"ಒಂದು ಮನೆಯನ್ನು ಸುಡಲು ನಿಮಗೆ ಪೆಟ್ರೋಲ್ನ ಅಗತ್ಯವಿಲ್ಲ. ನಿಮ್ಮ ಮಾತೆ ಸಾಕು" ಎಂದು ಒಬ್ಬರು ಹೇಳಿದ್ದಾರೆ. ಈ ಮಾತು ಎಷ್ಟೊಂದು ಸತ್ಯ! ನಿಮ್ಮ ಬಾಯಿಯ ಮಾತುಗಳಿಂದ ಕಟ್ಟಲೂ ಬಹುದು. ನಾಶ ಮಾಡಲು ಬಹುದು.ಮಾತುಗಳು ಬಹಳ ಶಕ್ತಿಯುತವಾದವುಗಳಾಗಿವೆ. ವಿಶೇಷವಾಗಿ ಸಂಬಂಧಗಳ ವಿಚಾರದಲ್ಲಿ ಅದು ಇನ್ನಷ್ಟು ಸತ್ಯವಾಗಿದೆ. ಮಾತುಗಳಲ್ಲಿ ಸ್ವಸ್ಥ ಪಡಿಸುವ ಪುನಸ್ತಾಪಿಸುವ ಶಕ್ತಿ ಇದೆ ಮತ್ತು ಇನ್ನೊಂದೆಡೆ ಆ ಮಾತುಗಳಿಗೆ ಕತ್ತರಿಸುವಂತಹ ಗಾಯಪಡಿಸುವಂತಹ ಶಕ್ತಿಯೂ ಇದೆ.
"ನೀತಿಯ ನುಡಿಗಳು ಎಷ್ಟೋ ಖಂಡಿತವಾಗಿವೆ"(ಯೋಬನು 6:25)
ನಾನು ಸಾಮಾನ್ಯವಾಗಿ ಜನರು "ನನ್ನ ಹೃದಯದಲ್ಲಿ ನಾನು ಏನನ್ನು ಇಟ್ಟುಕೊಳ್ಳುವುದಿಲ್ಲ. ನನಗೆ ಆ ಕ್ಷಣಕ್ಕೆ ಏನನಿಸುತ್ತದೆಯೋ ಹಾಗೆ ಅದನ್ನು ಹೇಳಿ ಮುಗಿಸುತ್ತೇನೆ" ಎಂದು ಹೇಳುವುದನ್ನು ಕೇಳುತ್ತಿರುತ್ತೇನೆ. ಮೇಲ್ಮುಖವಾಗಿ ನೋಡಲು ಇದು ನಿಜಕ್ಕೂ ಒಳ್ಳೆಯದು ಕೇಳಲು ಹಿತವಾದದ್ದು ಎಂದು ಅನಿಸುತ್ತದೆ. ಆದರೆ ವಾಸ್ತವವಾಗಿ ಇದು ನಿಜಕ್ಕೂ ಬಹಳ ನೋವನ್ನು ಕೊಡುವ ಬಹು ದಿನಗಳವರೆಗೂ ವಾಸಿಯಾಗದಂತ ಗಾಯವನ್ನು ಮಾಡುತ್ತದೆ. ಸತ್ಯವೇದವು ನಮಗೆ ಸತ್ಯವನ್ನೇ ಮಾತನಾಡಬೇಕೆಂದು ಆಜ್ಞಾಪಿಸಿದ್ದರೂ ನಾವು ಆ ಸತ್ಯವನ್ನು ಪ್ರೀತಿಯಿಂದ ಆಡುವುದನ್ನು ಕಲಿಯಬೇಕು. ನಾವೀಗೆ ಮಾಡುವುದರಿಂದ ನಾವು ಇನ್ನೂ ಹೆಚ್ಚು ಹೆಚ್ಚಾಗಿ ಕರ್ತನ ಸಾರುಪ್ಯಕ್ಕೆ ಸಾಗುತ್ತೇವೆ.(ಎಫಸ್ಸೆ 4:15)
ಬಹಳ ಸಾಮಾನ್ಯವಾಗಿ ನಾವು ನಮಗೆ ಹತ್ತಿರವಾದರೊಡನೆ ಬಹಳ ಅಗೌರವದಿಂದ ನಡೆದುಕೊಳ್ಳುತ್ತೇವೆ. ನಾವು ಅವರನ್ನು ಬಹಳ ಸಾಮಾನ್ಯವಾಗಿ ಪರಿಗಣಿಸಿ ಮನಸ್ಸೋ ಇಚ್ಛೆ ನಡೆಸಿಕೊಳ್ಳುತ್ತೇವೆ. ಅವರನ್ನು ಹೆಸರಿಡಿದು ಕರೆಯುತ್ತೇವೆ ಧನ್ಯವಾದಗಳನ್ನು ಹೇಳುವುದನ್ನು ಕೂಡ ಮಾಡುವುದಿಲ್ಲ. ನಮ್ಮಲ್ಲಿ ಅನೇಕರು ಅಪರಿಚಿತದೊಂದಿಗೆ ಹೊಂದಿಕೊಂಡು ಹೋಗಿಬಿಡುತ್ತಾರೆ. ಆದರೆ ತಮ್ಮವರೇ ಆದವರ ಜೊತೆ ಹೊಂದಾಣಿಕೆಯಂದಿರಲು ಅವರಿಗೆ ಆಗುವುದಿಲ್ಲ.ಈ ರೀತಿಯ ವ್ಯಕ್ತಿ ನೀವಾಗಿದ್ದರೆ ನೀವು ದಿನನಿತ್ಯ ಬಳಸುವ ಸಂಭಾಷಣೆಯ ಪದಗಳ ಕಡೆಗೆ ಗಮನ ಹರಿಸಬೇಕಾಗುತ್ತದೆ.
ನೀವು ಅಭಿನಂದನೆಗಳನ್ನು ಹೇಳುತ್ತಾ, ನಿಮ್ಮ ಮಾತುಗಳು ಹೆಚ್ಚು ಉದಾರತೆಯಿಂದ ಕೂಡಿದ್ದು, ವ್ಯಂಗ್ಯ ಮಾತುಗಳನ್ನು ನೀವು ಆಡದಿದ್ದರೆ ನಿಮ್ಮ ಸಂಬಂಧಗಳು ಇನ್ನಷ್ಟು ಅನ್ಯೋನ್ಯವಾಗುವುದನ್ನು ನೋಡಿ ನೀವೇ ಆಶ್ಚರ್ಯ ಪಡುತ್ತೀರಿ. ಉದಾಹರಣೆಗೆ ನಿಮ್ಮ ಹೆಂಡತಿ ಅಥವಾ ತಾಯಿ ಒಂದು ಒಳ್ಳೆಯ ಅಡುಗೆ ಮಾಡಿದ್ದಾಗ ಅವರನ್ನು ಉದಾರವಾಗಿ ಪ್ರಶಂಸಿಸಿ. ಕಚೇರಿಯಲ್ಲಿ ಯಾರಾದರೂ ಒಂದು ಸಣ್ಣ ಉಪಕಾರ ಮಾಡಿದರೂ ಅವರನ್ನು ನೀವೆಷ್ಟು ಪ್ರಶಂಶಿಸುತ್ತಿರಿ ಎಂಬುದನ್ನು ಅವರಿಗೆ ತಿಳಿಯಪಡಿಸಿ.
ನೆನಪಿಡಿ ಪ್ರೋತ್ಸಾಹದ ನುಡಿಗಳು ವ್ಯಕ್ತಿಯನ್ನು ಕಟ್ಟುತ್ತದೆ ಮತ್ತು ಪ್ರಾಮಾಣಿಕವಾಗಿ ಅಭಿನಂದಿಸುವಂಥದ್ದು ವ್ಯಕ್ತಿಯನ್ನು ಇನ್ನಷ್ಟು ಬಲಪಡಿಸುತ್ತದೆ.
ಸಣ್ಣ ಮಕ್ಕಳನ್ನು ದೈಹಿಕವಾಗಿ ಶಿಕ್ಷಿಸದಿದ್ದರೂ ಕಹಿಯಾದ ಕೋಪದಿಂದ ಅಥವಾ ಅಸಡ್ಡೆ ಮಾತುಗಳಿಂದ ನಿಂದಿಸುತ್ತಾ ಬೆಳೆಸಿದರೆ ಆ ಮಕ್ಕಳು ಪ್ರೌಢಾವಸ್ಥೆಗೆ ಬಂದಾಗ ಶಾಶ್ವತವಾದಂತಹ ಭಯದಲ್ಲಿ ಬೆಳೆಯುತ್ತಾರೆ.
ಕ್ರಿಸ್ತೀಯ ಜೀವಿತವು ಕ್ರಿಸ್ತೀಯ ತುಟಿಗಳಿಂದಲೇ ಪ್ರಚಾರ ಹೊಂದಿದೆ ಎಂಬುದನ್ನು ಎಂದಿಗೂ ಮರೆಯಬೇಡಿರಿ. ನೀವು ಹೇಗೆ ಮಾತನಾಡುತ್ತೀರೋ ಅದನ್ನು ಗಮನಿಸಿ. ನಿಮ್ಮ ಬಾಯಿಂದ ಎಂದಿಗೂ ಹೊಲಸಾದ ಕೆಟ್ಟ ನುಡಿಗಳು ಬಾರದಿರಲಿ. ನಿಮ್ಮ ಬಾಯಿಂದ ಹೊರಡುವ ಪ್ರತಿಯೊಂದು ಮಾತುಗಳು ವರವಾಗಿದ್ದು ಕೇಳುವವರಿಗೆ ಉಪಕಾರ ಮಾಡುವಂತಿರಲಿ.ಕುಚೋದ್ಯ,ಪರಿಹಾಸ್ಯ ಮತ್ತು ನಿಂಧನೆಯ ಮಾತುಗಳು ನಿಮ್ಮ ಬಾಯಿಂದ ಸಂಪೂರ್ಣವಾಗಿ ತೊಲಗಿಸಿ. ಒಬ್ಬರಿಗೊಬ್ಬರು ಸಮಾಧಾನದಿಂದಿರಿ(ಎಫಸ್ಸೆ 4:29,31)
ಪ್ರಾರ್ಥನೆಗಳು
ತಂದೆಯೇ, ನನ್ನ ಮಾತುಗಳು ಸದಾ ಕೃಪೆಯಿಂದ ಕೂಡಿರಲಿ, ಉಪ್ಪಿನಂತೆ ರುಚಿಯಾಗಿರಲಿ.ಇದರಿಂದ ನಾನು ಪ್ರತಿಯೊಬ್ಬರಿಗೂ ಹೇಗೆ ಉತ್ತರಿಸಬೇಕು ಎಂಬುದನ್ನು ಯೇಸು ನಾಮದಲ್ಲಿ ತಿಳಿದುಕೊಳ್ಳುತ್ತೇನೆ. ಆಮೆನ್.
Join our WhatsApp Channel
Most Read
● ಸಾಧನೆಯ ಪರೀಕ್ಷೆ.● ದಿನ 29:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಬದಲಾಗಲು ಇನ್ನೂ ತಡವಾಗಿಲ್ಲ
● ಭಕ್ತಿವೃದ್ಧಿಮಾಡುವ ಅಭ್ಯಾಸಗಳು.
● ಒಂದು ಗಂಟೆ ಹಾಗೂ ಒಂದು ದಾಳಿಂಬ ಹಣ್ಣು
● ದೇವರ ಕನ್ನಡಿ
● ಹನ್ನಾಳ ಜೀವಿತದಿಂದ ಕಲಿಯಬೇಕಾದ ಪಾಠ
ಅನಿಸಿಕೆಗಳು