ಅನುದಿನದ ಮನ್ನಾ
1
2
149
ಹೆಚ್ಚು ಪರಿಣಾಮಕಾರಿಯಾಗಿರುವ ಜನರ 9 ಅಭ್ಯಾಸಗಳು ಅಭ್ಯಾಸ ಸಂಖ್ಯೆ 4
Tuesday, 13th of January 2026
"ನಾವು ಕಾಣುವಂಥದನ್ನು ಲಕ್ಷಿಸದೆ ಕಾಣದಿರುವಂಥದನ್ನು ಲಕ್ಷಿಸುವವರಾಗಿದ್ದೇವೆ. ಕಾಣುವಂಥದು ಸ್ವಲ್ಪಕಾಲ ಮಾತ್ರ ಇರುವದು; ಕಾಣದಿರುವಂಥದು ಸದಾಕಾಲವೂ ಇರುವದು".(2 ಕೊರಿಂಥ 4:18)
ಹೆಚ್ಚು ಪರಿಣಾಮಕಾರಿ ಜನರು ತುರ್ತು ಪರಿಸ್ಥಿತಿ ಅಥವಾ ಒತ್ತಡದ ಮೂಲಕ ನಿಯಂತ್ರಿಸಲ್ಪಡುವುದಿಲ್ಲ. ಅವರು ಶಾಶ್ವತ ಚಿಂತನೆಯಿಂದ ಮಾರ್ಗದರ್ಶಿಸಲ್ಪಡುತ್ತಾರೆ. ಅವರು "ಈಗ ಏನು ಮಾಡಬೇಕು?" ಎಂದು ಕೇಳುವುದಿಲ್ಲ - ಅವರು "ದೀರ್ಘಾವಧಿಗೆ ನಿಜವಾಗಿಯೂ ಯಾವುದು ಮುಖ್ಯವಾಗಿದೆ?" ಎಂಬುದನ್ನು ಕೇಳಿಕೊಳ್ಳುತ್ತಾರೆ.
ಬಹುತೇಕರ ಜೀವಿತಗಳು ತುಂಬಾ ಕಾರ್ಯನಿರತವಾಗಿರುತ್ತವೆ ಆದರೆ ಬಹಳ ಕಡಿಮೆ ಫಲಪ್ರದವಾಗಿರುತ್ತದೆ ಎಂದು ಸತ್ಯವೇದ ನಮಗೆ ತೋರಿಸುತ್ತದೆ. ಜನರು ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾ ನಿರಂತರವಾಗಿ ಸಕ್ರಿಯರಾಗಿರುತ್ತಾ ಒಂದು ಜವಾಬ್ದಾರಿಯಿಂದ ಇನ್ನೊಂದಕ್ಕೆ ಧಾವಿಸುತ್ತಾರೆ - ಆದರೆ ಅದರಲ್ಲಿ ಶಾಶ್ವತ ಫಲಿತಾಂಶಗಳಿರುವುದಿಲ್ಲ. ಸರಿಯಾದ ದೃಷ್ಟಿಕೋನದಿಂದ ಆಯ್ಕೆಗಳನ್ನು ಮಾಡುವ ಬದಲು ಒತ್ತಡದಲ್ಲಿ ನಿರ್ಧಾರ ಮಾಡಿದಾಗ ನಿಷ್ಪಲತೆಯು ಸಂಭವಿಸುತ್ತದೆ.
ನಿತ್ಯತ್ವದ ದೃಷ್ಟಿಕೋನ ಎಲ್ಲವನ್ನೂ ಬದಲಾಯಿಸುತ್ತದೆ. ಇದು ಒಬ್ಬ ವ್ಯಕ್ತಿಯನ್ನು ನಿಧಾನಗೊಳಿಸಿ, ಸ್ಪಷ್ಟವಾಗಿ ಯೋಚಿಸುವಂತೆ ಮಾಡಿ ಮತ್ತು ವಿವೇಚನೆಯಿಂದ ಆಯ್ಕೆ ಮಾಡಲು ಸಹಾಯ ಮಾಡುತ್ತದೆ. ಇದು ಕೇವಲ ಚಟುವಟಿಕೆಯಾದದನ್ನು ನಿಜವಾದ ಉದ್ದೇಶದಿಂದ ಬೇರ್ಪಡಿಸುತ್ತದೆ. ಯಾರಾದರೂ ನಿತ್ಯತ್ವವನ್ನು ಮನಸ್ಸಿನಲ್ಲಿಟ್ಟುಕೊಂಡು ಜೀವಿಸುವಾಗ, ಅವರ ಕಾರ್ಯಗಳು ಅರ್ಥಪೂರ್ಣವಾಗಿದ್ದು, ಅವರು ಮಾಡುವ ತ್ಯಾಗಗಳು ಅರ್ಥಪೂರ್ಣವಾಗಿರುತ್ತವೆ ಮತ್ತು ಅವರ ಜೀವನವು ಪ್ರಸ್ತುತ ಕ್ಷಣವನ್ನು ಮೀರಿ ಶಾಶ್ವತವಾದ ಪರಿಣಾಮವನ್ನು ಬೀರುತ್ತದೆ.
ದೇವರು ನಾವೆಷ್ಟು ಬೇಗ ಯಶಸ್ಸನ್ನು ಪಡೆದೆವು ಎಂಬುದರ ಮೇಲೆ ನಮ್ಮ ಯಶಸ್ಸನ್ನು ಅಳೆಯುವುದಿಲ್ಲ, ಆದರೆ ನಮ್ಮ ಜೀವನವು ತನ್ನ ಶಾಶ್ವತ ಯೋಜನೆಗಳು ಮತ್ತು ಉದ್ದೇಶಗಳೊಂದಿಗೆ ಹೊಂದಿಕೆಯಾಗುತ್ತದೆಯೇ ಎಂಬುದನ್ನು ಆತನು ನೋಡುತ್ತಾನೆ.
1. ದೃಷ್ಟಿಕೋನವು ಆದ್ಯತೆಗಳನ್ನು ನಿರ್ಧರಿಸುತ್ತದೆ.
ಕರ್ತನಾದ ಯೇಸು ಜನಸಂದಣಿ, ಬಿಕ್ಕಟ್ಟುಗಳು ಅಥವಾ ನಿರೀಕ್ಷೆಗಳಿಂದ ಆತುರಪಡಲು ನಿರಂತರವಾಗಿ ನಿರಾಕರಿಸಿದನು. ತುರ್ತು ಅಗತ್ಯಗಳಿಂದ ಸುತ್ತುವರೆದಿದ್ದರೂ, ಆತನು ದೈವಿಕ ಸಮಯದೊಡನೆ ಕಾರ್ಯನಿರ್ವಹಿಸಿದನು. ಲಾಜರನು ಅಸ್ವಸ್ಥನಾಗಿದ್ದಾನೆ ಎಂಬ ಸುದ್ದಿ ಯೇಸುವಿಗೆ ಬಂದಾಗಲೂ ಆತನು ವಿಳಂಬ ಮಾಡಿದನು - ಉದಾಸೀನತೆಯಿಂದಲ್ಲ, ಆದರೆ ದೈವಿಕ ಉದ್ದೇಶದಿಂದಲೇ.
ಲಾಜರನು ಅಸ್ವಸ್ಥನಾಗಿದ್ದಾನೆಂದು ಕೇಳಿದಾಗಲೂ, ಆತನು ತಾನು ಇದ್ದ ಸ್ಥಳದಲ್ಲಿ ಇನ್ನೂ ಎರಡು ದಿನ ಇದ್ದನು. (ಯೋಹಾನ 11:6).
ಆದ್ದರಿಂದ, ಇದು ಪ್ರಬಲವಾದ ಸತ್ಯವನ್ನು ನಮಗೆ ಬಹಿರಂಗಪಡಿಸುತ್ತದೆ: ಮನುಷ್ಯನಿಗೆ ತಡವಾಗಿ ಕಾಣುವ ವಿಷಯವು ದೇವರಿಗೆ ಸಮಯಕ್ಕೆ ಸರಿಯಾಗಿ ಕಂಡಿರಬಹುದು.
ಹೆಚ್ಚು ಪರಿಣಾಮಕಾರಿಯಾಗಿರುವ ಜನರು ಹೆಚ್ಚಿನವರಿಗಿಂತ ಭಿನ್ನವಾದ ಪ್ರಶ್ನೆಯನ್ನು ಕೇಳುತ್ತಾರೆ. "ಇದು ತುರ್ತಾದದ್ದೇ?" ಅಥವಾ, "ಇದು ಶಾಶ್ವತವೇ?"ಎಂದು. ಪ್ರತಿಯೊಂದು ತೆರೆದ ಬಾಗಿಲುಗಳು ದೇವರ ಬಾಗಿಲಾಗಿರುವುದಿಲ್ಲ, ಮತ್ತು ಪ್ರತಿಯೊಂದು ಬೇಡಿಕೆಯೂ ಗಮನ ಕೊಡಲು ಅರ್ಹವಲ್ಲ ಎಂಬುದನ್ನು ಅವರು ಅರ್ಥಮಾಡಿಕೊಂಡಿರುತ್ತಾರೆ.
"ಮೋಶೆಯು ದೊಡ್ಡವನಾದ ಮೇಲೆ ಫರೋಹನ ಕುಮಾರ್ತೆಯ ಮಗನೆನಿಸಿಕೊಳ್ಳುವದು ಬೇಡವೆಂದದ್ದು ನಂಬಿಕೆಯಿಂದಲೇ. ಸ್ವಲ್ಪಕಾಲ ಪಾಪಭೋಗಗಳನ್ನನುಭವಿಸುವದಕ್ಕಿಂತ ದೇವರ ಜನರೊಂದಿಗೆ ಕಷ್ಟವನ್ನನುಭವಿಸುವದೇ ಒಳ್ಳೇದೆಂದು ತೀರ್ಮಾನಿಸಿಕೊಂಡನು. ಐಗುಪ್ತದೇಶದ ಸರ್ವೈಶ್ವರ್ಯಕ್ಕಿಂತಲೂ ಕ್ರಿಸ್ತನ ನಿವಿುತ್ತವಾಗಿ ಉಂಟಾಗುವ ನಿಂದೆಯೇ ಶ್ರೇಷ್ಠ ಭಾಗ್ಯವೆಂದೆಣಿಸಿಕೊಂಡನು; ಯಾಕಂದರೆ ಬರುವ ಪ್ರತಿಫಲದ ಮೇಲೆ ಕಣ್ಣಿಟ್ಟಿದ್ದನು". (ಇಬ್ರಿಯ 11:24–26).
ಮೋಶೆಯು ತನ್ನ ಜೀವನವನ್ನು ಕ್ಷಣಿಕ ಪ್ರಯೋಜನದ ಮೇಲೆ ಅಲ್ಲ, ಶಾಶ್ವತತೆಯ ಆಧಾರದ ಮೇಲೆ ಮೌಲ್ಯಮಾಪನ ಮಾಡಿದನು. ಅವನು ತುಂಬಾ ಪರಿಣಾಮಕಾರಿಯಾದ ವ್ಯಕ್ತಿಯಾದದ್ದಕ್ಕೆ ಇದು ಒಂದು ಪ್ರಮುಖ ಕಾರಣ.
2. ಶಾಶ್ವತ ದೃಷ್ಟಿಕೋನ ದಣಿದುಹೋಗದಂತೆ ರಕ್ಷಿಸುತ್ತದೆ.
ದಣಿದುಹೋಗುವುದು ಸಾಮಾನ್ಯವಾಗಿ ಗೋಚರ ಫಲಿತಾಂಶಗಳಿಗಾಗಿ ಮಾತ್ರ ಬದುಕುವ ಫಲವಾಗಿದೆ.
"ಒಳ್ಳೆಯದನ್ನು ಮಾಡಲು ಬೇಸರಗೊಳ್ಳಬೇಡಿ" ಎಂದುದೇವರವಾಕ್ಯವು ನಮಗೆ ಎಚ್ಚರಿಕೆ ನೀಡುತ್ತದೆ.(ಗಲಾತ್ಯ 6:9)ನಿತ್ಯತ್ವದ ದೃಷ್ಟಿಕೋನದಲ್ಲಿದ್ದಾಗ ಇದು ಅರ್ಥಪೂರ್ಣವಾದ ಆಜ್ಞೆ ಯಾಗಿದೆ.
ಅಪೊಸ್ತಲ ಪೌಲನು ಹಿಂಸೆ, ಕಷ್ಟ ಮತ್ತು ನಷ್ಟವನ್ನು ಸಹಿಸಿಕೊಂಡನು ಏಕೆಂದರೆ ಅವನು ಪಡುತ್ತಿರುವ ಶ್ರಮ ವ್ಯರ್ಥವಲ್ಲ ಎಂಬುದು ಅವನಿಗೆ ತಿಳಿದಿತ್ತು (1 ಕೊರಿಂಥ 15:58).
ನಿತ್ಯತ್ವದ ದೃಷ್ಟಿಕೋನವು ದುಃಖವನ್ನು ಹೂಡಿಕೆಯಾಗಿಯೂ ಮತ್ತು ತ್ಯಾಗವನ್ನು ಬೀಜವನ್ನಾಗಿಯೂ ಪರಿವರ್ತಿಸುತ್ತದೆ. ಹೆಚ್ಚು ಪರಿಣಾಮಕಾರಿ ಜನರು ಭವಿಷ್ಯದ ಪ್ರತಿಫಲವನ್ನು ನೋಡುವುದರಿಂದ ಚಪ್ಪಾಳೆ ಇಲ್ಲದೆಯೇ ಕಠಿಣ ಸಮಯಗಳನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತದೆ. ಮನುಷ್ಯರು ಕಡೆಗಣಿಸುವುದನ್ನು ದೇವರು ನೋಡುತ್ತಾನೆ ಎಂಬುದು ಅವರಿಗೆ ತಿಳಿದಿರುತ್ತದೆ.
3. ತಡವಾಗಿ ದೊರೆಯುವ ತೃಪ್ತಿ ಒಂದು ಆತ್ಮೀಕ ಶಕ್ತಿ ಯಾಗಿದೆ
ಹೆಚ್ಚು ಪರಿಣಾಮಕಾರಿ ಜನರು ವಿಳಂಬವಾದರೂ ಕಾಯುವ ಶಿಸ್ತನ್ನು ಕರಗತ ಮಾಡಿಕೊಳ್ಳುತ್ತಾರೆ. ದೇವರ ವಿಷಯಗಳಿಗೆ ಹೌದು ಎಂದು ಹೇಳುವುದಕೋಸ್ಕರ ಅವರು ಒಳ್ಳೆಯ ವಿಷಯಗಳಿಗೆ ಇಲ್ಲ ಎಂದು ಹೇಳಲು ಸಿದ್ದವಿರುತ್ತಾರೆ. ನಿರ್ದೇಶನವಿಲ್ಲದ ವೇಗವು ನಷ್ಟಕ್ಕೆ ಕಾರಣವಾಗುತ್ತದೆ ಎಂಬುದನ್ನು ತಿಳಿದುಕೊಂಡು ಅವರು ಅಡ್ಡದಾರಿಗಳನ್ನು ವಿರೋಧಿಸುತ್ತಾರೆ.
ಬೈಬಲ್ ಅಲ್ಪಾವಧಿಯ ಯಶಸ್ಸನ್ನು ನಿತ್ಯವಾದವುಗಳೊಂದಿಗೆ ಪದೇ ಪದೇ ವ್ಯತಿರಿಕ್ತಗೊಳಿಸುತ್ತದೆ. ಏಸಾವನು ತನ್ನ ತಕ್ಷಣದ ಹಸಿವನ್ನು ಪೂರೈಸಿಕೊಳ್ಳಲು ತನ್ನ ಜನ್ಮಸಿದ್ಧ ಹಕ್ಕನ್ನು ಕಳೆದುಕೊಂಡನು ಅದರಿಂದಾಗಿ, ಅವನು ಅಕ್ಷರಶಃ ಒಂದೊತ್ತಿನ ಊಟಕ್ಕಾಗಿ ತನ್ನ ಜನ್ಮಸಿದ್ಧ ಹಕ್ಕನ್ನು ಮಾರಿಕೊಂಡನು (ಆದಿಕಾಂಡ 25:29–34) -ಇದು ಕ್ಷಣಿಕವಾದ ತೃಪ್ತಿಗಾಗಿ ತನ್ನ ಕರೆಯನ್ನು
ವ್ಯಾಪಾರ ಮಾಡುವುದಕ್ಕೆ ದುರಂತ ಉದಾಹರಣೆಯಾಗಿದೆ.
"ಮನುಷ್ಯನು ಇಡೀ ಲೋಕವನ್ನು ಗಳಿಸಿಕೊಂಡು ತನ್ನ ಆತ್ಮವನ್ನು ನಷ್ಟ ಪಡಿಸಿಕೊಂಡರೆ ಅವನಿಗಾಗುವ ಪ್ರಯೋಜನವೇನು?" ಎಂದು ಕರ್ತನಾದ ಯೇಸುಬಲವಾಗಿ ಎಚ್ಚರಿಸಿದನು, (ಮಾರ್ಕ 8:36).
4. ನಿತ್ಯತ್ವದ ದೃಷ್ಟಿಕೋನವು ಸ್ಥಿರವಾದ ಸಮಗ್ರತೆಯನ್ನು ಉಂಟುಮಾಡುತ್ತದೆ.
ಶಾಶ್ವತತೆಯು ನಿಮ್ಮ ಜೀವನವನ್ನು ಆಳ್ವಿಕೆ ಮಾಡುವಾಗ ಸಮಗ್ರತೆಯು ಮಾತುಕತೆಗೆ ಒಳಪಡುವುದಿಲ್ಲ. ಯೋಸೇಫನು ಪಾಪವನ್ನು ನಿರಾಕರಿಸಿದ್ದು ಪರಿಣಾಮಗಳ ಭಯದಿಂದಲ್ಲ, ಬದಲಾಗಿ ದೇವರ ಮೇಲಿನ ಭಕ್ತಿಯಿಂದಲೇ (ಆದಿಕಾಂಡ 39:9). ಅವನು ಮಾನವ ವೀಕ್ಷಣೆಯಿಂದಲ್ಲ, ದೈವಿಕ ಹೊಣೆಗಾರಿಕೆಯೊಂದಿಗೆ ಬದುಕಿದನು.
“ನಾವೆಲ್ಲರೂ ಒಂದುದಿನ ಕ್ರಿಸ್ತನ ನ್ಯಾಯಾಸನದ ಮುಂದೆ ಕಾಣಿಸಿಕೊಳ್ಳಬೇಕು” ಎಂದು ಅಪೊಸ್ತಲ ಪೌಲನು ಈ ಮನಸ್ಥಿತಿಯ ಬಗ್ಗೆ ಮಾತನಾಡುತ್ತಾನೆ(2 ಕೊರಿಂಥ 5:10).
ಹೆಚ್ಚು ಪರಿಣಾಮಕಾರಿ ಜನರು ದೇವರು ನೋಡುತ್ತಿದ್ದಾನೆ ಎಂಬುದನ್ನು ನಂಬಿದವರಾಗಿ ಅದರ ಆಧಾರದ ಮೇಲೆ ಬದುಕುತ್ತಾರೆ - ಏಕೆಂದರೆ ಆತನು ಇದ್ದಾನೆ. ಈ ಅರಿವು ಉದ್ದೇಶಗಳನ್ನು ಶುದ್ಧೀಕರಿಸುತ್ತದೆ, ನಿರ್ಧಾರಗಳನ್ನು ಪರಿಷ್ಕರಿಸುತ್ತದೆ ಮತ್ತು ವ್ಯಕ್ತಿತ್ವವನ್ನು ಸ್ಥಿರಗೊಳಿಸುತ್ತದೆ.
ಇದು ಅಭ್ಯಾಸ ಸಂಖ್ಯೆ 4. ಶಾಶ್ವತತೆಯು ಮಸೂರವಾದಾಗ, ಜೀವನವು ಸ್ಪಷ್ಟತೆ, ಧೈರ್ಯ ಮತ್ತು ಶಾಶ್ವತ ಪರಿಣಾಮವನ್ನು ಪಡೆಯುತ್ತದೆ.
Bible Reading:Genesis 37-39
ಪ್ರಾರ್ಥನೆಗಳು
ತಂದೆಯೇ, ಯಾವಾಗಲೂ ಶಾಶ್ವತತೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಕೆಲಸಗಳನ್ನು ಮಾಡಲು ನನಗೆ ಸಹಾಯ ಮಾಡು. ನನ್ನ ಕರೆಯಿಂದ ನನ್ನನ್ನು ಬೇರೆಡೆಗೆ ತಿರುಗಿಸುವ ಪ್ರತಿಯೊಂದು ಗೊಂದಲವನ್ನು ಬೇರುಸಹಿತ ಕಿತ್ತುಹಾಕು. ನಿಜವಾಗಿಯೂ ಮುಖ್ಯವಾದುದರ ಮೇಲೆ ಮಾತ್ರ ಗಮನಹರಿಸುವಂತೆಯೂ ನಾನು ನಿನಗೆ ಮತ್ತು ನಿನ್ನ ಉದ್ದೇಶಕ್ಕೆ ಜವಾಬ್ದಾರನೆಂದು ತಿಳಿದುಕೊಂಡು ಪ್ರತಿದಿನ ಬದುಕುವಂತೆಯೂ ಯೇಸುನಾಮದಲ್ಲಿ ನನಗೆ ಸಹಾಯ ಮಾಡು. ಆಮೆನ್!!
Join our WhatsApp Channel
Most Read
● ಕರ್ತನಾದ ಯೇಸುವಿನ ಮುಖಾಂತರ ಕೃಪೆ● ಹಣವು ಚಾರಿತ್ರ್ಯವನ್ನು ವಿವರಿಸುತ್ತದೆ
● ಮತ್ತೊಬ್ಬ ಯೇಸು, ಬೇರೊಂದು ಆತ್ಮ, ಮತ್ತು ಬೇರೊಂದು ಸುವಾರ್ತೆ-II
● ಅಭಿಷೇಕಕ್ಕಿರುವ ಪ್ರಪ್ರಥಮ ಶತೃ
● ದೇವರ ಭಾಷೆಯಾದ ಅನ್ಯಭಾಷೆಗಳು
● ಇದು ನಿಮಗಾಗಿ ಬದಲಾಗುತ್ತಿದೆ
● ನೀವು ದೇವರ ಉದ್ದೇಶಕ್ಕಾಗಿ ನಿಯೋಜಿಸಲ್ಪಟ್ಟಿದ್ದೀರಿ
ಅನಿಸಿಕೆಗಳು
