ಅನುದಿನದ ಮನ್ನಾ
2
1
124
ದೇವರ ವಾಕ್ಯವನ್ನು ಓದುವುದರಿಂದಾಗುವ 5 ಪ್ರಯೋಜನಗಳು
Saturday, 13th of September 2025
Categories :
ದೇವರವಾಕ್ಯ ( Word of God )
ಇಷ್ಟು ವರ್ಷಗಳಲ್ಲಿ, ಜನರು ದೇವರ ವಾಕ್ಯವನ್ನು ನಿರ್ಲಕ್ಷಿಸುವುದನ್ನು ನಾನು ನೋಡಿದ್ದೇನೆ. ಕೆಲವರು ದಿನಗಳು ಮತ್ತು ವಾರಗಳವರೆಗೆ ದೇವರ ವಾಕ್ಯವನ್ನು ಓದದೆಯೇ ಇರುತ್ತಾರೆ. ಹೇಗೋ, ಭಾನುವಾರ ಬೆಳಿಗ್ಗೆ ಧರ್ಮೋಪದೇಶವನ್ನು ಕೇಳುತ್ತೀವಲ್ಲ ಅಷ್ಟೇ ಸಾಕು ಎಂಬುದಾಗಿ ಸಮಾಜಯಿಷಿ ಕೊಟ್ಟುಕೊಳ್ಳುತ್ತಾರೆ.
ವರ್ಷಗಳ ಕಾಲದಿಂದ ಸಭೆಯಲ್ಲಿಯೇ ಇರುವ ಕ್ರೈಸ್ತರು ಸಹ ದೇವರ ವಾಕ್ಯವನ್ನು ವ್ಯವಸ್ಥಿತವಾಗಿ ವಿರಳವಾಗಿ ಅಧ್ಯಯನ ಮಾಡುತ್ತಾರೆ. ಆದರೂ, ದೇವರ ವಾಕ್ಯವನ್ನು ಓದುವುದರಿಂದ ಅನೇಕ ಪ್ರಯೋಜನಗಳಿವೆ. ಪವಿತ್ರಾತ್ಮನು ಇದನ್ನು ಬಳಸಿಕೊಂಡು ನಿಮ್ಮಲ್ಲಿ ತನ್ನ ವಾಕ್ಯಕ್ಕಾಗಿ ಹಸಿವು ಮತ್ತು ದಾಹವನ್ನು ಹುಟ್ಟುಹಾಕಲಿ.
ದಯವಿಟ್ಟು ಈ ಕೆಳಗಿನವುಗಳನ್ನು ಬಹಳ ಎಚ್ಚರಿಕೆಯಿಂದ ಓದಿ. ಇವು ಅರಸರಿಗಾಗಿ ದೇವರು ನೀಡಿದ ಸೂಚನೆಗಳಾಗಿದ್ದವು.
"ಅರಸನಾಗುವಂತವನು ರಾಜ್ಯಾಧಿಕಾರಕ್ಕೆ ಬಂದಾಗ ಯಾಜಕ ಸೇವೆಮಾಡುವ ಲೇವಿಯರ ವಶದಲ್ಲಿರುವ ಈ ಧರ್ಮಶಾಸ್ತ್ರಗ್ರಂಥದ ಒಂದು ಪ್ರತಿಯನ್ನು ತನಗೋಸ್ಕರ ಪುಸ್ತಕರೂಪವಾಗಿ ಬರೆಯಿಸಿಕೊಳ್ಳಬೇಕು.
ಅವನು ಮದದಿಂದ ತನ್ನ ಸ್ವದೇಶದವರನ್ನು ಹಿಯ್ಯಾಳಿಸದೆ ಯೆಹೋವನ ಆಜ್ಞೆಯನ್ನು ಮೀರಿ ಎಡಬಲಕ್ಕೆ ತಿರುಗಿಕೊಳ್ಳದೆ ತನ್ನ ದೇವರಾದ ಯೆಹೋವನಲ್ಲಿ ಭಯಭಕ್ತಿಯುಳ್ಳವನಾಗಿ ಈ ಧರ್ಮಶಾಸ್ತ್ರದ ಎಲ್ಲಾ ವಾಕ್ಯಗಳನ್ನೂ ವಿಧಿಗಳನ್ನೂ ಅನುಸರಿಸುವದಕ್ಕೆ ಅಭ್ಯಾಸ ಮಾಡಿಕೊಳ್ಳುವಂತೆ ಈ ಗ್ರಂಥವು ಅವನ ಬಳಿಯಲ್ಲೇ ಇರಬೇಕು; ಅವನು ತನ್ನ ಜೀವಮಾನದ ದಿನಗಳೆಲ್ಲಾ ಅದರಲ್ಲಿ ಓದಿಕೊಳ್ಳುತ್ತಾ ಇರಬೇಕು.
ಹೀಗಾದರೆ ಅವನೂ ಅವನ ಸಂತತಿಯವರೂ ಬಹುಕಾಲ ರಾಜ್ಯಾಧಿಕಾರವನ್ನು ನಡಿಸುತ್ತಾ ಇಸ್ರಾಯೇಲ್ಯರ ನಡುವೆ ಬಾಳುವರು." (ಧರ್ಮೋಪದೇಶಕಾಂಡ 17:18-20)
ಒಬ್ಬ ರಾಜನು ಈ ಭೂಮಿಯ ಮೇಲೆ ಜೀವಿಸುವ ಕಾಲವೆಲ್ಲಾ ದೇವರ ವಾಕ್ಯವನ್ನು ಪ್ರತಿದಿನ ಓದಬೇಕಿತ್ತು. ಇದು ರಾಜನನ್ನು ಹಲವು ವಿಧಗಳಲ್ಲಿ ಸಜ್ಜುಗೊಳಿಸುತ್ತಿತ್ತು.
1. ಅವನು ಕರ್ತನ ಭಯದಲ್ಲಿ ನಡೆಯಲು ಕಲಿಯುತ್ತಿದ್ದನು
2. ಅದು ಅವನನ್ನು ಅಹಂಕಾರದಿಂದ ದೂರವಿಡುತ್ತಿತ್ತು
3. ಅದು ಅವನನ್ನು ದೇವರ ಮಾರ್ಗಗಳಿಂದ ದೂರವಿಡುತ್ತಿತ್ತು
4. ಅದು ಅವನಿಗೂ ಮತ್ತು ಅವನ ಪುತ್ರರಿಗೂ ದೀರ್ಘಾಯುಷ್ಯವನ್ನು ಭರವಸೆ ನೀಡಿತ್ತು.
5. ಅವನ ನಾಯಕತ್ವವು ಸ್ಥಾಪಿಸಲ್ಪಡುತ್ತಿತ್ತು
ಯೇಸುಕ್ರಿಸ್ತನು ನೆರವೇರಿಸಿದ ಪರಿಪೂರ್ಣ ಯಜ್ಞದ ಮೂಲಕ ; ಕರ್ತನಾದ ಯೇಸು ನಮ್ಮನ್ನು ತನ್ನ ದೇವರು ಮತ್ತು ತಂದೆಗೆ ನಮ್ಮನ್ನು ಅರಸರನ್ನಾಗಿ ಮತ್ತು ಯಾಜಕರನ್ನಾಗಿ ಮಾಡಿದ್ದಾನೆ (ಪ್ರಕಟನೆ 1:6) ಎಂದು ಸತ್ಯವೇದ ಹೇಳುತ್ತದೆ.
ಆದ್ದರಿಂದ, ನೀವು ಮತ್ತು ನಾನು ಅರಸರೂ ಮತ್ತು ಯಾಜಕಾರಗಿದ್ದೇವೆ. ಯಾಜಕರಾಗಿ, ನಾವು ತಂದೆಯ ಮುಂದೆ ಸ್ತುತಿ ಮತ್ತು ಮಧ್ಯಸ್ಥಿಕೆಯ ಯಜ್ಞಗಳನ್ನು ಅರ್ಪಿಸಲು ಕರೆಯಲ್ಪಟ್ಟಿದ್ದೇವೆ.
ಅರಸರಾಗಿ, ನಾವು ಸುವಾರ್ತೆಗಾಗಿಯೂ ರೋಗಿಗಳನ್ನು ಗುಣಪಡಿಸುವುದಕ್ಕೂ ಮತ್ತು ದೆವ್ವಗಳನ್ನು ಬಿಡಿಸುವುದಕ್ಕೂ ನಮ್ಮ ಅಧಿಕಾರವನ್ನು ಚಲಾಯಿಸಬೇಕಾಗಿ ನೇಮಿಸಲ್ಪಟ್ಟಿದ್ದೇವೆ.
ದೇವರ ಈ ಕರೆಯನ್ನು ಪರಿಣಾಮಕಾರಿಯಾಗಿ ಪೂರೈಸಲು, ಧರ್ಮೋಪದೇಶಕಾಂಡ 17:18-20 ರಲ್ಲಿ ಕರ್ತನು ಅರಸರಿಗೆ ಹೇಳಿದಂತೆ ನಾವು ದೇವರ ವಾಕ್ಯದೊಂದಿಗೆ ನಮ್ಮನ್ನು ಸಿದ್ಧಪಡಿಸಿಕೊಳ್ಳಬೇಕು.
ದೇವರು ತನ್ನ ಅಮೂಲ್ಯ ವಾಕ್ಯವನ್ನು ಪ್ರೀತಿಸುವವರನ್ನು ಮತ್ತು ಗೌರವಿಸುವವರನ್ನು ಗೌರವಿಸಲು ಮತ್ತು ಆಶೀರ್ವದಿಸಲು ಬದ್ಧನಾಗಿದ್ದಾನೆ. ಆದಿಕಾಂಡದಿಂದ ಪ್ರಕಟನೆಯವರೆಗೆ, ದೇವರು ತನ್ನ ಮನಸ್ಸು ಮತ್ತು ಹೃದಯವನ್ನು ನಮಗೆ ಪ್ರಕಟ ಪಡಿಸುತ್ತಾನೆ. ಉಳಿದೆಲ್ಲವೂ ಮಸುಕಾಗಿಯೇ ಇದೆ, "ಆದರೆ ನಮ್ಮ ದೇವರ ವಾಕ್ಯವು ಶಾಶ್ವತವಾಗಿ ನಿಲ್ಲುತ್ತದೆ" (ಯೆಶಾಯ 40:8). ನಾವು ಆತನ ವಾಕ್ಯವನ್ನು ನಂಬಿ ಅದರಂತೆ ನಡೆಯುವಾಗ, ನಮ್ಮ ಜೀವನವು ಆತನ ಮಹಿಮೆಯಿಂದ ಹೊಳೆಯುತ್ತದೆ.
ಪಾಸ್ಟರ್ ಮೈಕೆಲ್ ಅವರ ಈ ಸಣ್ಣ ಇ-ಪುಸ್ತಕಗಳನ್ನು ಓದಿ:
1. ಸತ್ಯವೇದವನ್ನು ಅಧ್ಯಯನ ಮಾಡುವುದು ಹೇಗೆ? https://bit.ly/2ZABBKc
2. ಧನ್ಯರು - https://tinyurl.com/5dma39h5
Bible Reading: Ezekiel 33-35
ಪ್ರಾರ್ಥನೆಗಳು
ತಂದೆಯೇ, ಯೇಸುವಿನ ಹೆಸರಿನಲ್ಲಿ, ನೀವು ಯಾವಾಗಲೂ ನಿಮ್ಮ ವಾಕ್ಯವನ್ನು ನಿರ್ವಹಿಸಲು ಸಮರ್ಥರಾಗಿದ್ದೀರಿ ಎಂದು ನಾನು ನಿಮಗೆ ಧನ್ಯವಾದ ಹೇಳುತ್ತೇನೆ. ಪ್ರತಿದಿನ ನಿಮ್ಮ ವಾಕ್ಯವನ್ನು ಓದಲು ಮತ್ತು ಧ್ಯಾನಿಸಲು ನನಗೆ ಅನುಗ್ರಹವನ್ನು ನೀಡಿ. ಆಮೆನ್.
Join our WhatsApp Channel

Most Read
● ಪ್ರೀತಿ - ಗೆಲ್ಲುವ ತಂತ್ರ - 1● ಆರಾಧನೆಯ ಪರಿಮಳ
● ಅಗಾಪೆ ಪ್ರೀತಿಯಲ್ಲಿ ಬೆಳೆಯುವುದು
● ನೀವು ಎಷ್ಟು ವಿಶ್ವಾಸಾರ್ಹರು?
● ಎದುರಾಗುವ ವಿರೋಧಗಳನ್ನು ನಂಬಿಕೆಯಿಂದ ಎದುರಿಸುವುದು.
● ಸಫಲತೆ ಎಂದರೇನು?
● ಕನಸು ಕಾಣುವ ಧೈರ್ಯ
ಅನಿಸಿಕೆಗಳು