ಅನುದಿನದ ಮನ್ನಾ
2
1
51
ತಡೆಗಳನ್ನೊಡ್ಡುವ ಗೋಡೆ
Sunday, 30th of March 2025
Categories :
ನಂಬಿಕೆಗಳನ್ನು(Beliefs)
ರೂಪಾಂತರ(transformation)
"ನಾವು ಉಪಯೋಗಿಸುವ ಆಯುಧಗಳು ಲೋಕಸಂಬಂಧವಾದ ಆಯುಧಗಳಲ್ಲ; ಅವು ದೇವರ ಎಣಿಕೆಯಲ್ಲಿ ಬಲವಾಗಿದ್ದು ಕೋಟೆಗಳನ್ನು ಕೆಡವಿಹಾಕುವಂಥವುಗಳಾಗಿವೆ. ನಾವು ವಿತರ್ಕಗಳನ್ನೂ ದೇವಜ್ಞಾನವನ್ನು ವಿರೋಧಿಸುವದಕ್ಕೆ ಏರಿಸಲ್ಪಟ್ಟಿರುವ ಉನ್ನತವಾದ ಎಲ್ಲಾ ಕೊತ್ತಲಗಳನ್ನೂ ಕೆಡವಿಹಾಕಿ ಎಲ್ಲಾ ಯೋಚನೆಗಳನ್ನು ಕ್ರಿಸ್ತನಿಗೆ ವಿಧೇಯವಾಗುವಂತೆ ಸೆರೆಹಿಡಿದು ನಿಮ್ಮ ವಿಧೇಯತ್ವವು ಪರಿಪೂರ್ಣವಾದ ಮೇಲೆ ಎಲ್ಲಾ ಅವಿಧೇಯತ್ವಕ್ಕೆ ಶಿಕ್ಷೆ ಮಾಡುವದಕ್ಕೆ ಸಿದ್ಧರಾಗಿದ್ದೇವೆ."
(2 ಕೊರಿಂಥ 10:4-6)
ದೇವರು ಇಸ್ರಾಯೆಲ್ಯರಿಗೆ ನೀಡುವುದಾಗಿ ವಾಗ್ದಾನ ಮಾಡಿದ ದೇಶವನ್ನು ಪರಿಶೀಲಿಸಲು ಮೋಶೆಯು ಕೆಲವು ನಾಯಕರನ್ನು ಕಳುಹಿಸಿದನು. ಪೂರ್ಣ ಬಲದಿಂದ ಅದನ್ನು ಸ್ವಾಧೀನಪಡಿಸಿಕೊಳ್ಳುವ ಮೊದಲು ಆ ದೇಶ ಹೇಗಿದೆ ಎಂಬುದರ ಕಲ್ಪನೆಯನ್ನು ಅವರು ಹೊಂದಿರಬೇಕು ಎಂದು ಅವರು ಭಾವಿಸಿದರು. ಆದ್ದರಿಂದ ನಾಯಕರು ಈ ಕೆಳಕಂಡ ವರದಿಯೊಂದಿಗೆ ಹಿಂತಿರುಗಿದರು, "ಅವರು ಮೋಶೆಗೆ - ನೀನು ನಮ್ಮನ್ನು ಕಳುಹಿಸಿದ ದೇಶಕ್ಕೆ ಹೋದೆವು; ಅದು ಹಾಲೂ ಜೇನೂ ಹರಿಯುವ ದೇಶವೇ; ಅಲ್ಲಿನ ಹಣ್ಣುಗಳು ಇಂಥವು. ಆದರೆ ಆ ದೇಶದ ನಿವಾಸಿಗಳು ಬಲಿಷ್ಠರು; ಅವರಿರುವ ಪಟ್ಟಣಗಳು ದೊಡ್ಡವಾಗಿಯೂ ಕೋಟೆ ಕೊತ್ತಲುಗಳುಳ್ಳವಾಗಿಯೂ ಅವೆ; ಅದಲ್ಲದೆ ಅಲ್ಲಿ ಉನ್ನತರಾದ ಪುರುಷರನ್ನು ನೋಡಿದೆವು. ದಕ್ಷಿಣ ಸೀಮೆಯಲ್ಲಿ ಅಮಾಲೇಕ್ಯರೂ ಬೆಟ್ಟದ ಸೀಮೆಯಲ್ಲಿ ಹಿತ್ತಿಯರು, ಯೆಬೂಸಿಯರು, ಅಮೋರಿಯರು ಇವರೂ ಸಮುದ್ರತೀರದಲ್ಲಿ ಮತ್ತು ಯೊರ್ದನ್ ಹೊಳೆಯ ಬಳಿಯಲ್ಲಿ ಕಾನಾನ್ಯರೂ ವಾಸವಾಗಿದ್ದಾರೆ ಎಂದು ತಿಳಿಸಿದರು.(ಅರಣ್ಯಕಾಂಡ 13:28-29).
ವಾಗ್ದತ್ತ ದೇಶವನ್ನು ವಶಪಡಿಸಿಕೊಳ್ಳುವಲ್ಲಿ ಇಸ್ರಾಯೇಲ್ಯರು ಎದುರಿಸಿದ ಗೋಡೆಗಳಿಂದ ಕೂಡಿದ ನಗರಗಳು ಗಮನಾರ್ಹ ಸವಾಲನ್ನು ಒಡ್ಡುವ ಭದ್ರಕೋಟೆಗಳನ್ನು ಪ್ರತಿನಿಧಿಸುತ್ತವೆ. ಗೋಡೆಗಳು ಮತ್ತು ದ್ವಾರಗಳು ಅಭೇದ್ಯವೆಂದು ತೋರುತ್ತಿದ್ದ ಕಾರಣ, ಈ ನಗರಗಳನ್ನು ನಾವು ಹೇಗೆ ವಶಪಡಿಸಿಕೊಳ್ಳಬಹುದು ಎಂದು ಇಸ್ರಾಯೇಲ್ಯರು ಆಶ್ಚರ್ಯಪಟ್ಟರು. ಇದುವೇ ಅಂತ್ಯ ಇನ್ನೇನೂ ಮಾಡಲು ಸಾಧ್ಯವಿಲ್ಲ ಎಂದು ಅವರು ಭಾವಿಸಿದರು. ವಾಸ್ತವವಾಗಿ, ಗೋಡೆಗಳಿಂದ ಕೂಡಿದ ನಗರಗಳ ಬಗ್ಗೆ ಕೇಳಿದ ಕೆಲವು ಜನರು ಐಗುಪ್ತಕ್ಕೆ ಹಿಂತಿರುಗುವುದೇ ಒಳ್ಳೆಯದು ಎಂದು ಪರಿಗಣಿಸಲು ಪ್ರಾರಂಭಿಸಿದರು.
ದೇವರು ನಿಮಗೆ ಎಷ್ಟು ಬಾರಿ ದರ್ಶನವನ್ನು ತೋರಿಸಿದ್ದಾನೆ, ಆದರೆ ನೀವು ತಡೆಗೋಡೆಯಿಂದಾಗಿ ಹಿಂತಿರುಗುವ ಬಗ್ಗೆ ಯೋಚಿಸಿದ್ದೀರಾ? ಕೆಲವೊಮ್ಮೆ, ಸೈತಾನನು ತಡೆಗೋಡೆಯನ್ನು ಅಭೇದ್ಯವಾಗಿ ಕಾಣುವಂತೆ ಮಾಡುತ್ತಾನೆ; ಆದರೂ ಅವುಗಳ ಮದ್ಯೆಯಲ್ಲೂ , ಅನೇಕರು ಈಗಾಗಲೇ ಅದನ್ನು ಭೇದಿಸಿ ಮುನ್ನಡೆದಿದ್ದಾರೆ. ಹಿಂದೆ ಅನೇಕ ಜನರು ಇದೇ ರೀತಿಯ ತಡೆಗೋಡೆಗಳ ಮೂಲಕ ನಡೆದು ಬಂದಿದ್ದಾರೆ ಮತ್ತು ಅವುಗಳ ಮೇಲೆಯೂ ಸಹ ನಡೆದು ಬಂದಿದ್ದಾರೆ.
ಈ ಗೋಡೆಗಳಿಂದ ಕೂಡಿದ ನಗರಗಳು ಎಂಬುವು ಕ್ರೈಸ್ತರಾದ ನಾವು ನಮ್ಮ ಆತ್ಮೀಕ ಪ್ರಯಾಣದಲ್ಲಿ ಎದುರಿಸಬಹುದಾದ ಆತ್ಮೀಕ ಅಡೆತಡೆಗಳ ಸಂಕೇತಗಳಾಗಿವೆ. ಈ ಅಡೆತಡೆಗಳು ಅಥವಾ ಗೋಡೆಗಳು ದುಸ್ತರವೆಂದು ತೋರುತ್ತದೆ, ಮತ್ತು ನಾವು ಅವುಗಳನ್ನು ಹೇಗೆ ಜಯಿಸಬಹುದು ಎಂದು ನಾವು ಆಶ್ಚರ್ಯಪಡುವಂತೆ ಮಾಡಬಹುದು. ಆದಾಗ್ಯೂ, ನೀವು ಮುಂದೆ ಓದಿ ನೋಡುವಾಗ ದೇವರು ದುಸ್ತರವೆಂದು ತೋರುವ ಆ ಗೋಡೆಯನ್ನು ಹೇಗೆ ಅದ್ಭುತವಾಗಿ ಕೆಡವಿದನು ಎಂಬುದನ್ನು ನೀವು ಅರಿತುಕೊಳ್ಳುತ್ತೀರಿ. ಆತನು ಆ ಗೋಡೆಯನ್ನು ಭೂಗತಮಾಡಿ ಜನರು ಸುಲಭವಾಗಿ ಅದರ ಮೇಲೆ ನಡೆದು ಆ ಪಟ್ಟಣವನ್ನು ವಶಪಡಿಸಿಕೊಳ್ಳುವಂತೆ ಮಾಡಿದನು. ದೇವರು ಅಡೆತಡೆಗಳನ್ನು ನೆಲಸಮ ಮಾಡಿ ಅವರು ಆಶೀರ್ವಾದವನ್ನು ಆನಂದಿಸುವಂತೆ ಮಾಡಿದನು.
ದೇವರು ಇಸ್ರಾಯೇಲ್ಯರಿಗೆ ಗೋಡೆಗಳಿಂದ ಕೂಡಿದ ನಗರಗಳ ಮೇಲೆ ಜಯವನ್ನು ನೀಡಿದಂತೆಯೇ, ನಮ್ಮ ಪ್ರಗತಿಗೆ ಅಡ್ಡಿಯಾಗುವ ಆತ್ಮೀಕ ಕೋಟೆಗಳನ್ನು ಕೂಡ ಜಯಿಸಲು ಆತನು ನಮಗೆ ಸಹಾಯ ಮಾಡಬಲ್ಲನು. ನಂಬಿಕೆ ಮತ್ತು ದೇವರ ಶಕ್ತಿಯ ಮೇಲೆ ಆಧಾರಗೊಳ್ಳುವ ಮೂಲಕ , ನಾವು ಈ ಅಡೆತಡೆಗಳು ಮತ್ತು ಗೋಡೆಗಳನ್ನು ಭೇದಿಸಿ ದೇವರ ವಾಗ್ದಾನಗಳ ಪೂರ್ಣತೆಯನ್ನು ಅನುಭವಿಸಬಹುದು. ನಮ್ಮ ವಿರುದ್ಧ ನಿಂತು ನಮ್ಮ ಪ್ರಗತಿಗೆ ಅಡ್ಡಿಯಾಗಲು ಬಯಸುವ ಸೈತಾನನ ಪ್ರತಿಯೊಂದು ಕೋಟೆಯನ್ನು ಹೊಡೆದು ಕೆಡವಲು ನಮ್ಮ ಬಳಿ ಆತ್ಮೀಕ ಆಯುಧಗಳಿವೆ ಎಂಬುದನ್ನು ಎಂದಿಗೂ ಮರೆಯಬೇಡಿ.
ನಮಗೆ ಬೇಕಾಗಿರುವುದು ದೇವರಲ್ಲಿ ನಂಬಿಕೆ ಮತ್ತು ಸಂಪೂರ್ಣ ನಂಬಿಕೆ ಮಾತ್ರ. ಆತನು ವಾಗ್ದಾನ ನೀಡಿ ಅದನ್ನು ನೆರವೇರಿಸದೆ ಹೋಗುವ ಮನುಷ್ಯನಲ್ಲ. ನಮಗೆದುರಾಗುವ ಗೋಡೆಯ ಬಗ್ಗೆ ಆತನು ಮರೆತುಹೋಗಿಲ್ಲ ಎಂಬುದನ್ನು ನಾವು ಅರಿತುಕೊಳ್ಳಬೇಕಷ್ಟೇ. ಹೌದು, ನಾವು ಅದರ ಹತ್ತಿರ ಬರುವ ಮೊದಲೇ ಆತನಿಗೆ ಅದರ ಬಗ್ಗೆ ತಿಳಿದಿದೆ. ನೀವು ಗೋಡೆಯನ್ನು ನೋಡಿದಾಗ ನೀವು ಹೇಗೆ ಅಜಾಗರೂಕರಾಗಿ ಸಿಕ್ಕಿಹಾಕಿಕೊಳ್ಳುತ್ತೀರೋ ಹಾಗೆ ಆತನು ಸಿಕ್ಕಿಹಾಕಿಕೊಳ್ಳುವುದಿಲ್ಲ. ಆತನನ್ನು ನಂಬಲು ಇದುವೇ ಸಾಕಾದದ್ದು. ತಡೆಗೋಡೆ ಅಲ್ಲಿದೆ ಎಂದು ಆತನಿಗೆ ತಿಳಿದಿದ್ದರೂ ಆತನು ನಿಮ್ಮನ್ನು ಆ ದಿಕ್ಕಿನಲ್ಲಿ ಮುನ್ನಡೆಸುತ್ತಾನೆ. ಏಕೆಂದರೆ ಆತನಿಗೆ ಆರಂಭದಿಂದಲೇ ಅದರ ಅಂತ್ಯ ತಿಳಿದಿದೆ; ಅಂದರೆ, ನಿಮ್ಮ ವಿರುದ್ಧವಾಗಿ ನಿಂತಿರುವ ಕೋಟೆಯನ್ನು ಹೇಗೆ ಕೆಡವಬೇಕೆಂದು ಆತನಿಗೆ ತಿಳಿದಿದೆ. ಆದ್ದರಿಂದಲೇ ಆತನಿಗಾಗಿ ಕಾಯಿರಿ, ಆತನ ಹಿಂದೆ ನಿಂತುಕೊಳ್ಳಿ ಆತನು ನಿಮಗಾಗಿ ತನ್ನನ್ನು ಬಲವಾಗಿ ತೋರ್ಪಡಿಸಲಿ ."ಯೆಹೋವನು ಭೂಲೋಕದ ಎಲ್ಲಾ ಕಡೆಗಳಲ್ಲಿಯೂ ದೃಷ್ಟಿಯನ್ನು ಪ್ರಸರಿಸುತ್ತಾ ತನ್ನ ಕಡೆಗೆ ಯಥಾರ್ಥ ಮನಸ್ಸುಳ್ಳವರ ರಕ್ಷಣೆಗಾಗಿ ತನ್ನ ಪ್ರತಾಪವನ್ನು ತೋರ್ಪಡಿಸುತ್ತಾನೆ.." ಎಂದು 2 ಪೂರ್ವಕಾಲವೃತ್ತಾಂತ 16:9 ಹೇಳುತ್ತದೆ.
ಅದಲ್ಲದೆ, ನಾವು ನಮ್ಮ ಆತ್ಮೀಕ ಆಶೀರ್ವಾದದತ್ತ ಸಾಗುತ್ತಿರುವಾಗ, ನಮ್ಮ ಪ್ರಗತಿಗೆ ಅಡ್ಡಿಯಾಗುವ ನಾಲ್ಕು ಮಹತ್ವದ ಆತ್ಮೀಕ ಅಡೆತಡೆಗಳು ಅಥವಾ ಗೋಡೆಗಳನ್ನು ನಾವು ಎದುರಿಸುವವರಾಗುತ್ತೇವೆ:
1.ಮನುಷ್ಯರ ಸಂಪ್ರದಾಯಗಳು
2. ತಪ್ಪು ಚಿಂತನೆ
3. ಕ್ಷಮಿಸದಿರುವುದು
4. ಅಪನಂಬಿಕೆ
ಒಳ್ಳೆಯ ಸುದ್ದಿ ಏನೆಂದರೆ ನಿಮ್ಮ ದೇವರನ್ನು ಮೀರಿ ಯಾವುದೇ ಅಡೆತಡೆ ನಿಮಗೆ ಎದುರಾಗದು, ಆದ್ದರಿಂದ ಶಾಂತವಾಗಿರಿ ಮತ್ತು ನಿಮಗೆ ಸಹಾಯ ಮಾಡಲು ಆತನು ಶಕ್ತನ್ನಾಗಿದ್ದಾನೆಂದು ಆತನನ್ನು ನಂಬಿರಿ.
Bible Reading: Judges 20-21; Ruth 1
ಪ್ರಾರ್ಥನೆಗಳು
ತಂದೆಯೇ, ನೀವು ಈ ಹಿಂದೆ ನನಗಾಗಿ ಒಡೆದುಬಿಟ್ಟ ಗೋಡೆಗಳಿಗಾಗಿ ಯೇಸುನಾಮದಲ್ಲಿ ನಿನಗೇ ಸ್ತೋತ್ರ ಸಲ್ಲಿಸುತ್ತೇನೆ. ಈ ಪ್ರಯಾಣದಲ್ಲಿ ನಾನು ಒಬ್ಬಂಟಿಯಾಗಿಲ್ಲ ಎಂದು ನನಗೆ ತಿಳಿಸಿದ್ದಕ್ಕಾಗಿ ನಿನಗೇ ಸ್ತೋತ್ರ . ನಾನು ಮುನ್ನಡೆಯುವಾಗ ನಿನ್ನನ್ನೇ ನಂಬುವಂತೆ ನೀನು ನನಗೆ ಸಹಾಯ ಮಾಡಬೇಕೆಂದು ಯೇಸುನಾಮದಲ್ಲಿ ಪ್ರಾರ್ಥಿಸುತ್ತೇನೆ. ಇನ್ನು ಮುಂದೆ ಯಾವುದೂ ಸಹ ನನ್ನನ್ನು ಹಿಡಿದಿಟ್ಟುಕೊಳ್ಳಬಾರದು ಎಂದು ಯೇಸುನಾಮದಲ್ಲಿ ಪ್ರಾರ್ಥಿಸುತ್ತೇನೆ. ನನ್ನ ಮುಂದಿರುವ ಎಲ್ಲಾ ಗೋಡೆಗಳು ಯೇಸುನಾಮದಲ್ಲಿ ಮುರಿದುಬಿದ್ದಿವೆ. ಆಮೆನ್.
Join our WhatsApp Channel

Most Read
● ದಿನ 14:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ● ನಾವು ಸಭೆಯಾಗಿ ನೇರವಾಗಿ ಕೂಡಿಕೊಳ್ಳದೆ ಮನೆಯಲ್ಲಿಯೇ ಕುಳಿತು ಆನ್ಲೈನ್ ನಲ್ಲಿ ಸಭೆಯ ಆರಾಧನೆಯಲ್ಲಿ ಭಾಗವಹಿಸಬಹುದೇ?
● ದಿನ 32:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಆ ಸುಳ್ಳುಗಳನ್ನು ಬಯಲಿಗೆಳೆಯಿರಿ.
● ಕರ್ತನೊಂದಿಗೆ ನಡೆಯುವುದು
● ಪರಿಣಾಮಕಾರಿಯಾಗಿ ಸತ್ಯವೇದವನ್ನು ಓದುವುದು ಹೇಗೆ
● ಕೃಪೆಯ ಉಡುಗೊರೆ
ಅನಿಸಿಕೆಗಳು