ಅನುದಿನದ ಮನ್ನಾ
ದೈವೀಕ ಅನುಕ್ರಮ -2
Sunday, 3rd of November 2024
1
0
102
Categories :
ದೈವಿಕ ಅನುಕ್ರಮ (Divine Order)
"ನಿನ್ನ ಹಿಂಡುಗಳ ಸ್ಥಿತಿಯನ್ನು ಚೆನ್ನಾಗಿ ತಿಳಿದುಕೊಂಡಿರು, ನಿನ್ನ ಮಂದೆಗಳ ಮೇಲೆ ಮನಸ್ಸಿಡು."(ಜ್ಞಾನೋಕ್ತಿ 27:23). ಮತ್ತು ಜ್ಞಾನೋಕ್ತಿ 29:18 ಹೇಳುವುದೇನೆಂದರೆ, "ದೇವದರ್ಶನ ಇಲ್ಲದಿರುವಲ್ಲಿ ಜನರು ನಾಶವಾಗುವರು, (ಜ್ಞಾನೋಕ್ತಿ 29:18)
ದೇವರು ನಮ್ಮ ಜೀವಿತದಲ್ಲಿ ತನ್ನ ಅಲೌಕಿಕ ಕಾರ್ಯವನ್ನು ಮಾಡುವ ಮೊದಲು, ನಾವು ನಮ್ಮ ಪ್ರಾಕೃತಿಕ ಕಾರ್ಯವನ್ನು ಮಾಡಬೇಕು.
ನೀವು ಲೂಕ 9:10-17 ಅನ್ನು ಓದಿದರೆ, ಕರ್ತನಾದ ಯೇಸು ಐದು ಸಾವಿರ ಜನರಿಗೆ ಆಹಾರವನ್ನು ನೀಡುವ ಪವಾಡವನ್ನು ಮಾಡುವ ಮೊದಲು, 14 ಮತ್ತು 15 ನೇ ವಾಕ್ಯಗಳು ನಮಗೆ ಹೇಳುವುದೇನೆಂದರೆ , "ಸುಮಾರು ಐದು ಸಾವಿರ ಜನರಿದ್ದರು. ನಂತರ ಅವನು ತನ್ನ ಶಿಷ್ಯರಿಗೆ, "ಅವರನ್ನು ಐವತ್ತು ಐವತ್ತು ಜನರ ಪಂಕ್ತಿಗಳಾಗಿ ಕೂಡ್ರಿಸಲು ಹೇಳಿದನು ಶಿಷ್ಯರು ಹಾಗೆ ಮಾಡಿದರು " ನೀವಿಲ್ಲಿ ಗಮನಿಸಿ ನೋಡಿ, ಶಿಷ್ಯರು ಕರ್ತನು ಹೇಳಿದ್ದನ್ನು ಮಾಡಬೇಕಾಗಿತ್ತು. ಕರ್ತನಾದ ಯೇಸು ಕ್ರಿಸ್ತನು ಮಾಡಿದ ಪ್ರತಿಯೊಂದೂ ಕಾರ್ಯವು ಕ್ರಮಬದ್ಧವಾದ ರೀತಿಯಲ್ಲಿತ್ತು.ಆದ್ದರಿಂದಲೆ ಅಲ್ಲಿ ರೊಟ್ಟಿ ಮತ್ತು ಮೀನು ಹೆಚ್ಚಳವಾದಾದರಲ್ಲಿ ಆಶ್ಚರ್ಯವೇ ಇಲ್ಲ.
ದಯವಿಟ್ಟು ಇದನ್ನು ನೆನಪಿನಲ್ಲಿಡಿ: ಎಲ್ಲಿ ಕೆಲಸಗಳನ್ನು ಕ್ರಮಬದ್ಧವಾಗಿ ಮಾಡಲಾಗುತ್ತದೆಯೋ ಅಲ್ಲಿ ದೇವರು ಯಾವಾಗಲೂ ಅಭಿವೃದ್ಧಿಯನ್ನು ತರುತ್ತಾನೆ. ಆದ್ದರಿಂದ ಇಂದು, ನಾನು ನನ್ನ ಕೆಲಸಗಳನ್ನು ಮಾಡುವ ರೀತಿಯಲ್ಲಿ ದೈವಿಕ ಕ್ರಮವಿದೆಯೇ? ಎಂದು ನಿಮ್ಮನ್ನು ನೀವು ಕೇಳಿಕೊಳ್ಳಿ.
"ಅವು ಶೂರರಂತೆ ಓಡಾಡುತ್ತವೆ; ಯೋಧರ ಹಾಗೆ ಗೋಡೆ ಏರುತ್ತವೆ; ನೂಕುನುಗ್ಗಲ್ಲಿಲ್ಲದೆ ತಮ್ಮ ತಮ್ಮ ಸಾಲುಗಳಲ್ಲಿಯೇ ನಡೆಯುತ್ತವೆ; ಆಯುಧಗಳ ನಡುವೆ ನುಗ್ಗುತ್ತವೆ. ಪಟ್ಟಣದಲ್ಲೆಲ್ಲಾ ತ್ವರೆಪಡುತ್ತವೆ, ಗೋಡೆಯ ಮೇಲೆ ಓಡಾಡುತ್ತವೆ, ಮನೆಗಳನ್ನು ಹತ್ತುತ್ತವೆ, ಕಿಟಕಿಗಳಿಂದ ಕಳ್ಳರಂತೆ ಪ್ರವೇಶಿಸುತ್ತವೆ. ಅವುಗಳ ಆಗಮನದಿಂದ ಭೂಮಿಯು ಕಂಪಿಸುತ್ತದೆ, ಆಕಾಶಮಂಡಲವು ನಡಗುತ್ತದೆ, ಸೂರ್ಯ ಮತ್ತು ಚಂದ್ರರು ಮಂಕಾಗುತ್ತಾರೆ, ಮತ್ತು ನಕ್ಷತ್ರಗಳು ಕಾಂತಿಗುಂದುತ್ತವೆ.ಯೆಹೋವನು ತನ್ನ ಸೈನ್ಯದ ಮುಂದೆ ಗುಡುಗಿನಂತೆ ಧ್ವನಿಗೈಯುತ್ತಾನೆ, ಆತನ ಸೈನ್ಯ ಬಹಳ ದೊಡ್ಡದಾಗಿದೆ; ಆತನ ಆಜ್ಞೆಯನ್ನು ಪಾಲಿಸುವವನು ಬಲಿಷ್ಠನಾಗಿದ್ದಾನೆ. ಯೆಹೋವನ ದಿನವು ಮಹತ್ತರವೂ ಮತ್ತು ಅತಿಭಯಂಕರವೂ ಆಗಿದೆ. ಅದನ್ನು ಸಹಿಸಿಕೊಳ್ಳುವವರು ಯಾರು?"(ಯೋವೇ 2:7-11)
11ನೇ ವಾಕ್ಯದಲ್ಲಿರುವ “ಯೆಹೋವನು ತನ್ನ ಸೈನ್ಯದ ಮುಂದೆ ಗುಡುಗಿನಂತೆ ಧ್ವನಿಗೈಯುತ್ತಾನೆ ” ಎಂಬ ಮಾತುಗಳನ್ನು ಗಮನಿಸಿ, ಇದು ಕರ್ತನ ಸೈನ್ಯದ ವಿವರಣೆ ಎಂಬುದಂತು ಸ್ಪಷ್ಟವಾಗುತ್ತದೆ.
ಈಗ ನೀವು 7 ಮತ್ತು 8 ನೇ ವಾಕ್ಯಗಳಲ್ಲಿನ ಪದಗುಚ್ಛಗಳನ್ನು ಎಚ್ಚರಿಕೆಯಿಂದ ಗಮನಿಸಬೇಕೆಂದು ನಾನು ಎದುರುನೋಡುತ್ತೇನೆ: "ಪ್ರತಿಯೊಬ್ಬರೂ ಸೈನ್ಯದ ಗುಂಪಿನಲ್ಲಿ ಸಾಲಾಗಿ ಹೊರಡುತ್ತಾರೆ ಮತ್ತು ಅವರು ತಮ್ಮ ಶ್ರೇಣಿಗಳನ್ನು ಮುರಿಯುವುದಿಲ್ಲ. ಅವರು ಒಬ್ಬರನ್ನೊಬ್ಬರು ತಳ್ಳುವುದಿಲ್ಲ; ಪ್ರತಿಯೊಬ್ಬರೂ ತಮ್ಮದೇ ಪಥದಲ್ಲಿ ಸಾಲಾಗಿ ಹೊರಡುತ್ತಾರೆ." ಕರ್ತನ ಸೈನ್ಯದಲ್ಲಿ ದೈವಿಕ ಕ್ರಮವಿದೆ ಎಂದು ಈ ವಾಕ್ಯಗಳು ನಮಗೆ ತಿಳಿಸುತ್ತವೆ. ಮತ್ತು ಕರ್ತನ ಸೈನ್ಯದಲ್ಲಿ ಅಂತಹ ದೈವಿಕ ಅನುಕ್ರಮ ಇರುವುದರಿಂದ, ಇದು ಸೈನ್ಯದಲ್ಲಿರುವ ಪರಿಣಾಮಕಾರಿತ್ವವನ್ನು ಹೆಚ್ಚಿಸುತ್ತದೆ. ನಾವು ಈ ದೈವಿಕ ಅನುಕ್ರಮ ತತ್ವವನ್ನು ಕಲಿಯಬೇಕು ಮತ್ತು ಅದನ್ನು ನಮ್ಮ ಜೀವನದ ಪ್ರತಿಯೊಂದು ಕ್ಷೇತ್ರಕ್ಕೂ ಅನ್ವಯಮಾಡಿಕೊಳ್ಳ ಬೇಕು.
ಉದಾಹರಣೆಗೆ: ನಿಮ್ಮ ದಾಖಲೆಗಳು ಕ್ರಮಬದ್ಧವಾಗಿವೆಯೇ? ನಿಮ್ಮ ಗಳಿಕೆ ಮತ್ತು ಖರ್ಚುಗಳ ದಾಖಲೆಯನ್ನು ನೀವು ನಿರ್ವಹಿಸುತ್ತೀರಾ? ನಿಮ್ಮ ಜೀವನದಲ್ಲಿ ಪ್ರತಿದಿನ ದೇವರಿಗೆ ಮೊದಲ ಸ್ಥಾನ ನೀಡುತ್ತೀರಾ? ಕೆಲಸಗಳನ್ನು ಮಾಡುವ ರೀತಿಯು ದೈವಿಕ ಕ್ರಮವಾಗಿದೆ. ಪ್ರಶಸ್ತ ವಿಷಯಗಳಿಗೆ ಮೊದಲು ಆದ್ಯತೆ ನೀಡಿರಿ !
#1. ದೈವಿಕ ಅನುಕ್ರಮವು ನಿಮ್ಮಲ್ಲಿ ಪರಿಣಾಮಕಾರಿತ್ವವನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಸಮೃದ್ದಿ ಯನ್ನು ತರುತ್ತದೆ.
#2. ದೈವಿಕ ಅನುಕ್ರಮವು ನಿಮ್ಮ ಜೀವನದಲ್ಲಿ ದೈವಿಕ ಶಾಂತಿಯನ್ನು ತರುತ್ತದೆ.
"ನಿನ್ನ ಧರ್ಮಶಾಸ್ತ್ರವನ್ನು ಪ್ರೀತಿಸುವವರಿಗೆ, ಸಂಪೂರ್ಣ ಸಮಾಧಾನವಿರುತ್ತದೆ, ಅಂಥವರಿಗೆ ವಿಘ್ನಕರವಾದದ್ದೇನೂ ಇರುವುದಿಲ್ಲ." (ಕೀರ್ತನೆ 119:165)
ಪ್ರಾರ್ಥನೆಗಳು
ತಂದೆಯೇ, ನನ್ನ ಜೀವನದ ಪ್ರತಿಯೊಂದು ಕ್ಷೇತ್ರವನ್ನು ಕ್ರಮವಾಗಿ ಹೊಂದಿಸಿ ಇದರಿಂದ ನಿಮ್ಮ ಮಹಿಮೆಯು ನನ್ನ ಜೀವನದಲ್ಲಿಯೂ ಮತ್ತು ನನ್ನ ಜೀವನದ ಮೂಲಕ ಇತರರಿಗೂ ಯೇಸುವಿನ ಹೆಸರಿನಲ್ಲಿ ಉಂಟಾಗಲಿ.ಆಮೆನ್.
Join our WhatsApp Channel
Most Read
● ಅಪರಾಧಗಳಿಗಿರುವ ಪರಿಪೂರ್ಣ ಪರಿಹಾರ.● ಅಲೌಖಿಕತೆಯನ್ನು ಬೆಳೆಸಿಕೊಳ್ಳುವುದು
● ದೇವರ ಕೃಪೆಯನ್ನು ಸೇದುವುದು
● ನಿಮ್ಮ ಆರಾಮದಾಯಕ ವಲಯದಿಂದ ಹೊರಬನ್ನಿ.
● ದೇವರ ರೀತಿಯ ಪ್ರೀತಿ
● ನೋವಿನಲ್ಲೂ ದೇವರಿಗೆ ಒಡಂಬಟ್ಟು ನಡೆಯುವುದನ್ನು ಕಲಿಯುವುದು
● ಆಳವಾದ ನೀರಿನೊಳಗೆ
ಅನಿಸಿಕೆಗಳು