ಅನುದಿನದ ಮನ್ನಾ
ಪ್ರಾರ್ಥನಾ ಹೀನತೆ ಎಂಬ ಪಾಪ
Saturday, 17th of August 2024
1
0
207
Categories :
ಪ್ರಾರ್ಥನೆ (prayer)
ಸ್ವಲ್ಪ ಕಲ್ಪಿಸಿ ನೋಡಿರಿ, ಯಾರಾದರೂ ಒಬ್ಬರು ನಿಮ್ಮೊಂದಿಗೆ ಎಂದೂ ಮಾತನಾಡದೆ ಇದ್ದರೂ ನಿಮ್ಮನ್ನು ಬಹಳ ಆಪ್ತ ಸ್ನೇಹಿತರೆಂದು ಹೇಳಿಕೊಂಡರೆ ಹೇಗಿರುತ್ತದೆ? ಯಾವುದೇ ಅಸ್ತಿತ್ವದಲ್ಲಿರುವ ಸ್ನೇಹವಾಗಲಿ ಸಂವಹನ ಇಲ್ಲದೆ ಹೋದರೆ ಖಂಡಿತವಾಗಿಯೂ ಹದಗೆಡುತ್ತದೆ. ಹಾಗೆಯೇ, ದೇವರೊಂದಿಗಿನ ಸಂಬಂಧವು ಕೂಡ ಸಂವ ಹನ ಇಲ್ಲದೆ ಹೋದರೆ ಅದು ಬಡಕಲಾದದ್ದೇ.
ಪ್ರಾರ್ಥನೆ ಇಲ್ಲದ ಜೀವಿತವು ಪಾಪವಾಗಿದೆ. ಇದರ ಕುರಿತು ನಾವು ಪ್ರಾಮಾಣಿಕವಾಗಿರಬೇಕು. ಪ್ರವಾದಿಯಾದ ಸಮುವೇಲನು ಇಸ್ರೇಲ್ ಜನರಿಗಾಗಿ ತಾನು ಪ್ರಾರ್ಥಿಸುವೆನೆಂದು ಭರವಸೆ ನೀಡಿದಾಗ ಇದನ್ನು ಸ್ಪಷ್ಟಪಡಿಸಿದನು :
"ನಾನಾದರೋ ನಿಮಗೋಸ್ಕರವಾಗಿ ಯೆಹೋವನನ್ನು ಪ್ರಾರ್ಥಿಸುತ್ತಾ ಆತನ ಉತ್ತಮ ನೀತಿಮಾರ್ಗವನ್ನು ನಿಮಗೆ ತೋರಿಸಿಕೊಡುವದನ್ನು ಬಿಡುವದೇ ಇಲ್ಲ; ಬಿಟ್ಟರೆ ಆತನ ದೃಷ್ಟಿಯಲ್ಲಿ ಪಾಪಿಯಾಗಿರುವೆನು."(1 ಸಮುವೇಲನು 12:23)
ದೇವಜನರಿಗಾಗಿ ಪ್ರಾರ್ಥನೆ ಮಾಡದೇ ಇರುವಂತದ್ದು ದೇವರ ವಿರೋಧವಾಗಿ ಮಾಡುವ ಪಾಪವಾಗಿದೆ ಎಂದು ಸಮುವೇಲನು ಕಂಡುಕೊಂಡಿದ್ದನು. ನೀವು ಒಬ್ಬ ಪಾಸ್ಟರ್ ಆಗಿದ್ದರೆ ಅಥವಾ ಗುಂಪಿನ ಮೇಲ್ವಿಚಾರಕರಾಗಿದ್ದರೇ ಅಥವಾ J -12 ಗುಂಪಿನ ನಾಯಕರಾಗಿದ್ದರೆ ನಾನು ನಿಮ್ಮ ಮುಂದೆ ನೇರವಾಗಿ ಹೇಳುವುದೇನೆಂದರೆ ದೇವರು ನಿಮಗಾಗಿ ಒಪ್ಪಿಸಿದ ಮಂದೇಗಾಗಿ ನೀವು ಪ್ರಾರ್ಥಿಸದೇ ಹೋದರೆ ಅದು ಪಾಪವಾಗಿದ್ದು ನೀವು ಅದರಿಂದ ಈಗಲೇ ಹಿಂದಿರುಗಿಕೊಳ್ಳಬೇಕಾಗಿದೆ.
ನಾಯಕರು ದೇವ ಜನರಿಗಾಗಿ ಪ್ರಾರ್ಥಿಸದೆ ಹೋದರೆ ನಾವು ಆತ್ಮಿಕ ಆಯಾಮಕ್ಕೆ ನಾವು ನಡೆಸುತ್ತಿರುವ ಜನರ ಕುರಿತು ನಮಗೆ ನಿಜವಾದ ಕಾಳಜಿ ಇಲ್ಲಾ ಎಂಬ ಸಂಜ್ಞೆಯನ್ನು ಕಳಿಸುವವರಾಗಿರುತ್ತೇವೆ.ಕರ್ತನಾದ ಯೇಸು "ಕುರುಬನಿಲ್ಲದ ಕುರಿಗಳಾಗಿದ್ದಾರಲ್ಲ" ಎಂಬುದಾಗಿ ಅಂತಹ ಮಂದೆಯನ್ನು ನೋಡಿ ಹೇಳಿದನು. (ಮತ್ತಾಯ 9:36)
ದೇವ ಜನರನ್ನು ನಡೆಸಬೇಕಿದ್ದ ಫರಿಸಾಯರು ತಮ್ಮದೇ ಆದ ಕಾರ್ಯಗಳಲ್ಲಿ ಮುಳುಗಿ ಹೋಗಿದ್ದರೆ ವಿನಃ ದೇವ ಜನರ ಖಯಾಲಿ ಅವರಿಗಿರಲಿಲ್ಲ.
ದೇವ ಜನರಿಗಾಗಿ ಪ್ರಾರ್ಥಿಸದೆ ಇರುವಂತದ್ದು ನಿಮ್ಮಲ್ಲಿ ದೇವರ ಕುರಿತು ಪ್ರೀತಿಯ ಕೊರತೆ ಇದೆ ಎಂಬುದನ್ನು ಎತ್ತಿ ತೋರಿಸುತ್ತದೆ. ಪ್ರಾರ್ಥನೆ ರಹಿತ ಜೀವಿತವು ನಿಮ್ಮಲ್ಲಿ ಅರಣ್ಯ ವಾಸ ಸ್ಥಿತಿಯನ್ನು ನಿಮಗೆ ಅರಿವಿಲ್ಲದೆ ನಿಮ್ಮೊಳಗೆ ನಿಧಾನವಾಗಿ ತರುತ್ತಿದೆ ಎಂಬುದನ್ನು ಸೂಚಿಸುವಂತಹದ್ದಾಗಿದೆ.
ಸಾಮಾನ್ಯವಾಗಿ ಸ್ವಸ್ಥತೆ ಬಿಡುಗಡೆ ಮತ್ತು ಪ್ರವಾದನೆ ಇರುವ ಸೇವಾಕೂಟದಲ್ಲಿ ನಾನು ಎಂದಿಗಿಂತಲೂ ಹೆಚ್ಚಾದ ಜನಸಂದಣಿಯನ್ನು ನೋಡುತ್ತೇನೆ. ಏಕೆಂದರೆ ಪ್ರತಿಯೊಬ್ಬರೂ ಸಹ ಬಿಡುಗಡೆ ಸ್ವಸ್ತತೆ ಮತ್ತು ಪ್ರವಾದನೆ ಇತ್ಯಾದಿಯನ್ನು ನಿರೀಕ್ಷಿಸುವಂತವರೇ ಆಗಿದ್ದಾರೆ. ( ಅದರಲ್ಲಿ ತಪ್ಪೇನಿಲ್ಲ).ಆದಾಗಿಯೂ ಮಧ್ಯಸ್ಥಿಕೆ ಪ್ರಾರ್ಥನಾ ಕೂಟಗಳಲ್ಲಿ ಭಾಗಿಯಾಗಲು ಕರೆದರೆ ಜನರು ಅದೇನೋ ಕಳಕೊಂಡಂತೆ ವರ್ತಿಸುತ್ತಾರೆ.
ನಾನೊಂದು ಸಂಗತಿಯನ್ನು ನಿಮಗೆ ಹೇಳಲೇ? ನಮ್ಮ ಜೀವನದಲ್ಲಿ ಪ್ರಾರ್ಥನಾ ಹೀನತೆಯು ಅಭ್ಯಾಸವಾದಾಗ ನಾವು ಒಬ್ಬರನ್ನೊಬ್ಬರು ಪ್ರೀತಿಸುವುದರಲ್ಲಿ ವಿಫಲರಾಗಿದ್ದೇವೆ ಎಂಬ ಅಪರಾಧಿಭಾವ ತರುತ್ತದೆ.ಇದು ಹೆಚ್ಚಾಗಿ ಮಧ್ಯಸ್ಥಿಕೆ ಪ್ರಾರ್ಥನೆಯ ಸಮಯದಲ್ಲಿ ಬಯಲಾಗುತ್ತದೆ.
"ಶೋಧನೆಗೆ ಒಳಗಾಗದಂತೆ ಎಚ್ಚರವಾಗಿದ್ದು ಪ್ರಾರ್ಥಿಸಿರಿ; ಮನಸ್ಸು ಸಿದ್ಧವಾಗಿದೆ ಸರಿ, ಆದರೆ ದೇಹಕ್ಕೆ ಬಲ ಸಾಲದು..." ಎಂದು ಮತ್ತಾಯ 26:41ರಲ್ಲಿ ಕರ್ತನಾದ ಯೇಸು ನಮ್ಮನ್ನು ಎಚ್ಚರಿಸುತ್ತಾನೆ. ಪ್ರಾರ್ಥನೆ ಹೀನತೆಯು ಶೋಧನೆಯ ಬಾಣವು ನಮ್ಮಲ್ಲಿ ಹೊಕ್ಕಲು ಅನುಮತಿಸಿ ನಮ್ಮನ್ನು ಪಾಪದ ಆಳತ್ವಕ್ಕೆ ತೆಗೆದುಕೊಂಡು ಹೋಗುತ್ತದೆ.
ಪ್ರಾರ್ಥನೆಗಳು
ತಂದೆಯೇ, ಪ್ರಾರ್ಥನೆ ಇಲ್ಲದೆ ಕಳೆದ ಎಲ್ಲಾ ಸಮಯಕ್ಕಾಗಿ ನನ್ನನ್ನು ಯೇಸು ನಾಮದಲ್ಲಿ ಕ್ಷಮಿಸು.
ತಂದೆಯೇ ನಾನು ಪ್ರಾರ್ಥಿಸದಂತೆ ಮಾಡುವ ಎಲ್ಲಾ ಅಡೆತಡೆಗಳನ್ನು ಯೇಸು ನಾಮದಲ್ಲಿ ನಿರ್ಮೂಲ ಮಾಡು.
ತಂದೆಯೇ, ನನ್ನಲ್ಲಿರುವ ಪ್ರಾರ್ಥನಾ ಹೀನತೆಯ ಆತ್ಮವು ಯೇಸು ನಾಮದಲ್ಲಿ ನಿನ್ನ ಪವಿತ್ರಾತ್ಮನ ಅಗ್ನಿಯ ಮೂಲಕ ಸುಟ್ಟು ಬೂದಿಯಾಗಲಿ.ತಂದೆಯೇ, ನಾನು ಪ್ರಾರ್ಥಿಸಲು ಅಡ್ಡಿ ಮಾಡುವ ನನ್ನ ಜೀವಿತದಲ್ಲಿರುವ ಎಲ್ಲ ದುರಾತ್ಮನ ದ್ವಾರಗಳನ್ನು ಯೇಸು ನಾಮದಲ್ಲಿ ಯೇಸುವಿನ ಪರಿಶುದ್ಧ ರಕ್ತದ ಮೂಲಕ ಮುಚ್ಚುತ್ತೇನೆ. ಆಮೇನ್.
ತಂದೆಯೇ ನಾನು ಪ್ರಾರ್ಥಿಸದಂತೆ ಮಾಡುವ ಎಲ್ಲಾ ಅಡೆತಡೆಗಳನ್ನು ಯೇಸು ನಾಮದಲ್ಲಿ ನಿರ್ಮೂಲ ಮಾಡು.
ತಂದೆಯೇ, ನನ್ನಲ್ಲಿರುವ ಪ್ರಾರ್ಥನಾ ಹೀನತೆಯ ಆತ್ಮವು ಯೇಸು ನಾಮದಲ್ಲಿ ನಿನ್ನ ಪವಿತ್ರಾತ್ಮನ ಅಗ್ನಿಯ ಮೂಲಕ ಸುಟ್ಟು ಬೂದಿಯಾಗಲಿ.ತಂದೆಯೇ, ನಾನು ಪ್ರಾರ್ಥಿಸಲು ಅಡ್ಡಿ ಮಾಡುವ ನನ್ನ ಜೀವಿತದಲ್ಲಿರುವ ಎಲ್ಲ ದುರಾತ್ಮನ ದ್ವಾರಗಳನ್ನು ಯೇಸು ನಾಮದಲ್ಲಿ ಯೇಸುವಿನ ಪರಿಶುದ್ಧ ರಕ್ತದ ಮೂಲಕ ಮುಚ್ಚುತ್ತೇನೆ. ಆಮೇನ್.
Join our WhatsApp Channel
Most Read
● ಆತ್ಮೀಕ ಚಾರಣ● ನಂಬಿಕೆಯಲ್ಲಿಯೋ ಅಥವಾ ಭಯದಲ್ಲಿಯೋ
● ಕರ್ತನು ಎಂದಿಗೂ ಕೈ ಬಿಡುವುದಿಲ್ಲ
● ಹೋಲಿಕೆಯ ಬಲೆ
● ನಮ್ಮ ಆಯ್ಕೆಯ ಪರಿಣಾಮಗಳು
● ಅನ್ಯ ಭಾಷೆಯಲ್ಲಿ ಪ್ರಾರ್ಥಿಸಿ ಮತ್ತು ಆತ್ಮಿಕವಾದ ನವಚೇತನವನ್ನು ಹೊಂದಿಕೊಳ್ಳಿರಿ
● ಹಣವು ಚಾರಿತ್ರ್ಯವನ್ನು ವಿವರಿಸುತ್ತದೆ
ಅನಿಸಿಕೆಗಳು