ಅನುದಿನದ ಮನ್ನಾ
ಹೆಚ್ಚಿನ ಹೊರೆ ಬೇಡ
Thursday, 12th of September 2024
2
1
138
Categories :
ಸಂಬಂಧ (Relationship)
ಕುಟುಂಬವಾಗಿ ಇಸ್ರಾಯೇಲ್ ಪ್ರವಾಸಕ್ಕೆ ಹೊರಟಾಗಲೆಲ್ಲಾ ಅದೊಂದು ರೋಮಾಂಚನಕಾರಿಯಾದ ಅನುಭವ ನೀಡುತ್ತದೆ. ವಿಶೇಷವಾಗಿ ಮಕ್ಕಳಿಗಂತೂ ಪ್ರವಾಸದ ದಿನವು ಹತ್ತಿರವಾದಂತೆ ನಿದ್ರೆಯೇ ಕಡಿಮೆಯಾಗಿ ಬಿಡುತ್ತದೆ. ಅದರಲ್ಲಿ ಮತ್ತೊಂದು ರೋಮಾಂಚನಕಾರಿ ವಿಷಯವೆಂದರೆ ಸಾಮಗ್ರಿಗಳ ಪ್ಯಾಕಿಂಗ್.
ಇಂಥ ಪ್ರಯಾಣದಲ್ಲಿ ನಾವು ಯಾವಾಗಲೂ ಅಗತ್ಯಕ್ಕಿಂತ ಹೆಚ್ಚಾಗಿಯೇ ಪ್ಯಾಕ್ ಮಾಡಿಕೊಂಡು ಹೋಗಿರುತ್ತೇವೆ. ಕೆಲವೊಂದು ವಸ್ತುಗಳನ್ನು ಆ ನಮ್ಮ ಪ್ರಯಾಣದಲ್ಲಿ ನಾವು ಬಳಕೆಯೇ ಮಾಡಿರುವುದಿಲ್ಲ ಅವುಗಳೇ ನಮಗೆ ಹೆಚ್ಚಿನ ಹೊರೆಯಾಗಿರುತ್ತದೆ ಎಂಬ ವಿಚಾರಗಳನ್ನು ನಾನು ಆಗಾಗ್ಗೆ ಗ್ರಹಿಸಿಕೊಂಡಿದ್ದೇನೆ.ನೀವೂ ಸಹ ನಾನು ಏನು ಹೇಳುತ್ತಿದ್ದೇನೋ ಅದನ್ನು ಮಾಡಿರುತ್ತೀರಿ ಎಂದು ನಾನು ನೆನೆಸುತ್ತೇನೆ.
ನಾನು "ಆತ್ಮಿಕ ಹೊರಹೊತ್ತವರು" ಎಂದು ಕರೆಯುವ ಅನೇಕ ಜನರಿದ್ದಾರೆ. ಬಹುಶಹ ನೀವು ಯಾರನ್ನೋ ನಂಬಿ, ಆ ವ್ಯಕ್ತಿ ನಿಮಗೆ ನಂಬಿಕೆ ದ್ರೋಹ ಮಾಡಿರಬಹುದು.ನೀವು ನಿಮ್ಮ ಹೃದಯದ ಸುತ್ತಲೂ ಈಗ ಗೋಡೆ ಕಟ್ಟಿಕೊಂಡು ಯಾರೊಡನೆಯೂ ಅರ್ಥಪೂರ್ಣವಾದ ಬಾಂಧವ್ಯವನ್ನು ಬೆಳೆಸಿಕೊಳ್ಳಲು ಆಗದಂತೆ ಕಷ್ಟ ಪಡುತ್ತಿರಬಹುದು. ಇಲ್ಲವೇ ನೀವು ತಪ್ಪಾದ ಬೋಧನೆಯಲ್ಲಿ ಬೆಳೆದಿದ್ದು ನೀವು ಆ ಧರ್ಮಶಾಸ್ತ್ರದ ಮನಸ್ಥಿತಿಯಲ್ಲಿ ಜನರನ್ನು ಕಠಿಣವಾಗಿ ತೀರ್ಪು ಮಾಡುವುದು ಅಥವಾ ಟೀಕಿಸುವುದು ನಿಮ್ಮ ಜಾಯಮಾನ ಆಗಿರಬಹುದು. ಇದನ್ನೇ ನಾನು "ಆತ್ಮೀಕ ಸಾಮಗ್ರಿಗಳ ಹೊರೆ" ಎಂದು ಹೇಳಿದ್ದು.
ಈ ಆತ್ಮಿಕ ಸರಕುಗಳಿಂದ ನೀವು ಕ್ರೈಸ್ತ ನಡೆಯನ್ನೇನೋ ತೂಗಿಸಬಹುದು. ಆದರೆ ಕ್ರೈಸ್ತ ಉದ್ದೇಶವನ್ನು ಪೂರೈಸುವುದು ಅಸಾಧ್ಯ. ಇಬ್ರಿಯ 12:1 ಇದಕ್ಕೆ ಸರಿಯಾದ ಪರಿಹಾರವನ್ನು ಒದಗಿಸುತ್ತದೆ.
"ಆದಕಾರಣ ಇಷ್ಟುಮಂದಿ ಸಾಕ್ಷಿಯವರು ಮೇಘದೋಪಾದಿಯಲ್ಲಿ ನಮ್ಮ ಸುತ್ತಲು ಇರುವದರಿಂದ ನಮಗೆ ಅಭ್ಯಂತರ ಮಾಡುವ ಎಲ್ಲಾ ಭಾರವನ್ನೂ ಹತ್ತಿಕೊಳ್ಳುವ ಪಾಪವನ್ನೂ ನಾವು ಸಹ ತೆಗೆದಿಟ್ಟು.. "(ಇಬ್ರಿಯರಿಗೆ 12:1)
ಇಂದು ಪಾಪ ಪ್ರಜ್ಞೆ, ಕೋಪ, ಅಭದ್ರತೆಗಳಿಂದ ಜನರು ಬಂದಿಸಲ್ಪಟ್ಟಿದ್ದಾರೆ. ನಾವೀಗೆ ಹೊರೆ ಹೊತ್ತವರಾಗಿ ಜೀವಿಸುವುದನ್ನು ಕರ್ತನು ಎಂದಿಗೂ ಬಯಸುವುದಿಲ್ಲ. ಬದಲಾಗಿ ನಾವು ಸಂಪೂರ್ಣವಾಗಿ ಸ್ವಾತಂತ್ರ್ಯದಿಂದಲೂ ನಂಬಿಕೆಯಲ್ಲೂ, ಕ್ಷಮಾಗುಣ, ಪ್ರೀತಿ ಆನಂದ ಮತ್ತು ಸಮಾಧಾನದಲ್ಲಿ ಸಮೃದ್ಧಿಯಾಗಿ ಜೀವಿಸಬೇಕೆಂದು ಆತನು ಬಯಸುತ್ತಾನೆ.(ಯೋಹಾನ 10:10).
ಈ ಹೆಚ್ಚಾದ ಹೊರೆಯವನ್ನು ತೆಗೆದು ಹಾಕುವುದಕ್ಕೆ ಮಾರ್ಗವಿದೆ. ಈ ಹಿಂದೆ ವಿವರಿಸಿದ ವಿಚಾರಗಳನ್ನು ನೀವು ಬಿಟ್ಟುಕೊಡುವುದಾದರೆ ಅದು ನಿಮಗೆ ಸಹಾಯ ಮಾಡುತ್ತದೆ. ಹಾಗಾಗಿ ಕ್ಷಮಾಗುಣವನ್ನು ಬೆಳೆಸಿಕೊಳ್ಳಿರಿ- ಆತನ ಕೃಪೆಯ ಮೇಲೆ ಆಧಾರಗೊಳ್ಳಿರಿ. ಎಲ್ಲವನ್ನು ಆತನಿಗೆ ಒಪ್ಪಿಸಿಕೊಟ್ಟು ನಿಮ್ಮನ್ನು ಮಾರ್ಗದರ್ಶಿಸಲು- ಬಲಪಡಿಸಲು ಆತನ ಜ್ಞಾನವನ್ನು ನಿರೀಕ್ಷಿಸಿ
"ನಿಮ್ಮ ಚಿಂತೆಯನ್ನೆಲ್ಲಾ ಆತನ ಮೇಲೆ ಹಾಕಿರಿ, ಆತನು ನಿಮಗೋಸ್ಕರ ಚಿಂತಿಸುತ್ತಾನೆ."( 1 ಪೇತ್ರನು 5:7)
ನೀವು ಹೀಗೆ ಮಾಡುವುದೇ ನಿಮ್ಮ ಜೀವಿತದಲ್ಲಿ ದೊಡ್ಡ ಕಾರ್ಯಗಳನ್ನು ಮಾಡಲು ಇಡುವ ಆರಂಭಿಕ ಹೆಜ್ಜೆಯಾಗಿದೆ.
ಪ್ರಾರ್ಥನೆಗಳು
ತಂದೆಯೇ, ನನ್ನ ಅಗತ್ಯಗಳು ಮತ್ತು ನನ್ನ ಬಯಕೆಗಳ ನಡುವಿನ ವ್ಯತ್ಯಾಸವನ್ನು ವಿವೇಚಿಸಲು ಯೇಸು ನಾಮದಲ್ಲಿ ನನಗೆ ಸಹಾಯ ಮಾಡಿ.
ತಂದೆಯೇ, ಕ್ರಿಸ್ತೀಯ ಜೀವಿತದ ಓಟವನ್ನು ಚೆನ್ನಾಗಿ ಓಡಲು ನನಗೆ ಅಡ್ಡಿಯಾಗಿರುವ ಪ್ರತಿಯೊಂದು ಸಂಗತಿಗಳನ್ನು ಯೇಸು ನಾಮದಲ್ಲಿ ನಿರ್ಮೂಲ ಮಾಡಿ. ಆಮೆನ್.
ತಂದೆಯೇ, ಕ್ರಿಸ್ತೀಯ ಜೀವಿತದ ಓಟವನ್ನು ಚೆನ್ನಾಗಿ ಓಡಲು ನನಗೆ ಅಡ್ಡಿಯಾಗಿರುವ ಪ್ರತಿಯೊಂದು ಸಂಗತಿಗಳನ್ನು ಯೇಸು ನಾಮದಲ್ಲಿ ನಿರ್ಮೂಲ ಮಾಡಿ. ಆಮೆನ್.
Join our WhatsApp Channel
Most Read
● ಬೇರಿನೊಂದಿಗೆ ವ್ಯವಹರಿಸುವುದು● ಅನಂತವಾದ ಕೃಪೆ
● ಒಳಕೋಣೆ
● ಭಾವನಾತ್ಮಕ ರೋಲರ್ ಕೋಸ್ಟರ್ ಗೆ ಬಲಿಪಶು.
● ನಂಬಿಕೆಯಲ್ಲಿ ದೃಢವಾಗಿ ನಿಲ್ಲುವುದು
● ಸಾಲದಿಂದ ಹೊರಬನ್ನಿ : ಕೀಲಿಕೈ #2
● ನಂಬಿಕೆ- ನಿರೀಕ್ಷೆ -ಪ್ರೀತಿ
ಅನಿಸಿಕೆಗಳು