ಅನುದಿನದ ಮನ್ನಾ
ಜೀವಬಾದ್ಯರ ಪುಸ್ತಕ
Monday, 6th of May 2024
5
2
285
Categories :
ಅನುಗ್ರಹ (Grace)
ನಂಬಿಕೆ (Faith)
"ಜಯಶಾಲಿಗೆ ಹೀಗೆ ಶುಭ್ರವಸ್ತ್ರಗಳನ್ನು ಹೊದಿಸುವರು. ಜೀವಬಾಧ್ಯರ ಪಟ್ಟಿಯಿಂದ ಅವನ ಹೆಸರನ್ನು ನಾನು ಅಳಿಸಿಬಿಡದೆ ಅವನು ನನ್ನವನೆಂದು ನನ್ನ ತಂದೆಯ ಮುಂದೆಯೂ ಆತನ ದೂತರ ಮುಂದೆಯೂ ಒಪ್ಪುವೆನು."(ಪ್ರಕಟನೆ 3:5)
ಪ್ರಾಚೀನಾ ಕಾಲದ ಪಟ್ಟಣಗಳಲ್ಲಿ ತಮ್ಮ ನಾಗರಿಕರ ವಿವರಗಳನ್ನು ಒಳಗೊಂಡ ದಾಖಲೆ ಪುಸ್ತಕಗಳನ್ನು ಇಡುತ್ತಿದ್ದರು. ವ್ಯಕ್ತಿಯು ಸತ್ತಾಗ ಅವರ ಹೆಸರನ್ನು ಆ ದಾಖಲಾತಿಯಿಂದ ತೆಗೆದುಬಿಡುತ್ತಿದ್ದರು. ಸತ್ತವರೊಳಗಿಂದ ಎದ್ದು ಬಂದ ಕ್ರಿಸ್ತನು ಇಲ್ಲಿ ಹೇಳುತ್ತಿರುವುದೇನೆಂದರೆ ನಾವು ದೇವರ ಪ್ರಜೆ ಎಂಬ ಪಾತ್ರದಲ್ಲಿ ಉಳಿದಿರಬೇಕಾದರೆ ನಮ್ಮ ನಂಬಿಕೆಯು ಯಾವಾಗಲೂ ಜ್ವಲಿಸುತ್ತಿರಬೇಕು ಎಂದು.
ಜೀವ ಬಾಧ್ಯರ ಪುಸ್ತಕ ಎಂಬ ಪುಸ್ತಕವಿದೆ, ಮತ್ತದು ಕಡೆ ನ್ಯಾಯತೀರ್ಪಿನ ದಿನದಲ್ಲಿ ತೆರೆಯಲ್ಪಡುತ್ತದೆ. ಅದರ ಅರ್ಥ ಜೀವ ಬಾಧ್ಯರ ಪುಸ್ತಕವೆಂಬದು ನಿಜವಾಗಿ ಇರುವಂತಹ ಪುಸ್ತಕವಾಗಿದ್ದು, ಅದನ್ನು ಓದಬಹುದಾಗಿದೆ.
"ಇದಲ್ಲದೆ ಸತ್ತವರಾದ ದೊಡ್ಡವರೂ ಚಿಕ್ಕವರೂ ಸಿಂಹಾಸನದ ಮುಂದೆ ನಿಂತಿರುವದನ್ನು ಕಂಡೆನು. ಆಗ ಪುಸ್ತಕಗಳು ತೆರೆಯಲ್ಪಟ್ಟವು; ಮತ್ತು ಜೀವಬಾಧ್ಯರ ಪಟ್ಟಿ ಎಂಬ ಇನ್ನೊಂದು ಪುಸ್ತಕವು ತೆರೆಯಲ್ಪಟ್ಟಿತು; ಆ ಪುಸ್ತಕಗಳಲ್ಲಿ ಬರೆದಿದ್ದ ಸಂಗತಿಗಳ ಆಧಾರದಿಂದ ಅವರವರ ಕೃತ್ಯಗಳ ಪ್ರಕಾರ ಸತ್ತವರಿಗೆ ನ್ಯಾಯತೀರ್ಪಾಯಿತು."(ಪ್ರಕಟನೆ 20:12 )
"ಜಯಶಾಲಿಗೆ ಹೀಗೆ ಶುಭ್ರವಸ್ತ್ರಗಳನ್ನು ಹೊದಿಸುವರು. ಜೀವಬಾಧ್ಯರ ಪಟ್ಟಿಯಿಂದ ಅವನ ಹೆಸರನ್ನು ನಾನು ಅಳಿಸಿಬಿಡುವುದಿಲ್ಲ ..." ಎಂದು ಪ್ರಕಟನೆ 3:5 ರಲ್ಲಿ ಜಯಶಾಲಿಗಳಾದವರಿಗೆ ಯೇಸುವು ಒಂದು ಬಲವಾದ ವಾಗ್ದಾನವನ್ನು ಕೊಡುತ್ತಾನೆ. ಜೀವಬಾದ್ಯರ ಪುಸ್ತಕವೆಂಬುದು ನಿತ್ಯಜೀವವನ್ನು ಹೊಂದಿಕೊಂಡಂತಹ, ದೇವರಿಗೆ ಸೇರಿದಂತವರನ್ನು ಕುರಿತಾ ಪರಲೋಕದ ದಾಖಲೆ ಪುಸ್ತಕವಾಗಿದೆ. ಈ ಪುಸ್ತಕದಲ್ಲಿ ನಮ್ಮ ಹೆಸರುಗಳು ಬರೆಯಲ್ಪಡುವುದರ ಪ್ರಾಮುಖ್ಯತೆಯನ್ನು ಕುರಿತು ಆಳವಾಗಿ ನೋಡೋಣ.
ಸತ್ಯವೇದದ ಉದ್ದಗಲಕ್ಕೂ ನಾವು ಈ ಜೀವ ಬಾಧ್ಯರ ಪುಸ್ತಕದ ಕುರಿತ ಒಕ್ಕಣೆಗಳನ್ನು ನೋಡುವವರಾಗಿದ್ದೇವೆ ವಿಮೋಚನ ಕಾಂಡ 32 :32 -33ರಲ್ಲಿ ಮೋಷೆಯು ಇಸ್ರಾಯೇಲ್ ಜನರಿಗಾಗಿ ಮಧ್ಯಸ್ಥಿಕೆ ಪ್ರಾರ್ಥನೆ ಮಾಡುವಾಗ ಅವರ ಪಾಪಗಳನ್ನು ಕ್ಷಮಿಸುವಂತೆಯೂ ಇಲ್ಲದಿದ್ದರೆ ತನ್ನ ಹೆಸರನ್ನು ಈ ಪುಸ್ತಕದಿಂದ ಅಳಿಸಿ ಬಿಡುವಂತೆಯೂ ಬೇಡುತ್ತಾನೆ.ಕೀರ್ತನೆ 69:28ರಲ್ಲಿ ದಾವೀದನು ದುಷ್ಟರನ್ನು ಈ ಜೀವ ಬಾಧ್ಯರ ಪುಸ್ತಕದಿಂದ ತೆಗೆದುಬಿಡುವಂತೆ ಪ್ರಾರ್ಥಿಸುತ್ತಾನೆ. ಫಿಲಿಪ್ಪಿ 4:3ರಲ್ಲಿ ಅಪೋಸ್ತಲನಾದ ಪೌಲನು ತನ್ನ ಜೊತೆ ಸೇವಕರ ಹೆಸರುಗಳು ಈ ಜೀವ ಬಾಧ್ಯರ ಪುಸ್ತಕಗಳಲ್ಲಿ ಬರೆದಿದೆ ಎಂದು ಹೇಳುತ್ತಾನೆ.
ಜೀವಬಾದ್ಯರ ಪುಸ್ತಕದಲ್ಲಿ ನಮ್ಮ ಹೆಸರುಗಳನ್ನು ಬರೆಯಲ್ಪಟ್ಟಿರುವುದು ನಾವು ನಮ್ಮ ಸ್ವಂತ ಪ್ರಯತ್ನದಿಂದ ಮಾಡಿದ ಸಂಪಾದನೆಯಲ್ಲಾ. ಅದು ಕ್ರಿಸ್ತನ ಮೇಲೆ ನಾವಿಟ್ಟಿರುವ ನಮ್ಮ ನಂಬಿಕೆಗೆ ಪ್ರತಿಫಲವಾಗಿಯೂ ಆತನಿಂದ ಉಚಿತವಾಗಿ ಪಡೆದುಕೊಂಡ ರಕ್ಷಣಾ ವರದಿಂದಲೂ ಸಿಕ್ಕಿದಂತದ್ದಾಗಿದೆ.
ಪ್ರಕಟಣೆ 13:8ರಲ್ಲಿ ಯಾರ್ಯಾರ ಹೆಸರು ಜೀವ ಬಾಧ್ಯರ ಪುಸ್ತಕದಲ್ಲಿ ಬರೆದಿಲ್ಲವೋ ಅವರೆಲ್ಲರೂ ಆ ಮೃಗವನ್ನು ಆರಾಧಿಸುತ್ತಾರೆ ಎಂದು ವಿವರಿಸಿದೆ. ಅದಕ್ಕೆ ವಿರುದ್ಧವಾಗಿ ಯಾರೆಲ್ಲಾ ಕ್ರಿಸ್ತನಿಗೆ ಸೇರಿದವರಾಗಿದ್ದಾರೋ ಅವರೆಲ್ಲರ ಹೆಸರುಗಳು ಪರಲೋಕದಲ್ಲಿ ದಾಖಲಾಗಿವೆ ಎಂಬ ಭರವಸೆಯಿದೆ.
ಜಯಶಾಲಿಗಳಾದವರ ಹೆಸರನ್ನು ಎಂದಿಗೂ ಜೀವ ಬಾಧ್ಯರ ಪುಸ್ತಕದಿಂದ ತೆಗೆಯಲ್ಪಡುವುದೇ ಇಲ್ಲ ಎಂಬ ಯೇಸುವಿನ ಬಲವಾದ ವಾಗ್ದಾನವು ನಿಜಕ್ಕೂ ಉತ್ತೇಜನದಾಯಕವಾದದ್ದು. ಅದು ಕ್ರಿಸ್ತನಲ್ಲಿರುವ ನಮ್ಮ ನಿತ್ಯತ್ವದ ಕುರಿತು ಮಾತನಾಡುತ್ತದೆ. ಒಂದು ಸಾರಿ ನಾವು ಆತನವರಾಗಿ ಬಿಟ್ಟರೇ ಯಾವುದೂ ಸಹ ನಮ್ಮನ್ನು ಆತನ ಪ್ರೀತಿಯಿಂದ ಅಗಲಿಸಲಾರದು (ರೋಮ 8:38-39). ನಮ್ಮ ರಕ್ಷಣೆಯು ನಮ್ಮ ಸಾಧನೆಯ ಮೇಲೆ ಆಧಾರಗೊಳ್ಳದೆ ಶಿಲುಬೆಯ ಮೇಲೆ ಮಾಡಿ ಮುಗಿಸಿದ ಕಾರ್ಯದ ಮೇಲೆ ಆಧಾರಗೊಂಡಿದೆ.
ನೀವು ನಿಮ್ಮ ನಂಬಿಕೆಯನ್ನು ಯೇಸುಕ್ರಿಸ್ತನ ಮೇಲೆ ಇಟ್ಟಿದ್ದೀರಾ, ಆತನೊಬ್ಬನೇ ನಿಮ್ಮ ರಕ್ಷಣೆಗೆ ಕಾರಣನು ಎಂಬುದರ ಮೇಲೆ ವಿಶ್ವಾಸವಿಟ್ಟಿದ್ದೀರಾ? ಹಾಗಿದ್ದರೆ ನಿಮ್ಮ ಹೆಸರುಗಳು ಜೀವ ಬಾಧ್ಯರ ಪುಸ್ತಕದಲ್ಲಿ ಬರೆಯಲ್ಪಟ್ಟಿದೆ ಎಂದು ಉಲ್ಲಾಸದಿಂದ ಹರ್ಷಿಸಿರಿ.ಯಾರೆಲ್ಲಾ ಈ ವಿಶ್ವಾಸದಲ್ಲಿದ್ದಾರೋ ಅವರ ಹೆಸರುಗಳನ್ನು ಅಳಿಸಿ ಬಿಡುವುದೇ ಇಲ್ಲ ಎಂದು ಆತನು ಕೊಟ್ಟಿರುವ ವಾಗ್ದಾನದಲ್ಲಿ ಆರಾಮವಾಗಿರಿ. ಈ ಒಂದು ಸತ್ಯವು ನೀವು ನಿಮ್ಮ ಜೀವಿತದಲ್ಲಿ ಎದುರಿಸುತ್ತಿರುವ ಎಲ್ಲಾ ಸವಾಲುಗಳ ಮಧ್ಯೆ ನಿಮ್ಮಲ್ಲಿ ಸಮಾಧಾನವನ್ನು- ಭರವಸೆಯನ್ನು ತುಂಬಿಸಲಿ.
ಪ್ರಾರ್ಥನೆಗಳು
ಕರ್ತನಾದ ಯೇಸುವೇ ಜೀವಬಾದ್ಯರ ಪುಸ್ತಕದಲ್ಲಿ ನನ್ನ ಹೆಸರನ್ನು ಬರೆದಿರುವುದಕ್ಕಾಗಿ ನಿನಗೆ ಸ್ತೋತ್ರ. ಎಂದಿಗೂ ಈ ಅತಿಶಯವಾದ ರಕ್ಷಣಾ ವರವನ್ನು ಅಲ್ಪವಾಗಿ ಎಣಿಸದಂತೆ ಕೃಪೆ ಮಾಡು. ನಾನೆಂದೂ ನಿನಗೇ ಸ್ವಂತವೆಂಬ ಆನಂದದಿಂದಲೂ- ಭರವಸೆಯಿಂದಲೂ ಪ್ರತಿದಿನವೂ ಜೀವಿಸುವ ಜ್ಞಾನವನ್ನು ಯೇಸು ನಾಮದಲ್ಲಿ ನನಗೆ ಅನುಗ್ರಹಿಸು. ಆಮೆನ್.
Join our WhatsApp Channel
Most Read
● ಶ್ರೇಷ್ಠತೆಯ ಬೆನ್ನಟ್ಟುವಿಕೆ.● ದಿನ 03 : 40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಅನುಕರಣೆ
● ಬೆಟ್ಟಗಳ ಮತ್ತು ತಗ್ಗಿನ ದೇವರು.
● ನಮ್ಮ ಹಿಂದಿರುವ ಉರಿಯುವ ಸೇತುವೆಗಳು
● ಪರಿಣಾಮಕಾರಿಯಾಗಿ ಸತ್ಯವೇದವನ್ನು ಓದುವುದು ಹೇಗೆ
● ನಿರುತ್ಸಾಹ ಪಡಿಸುವ ಬಾಣಗಳನ್ನು ಜಯಿಸುವುದು-1
ಅನಿಸಿಕೆಗಳು