ಅನುದಿನದ ಮನ್ನಾ
ದಿನ 06:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
Saturday, 16th of December 2023
2
1
476
Categories :
ಉಪವಾಸ ಮತ್ತು ಪ್ರಾರ್ಥನೆ (Fasting and prayer)
ನನ್ನ ಕಷ್ಟಾರ್ಜಿತವು ವ್ಯರ್ಥವಾಗಿ ಹೋಗುವುದಿಲ್ಲ.
"ಶ್ರಮೆಯಿಂದ ಸಮೃದ್ಧಿ; ಹರಟೆಯಿಂದ ಕೊರತೆ" (ಜ್ಞಾನೋಕ್ತಿಗಳು 14:23)
ಅಭಿವೃದ್ಧಿಯಾಗಿರ್ರಿ ಎಂಬುದು ಒಂದು ಆಜ್ಞೆ. ದೇವರು ಮನುಷ್ಯನನ್ನು ಉಂಟುಮಾಡಿದ ಮೇಲೆ ದೇವರು ಮನುಷ್ಯನಿಗೆ ಕೊಟ್ಟ ಮುಖ್ಯವಾದ ಆಜ್ಞೆಯಲ್ಲಿ ಇದೂ ಒಂದು ಭಾಗವಾಗಿದೆ. ಸೈತನನ ಕ್ರಿಯೆ ನಿಮ್ಮ ಜೀವಿತದಲ್ಲಿ ನಡೆಯುತ್ತಿದೆ ಎಂಬುದಕ್ಕೆಲಾಭರಹಿತವಾದ ದುಡಿಮೆಯು ಒಂದು ಸೂಚನೆ ಯಾಗಿದೆ.
ಈ ರೀತಿಯ ಬಲಗಳ ದಾಳಿಗೆ ಒಬ್ಬರು ತುತ್ತಾದಾಗ ತಾವು ದುಡಿದಿದ್ದನ್ನು ತೋರಿಸಲು ಅವರ ಬಳಿ ಏನೂ ಇರುವುದಿಲ್ಲ. ಕೆಲವೊಮ್ಮೆ ಈ ಶಕ್ತಿಗಳು ಅವರು ದುಡಿದು ಅದರ ಪ್ರತಿಫಲ ನೋಡುವಂತೆ ಮಾಡುತ್ತವೆ ಆದರೆ ರಾತ್ರೋ ರಾತ್ರಿ ಏನೋ ಕಷ್ಟ -ನಷ್ಟ ಒದಗಿ ಅವರು ವರ್ಷಗಳಿಂದ ಸಂಪಾದಿಸಿದನ್ನು ಕೊಚ್ಚಿ ಕೊಂಡು ಹೋಗಿ ಬಿಡುತ್ತದೆ.
ಎಷ್ಟೋ ಜನ ವಿಶ್ವಾಸಿಗಳ ದುಡಿಮೆಯು ವ್ಯರ್ಥತ್ವ ದಲ್ಲಿದೆ ;ಅವರು ಸೈತಾನನ ಕಾರ್ಯಚರಣೆ ಬಗ್ಗೆ ಉದಾಸೀನರಾಗಿದ್ದಾರೆ. ಈ ವಿಶ್ವಾಸಿಗಳು ವರಗಳಿಂದ ತುಂಬಿಸಲ್ಪಟ್ಟವರೇ ಆದರೆ ಮೇಲುಗಳನ್ನು ಹೊಂದಿದವರಲ್ಲ . ಅರ್ಹತೆಗಳನ್ನು ಹೊಂದಿದ್ದರೂ ಕೆಲಸವಿಲ್ಲದವರೂ ಮತ್ತು ಜ್ಞಾನವಿದ್ದರೂ ಹಣವಿಲ್ಲದವರು ಆಗಿದ್ದಾರೆ.ಕೆಲವರಿಗೆ ಬೆಳಗ್ಗೆಯಿಂದ ರಾತ್ರಿಯವರೆಗೂ ಬಿಡುವಿಲ್ಲದೆ ಅನೇಕ ಕೆಲಸಗಳನ್ನು ಮಾಡುತ್ತಾರೆ ಆದರೂ ಅವರು ಸಾಲದಲ್ಲಿ ಜೀವಿಸುತ್ತಿದ್ದಾರೆ. ಕೆಲವರು ತಮ್ಮ ವ್ಯವಹಾರಗಳಲ್ಲಿ ತಾವು ಯಶಸ್ವಿಯಾಗಿದ್ದೇವೆ ಅದರಿಂದ ಈ ರೀತಿಯ ಪ್ರಾರ್ಥನೆಗಳ ಅಗತ್ಯವು ತಮಗಿಲ್ಲ ಎಂದು ಕೊಳ್ಳುತ್ತಾರೆ. ಇವರುಗಳು ಸೈತಾನನು ದಾಳಿಯನ್ನು ಮಾಡಿ ಯಶಸ್ವಿಯಾಗುವ ಮುಂಚಿತವಾಗಿಯೇ ತಾವು ಪ್ರಾರ್ಥನೆಯ ಮೂಲಕ ಅವನ ತಂತ್ರವನ್ನು ಕಟ್ಟಿಹಾಕಬೇಕು ಎಂಬ ಮನವರಿಕೆ ಅವರಿಗಿರುವುದಿಲ್ಲ.ಸೈತಾನನು ಯಾವಾಗ ಬೇಕಾದರೂ ನಮ್ಮ ಮೇಲೆ ದಾಳಿ ಮಾಡುವ ಸಾಧ್ಯತೆ ಇರುವುದರಿಂದ ಈ ಹೊತ್ತಿನ ಯಶಸ್ಸು ನಾಳೆ ಇಲ್ಲದೇ ಹೋಗಬಹುದು. ಯೋಬನ ಉದಾಹರಣೆಯನ್ನು ತೆಗೆದುಕೊಳ್ಳಿರಿ ಅವನು ಆಗಲೇ ಯಶಸ್ವಿಯು ಬಹಳಷ್ಟು ವಿಸ್ತರಿಸಲ್ಪಟ್ಟವನು ಆಗಿದ್ದನು. ಆದರೆ ಒಂದೇ ದಿನದಲ್ಲಿ ಎಲ್ಲವನ್ನೂ ಕಳೆದುಕೊಂಡನು. ದೇವರು ಅವನ ಜೊತೆಗಿಲ್ಲದಿದ್ದರೆ ಅವನು ಪುನಃ ಸ್ಥಾಫಿಸಲ್ಪಡಲು ಸಾಧ್ಯವೇ ಇರುತ್ತಿರಲಿಲ್ಲ.
ಕೆಲವರ ಕಷ್ಟಾರ್ಜಿತವು ವ್ಯರ್ಥಗೊಳ್ಳುವುದೇಕೆ ಎಂಬುದಕ್ಕೆ ಕೆಲವು ಮುಖ್ಯವಾದ ಕಾರಣಗಳು ಇಲ್ಲಿವೆ.
1. ದಾಸತ್ವ.
ಇಸ್ರಾಯೇಲ್ಯರು ದಾಸತ್ವದಲ್ಲಿದ್ದರು ಅವರ ದುಡಿತವೆಲ್ಲಾ ಅವರ ಮೇಸ್ತ್ರಿಯ ಪಾಲಾಗುತ್ತಿತ್ತು.
9ಅವನು ತನ್ನ ಜನರಿಗೆ - ಇಸ್ರಾಯೇಲ್ಯರು ನಮ್ಮ ಅಧೀನದಲ್ಲಿರದಷ್ಟು ಬಹಳವಾಗಿಯೂ ಬಲವಾಗಿಯೂ ಇದ್ದಾರೆ ನೋಡಿರಿ. 10ನಮಗೆ ಯುದ್ಧವೇನಾದರೂ ಸಂಭವಿಸಿದರೆ ಅವರು ನಮ್ಮ ಶತ್ರುಗಳೊಂದಿಗೆ ಕೂಡಿಕೊಂಡು ನಮಗೆ ವಿರೋಧವಾಗಿ ಕಾದಾಡಿ ದೇಶವನ್ನು ಬಿಟ್ಟುಹೋದಾರು. ಅವರು ವೃದ್ಧಿಯಾಗದಂತೆ ನಾವು ಉಪಾಯ ಮಾಡೋಣ ಎಂದು ಹೇಳಿದನು.
11ಆದಕಾರಣ ಅವನ ಜನರು ಇಸ್ರಾಯೇಲ್ಯರನ್ನು ಬಿಟ್ಟೀಕೆಲಸದಿಂದ ಉಪದ್ರವಪಡಿಸುವದಕ್ಕಾಗಿ ಬಿಟ್ಟೀಮಾಡಿಸುವ ಅಧಿಕಾರಿಗಳನ್ನು ಅವರ ಮೇಲೆ ಇಟ್ಟು ಫರೋಹನಿಗೆ ಪಿತೋಮ್ ರಾಮ್ಸೇಸ್ ಎಂಬ ಉಗ್ರಾಣ ಪಟ್ಟಣಗಳನ್ನು ಕಟ್ಟಿಸಿದರು.
13ಐಗುಪ್ತ್ಯರು ಇಸ್ರಾಯೇಲ್ಯರ ಕೈಯಿಂದ ಕ್ರೂರವಾಗಿ ಸೇವೆಮಾಡಿಸಿಕೊಂಡು 14ಮಣ್ಣಿನ ಕೆಲಸದಲ್ಲಿಯೂ ಇಟ್ಟಿಗೆಮಾಡುವ ಕೆಲಸದಲ್ಲಿಯೂ ವ್ಯವಸಾಯದ ಎಲ್ಲಾ ವಿಧವಾದ ಕೆಲಸಗಳಲ್ಲಿಯೂ ಕಠಿಣವಾಗಿ ದುಡಿಸಿಕೊಂಡು ಅವರ ಜೀವಗಳನ್ನು ಬೇಸರಪಡಿಸಿದರು. ಅವರು ಅವರಿಂದ ಮಾಡಿಸಿದ ಎಲ್ಲಾ ಸೇವೆಯೂ ಬಹುಕಠೋರವಾಗಿತ್ತು."
(ವಿಮೋಚನಕಾಂಡ 1:9-11 ,13-14).
2. ದುಷ್ಟನ ದುಷ್ಟತ್ವದಿಂದಾಗಿ.
ಇಸ್ರಾಯೇಲ್ಯರು ಬೀಜವನ್ನು ಬಿತ್ತಿ ಪೈರನ್ನು ಬೆಳೆಸುವವರೆಗೂ ಮಿದ್ಯಾನ್ಯರು ಕಾದು ಕುಳಿತ್ತಿದ್ದು ಬೆಳೆ ಕೊಯ್ಲಿಗೆ ಬಂದಾಗ ಇನ್ನೇನು ಇಸ್ರಾಯೇಲ್ಯರು ಲಾಭವನ್ನು ಹೊಂದುವೆವು ಎಂದು ಅಂದುಕೊಳ್ಳುವಾಗಲೇ ಎಲ್ಲವನ್ನೂ ನಾಶ ಮಾಡಿ ಬಿಡುತ್ತಿದ್ದರು.ಹೀಗೆಯೇ ಶತೃವು ತನ್ನ ಕಾರ್ಯ ನಡೆಸುವಂತದ್ದು.
1ಇಸ್ರಾಯೇಲ್ಯರು ತಿರಿಗಿ ಯೆಹೋವನ ದೃಷ್ಟಿಯಲ್ಲಿ ದ್ರೋಹಿಗಳಾದದರಿಂದ ಆತನು ಅವರನ್ನು ಏಳು ವರುಷಗಳ ಪರ್ಯಂತರ ವಿುದ್ಯಾನ್ಯರ ಕೈಗೆ ಒಪ್ಪಿಸಿದನು. 2ವಿುದ್ಯಾನ್ಯರ ಹಸ್ತವು ಬಲಗೊಂಡದರಿಂದ ಇಸ್ರಾಯೇಲ್ಯರು ಅವರಿಗೆ ಹೆದರಿ ಪರ್ವತಗಳಲ್ಲಿ ಕಂದರಗುಹೆದುರ್ಗಗಳನ್ನು ಮಾಡಿ ಸೇರಿಕೊಂಡರು. 3ಇವರು ಬೀಜ ಬಿತ್ತಿದ ತರುವಾಯ ವಿುದ್ಯಾನ್ಯರೂ ಅಮಾಲೇಕ್ಯರೂ ಮೂಡಣ ದೇಶದವರೂ ಇವರಿಗೆ ವಿರೋಧವಾಗಿ ದಂಡೆತ್ತಿ ಬಂದು ಇಳುಕೊಂಡು 4ಗಾಜಾ ಪ್ರಾಂತದವರೆಗಿದ್ದ ಎಲ್ಲಾ ಭೂವಿುಯ ಹುಟ್ಟುವಳಿಯನ್ನು ಹಾಳುಮಾಡಿಬಿಟ್ಟದರಿಂದ ಇವರಿಗೆ ದವಸ ಧಾನ್ಯವಾಗಲಿ ಕುರಿದನಕತ್ತೆಗಳಾಗಲಿ ಉಳಿಯಲೇ ಇಲ್ಲ. 5ಆ ಶತ್ರುಗಳು ತಮ್ಮ ಕುರಿದನ ಗುಡಾರಗಳ ಸಹಿತವಾಗಿ ವಿುಡಿತೆಗಳಂತೆ ಗುಂಪುಗುಂಪಾಗಿ ಬಂದರು; ಅವರೂ ಅವರ ಒಂಟೆಗಳೂ ಅಸಂಖ್ಯ. ಆ ಗುಂಪೆಲ್ಲಾ ಬಂದು ದೇಶವನ್ನು ಹಾಳುಮಾಡುತ್ತಿತ್ತು. 6ಇಸ್ರಾಯೇಲ್ಯರು ವಿುದ್ಯಾನ್ಯರ ದೆಸೆಯಿಂದ ಬಲು ಕುಗ್ಗಿ ಹೋಗಿ ಯೆಹೋವನಿಗೆ ಮೊರೆಯಿಟ್ಟರು."
(ನ್ಯಾಯಸ್ಥಾಪಕರು 6:1-6).
ಕೆಲವೊಮ್ಮೆ ಸೈತಾನನು ಕೆಲವರು ತಮ್ಮ ಯೌವನದ ಕಾಲದಲ್ಲಿ ಸಂವೃದ್ಧಿಯಾಗಿರುವಂತೆ ಮಾಡಿ ಅವರ ವೃದ್ಧಪ್ಯಾಕಾಲದಲ್ಲಿ ರೋಗರುಜಿನಗಳನ್ನು ಬರಮಾಡಿ ಎಲ್ಲವನ್ನೂ ಬರಿದು ಮಾಡಿಕೊಳ್ಳುವಂತೆ ಮಾಡುತ್ತಾನೆ.
ಕೆಲವೊಮ್ಮೆ ಅವರ ಮಕ್ಕಳನ್ನು ಸಾಯಗೊಡಿಸಿ ಅವರು ಆ ಮಕ್ಕಳ ಮೇಲೆ ಮಾಡಿದ ಹೂಡಿಕೆಯನ್ನೆಲ್ಲಾ ವ್ಯರ್ಥವಾಗುವಂತೆ ಮಾಡುತ್ತಾನೆ.
ಶತೃ ವು ನಿಮ್ಮನ್ನು ನಿಲ್ಲಿಸುವ ಮೊದಲು ನೀವು ಅವನನ್ನು ತಡೆಯಿರಿ. ಅವನು ನಿಮ್ಮ ಮೇಲೆ ಯುದ್ಧಕ್ಕೆ ಬರುವ ಮೊದಲು ನೀವು ಅವನ ಮೇಲೆ ಯುದ್ಧ ಸಾರಿರಿ. ನಿಮ್ಮ ಶತ್ರುವು ರಕ್ತ ಮಾಂಸದಿಂದ ಕೂಡಿದವನಲ್ಲ. ಅವನು ಪಿಶಾಚಿ ಯಾಗಿದ್ದಾನೆ. ಆದರೆ ಮನುಷ್ಯರ ಮೇಲೆ ತನ್ನ ಪ್ರಭಾವ ಬೀರಿ ನಿಮಗೆ ವಿರುದ್ಧವಾಗಿ ಎತ್ತಿ ಕಟ್ಟುತ್ತಾನೆ. ಆ ಮನುಷ್ಯರು ನಿಮ್ಮ ನಿಜವಾದ ಶತ್ರುಗಳಲ್ಲ ಆದರೆ ಅವರು ಸೈತಾನನ ಪ್ರಭಾವಕ್ಕೆ ಅಧೀನರಾಗಿದ್ದಾರೆ. ನೀವು ಯಾವಾಗ ನಿಮ್ಮ ಆತ್ಮೀಕ ಶತೃವನ್ನು ಬಂಧಿಸುತ್ತ್ತೀರೋ ಆ ಶತೃವಿನ ಪಾತ್ರೆಗಳ ಅಬ್ಬರವೂ ಅಡಗಿಹೋಗುತ್ತದೆ.
3. ಪಾಪಮಯವಾದ ಜೀವನ ಶೈಲಿ.
ಪಾಪವು ಸೈತಾನನಿಗೆ ಕಾನೂನುಬದ್ದ ಅವಕಾಶವನ್ನು ಕಲ್ಪಿಸಿಕೊಡುವುದು.
25ನಿಮ್ಮ ಅಪರಾಧಗಳು ಇವುಗಳನ್ನು ತಪ್ಪಿಸಿಬಿಟ್ಟಿವೆ, ನಿಮ್ಮ ಪಾಪಗಳು ನಿಮಗೆ ಮೇಲನ್ನು ತಡೆದಿವೆ.
(ಯೆರೆಮೀಯ 5:25 ).
ತಮ್ಮ ಕಷ್ಟಾರ್ಜಿತದಲ್ಲಿ ವ್ಯರ್ಥತೆಯನ್ನು ಅನುಭವಿಸಿದ ಸತ್ಯವೇದ ಆಧಾರಿತ ಇಬ್ಬರ ಉದಾಹರಣೆಗಳು.
1. ವಿವೇಕಿಯಾಗಿದ್ದರೂ ಯಾರೂ ಅವನನ್ನು ನೆನಪಿಗೆ ತಾರದವನೊಬ್ಬನು.
ಪ್ರಸಂಗಿ 9:15 ರಲ್ಲಿ ಹೇಳುತ್ತದೆ "ಆಗ ಅಲ್ಲಿದ್ದವರು ತಮ್ಮಲ್ಲಿ ಒಬ್ಬ ಬಡ ಜ್ಞಾನಿಯನ್ನು ಕಂಡುಕೊಂಡರು. ಅವನು ತನ್ನ ಜ್ಞಾನದಿಂದಲೇ ಆ ಪಟ್ಟಣವನ್ನು ರಕ್ಷಿಸಿದನು; ಆದರೆ ಆ ಬಡ ಜ್ಞಾನಿಯನ್ನು ಯಾರೂ ಸ್ಮರಿಸಲಿಲ್ಲ." ಎಂದು. ಇಲ್ಲಿ ಆ ಮನುಷ್ಯನು ಜ್ಞಾನಿಯಾಗಿದ್ದಾನೆ ಆದರೆ ಅವನು ಬಡವನಾದರಿಂದ ಜನರೆಲ್ಲಾ ಅವನನ್ನು ಮರೆತುಹೋದರು ಜ್ಞಾನವು ನಿಮಗೆ ಸಂಪತ್ತನ್ನು ತರಬಹುದು ಆದರೆ ನೀವು ಅದರೊಡನೆ ಆತ್ಮೀಕವಾಗಿ ವ್ಯವಹರಿಸದಿದ್ದರೆ, ನಿಮ್ಮ ಕಷ್ಟಾರ್ಜಿತ ವ್ಯರ್ಥವಾಗಿ ಹೋಗುತ್ತದೆ.
ಆಮೇಲೆ ನಿಮಗೆ "ಬಡಜ್ಞಾನಿ" ಎಂಬ ಹೆಸರು ಬರುವುದಷ್ಟೇ.
2.ಯಾಕೋಬನು.
ಯಾಕೋಬನು ಬಹಳಷ್ಟು ಸಾರಿ ಮೋಸಹೋದನು ಅವನ ಕಷ್ಟಕ್ಕೆ ತಕ್ಕಂತೆ ಅವನಿಗೆ ಪ್ರತಿಫಲ ದೊರೆಯಲಿಲ್ಲ. ದೇವರೊಂದಿಗೆ ಅವನು ಮಾಡಿಕೊಂಡ ಒಡಂಬಡಿಕೆಯು ಅವನ ಜೀವನವನ್ನು ರಕ್ಷಿಸಿತು.
38ನಾನು ಇಪ್ಪತ್ತು ವರುಷ ನಿನ್ನ ಬಳಿಯಲ್ಲಿದ್ದೆನಲ್ಲಾ. ನಿನ್ನ ಆಡುಕುರಿಗಳು ಕಂದು ಹಾಕಲಿಲ್ಲ; ನಿನ್ನ ಹಿಂಡಿನ ಟಗರುಗಳನ್ನು ನಾನೇನೂ ತಿಂದುಬಿಡಲಿಲ್ಲ;
39ಕಾಡುಮೃಗಗಳು ಕೊಂದ ಪಶುಗಳನ್ನು ನಿನ್ನ ಭಾಗಕ್ಕೆ ಹಾಕದೆ ನಾನೇ ಬದಲುಕೊಟ್ಟೆನು; ಹಗಲಾಗಲಿ ಇರುಳಾಗಲಿ ಕದ್ದುಹೋದದ್ದರ ಲೆಕ್ಕವನ್ನು ನನ್ನಿಂದಲೇ ತೆಗೆದುಕೊಂಡಿ; 40ಹಗಲಲ್ಲಿ ಬಿಸಿಲಿನಿಂದಲೂ ಇರುಳಲ್ಲಿ ಚಳಿಯಿಂದಲೂ ಬಾಧೆಪಟ್ಟೆನು; ನಿದ್ದೆ ಮಾಡುವದಕ್ಕಾದರೂ ಅವಕಾಶವಾಗಲಿಲ್ಲ; ನನ್ನ ಸ್ಥಿತಿ ಹೀಗಿತ್ತು. 41ಇಪ್ಪತ್ತು ವರುಷ ನಿನ್ನ ಮನೆಯಲ್ಲಿದ್ದೆನು; ನಿನ್ನಿಬ್ಬರ ಹೆಣ್ಣುಮಕ್ಕಳಿಗಾಗಿ ಹದಿನಾಲ್ಕು ವರುಷವೂ ನಿನ್ನ ಆಡುಕುರಿಗಳಿಗಾಗಿ ಆರು ವರುಷವೂ ಸೇವೆ ಮಾಡಿದೆನು. ನೀನು ಹತ್ತು ಸಾರಿ ನನ್ನ ಸಂಬಳವನ್ನು ಬದಲಾಯಿಸಿದಿ. 42ನನ್ನ ಹಿರಿಯರ ದೇವರು, ಅಂದರೆ ಅಬ್ರಹಾಮನ ದೇವರೂ ಇಸಾಕನು ಭಯಭಕ್ತಿಯಿಂದ ಸೇವಿಸುವ ದೇವರೂ ಆಗಿರುವಾತನು, ನನ್ನ ಪಕ್ಷದಲ್ಲಿ ಇರದಿದ್ದರೆ ನಿಶ್ಚಯವಾಗಿ ನೀನು ನನ್ನನ್ನು ಬರಿಗೈಯಾಗಿ ಕಳುಹಿಸುತ್ತಿದ್ದಿ. ದೇವರು ನನ್ನ ಕಷ್ಟವನ್ನೂ ನಾನು ಪಟ್ಟ ಪ್ರಯಾಸವನ್ನೂ ನೋಡಿದ್ದರಿಂದಲೇ ನಿನ್ನೆಯ ರಾತ್ರಿ ನಿನ್ನನ್ನು ಗದರಿಸಿದನು ಅಂದನು.
(ಆದಿಕಾಂಡ 31:38-42 )
ನಮ್ಮ ಸಮಾಜದಲ್ಲಿರುವ ಅನೇಕ ಜನರು ಇಂದು ಲಾಬಾನನ ಹಾಗೆಯೇ ಇದ್ದಾರೆ. ಅವರು ಜನರನ್ನು ವಂಚಿಸುವವರೂ, ಜನರಿಗೆ ಬರಬೇಕಾದ ಪೂರ್ಣ ಪ್ರಮಾಣದ ಆಶೀರ್ವಾದಕ್ಕೆ ತಡೆಮಾಡುವವರೂ ಆಗಿದ್ದಾರೆ. ನೀವು ಪ್ರಾರ್ಥಿಸುವಿರಾದರೆ ದೇವರು ನಿಮ್ಮ ಜೊತೆಗೆ ಹೆಜ್ಜೆ ಹಾಕಿ ನಿಮಗೆ ಸಂಪೂರ್ಣವಾಗಿ ಅದನ್ನು ಸ್ವಾಸ್ತ್ಯ ಮಾಡಿ ಕೊಡುವರು.
ಹೆಚ್ಚಿನ ಅಧ್ಯಯನಕ್ಕಾಗಿ: ಲೂಕ 5:5-7, ಯೆಶಾಯ 65:21-23,1ಕೊರಿಯಂತೆ 15:10.
ಪ್ರಾರ್ಥನೆಗಳು
ನಿಮ್ಮ ಹೃದಯ ಅಂತರಾಳದಿಂದ ಬರುವವರೆಗೂ ಪುನರಾವರ್ತಿಸುತ್ತಾ ಇರಿ ಆನಂತರವೇ ಮತ್ತೊಂದು ಪ್ರಾರ್ಥನಾ ಕ್ಷಿಪಣಿಯ ಕಡೆಗೆ ಸಾಗಿರಿ ಪ್ರತಿ ಪ್ರಾರ್ಥನಾ ಅಂಶದೊಡನೆ ಒಂದು ನಿಮಿಷ ಪುನರಾವರ್ತಿಸಿ ವ್ಯಕ್ತಿಗತ ಮಾಡಿಕೊಳ್ಳಿರಿ.
2. ನನ್ನ ಕೈ ಕೆಲಸಕ್ಕೆ ವಿರುದ್ಧವಾಗಿ ಕಾರ್ಯ ಮಾಡುವ ಎಲ್ಲಾ ದುರಾತ್ಮನ ಬಲಗಳನ್ನು ಯೇಸು ನಾಮದಲ್ಲಿ ನಾಶ ಪಡಿಸುತ್ತೇನೆ. (ಧರ್ಮೋಪದೇಶ ಕಾಂಡ 28:12)
3. ನನ್ನ ಜೀವಿತದ ಮೇಲುಗಳ ಮೇಲೆ ದಾಳಿ ಮಾಡುವ ಯಾವುದೇ ಶಕ್ತಿಯಾದರೂ ಅದನ್ನು ದೇವರ ಅಭಿಷೇಕದ ಮೂಲಕ ಯೇಸುವಿನ ರಕ್ತದ ಮೂಲಕ ನಾಶ ಪಡಿಸುತ್ತೇನೆ.(1ಯೋಹಾನ 2:27, ಪ್ರಕಟಣೆ 12:11)
4.ನನ್ನ ಆರೋಗ್ಯ, ವ್ಯವಹಾರ ಮತ್ತು ಕುಟುಂಬವನ್ನು ನುಂಗಿಹಾಕುವ , ದೋಚುವ ಹಾಳು ಮಾಡುವ ಎಲ್ಲಾ ಬಲಗಳನ್ನು ಯೇಸುನಾಮದಲ್ಲಿ ಗದರಿಸುತ್ತೇನೆ. (ಮಲಾಕಿ 3:11)
5. ನನ್ನ ಕಷ್ಟಾರ್ಜಿತವನ್ನು ವ್ಯರ್ಥ ಪಡಿಸುವ ಯಾವುದೇ ಬಲವಾದರೂ ಅದನ್ನು ನಾನು ಯೇಸುನಾಮದಲ್ಲಿ ನಿಷೇಧಿಸುತ್ತೇನೆ. (ಯೆಶಾಯ 65:23)
6. ತಂದೆಯೇ, ನಾನು ಕೈ ಹಾಕಿದ ಕೆಲಸಗಳನ್ನು ನೂರರಷ್ಟು ಫಲಕೊಡುವಂತೆ ಯೇಸುನಾಮದಲ್ಲಿ ಆಶೀರ್ವಧಿಸು (ಆದಿಕಾಂಡ 26:12)
7.ನಾನು ಕಳೆದುಕೊಂಡ ನನ್ನ ಪ್ರತಿಯೊಂದು ಆಶೀರ್ವಾದವನ್ನು ಸದ್ಗುಣವನ್ನೂ ಅವಕಾಶಗಳನ್ನು ಮತ್ತು ಸಂಪತ್ತನ್ನು ಯೇಸುನಾಮದಲ್ಲಿ ಹಿಂದಿರುಗಿ ಹೊಂದುತ್ತೇನೆ. (ಯೋವೇಲ 2:25)
8.ನನ್ನ ಜೀವಿತದಲ್ಲಿ ಯಾವುದೇ ದುರಾತ್ಮನ ಅಸ್ಥಿವಾರ ಉಂಟಾಗುವುದನ್ನು ಯೇಸುನಾಮದಲ್ಲಿ ಯೇಸುವಿನ ರಕ್ತದ ಮೂಲಕ ತಡೆದು ನಿಷೇಧಿಸುತ್ತೇನೆ. (ಇಬ್ರಿಯ 9:14)
9.ನನ್ನ ಜೀವಿತದಲ್ಲಿ ಪರಲೋಕದ ನನ್ನ ತಂದೆಯಾದ ದೇವರಿಂದ ಹಾಕಲ್ಪಡದ ಯಾವುದೇ ಅಸ್ಥಿವಾರವಾಗಲಿ ಯೇಸುನಾಮದಲ್ಲಿ ಕೆಡವಲ್ಪಡಲಿ. (ಮತ್ತಾಯ 15:13)
10. ನನ್ನ ಜೀವಿತಕ್ಕೆ ವಿರುದ್ಧವಾಗಿ ಯೋಜಿಸಲ್ಪಟ್ಟಿರುವ ಯಾವುದೇ ಶಾಪಗಳನ್ನು ಮತ್ತು ವೈಫಲ್ಯತೆಗಳನ್ನು ಯೇಸುನಾಮದಲ್ಲಿ ಬುಡಸಮೇತವಾಗಿ ನಿರ್ನಾಮಮಾಡುತ್ತೇನೆ. (ಗಲಾತ್ಯ 3:13)
11.ನನ್ನನ್ನು ಎದುರಿಸಲು ಕಲ್ಪಿಸಿದ ಯಾವ ಆಯುಧವೂ ಜಯಿಸದು ಎಂದು ಯೇಸುನಾಮದಲ್ಲಿ ಘೋಷಿಸುತ್ತೇನೆ ಮತ್ತು ನನ್ನ ಭವಿಷ್ಯವನ್ನು ಹಳಿತಪ್ಪಿಸಲು ವೈರಿಯು ಮಾಡುವ ಪ್ರತಿಯೊಂದು ಯೋಜನೆಗಳನ್ನು ಯೇಸುನಾಮದಲ್ಲಿ ತೊಡೆದು ಹಾಕುತ್ತೇನೆ (ಯೆಶಾಯ 54:17).
12.ಕರ್ತನೇ, ನನ್ನ ಪರವಾಗಿ ಯುದ್ಧಮಾಡಲು ನಿನ್ನ ದೇವದೂತ ಸೈನ್ಯವನ್ನು ಬಿಡುಗಡೆ ಮಾಡು ಮತ್ತು ನನ್ನ ಜೀವಿತದಲ್ಲಿ ನಿನ್ನ ಚಿತ್ತಕ್ಕೆ ವಿರೋಧವಾಗಿರುವ ಎಲ್ಲಾ ಆತ್ಮಿಕ ಕೋಟೆಕೊತ್ತಲುಗಳನ್ನು ಯೇಸುನಾಮದಲ್ಲಿ ಕೆಡವಿಹಾಕು. (ಕೀರ್ತನೆಗಳು 34:7)
Join our WhatsApp Channel
Most Read
● ನೀವು ಎಷ್ಟು ವಿಶ್ವಾಸಾರ್ಹರು?● ನಂಬಿಕೆಯ ಶಾಲೆ
● ಆರಾಧನೆ : ಸಮಾಧಾನಕ್ಕಿರುವ ಕೀಲಿ ಕೈ
● ದೇವರಿಗೇ ಪ್ರಥಮ ಸ್ಥಾನ ನೀಡುವುದು.#1
● ಅನಂತವಾದ ಕೃಪೆ
● ಯುದ್ಧಕ್ಕಾಗಿ ತರಬೇತಿ.
● ವಿವೇಚನೆ v/s ತೀರ್ಪು
ಅನಿಸಿಕೆಗಳು