ಅನುದಿನದ ಮನ್ನಾ
2
0
172
ಜಯಿಸುವ ನಂಬಿಕೆ
Tuesday, 29th of July 2025
Categories :
ಕ್ರಿಸ್ತನಲ್ಲಿ ನಮ್ಮ ಗುರುತು (our identity in Christ)
"ಯಾಕಂದರೆ ದೇವರಿಂದ ಹುಟ್ಟಿರುವಂಥದೆಲ್ಲವು ಲೋಕವನ್ನು ಜಯಿಸುತ್ತದೆ. ಲೋಕವನ್ನು ಜಯಿಸಿದಂಥದು ನಮ್ಮ ನಂಬಿಕೆಯೇ. ಯೇಸುವು ದೇವರ ಮಗನೆಂದು ನಂಬಿದವರೇ ಅಲ್ಲದೆ ಲೋಕವನ್ನು ಜಯಿಸುವವರು ಇನ್ನಾರಿದ್ದಾರೆ?". (1 ಯೋಹಾನ 4:4-5)
ಪ್ರಕಟನೆ 2 ಮತ್ತು 3 ನೇ ಅಧ್ಯಾಯಗಳಲ್ಲಿ, ಕರ್ತನಾದ ಯೇಸು ಏಳು ಸಭೆಗಳನ್ನು ಉದ್ದೇಶಿಸಿ ಮಾತನಾಡುತ್ತಾನೆ. ಪ್ರತಿಯೊಂದು ಸಭೆಯೊಂದಿಗೂ, ಜಯಹೊಂದುವ ಎಲ್ಲರಿಗೂ ಒಂದು ವಾಗ್ದಾನವಿದೆ. ನಿಮ್ಮೊಂದಿಗೆ ತುಂಬಾ ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಅನೇಕ ಬಾರಿ, ಈ ವಾಗ್ದಾನಗಳಿಂದ ನಾನು ಸ್ವಲ್ಪ ಭಯಭೀತರಾಗಿದ್ದೇನೆ ಏಕೆಂದರೆ ಅವು ಸ್ವಲ್ಪಮಟ್ಟಿಗೆ ಷರತ್ತುಬದ್ಧ ವಾಗ್ದಾನಗಳಾಗಿವೆ ಎಂದು ನಾನು ಭಾವಿಸಿದ್ದೆ. ನೋಡಿ:
"ಜಯಹೊಂದಿದವನಿಗೆ ದೇವರ ಪರದೈಸಿಯ ಮಧ್ಯದಲ್ಲಿರುವ ಜೀವವೃಕ್ಷದ ಹಣ್ಣನ್ನು ತಿನ್ನಲು ಕೊಡುವೆನು.” (ಪ್ರಕಟನೆ 2:7)
"ಜಯಹೊಂದಿದವನಿಗೆ ಎರಡನೇ ಮರಣದಿಂದ ಯಾವುದೇ ಹಾನಿಯಾಗುವುದಿಲ್ಲ. (ಪ್ರಕಟನೆ 2:11)
"ಜಯಹೊಂದಿದವನಿಗೆ, ನಾನು ಬಚ್ಚಿಟ್ಟ ಮನ್ನವನ್ನು ತಿನ್ನಲು ಕೊಡುವೆನು. ಮತ್ತು ನಾನು ಅವನಿಗೆ ಬಿಳಿ ಕಲ್ಲನ್ನು ಕೊಡುವೆನು (ಪ್ರಕಟನೆ 2:17)
ಯಾವನು ಜಯಶಾಲಿಯಾಗಿದ್ದು ನನಗೆ ಮೆಚ್ಚಿಕೆಯಾದ ಕೃತ್ಯಗಳನ್ನು ಕಡೇವರೆಗೂ ನಡಿಸುತ್ತಾನೋ ಅವನಿಗೆ ನಾನು ನನ್ನ ತಂದೆಯಿಂದ ಹೊಂದಿದ ಅಧಿಕಾರದಂತೆ ಜನಾಂಗಗಳ ಮೇಲೆ ಅಧಿಕಾರವನ್ನು ಕೊಡುವೆನು.I (ಪ್ರಕಟನೆ 2:26) ..
"ಜಯಶಾಲಿಗೆ ಹೀಗೆ ಶುಭ್ರವಸ್ತ್ರಗಳನ್ನು ಹೊದಿಸುವರು. ಜೀವಬಾಧ್ಯರ ಪಟ್ಟಿಯಿಂದ ಅವನ ಹೆಸರನ್ನು ನಾನು ಅಳಿಸಿಬಿಡದೆ ಅವನು ನನ್ನವನೆಂದು ನನ್ನ ತಂದೆಯ ಮುಂದೆಯೂ ಆತನ ದೂತರ ಮುಂದೆಯೂ ಒಪ್ಪುವೆನು."(ಪ್ರಕಟನೆ 3:5)
"ಯಾವನು ಜಯ ಹೊಂದುತ್ತಾನೋ ಅವನನ್ನು ನನ್ನ ದೇವರ ಆಲಯದಲ್ಲಿ ಸ್ತಂಭವಾಗಿ ನಿಲ್ಲಿಸುವೆನು;.... (ಪ್ರಕಟನೆ 3:12)
(ಪ್ರಕಟನೆ 3:21)
ಹೀಗಿದ್ದರೂ, ನಾನು 1 ಯೋಹಾನ 5:4-5 ಅನ್ನು ಓದಿದಾಗ, ಅದು ನನ್ನ ಆತ್ಮಕ್ಕೆ ಬಿಡುಗಡೆ ತಂದಿತು. ಜಯಶಾಲಿ ಎಂದು ಪಟ್ಟಿ ಮಾಡಲು ಅರ್ಹತೆ ಪಡೆಯುವುದು ಯೇಸುಕ್ರಿಸ್ತನ ಪೂರ್ಣಗೊಂಡ ಕೆಲಸದಲ್ಲಿ ನಮ್ಮ ನಂಬಿಕೆಯನ್ನು ಇಡುವುದು ಎಂಬುದಾಗಿ ನಾನು ಅರಿತುಕೊಂಡೆ.
ಯೇಸು ನಮ್ಮೆಲ್ಲಗಾಗಿ ಶಿಲುಬೆಯಲ್ಲಿ ಮಾಡಿದ್ದಕ್ಕೆ ನೀವು ಮತ್ತು ನಾನು ಏನನ್ನೂ ಸೇರಿಸಲು ಅಥವಾ ತೆಗೆಯಲು ಸಾಧ್ಯವಿಲ್ಲ. ಜಯಿಸಿ' ಎಂಬುದು ಒಂದು ಪ್ರಬಲ ಪದ, ಮತ್ತು ದೇವರ ಮಕ್ಕಳಾದ ನಾವು ಜಯಶಾಲಿಗಳಾಗಲೆಂದೇ ಕರೆಯಲ್ಪಟ್ಟಿದ್ದೇವೆ. ಯೇಸು ಕ್ರಿಸ್ತನ ಮರಣ ಮತ್ತು ಪುನರುತ್ಥಾನವು ನಮಗೆ ಈ ಲೋಕದಲ್ಲಿ ಜಯಶಾಲಿಗಳಾಗಿ ಬದುಕಲು ಶಕ್ತಿಯನ್ನು ನೀಡಿದೆ.
Bible Reading: Isaiah 19-23
ಅರಿಕೆಗಳು
ತಂದೆಯೇ, ನಾನು ಎದುರಿಸುತ್ತಿರುವ ಪ್ರತಿಯೊಂದು ಸನ್ನಿವೇಶ ಮತ್ತು ಪರಿಸ್ಥಿತಿಯ ಮೇಲೆಯೂ ಯೇಸು ನನಗಾಗಿ ಸಂಪಾದಿಸಿದ ವಿಜಯವನ್ನು ಯೇಸುವಿನ ಹೆಸರಿನಲ್ಲಿ ಘೋಷಿಸುತ್ತೇನೆ. ಆಮೆನ್.
Join our WhatsApp Channel

Most Read
● ಸರ್ವಶಕ್ತನಾದ ದೇವರ ಅದ್ಬುತ ಸಮಾಗಮ.● ನಿಮ್ಮ ಜೀವನವನ್ನು ಬದಲಾಯಿಸಬೇಕೆಂದರೆ ಯಜ್ಞವೇಧಿಗೆ ಆದ್ಯತೆ ನೀಡಿ
● ನಿಮ್ಮ ಜೀವದದಲ್ಲಿ ಎಂದೂ ಅಳಿಯದಂತ ಬದಲಾವಣೆಯನ್ನು ತರುವುದು ಹೇಗೆ?- 2
● ದಿನ 11:40 ದಿನಗಳ ಉಪವಾಸ ಪ್ರಾರ್ಥನೆ.
● ಅಶ್ಲೀಲತೆಯಿಂದ ಬಿಡುಗಡೆ ಕಡೆಗಿನ ಪಯಣ
● ದಿನ 19:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ನಿಮ್ಮ ರಕ್ಷಣೆಯ ದಿನವನ್ನು ಸಂಭ್ರಮಿಸಿ.
ಅನಿಸಿಕೆಗಳು