ಅನುದಿನದ ಮನ್ನಾ
ನಿಮ್ಮ ಸಮಸ್ಯೆಗಳು ಮತ್ತು ನಿಮ್ಮ ನಡವಳಿಕೆಗಳು
Wednesday, 24th of July 2024
1
1
160
Categories :
ನಡವಳಿಕೆಯ (Attitude)
ಪರಿಶೋಧನೆ (Trials)
ನಾನು ನನ್ನ ಬಾಲ್ಯವನು ನೆನಪಿಗೆ ತಂದುಕೊಳ್ಳುತ್ತೇನೆ. ಮಕ್ಕಳಾಗಿ ಆಗಾಗ ನೆರೆಹೊರೆಯ ಮಕ್ಕಳೊಂದಿಗೆ ನಾವು ಆಡುತ್ತಿದ್ದೆವು. ನಮ್ಮಲ್ಲಿ ಕಂಪ್ಯೂಟರ್ ಗೇಮ್ ಸ್ಯಾಟಲೈಟ್ ಟಿವಿ ಇಲ್ಲದ ಕಾರಣ ನಮ್ಮ ಆಟಗಳು ಏನಿದ್ದರೂ ಬೀದಿಯಲ್ಲಿಯೇ ಇರುತ್ತಿದ್ದವು. ಆದರೂ ಅವೆಲ್ಲವೂ ತುಂಬಾ ಮೋಜುಭರಿತವಾಗಿರುತಿತ್ತು. ಇವುಗಳ ಮಧ್ಯೆ ಒಂದು ಮೂಲೆಯಲ್ಲಿ ಅಪಶಕುನಾದಂತೆ ಕಾಣುವ ಒಂದು ಕೆಂಪು ಪೆಟ್ಟಿಗೆಯನ್ನು ನಿಲ್ಲಿಸಲಾಗಿತ್ತು. ಅದರ ಬಳಿ ಯಾರೂ ಹೋಗದಂತೆ ದೊಡ್ಡವರೆಲ್ಲ ನಮಗೆ ಎಚ್ಚರಿಸುತ್ತಿದ್ದರು. ಅದರ ಮೇಲೆ ಒಂದು ತಲೆಬುರುಡೆಯ ಚಿತ್ರ ಕೂಡ ಇತ್ತು. ಮುಗ್ದ ಮಕ್ಕಳಾದ ನಾವು ನಮ್ಮದೇ ಆದ ರೀತಿಯ ಕಥೆಗಳನ್ನೆಲ್ಲ ಕಟ್ಟುತ್ತಾ "ಅದರೊಳಗೆ ದೆವ್ವ ಇದೆ ಅದಕ್ಕೆ ನಾವೆಲ್ಲ ಇದರಿಂದ ದೂರ ಇರಬೇಕು" ಎಂದು ಹೇಳುತ್ತಾ ದೂರ ಉಳಿಯುತ್ತಿದ್ದೆವು. ಕಾಲ ಕಳೆದಂತೆ ಅದು ಹೈ ವೋಲ್ಟೇಜ್ ವಿದ್ಯುತ್ ವಿತರಣಾ ಪೆಟ್ಟಿಗೆ ಎಂದು ತಿಳಿದುಕೊಂಡೆವು.
ಕ್ರೈಸ್ತರಾದ ನಮಗೆ ಕದ್ದು ಕೊಳ್ಳುವ, ಕೊಲ್ಲುವ, ಹಾಳು ಮಾಡುವುದನ್ನೇ ಮುಖ್ಯ ಉದ್ದೇಶವನ್ನು ಮಾಡಿ ಕೊಂಡಿರುವಂತಹ ಶತೃವಿದ್ದಾನೆ. (ಯೋಹಾನ 10:10). ಸತ್ಯವೇದವು ನಮಗೆ ಸೈತಾನನು ಯಾರನ್ನು ನುಂಗಲಿ ಎಂದು ಘರ್ಜಿಸುವ ಸಿಂಹದೋಪಾದಿಯಲ್ಲಿ ಬರುತ್ತಾನೆ ಎಂದು ಎಚ್ಚರಿಸುತ್ತದೆ (1ಪೇತ್ರ 5:8)
ನೀವು ಈ ಶತ್ರುವನ್ನು ನಿಭಾಯಿಸಲು ತುಂಬಾ ಬಿಸಿಯಾಗಲು ಬಯಸಿದರೆ ಆತ್ಮಿಕ ಬೆಳವಣಿಗೆಯ ಕೆಲವು ರಹಸ್ಯಗಳನ್ನು ಪ್ರಾಯೋಗಿಕವಾಗಿ ನೀವು ನಿಮ್ಮ ಜೀವಿತದಲ್ಲಿ ಅಳವಡಿಸಿಕೊಳ್ಳಬೇಕಾಗುತ್ತದೆ. ನಾನು ಕರ್ತನೊಂದಿಗೆ ನಡೆಯುತ್ತಿರುವ ಇಷ್ಟು ವರ್ಷಗಳಲ್ಲಿ ಒಂದು ಸಂಗತಿಯನ್ನು ನಾನು ಕಂಡುಕೊಂಡೆ. ಅದೇನೆಂದರೆ ನೀವು ಎಷ್ಟು ಹೆಚ್ಚು ಹೆಚ್ಚಾಗಿ ದೇವರೊಂದಿಗೆ ಅನ್ಯೋನ್ಯವಾಗಿ ನಡೆಯಲಾರಂಭಿಸುತ್ತೀರೋ ಅಷ್ಟೇ ಉನ್ನತ ಮಟ್ಟಕ್ಕೆ ನಿಮ್ಮ ವಿಜಯವು ಏರುತ್ತದೆ.
ಆತ್ಮಿಕವಾಗಿ ಬೆಳೆಯಲು ನೀವು ನಿಮ್ಮ ನಡವಳಿಕೆ ಮೇಲೆ ಗಮನ ಹರಿಸಬೇಕು. ದೇವರ ವಿಚಾರಗಳ ಕಡೆಗೆ ನಿಮಗಿರುವ ಮನೋಭಾವವೇ ನಿಮ್ಮ ಆತ್ಮೀಕತೆಯ ಸರ್ವಾಂಗೀಣ ಬೆಳವಣಿಗೆಯನ್ನು ನಿರ್ಧರಿಸುತ್ತದೆ. ಒಂದು ಮುಖ್ಯವಾದ ಸತ್ಯವನ್ನು ನೀವು ಎಂದಿಗೂ ಮರೆಯಬಾರದು. ಅದೇನೆಂದರೆ ನಿಮ್ಮ ಆತ್ಮಿಕ ಬೆಳವಣಿಗೆಗೆ ಸಮಸ್ಯೆಗಳೇ ಆಗಾಗ ಗೊಬ್ಬರವಾಗಿರುತ್ತದೆ.
"ಯೆಹೋವನು ನೀತಿವಂತರ ಕೂಗನ್ನು ಕೇಳಿ ಎಲ್ಲಾ ಕಷ್ಟಗಳಿಂದ ಅವರನ್ನು ಬಿಡಿಸುತ್ತಾನೆ.
ನೀತಿವಂತನಿಗೆ ಸಂಭವಿಸುವ ಕಷ್ಟಗಳು ಅನೇಕವಿದ್ದರೂ ಯೆಹೋವನು ಅವೆಲ್ಲವುಗಳಿಂದ ಅವನನ್ನು ಬಿಡಿಸುತ್ತಾನೆ."(ಕೀರ್ತನೆಗಳು 34:17, 19)
ಈ ಭೂಮಿಯ ಮೇಲೆ ಸಮಸ್ಯೆಗಳಿಲ್ಲದ ಸ್ಥಳವೇ ಇಲ್ಲ. ನೀವು ನಿಮ್ಮ ಸತ್ಯವೇದವನ್ನು ಜಾಗರೂಕತೆಯಿಂದ ಓದಿ ನೋಡುವುದಾದರೆ ಅಲ್ಲಿ ಪ್ರತಿ ಮಹಾನ್ ಸ್ತ್ರೀ ಪುರುಷರು ಅನೇಕ ಬಿಕ್ಕಟ್ಟಿನ ಪರಿಸ್ಥಿತಿಗಳನ್ನು ಹಾದು ಹೋದರೂ ಕೊನೆಗೆ ಬಲವಾದ ಸಾಕ್ಷಿಗಳನ್ನು ಹೊಂದಿಕೊಂಡರು. ಸಮಸ್ಯೆಗಳು ನಿಮ್ಮಲ್ಲಿ ಕಹಿಉಂಟು ಮಾಡಬಹುದು ಇಲ್ಲವೇ ನಿಮ್ಮನ್ನು ಇನ್ನೂ ಉತ್ತಮವಾಗಿಸಬಲ್ಲದು.
ನನಗೊಂದು ರಹಸ್ಯವನ್ನು ಹಂಚಿಕೊಳ್ಳಲು ಅನುಮತಿಸಿ. ಪ್ರತಿಯೊಂದು ಸಮಸ್ಯೆಗೂ ಒಂದು ಸಮಯಾವಧಿ ಇದೆ. ಸಮಸ್ಯೆ ಯಾವಾಗಲೂ ತಂಗಿರಲು ಸಾಧ್ಯವಿಲ್ಲ. ದೇವರು ತನ್ನ ಕರುಣೆಯಿಂದ ನಿಮಗಾಗಿಯೂ ಮತ್ತು ನಿಮ್ಮ ಪ್ರೀತಿ ಪಾತ್ರರಿಗಾಗಿಯೂ ವಿಜಯದ ಸಮಯವನ್ನು ಸಹ ನೇಮಿಸಿದ್ದಾನೆ. ಹೇಗೂ ಸಮಸ್ಯೆಯ ಕುರಿತಾದ ನಿಮ್ಮ ನಡವಳಿಕೆಯು ನಿಮ್ಮ ಸಮಸ್ಯೆಯ ಸಮಯವನ್ನು ವಿಸ್ತರಿಸಲೂಬಹುದು ಅಥವಾ ಕಡಿತಗೊಳಿಸಲೂಬಹುದು.
ಜೀವಿತದ ಸಮಸ್ಯೆಗಳನ್ನು ಜಯಿಸಲು ಕರ್ತನು ಯಾರಿಗೆ ಜ್ಞಾನವನ್ನು ಕಲಿಸುವನು? ಮತ್ತು ಯಾರಿಗೆ ತಿಳುವಳಿಕೆಯನ್ನು ನೀಡುವನು? ದೇವರ ವಾಕ್ಯವೆಂಬ ಶುದ್ಧ ಹಾಲನ್ನು ತಮ್ಮ ದಿನ ನಿತ್ಯದ ಆಹಾರವನ್ನಾಗಿ ಮಾಡಿಕೊಂಡವರಿಗೆ ತಾನೇ? (ಯೆಶಾಯ 28:9ರ ವಾಕ್ಯಗಳನ್ನು ವಾಕ್ಯ ವಾಕ್ಯವಾಗಿ ಓದಿ)
ನಮ್ಮ ನಡವಳಿಕೆಗಳು ನಮ್ಮ ಹೃದಯದಲ್ಲಿ ನಿಜವಾಗಿ ಏನು ನಡೆಯುತ್ತಿದೆ ಎಂಬುದರ ಬಾಹ್ಯ ಪ್ರದರ್ಶನವಾಗಿರುತ್ತದೆ. ನಮ್ಮ ಹೃದಯಗಳು ಸರಿಯಾದ ಸ್ಥಳದಲ್ಲಿ ಅಂದರೆ ದೇವರ ವಾಕ್ಯದಲ್ಲಿ ನೆಲೆಗೊಳ್ಳಲು ಆರಂಭಿಸಿದಾಗ ನಾವು ಎದುರಿಸುತ್ತಿರುವ ಸಮಸ್ಯೆಗಳ ವಿಚಾರದಲ್ಲಿ ನಮ್ಮ ನಡವಳಿಕೆಗಳೂ ಸಹ ಬದಲಾಗುತ್ತವೆ.
ಅರಿಕೆಗಳು
ಕರ್ತನೇ,ನನ್ನ ಜೀವನದ ಎಲ್ಲಾ ಕಾಲದಲ್ಲೂ- ಎಲ್ಲಾ ಸಮಯದಲ್ಲೂ ನನ್ನ ಭರವಸೆಯ ಬುರುಜು.
Join our WhatsApp Channel
Most Read
● ಬದಲಾಗಲು ಇನ್ನೂ ತಡವಾಗಿಲ್ಲ● ನೀವು ಪ್ರಾರ್ಥಿಸುವಿರಿ ಆತನು ನಿಮಗೆ ಕಿವಿಗೊಡುವನು
● ಕೃಪೆಯನ್ನು ತೋರಿಸುವ ಪ್ರಾಯೋಗಿಕ ವಿಧಾನ.
● ಭಾನುವಾರದ ಬೆಳಗ್ಗೆ ನಿಗದಿತ ಸಮಯಕ್ಕೆ ಸಭೆಗೆ ಹೋಗುವುದು ಹೇಗೆ
● ಪರಿಣಾಮಕಾರಿಯಾಗಿ ಸತ್ಯವೇದವನ್ನು ಓದುವುದು ಹೇಗೆ
● ನಿಮ್ಮ ಆತ್ಮಿಕ ಶಕ್ತಿಯನ್ನು ನವೀಕರಿಸಿಕೊಳ್ಳುವುದು ಹೇಗೆ -3
● ದಿನ 03 : 40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
ಅನಿಸಿಕೆಗಳು