ಅನುದಿನದ ಮನ್ನಾ
ಕರ್ತನಾದ ಯೇಸುಕ್ರಿಸ್ತನನ್ನು ಅನುಕರಣೆ ಮಾಡುವುದು ಹೇಗೆ
Wednesday, 17th of July 2024
2
1
217
Categories :
ಪ್ರಾರ್ಥನೆ (prayer)
ಜನರು ಯಾವಾಗಲೂ ತಮ್ಮ ಮನಸ್ಸಿನ ಮುಂದೆ ಒಬ್ಬ ನಿರ್ದಿಷ್ಟ ವ್ಯಕ್ತಿಯನ್ನು ನೆನೆಸಿಕೊಂಡು ಅವರ ಹಾಗೆಯೇ ಇರಲು ಬಯಸುತ್ತಾರೆ ಮತ್ತು ಪ್ರಯತ್ನಿಸುತ್ತಿರುತ್ತಾರೆ. ಅಂತಹ ವ್ಯಕ್ತಿಗಳನ್ನು "ಆದರ್ಶ ವ್ಯಕ್ತಿಗಳು" ಎಂದು ಕರೆಯಲಾಗುತ್ತದೆ. ಅದು ಅವರ ಪಾಸ್ಟರ್ ಆಗಿರಬಹುದು, ಅವರ ಕೆಲಸದ ಮೇಲಾಧಿಕಾರಿಯಾಗಿರಬಹುದು, ಒಬ್ಬ ಪ್ರಸಿದ್ಧ ವ್ಯಾಪಾರ ಉದ್ಯಮಿಯಾಗಿರಬಹುದು, ದೇಶದ ಪ್ರಧಾನ ಮಂತ್ರಿಯಾಗಿರಬಹುದು, ಶಿಕ್ಷಣ ತಜ್ಞರಾಗಿರಬಹುದು, ಇತ್ಯಾದಿ ಯಾವುದೋ ಒಬ್ಬ ಪ್ರಸಿದ್ಧ ವ್ಯಕ್ತಿಯಾಗಿರಬಹುದು. ಆದಾಗಿಯೂ ನಮ್ಮ ಕ್ರಿಸ್ತೀಯ ಜೀವಿತದಲ್ಲಿ ನಾವು ಎದುರು ನೋಡುವ ಮಹೋನ್ನತ ವ್ಯಕ್ತಿಯೊಬ್ಬನಿದ್ದಾನೆ. ಆತನೇ, ನಮ್ಮಲ್ಲಿ ನಂಬಿಕೆಯನ್ನು ಹುಟ್ಟಿಸುವವನೂ ಪೂರೈಸುವವನೂ ಆದ ಕರ್ತನಾದ ಯೇಸುಕ್ರಿಸ್ತನು. ಆತನೇ ನಮಗಿರುವಂತಹ ಪರಿಪೂರ್ಣವಾದ ಮಾದರಿ ವ್ಯಕ್ತಿ -ಆದರ್ಶವ್ಯಕ್ತಿ. (ಇಬ್ರಿಯ 12:2)
ನಮ್ಮ ಆದರ್ಶ ವ್ಯಕ್ತಿಯಾದ ಕರ್ತನಾದ ಯೇಸುಕ್ರಿಸ್ತನು ನಾವೀಗ ವಾಸಿಸುತ್ತಿರುವ ಈ ಭೂಮಿಯ ಮೇಲೆ ಇದ್ದಾಗ ಪ್ರಾರ್ಥನಾ ಪರವ್ಯಕ್ತಿಯಾಗಿ ಜೀವಿಸಿದ್ದನು. ನಾವು ದೇವರೊಂದಿಗೆ ಹೇಗೆ ನಿಕಟವಾದ ಸಂವಹನದಲ್ಲಿ ಇರಬೇಕು, ಪ್ರಾರ್ಥನೆಯಲ್ಲಿ ಹೇಗೆ ಆತನೊಂದಿಗೆ ಅನ್ಯೋನ್ಯತೆಯಲ್ಲಿ ಇರಬೇಕೆಂಬ ಮಾದರಿಯನ್ನು ಆತನೇ ನಮಗೆ ತೋರಿಸಿಕೊಟ್ಟಿದ್ದಾನೆ.
ಆತನು ಹೇಗೆ ತನ್ನ ಸಮಯವನ್ನು ಪ್ರಾರ್ಥನೆಯಲ್ಲಿ ಕಳೆಯುತ್ತಿದ್ದನು ಎಂಬ ಅನೇಕ ಸಂದರ್ಭಗಳನ್ನು ಸತ್ಯವೇದದಲ್ಲಿ ನಾವು ಕಾಣಬಹುದು. ಆ ರೀತಿಯ ಒಂದು ಸಂದರ್ಭ ಲೂಕ 9:8 ರಲ್ಲಿ ದಾಖಲಿಸಲ್ಪಟ್ಟಿದೆ. "ಯೇಸು ಈ ಮಾತುಗಳನ್ನು ಹೇಳಿ ಸುಮಾರು ಎಂಟು ದಿವಸಗಳಾದ ಮೇಲೆ ಪೇತ್ರ ಯೋಹಾನ ಯಾಕೋಬರನ್ನು ಕರಕೊಂಡು ಪ್ರಾರ್ಥನೆಮಾಡುವದಕ್ಕೆ ಬೆಟ್ಟವನ್ನು ಹತ್ತಿದನು." ಇದೇ ರೀತಿಯ ಮತ್ತೊಂದು ಸಂದರ್ಭವಿದೆ.. "ಆ ದಿವಸಗಳಲ್ಲಿ ಆತನು ಪ್ರಾರ್ಥನೆ ಮಾಡುವದಕ್ಕಾಗಿ ಬೆಟ್ಟಕ್ಕೆ ಹೋಗಿ ರಾತ್ರಿಯನ್ನೆಲ್ಲಾ ಪ್ರಾರ್ಥನೆಯಲ್ಲೇ ಕಳೆದನು."(ಲೂಕ 6:12).
ಹೀಗೆ ಬೇರೆ ಬೇರೆ ಸಮಯಗಳಲ್ಲೂ ಜನರ ಗುಂಪಿಗೆಲ್ಲಾ ಬೋಧಿಸಿದ ನಂತರ ದೇವರೊಂದಿಗೆ ಸಂವಹನ ನಡೆಸುವುದಕ್ಕಾಗಿಯೇ ಆತನು ಗುಂಪಿನಿಂದ ತನ್ನನ್ನು ಪ್ರತ್ಯೇಕಿಸಿಕೊಳ್ಳುತ್ತಿದ್ದನು. ಇವೆಲ್ಲವೂ ಒಟ್ಟಾರೆಯಾಗಿ ನಮಗೆ ಪ್ರಕಟಿಸುವುದೇನೆಂದರೆ ನಾವು ದೇವರೊಂದಿಗೆ ನಿರಂತರವಾಗಿ ಪ್ರಾರ್ಥನೆಯಲ್ಲಿ ಸಂವಹನವನ್ನು ಇಟ್ಟುಕೊಳ್ಳದೆ ಹೋದರೆ, ನಾವು ನಮ್ಮ ಸೇವಾ ಕಾರ್ಯಗಳನ್ನು ಮಾಡಲಾರೆವು ಎಂಬುದೇ. ಇದುವೇ ಅನಿವಾರ್ಯವಾದ ಕಾರ್ಯ.
ಹೇಗೂ, ನಿಜವಾದ ಅನುಕರಣೆ ಎಂಬುದು ಕೇವಲ ಒಬ್ಬರ ನಡವಳಿಕೆಯ ಮಾದರಿಗಳನ್ನು ಅಭಿನಯಿಸುವುದಷ್ಟನ್ನೇ ಒಳಗೊಂಡಿರದೇ ಅವರ ನಡವಳಿಕೆಗಳ ಹಿಂದಿನ ಉದ್ದೇಶಗಳನ್ನೂ ಸಹ ಅನುಕರಿಸುವಂತದ್ದಾಗಿರುತ್ತದೆ. ಯೇಸುವಿನ ಪ್ರಾರ್ಥನಾ ಜೀವಿತವನ್ನು ಅನುಕರಣೆ ಮಾಡುವಂತದ್ದು ಒಳ್ಳೆಯದೇ. ಯಾಕೆಂದರೆ ಆತನೇ ನಮಗೆ ಪರಿಪೂರ್ಣವಾದ ಮಾದರಿ. ಹೇಗೂ ನಾವು ಅನುಕರಣೆಗಳಿಗಿಂತಲೂ ಇನ್ನು ಉನ್ನತಕ್ಕೆ ಏರಬೇಕು ಮತ್ತು "ಏಕೆ" ಎನ್ನುವ ಪ್ರಶ್ನೆಗಳನ್ನು ಹಾಕಿಕೊಂಡು ಅದರರ್ಥ ಗಳನ್ನು ಆಳವಾಗಿ ಪರಿಶೀಲಿಸಿ ನೋಡಬೇಕು. ನಾವು "ಯೇಸು ಸ್ವಾಮಿಯು ಏಕೆ ಪ್ರಾರ್ಥಿಸುತ್ತಿದ್ದನು" ಎಂಬುದನ್ನು ಆಳವಾಗಿ ಬಗೆದು ನೋಡುವಾಗ ನಮ್ಮ ಅನುಕರಣೆಗಳಲ್ಲಿ ಸ್ಥಿರತೆ, ಬಲ ಮತ್ತು ಯೇಸು ಸ್ವಾಮಿಯು ತನ್ನ ಜೀವನ ಮತ್ತು ಸೇವೆಯ ಮೂಲಕ ಪ್ರದರ್ಶಿಸಿದ ಆತನ ಗುಣನಡತೆಗಳನ್ನೂ ಸಹ ಅದು ಹೊತ್ತು ತರುತ್ತದೆ. ಯೇಸು ಸ್ವಾಮಿಯು ತನ್ನ ತಂದೆಯಾದ ದೇವರನ್ನು ಅತಿಯಾಗಿ ಪ್ರೀತಿಸುತ್ತಿದ್ದ ಕಾರಣ ಆತನು ಯಾವಾಗಲೂ ಪ್ರಾರ್ಥನೆ ಮಾಡಲು ಹೋಗುತ್ತಿದ್ದನು.
ಪ್ರೀತಿಯ ಉದ್ದೇಶವಿಲ್ಲದೆ ಮಾಡುವಂತಹ ನಮ್ಮ ಎಲ್ಲಾ ಅನುಕರಣೆಗಳು ಕೇವಲ ಗದ್ದಲವಷ್ಟೇ. ಇದರಿಂದ ಭೂಮಿಯ ಮೇಲಿನ ಮನುಷ್ಯರನ್ನು ಮೆಚ್ಚಿಸಬಹುದು ಆದರೆ ದೇವರ ಮುಂದೆ ಅದು ಕೇವಲ ಗದ್ದಲವಾಗಿರುತ್ತದೆ. (1ಕೊರಿಯಂತೆ 13:1)
ಪ್ರೀತಿಯು, ನಾವು ಪ್ರತೀದಿನ ಮಾಡುವ ಪ್ರಾರ್ಥನೆಯ ಆರಾಧನೆಯ ವಾಕ್ಯ ಧ್ಯಾನ ಹಾಗೂ ಅದಕ್ಕೆ ವಿದೇಯತೆ ತೋರುವ ಮೂಲಕ ಕರ್ತನೊಂದಿಗೆ ಹೊಂದಿಕೊಂಡಂತಹ ನಮ್ಮ ವೈಯಕ್ತಿಕ ಬಾಂಧವ್ಯವನ್ನು ಒಳಗೊಂಡಿರುತ್ತದೆ. ದೇವರೊಟ್ಟಿಗೆ ನಾವು ಒಂದು ನಿಜವಾದ ವೈಯಕ್ತಿಕ ಬಾಂಧವ್ಯ ಹೊಂದಿಲ್ಲದೆ ಹೋದರೆ ನಮ್ಮ ಜೀವಿತವು ಕೇವಲ ಮಿಮಿಕ್ರಿ ಕಲಾವಿದರ ಹಾಗೆ ಕೊನೆಗೊಳ್ಳುತ್ತದೆ ಅಷ್ಟೇ. ಕರ್ತನನ್ನು ನಿಜವಾಗಿ ಅನುಕರಣೆ ಮಾಡುವಂತದ್ದು ಅನುದಿನವೂ ಆತನ ನೋಗವನ್ನು ನಮ್ಮ ಮೇಲೆ ತೆಗೆದುಕೊಂಡು ಆತನಿಂದ ದಿನನಿತ್ಯ ಕಲಿಯುವಂತದ್ದನ್ನು ಒಳಗೊಂಡಿರುತ್ತದೆ. ಆಗ ಮಾತ್ರವೇ ನಾವು ಆತನ ವಿಶ್ರಾಂತಿಯಲ್ಲಿ ಸೇರಬಹುದು. (ಮತ್ತಾಯ 11:29)
ನೀವು ನಮ್ಮ ಕರ್ತನಾದ ಯೇಸುಕ್ರಿಸ್ತನನ್ನು ಕ್ರಿಯೆಯಲ್ಲಿಯೂ, ಉದ್ದೇಶದಲ್ಲೂ ಅನುಕರಣೆ ಮಾಡಬೇಕೆಂದು ನಿಮ್ಮನ್ನು ನಾನು ಉತ್ತೇಜಿಸುತ್ತೇನೆ.
ನೀವು ಹೀಗೆ ಮಾಡುವುದಾದರೆ ನಿಮ್ಮನ್ನು ಇನ್ನೂ ಹೆಚ್ಚು ಹೆಚ್ಚಾಗಿ ಬಲಪಡಿಸಬೇಕೆಂದು ನಾನು ಕರ್ತನಲ್ಲಿ ನಿಮಗಾಗಿ ಪ್ರಾರ್ಥಿಸುವೆನು.
ಪ್ರಾರ್ಥನೆಗಳು
ತಂದೆಯೇ, ನಿನ್ನ ಬಾಯಿಂದ ಹೊರಟ ಈ ಮಾತುಗಳಿಗಾಗಿ(ರೆಮಾ) ನಿಮಗೆ ಸ್ತೋತ್ರ. ಕರ್ತನಾದ ಯೇಸುಕ್ರಿಸ್ತನನ್ನು ಕ್ರಿಯೆಯಲ್ಲಿಯೂ ಉದ್ದೇಶಗಳಲ್ಲಿಯೂ ನಾನು ಅನುಕರಣೆ ಮಾಡುವಂತೆ ನನಗೆ ಸಹಾಯ ಮಾಡು. ಕರ್ತನೇ ಯೇಸು ನಾಮದಲ್ಲಿ ನನ್ನನ್ನು ಬಲಪಡಿಸು. ಆಮೇನ್.
Join our WhatsApp Channel
Most Read
● ಆರಂಭಿಕ ಹಂತದಲ್ಲಿಯೇ ಕರ್ತನನ್ನು ಕೊಂಡಾಡಿರಿ● ಅತ್ಯುನ್ನತವಾದ ರಹಸ್ಯ
● ದಿನ 10:40 ದಿನಗಳ ಉಪವಾಸ ಪ್ರಾರ್ಥನೆ.
● ಓಟವನ್ನು ಗೆಲ್ಲಲು ಇರುವ ದೀರ್ಘ ತಾಳ್ಮೆ ಮತ್ತು ದೀರ್ಘ ಪ್ರಯತ್ನ ಎಂಬ ಎರಡು ಪದಗಳು.
● ಕೃಪೆಯನ್ನು ತೋರಿಸುವ ಪ್ರಾಯೋಗಿಕ ವಿಧಾನ.
● ದಿನ 17:40 ದಿನಗಳ ಉಪವಾಸ ಪ್ರಾರ್ಥನೆ
● ಚಿಕ್ಕ ಸಂಗತಿಗಳೂ ಸಹ ಮಹತ್ತರ ಉದ್ದೇಶಗಳನ್ನು ಪೂರೈಸಬಲ್ಲವು.
ಅನಿಸಿಕೆಗಳು