ಅನುದಿನದ ಮನ್ನಾ
1
1
82
ನಿಮ್ಮ ಭವಿಷ್ಯಕ್ಕಾಗಿ ದೇವರ ಕೃಪೆ ಮತ್ತು ಉದ್ದೇಶವನ್ನು ಅಳವಡಿಸಿಕೊಳ್ಳುವುದು
Tuesday, 4th of November 2025
"ಹಿಂದಿನ ಸಂಗತಿಗಳನ್ನು ಜ್ಞಾಪಕಕ್ಕೆ ತಂದುಕೊಳ್ಳಬೇಡಿರಿ, ಪುರಾತನ ಕಾರ್ಯಗಳನ್ನು ಮರೆತುಬಿಡಿರಿ. ಇಗೋ, ಹೊಸ ಕಾರ್ಯವನ್ನು ಮಾಡುವೆನು, ಈಗ ತಲೆದೋರುತ್ತಲಿದೆ. ಇದು ನಿಮಗೆ ಕಾಣುವುದಿಲ್ಲವೋ? ನಾನು ಅರಣ್ಯದಲ್ಲಿ ಮಾರ್ಗವನ್ನು ಏರ್ಪಡಿಸಿ, ಅರಣ್ಯದಲ್ಲಿ ನದಿಗಳನ್ನು ಹರಿಸುವೆನು".(ಯೆಶಾಯ 43:18-19)
ನಮ್ಮ ಕರೆಯು ಸಾಂತ್ವನದ ಸಮಯಗಳಿಗಿಂತ ಸಂಘರ್ಷಣೆಯ ಸಮಯಗಳಲ್ಲಿ ಪ್ರಕಟಗೊಳ್ಳುತ್ತದೆ ಎಂದು ಹೇಳಲಾಗುತ್ತದೆ. ಬೈಬಲ್ ಇತಿಹಾಸವನ್ನು ಅವಲೋಕನ ಮಾಡುವಾಗ, ಈ ಹೇಳಿಕೆಗೆ ಪ್ರತಿಧ್ವನಿಸುವ ಸತ್ಯವನ್ನು ನಾವು ಕಂಡುಕೊಳ್ಳುತ್ತೇವೆ. ಮೋಶೆ ಫರೋಹನನ್ನು ಎದುರಿಸಿದನು, ದಾವೀದನು ಗೋಲಿಯಾತನನ್ನು ಎದುರಿಸಿದನು ಮತ್ತು ಕರ್ತನಾದ ಯೇಸು ನರಕದ ಕೋಪವನ್ನು ನೇರವಾಗಿ ಎದುರಿಸಿದನು.
ಈ ಸಂಘರ್ಷಣೆಯ ಪ್ರತಿಯೊಂದು ಕ್ಷಣವೂ ಅವರ ಜೀವನಕ್ಕೆ ಇರುವ ಒಂದು ದೊಡ್ಡ ಯೋಜನೆ ಮತ್ತು ಉದ್ದೇಶವನ್ನು ಬಹಿರಂಗಪಡಿಸಿತು, ಇದು ದೈವಿಕ ಕರೆಯನ್ನು ಗೊಟ್ಟುಪಡಿಸಿತು. ಆದರೆ ಮುಂದೆ ಏನೆಲ್ಲಾ ಇದೆ ಎಂಬುದನ್ನು ನಾವು ನಿಜವಾಗಿಯೂ ತಿಳಿದುಕೊಂಡು ಅಳವಡಿಸಿಕೊಳ್ಳುವ ಮೊದಲು, ನಾವು ನಮ್ಮ ಹಿಂದಿನದನ್ನು ಒಪ್ಪಿಕೊಳ್ಳಬೇಕು ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳೋಣ. ನಮ್ಮ ಹಿಂದಿನ ತಪ್ಪುಗಳು, ವೈಫಲ್ಯಗಳು ಅಥವಾ ತಪ್ಪಿದ ಅವಕಾಶಗಳು ನಮ್ಮನ್ನು ಕಾಡುವ ಪರಿ ಅಸಾಮಾನ್ಯವೇನಲ್ಲ.
ಮತ್ತು, ಅನೇಕ ಬಾರಿ, ನಾವೇ ನಮಗೆ ಕೆಟ್ಟ ವಿಮರ್ಶಕರಾಗಿ, ಹಿಂದಿನ ವೈಫಲ್ಯತೆಗೆ ನಮ್ಮ ದೌರ್ಬಲ್ಯಗಳೆ ಕಾರಣ ಎಂದು ನಾವು ಗ್ರಹಿಸಿದ್ದಕ್ಕಾಗಿ ನಮ್ಮನ್ನು ನಾವೇ ಶಿಕ್ಷಿಸಿಕೊಳ್ಳುತ್ತೇವೆ.
ಕೆಲವೊಮ್ಮೆ, ನಾವು ಇತರರನ್ನು ದೂಷಿಸುತ್ತೇವೆ. ಒಳ್ಳೆಯ ಸುದ್ದಿ ಏನೆಂದರೆ ದೇವರು ನಮ್ಮ ಹಿಂದಿನ ಮಸೂರದ ಮೂಲಕ ನಮ್ಮನ್ನು ನೋಡುವುದಿಲ್ಲ
"ಸಹೋದರರೇ, ನಾನಂತೂ ಪಡೆದುಕೊಂಡವನೆಂದು ನನ್ನನ್ನು ಈ ವರೆಗೂ ಎಣಿಸಿಕೊಳ್ಳುವುದಿಲ್ಲ. ಆದರೆ ಒಂದು, ನಾನು ಹಿಂದಿನ ಸಂಗತಿಗಳನ್ನು ಮರೆತುಬಿಟ್ಟು ಮುಂದಿನವುಗಳನ್ನು ಹಿಡಿಯುವುದಕ್ಕಾಗಿ ಎದೆಬೊಗ್ಗಿದವನಾಗಿ, ದೇವರು ಕ್ರಿಸ್ತನ ಮೂಲಕವಾಗಿ ನಮ್ಮನ್ನು ಮೇಲಕ್ಕೆ ಕರೆದು ನಮ್ಮ ಮುಂದೆ ಇಟ್ಟಿರುವ ಬಿರುದನ್ನು ಹೊಂದುವ ಗುರಿಯನ್ನು ತಲುಪಲೆಂದು ಓಡುತ್ತಾ ಇದ್ದೇನೆ." ಎಂದು "ಫಿಲಿಪ್ಪಿ 3:13-14 ರಲ್ಲಿ, ಅಪೊಸ್ತಲ ಪೌಲನು ಬರೆಯುತ್ತಾನೆ.
ನಾವು ನಮ್ಮ ನಿನ್ನೆಗಳ ನೆನಪುಗಳಲ್ಲಿ ಸಿಲುಕಿಕೊಂಡಾಗ, ದೇವರು ನಮ್ಮ ಜೀವನದಲ್ಲಿ ಮಾಡಲು ಪ್ರಯತ್ನಿಸುತ್ತಿರುವ ಹೊಸ ವಿಷಯವನ್ನು ಗ್ರಹಿಸಲು ಅದು ಅಡ್ಡಿ ಮಾಡುತ್ತದೆ. ದೇವರ ಪ್ರತಿರೂಪದಲ್ಲಿ ರಚಿಸಲಾದ ನಮ್ಮ ನಿಜವಾದ ಗುರುತನ್ನು ನೋಡುವುದು ಕಷ್ಟವಾಗುತ್ತದೆ. ಇದು ದೇವರು ನಾವು ನಮ್ಮ ಜೀವಿತವನ್ನು ಸಾಗಿಸಲು ಬಯಸುವ ದೃಷ್ಟಿಯಲ್ಲ. ಆತನ ಕೃಪೆ ಮತ್ತು ಕರುಣೆಯಿಂದ ಚಿತ್ರಿಸಲಾದ ಭವಿಷ್ಯಕ್ಕೆ ಹೆಜ್ಜೆ ಹಾಕಲು ನಾವು ಅವಮಾನದ ಸಂಕೋಲೆಗಳಿಂದ ಮುಕ್ತರಾಗಬೇಕೆಂದು ಆತನು ಬಯಸುತ್ತಾನೆ.
ಯೋಹಾನ 8 ರಲ್ಲಿ ವ್ಯಭಿಚಾರದಲ್ಲಿ ಸಿಕ್ಕಿಬಿದ್ದ ಸ್ತ್ರೀಯನ್ನು ಯೇಸು ಸಂಧಿಸಿದಾಗ, ಧರ್ಮಶಾಸ್ತ್ರವು ಅವಳನ್ನು ಕಲ್ಲೆಸೆದು ಕೊಲ್ಲಬೇಕೆಂದು ಹೇಳಿದ್ದರೂ ಸಹ, ಆತನು ಅವಳನ್ನು ಖಂಡಿಸಲಿಲ್ಲ. ಬದಲಾಗಿ, ಆತನು ಅವಳಿಗೆ, “ನಾನೂ ನಿನ್ನನ್ನು ಖಂಡಿಸುವುದಿಲ್ಲ; ಹೋಗು, ಮತ್ತು ಇಂದಿನಿಂದ ಪಾಪ ಮಾಡಬೇಡ” ಎಂದು ಹೇಳಿದನು. ಯೇಸು ಅವಳಿಗೆ ಕೃಪೆಯನ್ನು ನೀಡಿದನು, ಹೊಸ ಆರಂಭಕ್ಕೆ ಒಂದು ಅವಕಾಶ ನೀಡಿದನು.ಒಬ್ಬರ ಭೂತಕಾಲವು ಅವರ ಭವಿಷ್ಯಕ್ಕೆ ಅವಮಾನವನ್ನುಂಟುಮಾಡಲು ಬಿಡಬಾರದು ಎಂಬುದಕ್ಕೆ ಇದು ಒಂದು ಆಳವಾದ ಉದಾಹರಣೆಯಾಗಿದೆ.
ಈಗ, ನೀವು ಯೋಚಿಸುತ್ತಿರಬಹುದು, 'ಅದೆಲ್ಲವೂ ಒಳ್ಳೆಯದು ಮತ್ತು ಉತ್ತಮವೇ, ಆದರೆ ನಾನು ಹೇಗೆ ಬಿಡಲಿ?' ಇದು ಒಂದು ಮಾನ್ಯವಾದ ಪ್ರಶ್ನೆ, ಮತ್ತು ಉತ್ತರವು ಸರಳವಾಗಿದ್ದರೂ, ಶರಣಾಗತಿ ಮತ್ತು ನಂಬಿಕೆಯನ್ನು ಇದು ಬೇಡುತ್ತದೆ.
1 ಪೇತ್ರ 5:7 "ನಿಮ್ಮ ಎಲ್ಲಾ ಚಿಂತೆಗಳನ್ನು ಆತನ ಮೇಲೆ ಹಾಕಿರಿ" ಎಂದು ನಮ್ಮನ್ನು ಪ್ರೋತ್ಸಾಹಿಸುತ್ತದೆ ಏಕೆಂದರೆ ಆತನು ನಿಮ್ಮ ಕಾಳಜಿ ವಹಿಸುತ್ತಾನೆ. ನಿಮ್ಮ ಹಿಂದಿನದನ್ನು ಆತನ ಪಾದಗಳಲ್ಲಿ ಇಡುವ ಮೂಲಕ ಪ್ರಾರಂಭಿಸಿ.
ದೇವರು ನಿಮ್ಮನ್ನು ಶಾಶ್ವತ ಪ್ರೀತಿಯಿಂದ ಪ್ರೀತಿಸುತ್ತಾನೆ. ನಮ್ಮ ಎಲ್ಲಾ ಪಾಪಗಳು, ತಪ್ಪುಗಳು ಮತ್ತು ನ್ಯೂನತೆಗಳನ್ನು ಮುಚ್ಚಲು ಆತನ ಕೃಪೆಯೇ ಸಾಕು. ಪ್ರತಿದಿನ ಬೆಳಿಗ್ಗೆ ಹೊಸದಾಗಿರುವ ಆತನ ಕರುಣೆಗಳಲ್ಲಿ ನಂಬಿಕೆ ಇರಿಸಿ ಆರಂಭಿಸಿ.
ನೀವು ಮುಂದುವರಿಯುತ್ತಿದ್ದಂತೆ, ನಿಮ್ಮ ಜೀವನಕ್ಕಾಗಿ ದೇವರ ಯೋಜನೆಯು ನಿಮಗೆ ಹಾನಿ ಮಾಡುವುದಕ್ಕಾಗಿ ಅಲ್ಲ, ಬದಲಾಗಿ ನಿಮಗೆ ಭರವಸೆ ಮತ್ತು ಭವಿಷ್ಯವನ್ನು ನೀಡುವುದಕ್ಕಾಗಿ ಇದೆ ಎಂಬುದನ್ನು ನೆನಪಿಡಿ (ಯೆರೆಮೀಯ 29:11). ಆತನು ತನ್ನ ಆಶೀರ್ವಾದಗಳಿಂದ ತುಂಬಿದ ಗಮ್ಯಸ್ಥಾನಕ್ಕಾಗಿ ನಿಮ್ಮನ್ನು ಸಿದ್ಧಪಡಿಸುತ್ತಿದ್ದಾನೆ ಮತ್ತು ಪ್ರತಿಯೊಂದು ಸಂಘರ್ಷಣೆಯ ಋತುವೂ ನಿಮ್ಮನ್ನು ರೂಪಿಸುತ್ತಾ, ಚಿತ್ರಿಸುತ್ತಿದೆ ಮತ್ತು ಆ ದೈವಿಕ ಕರೆಗಾಗಿ ನಿಮ್ಮನ್ನು ಪರಿಷ್ಕರಿಸುತ್ತಿದೆ.
Bible Reading: Luke 17-19
ಪ್ರಾರ್ಥನೆಗಳು
ಪ್ರೀತಿಯ ಪರಲೋಕದ ತಂದೆಯೇ, ನನ್ನ ಹಿಂದಿನದನ್ನು ಬಿಟ್ಟು ಕೊಟ್ಟು, ನಿಮ್ಮ ಕೃಪೆಯನ್ನು ಸ್ವೀಕರಿಸಲು ಮತ್ತು ನೀವು ನನಗಾಗಿ ಸಿದ್ಧಪಡಿಸಿರುವ ಗಮ್ಯಸ್ಥಾನಕ್ಕೆ ಹೆಜ್ಜೆ ಹಾಕಲು ನನಗೆ ಸಹಾಯ ಮಾಡಿ. ನಾನು ನಿಮ್ಮ ಉದ್ದೇಶದಲ್ಲಿ ನಡೆಯುವಾಗ ನನ್ನಲ್ಲಿ ಧೈರ್ಯ, ಭರವಸೆ ಮತ್ತು ಪ್ರೀತಿಯನ್ನು ಯೇಸುನಾಮದಲ್ಲಿ ತುಂಬಿಸಿ. ಆಮೆನ್.
Join our WhatsApp Channel
Most Read
● ದಿನ 34:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.● ಸಿಟ್ಟಿನ ಬಲೆಯಿಂದ ದೂರ ಉಳಿಯುವುದು
● ಕೆಂಪು ದೀಪದ ಎಚ್ಚರಿಕೆ ಗಂಟೆ
● ದಿನ 12:40 ದಿನಗಳ ಉಪವಾಸ ಪ್ರಾರ್ಥನೆ.
● ಹೋಲಿಕೆಯ ಬಲೆ
● ದೇವರು ಹೇಗೆ ಒದಗಿಸುತ್ತಾನೆ #1
● ಆತ್ಮೀಕ ನಿಯಮ : ಸಹವಾಸ ನಿಯಮ
ಅನಿಸಿಕೆಗಳು
