೇಡಿಕೊಳ್ಳಬೇಕು. ದೇವರ ಅಲೌಕಿಕವಾದ ನಿರೀಕ್ಷಿತವಾದ ಮಾರ್ಗಗಳ ಕುರಿತು ದೂರು ಹೇಳದೆ ಗುಣಗುಟ್ಟದೆ ಕರ್ತನ ಒದಗಿಸುವಿಕೆಗಾಗಿ ಸ್ತೋತ್ರ ಸಲ್ಲಿಸಬೇಕು.

 "ಎಲ್ಲಾದರಲ್ಲಿಯೂ ಕೃತಜ್ಞತಾಸ್ತುತಿಮಾಡಿರಿ; ಇದೇ ನಿಮ್ಮ ವಿಷಯವಾಗಿ ಕ್ರಿಸ್ತ ಯೇಸುವಿನಲ್ಲಿ ತೋರಿ ಬಂದ ದೇವರ ಚಿತ್ತ."(1 ಥೆಸಲೋನಿಕದವರಿಗೆ 5:18)

 ಕೃತಜ್ಞತಾ ಸ್ತೋತ್ರ ಸಲ್ಲಿಸುವಂಥದ್ದು ನೀವು ಉನ್ನತ ಮಟ್ಟಕ್ಕೆ ಬೆಳೆಯುವಂತೆ ನಿಮ್ಮನ್ನು ಬಲಪಡಿಸುತ್ತದೆ. ನೀವು ಕೃತಜ್ಞತೆಯಿಂದ ಧನ್ಯತೆಯ ಭಾವದಿಂದ ಇರುವ ಕ್ರೈಸ್ತರಾದಾಗ ನೂತನ ಅಭಿಷೇಕ ತೈಲವನ್ನು ನೂತನ ಪರಿಣಾಮಗಳನ್ನುಂಟು ಮಾಡಲು ನಿಮ್ಮ ಮೇಲೆ ಸುರಿಸಲ್ಪಡಲಾಗುತ್ತದೆ ಮತ್ತು ಅದು  ನಿಮ್ಮನ್ನು ಇನ್ನಷ್ಟು ವೃದ್ಧಿಸುತ್ತದೆ
ಪ್ರಾರ್ಥನೆಗಳು
ತಂದೆಯಾದ ದೇವರೇ, ನೀನೇ ನನಗೆ ಒದಗಿಸುವಾತನು. ದಯಮಾಡಿ ನಿನಗೆ ಸೂಕ್ತವೆನಿಸುವ ರೀತಿಯಲ್ಲಿ ನನ್ನೆಲ್ಲಾ ಕೊರತೆಗಳನ್ನು ನೀಗಿಸು. ನಂಬಿಕೆಯಿಂದ ಮುಂಗಡವಾಗಿ ನಿನಗೆ ಇದಕ್ಕಾಗಿ ಸ್ತೋತ್ರವನ್ನು ಸಲ್ಲಿಸುವೆನು. ಆಮೇನ್.


Join our WhatsApp Channel


Most Read
● ನಿಮ್ಮ ಆತ್ಮಿಕ ಬಲವನ್ನು ನವೀಕರಿಸಿ - 1
● ಅತ್ಯುತ್ತಮ ದೇವರು ನೀಡಿದ ಸಂಪನ್ಮೂಲ
● ನಮ್ಮನ್ನಲ್ಲ.
● ಸಾಲದಿಂದ ಹೊರಬನ್ನಿ : ಕೀಲಿಕೈ # 1
● ಪರಲೋಕ ಎಂದು ಕರೆಯಲ್ಪಡುವ ಸ್ಥಳ
● ಕೊರತೆಯಿಲ್ಲ
● ದೇವರನ್ನು ಸ್ತುತಿಸಲು ಇರುವ ಸತ್ಯವೇದಕ್ಕನುಸಾರವಾದ ಕಾರಣಗಳು 
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2025 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್