ಅನುದಿನದ ಮನ್ನಾ
ಬೀಜದಲ್ಲಿರುವ ಶಕ್ತಿ -3
Saturday, 18th of May 2024
2
1
242
Categories :
ಬೀಜದಲ್ಲಿರುವ ಶಕ್ತಿ ( power of the Seed)
1 ಪ್ರತಿಯೊಂದು ಕಾರ್ಯಕ್ಕೂ ಕಾಲವು ಕ್ಲುಪ್ತವಾಗಿದೆ; ಆಕಾಶದ ಕೆಳಗೆ ನಡೆಯುವ ಒಂದೊಂದು ಕೆಲಸಕ್ಕೂ ತಕ್ಕ ಸಮಯವುಂಟು.
2 ಹುಟ್ಟುವ ಸಮಯ, ಸಾಯುವ ಸಮಯ, ನೆಡುವ ಸಮಯ, ನೆಟ್ಟದ್ದನ್ನು ಕಿತ್ತುಹಾಕುವ ಸಮಯ,
3 ಕೊಲ್ಲುವ ಸಮಯ, ಸ್ವಸ್ಥ ಮಾಡುವ ಸಮಯ, ಕೆಡವಿಬಿಡುವ ಸಮಯ, ಕಟ್ಟುವ ಸಮಯ,
4 ಅಳುವ ಸಮಯ, ನಗುವ ಸಮಯ, ಗೋಳಾಡುವ ಸಮಯ, ಕುಣಿದಾಡುವ ಸಮಯ,
5 ಕಲ್ಲುಗಳನ್ನು ಚೆಲ್ಲುವ ಸಮಯ, ಕಲ್ಲುಗಳನ್ನು ಕೂಡಿಸುವ ಸಮಯ, ಅಪ್ಪುವ ಸಮಯ, ಅಪ್ಪದಿರುವ ಸಮಯ,
6 ಗಳಿಸುವ ಸಮಯ, ಕಳೆಯುವ ಸಮಯ, ಕಾಪಾಡುವ ಸಮಯ, ಬಿಸಾಡುವ ಸಮಯ, ಹರಿಯುವ ಸಮಯ,
8 ದ್ವೇಷಿಸುವ ಸಮಯ, ಯುದ್ಧದ ಸಮಯ, ಸಮಾಧಾನದ ಸಮಯ - ಅಂತೂ ಒಂದೊಂದು ಕೆಲಸಕ್ಕೂ ತಕ್ಕ ಸಮಯವುಂಟು."(ಪ್ರಸಂಗಿ 3:1-6 )
ಇಂದು "ಬೀಜದಲ್ಲಿರುವ ಶಕ್ತಿ" ಎಂಬ ಸರಣಿಯ ಅಧ್ಯಯನದ ಮೂರನೇ ಕಂತಿನಲ್ಲಿದ್ದೇವೆ. ನೀವು ದೈವಿಕ ಸತ್ಯವನ್ನು ತಿಳಿದುಕೊಳ್ಳುತ್ತಾ, ನಿಮ್ಮ ಜೀವಿತದಲ್ಲಿ ಅವುಗಳನ್ನು ಅಳವಡಿಸಿಕೊಳ್ಳುತ್ತಿದ್ದೀರಿ ಎಂದು ನಾನು ನಿರೀಕ್ಷಿಸುತ್ತೇನೆ.
ನಾವಿಂದು ಐದನೇ ಬೀಜದ ಕಡೆಗೆ ನಮ್ಮ ಗಮನ ಹರಿಸೋಣ...
5. ಸಮಯ
ಸಮಯ ಎಂಬುದು ಭೂಮಿಯ ಮೇಲೆ ಚಲಾವಣೆಯಲ್ಲಿರುವ ನಾಣ್ಯವಾಗಿದೆ. ಪರಲೋಕದಲ್ಲಿ ಸಮಯ ಎಂಬ ಪರಿವೇ ಇರುವುದಿಲ್ಲ. ಆದರೆ ಇಲ್ಲಿ ನಿಮ್ಮ ಸುತ್ತಲೂ ಏನನ್ನು ನೋಡುತ್ತೀರೋ ಸಮಯದೊಂದಿಗೆ ಅದನ್ನು ವ್ಯಾಪಾರ ಮಾಡುತ್ತೀರಿ. ನನ್ನ ಸ್ನೇಹಿತರೊಬ್ಬರು ಹೀಗೆ ಹೇಳುವುದನ್ನು ಕೇಳಲ್ಪಟ್ಟೆ, "ನಾನು ನನ್ನ ದೇಹದ ಹೆಚ್ಚಿನ ತೂಕವನ್ನು ಕಳಕೊಳ್ಳಬೇಕು. ಎಂದು ಬಯಸುತ್ತಿದ್ದೇನೆ ಆದರೆ ಅದಕ್ಕಾಗಿ ಸಮಯವೇ ಸಿಗುತ್ತಿಲ್ಲ"ಎಂದು.
ಈಗ, ನನ್ನ ಆ ಸ್ನೇಹಿತರು ನೆಟ್ಪ್ಲಿಕ್ಸ್ ನಲ್ಲಿ ಚಲನಚಿತ್ರ ವೀಕ್ಷಿಸಲು ಕಡಿಮೆ ಎಂದರೂ ಎರಡು ಗಂಟೆ ಕಳೆಯುತ್ತಾರೆ. ಅವರು ತಮ್ಮ ಸಮಯವನ್ನು ಮನೋರಂಜನೆಗಾಗಿ ವ್ಯಯ ಮಾಡಲು ಅವರಿಗೆ ಮನಸ್ಸಿದೆ. ಆದರೆ ತಮ್ಮ ದೇಹದ ಆರೋಗ್ಯಕ್ಕಾಗಿ ಅದನ್ನು ವ್ಯಯ ಮಾಡಲು ಅವರಿಗೆ ಮನಸ್ಸಿಲ್ಲ. ನಾನು ಏನನ್ನು ಹೇಳಲು ಬಯಸುತ್ತಿದ್ದೇನೆ ಅದು ನಿಮಗೆ ಅರ್ಥವಾಯಿತೆಂದು ತಿಳಿದುಕೊಳ್ಳುತ್ತೇನೆ.
ಇಂದು ನೀವು ಯಾವುದನ್ನು ಹೊಂದಿಕೊಳ್ಳಲು ನಿಮ್ಮ ಸಮಯವೆಂಬ ಬೀಜವನ್ನು ನೀವು ಬಿತ್ತುತ್ತಿಲ್ಲವೋ ಅದರ ಫಲ ನಿಮಗೆ ದೊರೆತಿಲ್ಲ ಎಂದು ಈ ಸಂಗತಿ ನನಗೆ ಹೇಳುತ್ತಿದೆ.
ಇಳುವರಿ ಸುಮಾರಾಗಿದೆಯೋ ಇಲ್ಲವೇ ಅತ್ಯುತ್ತಮವಾಗಿದೆಯೋ ಅದನ್ನು ವಿಭಾಗಿಸುವಂಥದ್ದು ಸಮಯದ ನಿರ್ವಹಣೆಯಾಗಿದೆ. ತುಂಬಾ ದಿನಗಳ ಹಿಂದೆ ಸಮಯದ ಮೌಲ್ಯ ಅರಿಯದಂತಹ ವ್ಯಕ್ತಿಯನ್ನು ಎಂದಿಗೂ ನಾನು ಕೆಲಸಕ್ಕೆ ನೇಮಿಸಿಕೊಳ್ಳಬಾರದು ಎಂಬ ನಿರ್ಧಾರ ಕೈಗೊಂಡೆ. ಸಮಯದ ಕುರಿತು ಒಬ್ಬ ವ್ಯಕ್ತಿಯಲ್ಲಿರುವ ಅಜಾಗರೂಕ ವರ್ತನೆ ಆ ವ್ಯಕ್ತಿಗೂ ಅವರ ಸುತ್ತಲ ಜನರಿಗೂ ಹಾನಿಕಾರಕ ಸಂಗತಿಯಾಗಿದೆ.
ಸಮಯ ಎನ್ನುವಂಥದ್ದು ನಮ್ಮ ಜೀವಿತಕ್ಕೆ ಕೊಟ್ಟಿರುವ ಅತ್ಯಮೂಲ್ಯ ಬೀಜವಾಗಿ ನಾವು ಅದನ್ನು ಬೀಜದಂತೆ ರಕ್ಷಿಸಲು, ಪಾಲಿಸಲು ಮತ್ತು ಸಂಭ್ರಮಿಸಲು ಮನಸ್ಸಿಲ್ಲದವರಾಗಿದ್ದರೆ ನಾವು ನಮ್ಮನ್ನು ಉದ್ದೇಶಪೂರ್ವಕವಾಗಿ ವೈಫಲ್ಯತೆಗೆ ಗುರಿ ಮಾಡಿಕೊಳ್ಳುತ್ತೇವೆ.
ನಿಮ್ಮ ಯಾವುದೇ ಹಂತದಲ್ಲಿ ದೇವರು ನಿಮ್ಮನ್ನು ಕರೆದಿದ್ದರೂ ಅಲ್ಲಿ ಯಾವಾಗಲೂ ಸಮಯವೆಂಬ ಬೀಜವಿರುತ್ತದೆ. ನೀವು ಆ ಬಿತ್ತನೆಯ ಸಮಯವನ್ನು ಅಸಡ್ಡೆ ಮಾಡಿದರೆ ನಿಮ್ಮ ಭವಿಷ್ಯವನ್ನು ನೀವೇ ಮೊಟಕುಗೊಳಿಸಿಕೊಳ್ಳುತ್ತೀರಿ. ಒಂದು ಶುಭ ಸುದ್ದಿ ಏನೆಂದರೆ ಭೂಮಿಯ ಮೇಲೆ ಇರುವ ಎಲ್ಲರಿಗೂ ಒಂದು ಬಿತ್ತನೆಯ ಸಮಯ ನೇಮಿಸಲ್ಪಟ್ಟಿದೆ. ಈ ನೇಮಕವಾಗಿರುವ ಬಿತ್ತನೆ ಸಮಯವನ್ನು ಸಮರ್ಪಕವಾಗಿ ಬಳಸಿಕೊಂಡರೆ ಕಾಡನ್ನು ಸ್ವರ್ಗ ವನ್ನಾಗಿ ಮಾಡಬಹುದು. ಅದು ನಿಮ್ಮ ಸಂಬಂಧಗಳಾಗಿರಬಹುದು ಅಥವಾ ವ್ಯವಹಾರದಲ್ಲಿ ನಾವು ಹೋರಾಟಗಳಿರಬಹುದು ನೀವು ನಿಮ್ಮ ಸಮಯವೆಂಬ ಬೀಜವನ್ನು ಬಿತ್ತುವುದಾದರೆ ಖಂಡಿತವಾಗಿಯೂ ಅದು ಕೈಗೂಡುತ್ತದೆ.
ಪ್ರಾರ್ಥನೆಗಳು
ತಂದೆಯೇ, ನೀನು ನನ್ನ ಜೀವಿತದಲ್ಲಿ ಕೊಟ್ಟಿರುವ ಬಿತ್ತನೆ ಸಮಯವನ್ನು ನಾನು ಗುರುತಿಸಿಕೊಳ್ಳುವಂತೆ ವಿವೇಚನಾ ಆತ್ಮವನ್ನು ನನಗೆ ಅನುಗ್ರಹಿಸು. ಸರಿಯಾದ ನಡವಳಿಕೆಗಳು ನನ್ನದಾಗಲಿ ಎಂದು ಯೇಸು ನಾಮದಲ್ಲಿ ಪ್ರಾರ್ಥಿಸುತ್ತೇನೆ ತಂದೆಯೇ. ಆಮೆನ್.
Join our WhatsApp Channel
Most Read
● ನಂಬಿಕೆಯಲ್ಲಿರುವ ಬಲ● ಅನ್ಯ ಭಾಷೆಯಲ್ಲಿ ಪ್ರಾರ್ಥಿಸುವಂಥದ್ದು ಆಂತರಿಕ ಸ್ವಸ್ಥತೆಯನ್ನು ತರುತ್ತದೆ.
● ಮತ್ತೊಬ್ಬ ಯೇಸು, ಬೇರೊಂದು ಆತ್ಮ, ಮತ್ತು ಬೇರೊಂದು ಸುವಾರ್ತೆ-1
● ಹಣಕಾಸಿನ ಅವ್ಯವಸ್ಥೆಯಿಂದ ಪಾರಾಗುವುದು ಹೇಗೆ?
● ದಿನ 20:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ದೈವಿಕ ಅನುಕ್ರಮ - 1
● ಭಾನುವಾರದ ಬೆಳಗ್ಗೆ ನಿಗದಿತ ಸಮಯಕ್ಕೆ ಸಭೆಗೆ ಹೋಗುವುದು ಹೇಗೆ
ಅನಿಸಿಕೆಗಳು