ಅನುದಿನದ ಮನ್ನಾ
ನಿರ್ಣಾಯಕ ಅಂಶವಾಗಿರುವ ವಾತಾವರಣದ ಒಳನೋಟ -3
Sunday, 28th of April 2024
1
1
192
Categories :
ವಾತಾವರಣ (Atmosphere)
ನಾವೀಗ ವಾತಾವರಣದ ಕುರಿತು ಕಲಿಯುತ್ತಾ ಇದ್ದೇವೆ. ಇಂದು ನಾವು ಅದರ ಮುಂದುವರಿದ ಭಾಗವಾಗಿ ಇನ್ನಷ್ಟು ಆಳವಾಗಿ ವಾತಾವರಣದ ಒಳನೋಟವನ್ನು ಕಲಿಯೋಣ.
ನನಗೆ ಯಾವಾಗಲೂ ಕೇಳುವ ಪ್ರಶ್ನೆ ಯಾವುದೆಂದರೆ "ನಾವು ವಾತಾವರಣವನ್ನು ಸಿದ್ಧಗೊಳಿಸಬಹುದಾ" ಅದಕ್ಕೆ ಉತ್ತರವೆಂದರೆ "ಹೌದು". ಇದಕ್ಕಾಗಿ ನಾವು ನಮಗಿರುವ ಪರಿಪೂರ್ಣವಾದ ಮಾದರಿಯೂ ಮುಂದಾಳುವೂ ಆದ ಯೇಸು ಸ್ವಾಮಿಯಿಂದ ಕಲಿಯಬೇಕಾದ ಅವಶ್ಯಕತೆ ಇದೆ (ಇಬ್ರಿಯ 6:20,1ಪೇತ್ರ 2).
ಕರ್ತನಾದ ಯೇಸುವು ಯಾಯೀರನ ಮನೆಗೆ ಅವನ ಮಗಳನ್ನು ಸ್ವಸ್ಥ ಪಡಿಸಲು ಹೋಗುವ ದಾರಿಯಲ್ಲಿದ್ದಾಗಲೇ ಆಕೆಯು ಸತ್ತು ಹೋದಳು ಎಂಬ ವರ್ತಮಾನ ಕೇಳಿದನು.
"ಆದರೆ ಯೇಸು ಅದನ್ನು ಕೇಳಿ ಅವನಿಗೆ - ಅಂಜಬೇಡ, ನಂಬಿಕೆ ಮಾತ್ರ ಇರಲಿ, ಆಕೆ ಬದುಕುವಳು ಎಂದು ಉತ್ತರಕೊಟ್ಟನು.51 ತರುವಾಯ ಆತನು ಆ ಮನೆಗೆ ಹೋಗಿ ಪೇತ್ರನು ಯೋಹಾನನು ಯಾಕೋಬನು ಆ ಹುಡುಗಿಯ ತಂದೆತಾಯಿಗಳು ಇಷ್ಟು ಮಂದಿಯನ್ನೇ ಹೊರತು ಬೇರೆ ಯಾರನ್ನೂ ತನ್ನ ಸಂಗಡ ಒಳಕ್ಕೆ ಬರಗೊಡಲಿಲ್ಲ.52ಎಲ್ಲರು ಅಳುತ್ತಾ ಆಕೆಗೋಸ್ಕರ ಎದೆಬಡುಕೊಳ್ಳುತ್ತಾ ಇದ್ದರು. ಯೇಸು - ಅಳಬೇಡಿರಿ, ಆಕೆ ಸತ್ತಿಲ್ಲ, ನಿದ್ದೆಮಾಡುತ್ತಾಳೆ ಅನ್ನಲಾಗಿ53ಜನರು ಆಕೆ ಸತ್ತಳೆಂದು ತಿಳಿದುಕೊಂಡದರಿಂದ ಆತನನ್ನು ಹಾಸ್ಯಮಾಡಿದರು.54ಆದರೆ ಆತನು ಆಕೆಯ ಕೈ ಹಿಡಿದು - ಅಮ್ಮಣ್ಣೀ, ಏಳು ಎಂದು ಕೂಗಿದನು.55 ಆಕೆಯ ಪ್ರಾಣ ತಿರಿಗಿ ಬಂದು ತಕ್ಷಣವೇ ಆಕೆ ಎದ್ದಳು."(ಲೂಕ 8:50-55)
ಆ ಚಿಕ್ಕ ಹುಡುಗಿಯನ್ನು ಮತ್ತೆ ಜೀವಂತವಾಗಿ ಎಬ್ಬಿಸುವ ಮೊದಲು ಆತನು ಅಪಹಾಸ್ಯ ಮಾಡುವವರನ್ನು ಹೊರಗೆ ಅಟ್ಟಿದನು. ಹೀಗೆ ಅವನು ಅದ್ಭುತ ನಡೆಯುವ ವಾತಾವರಣವನ್ನು ಸಿದ್ಧಪಡಿಸಿದನು.
ನಾವು ನಮ್ಮನ್ನು ಆಡಿಕೊಳ್ಳುವವರ ಬಾಯನ್ನು ಮುಚ್ಚಿಸಲು ಸಾಧ್ಯವಾಗದೇ ಇರಬಹುದು. ಆದರೆ ನಮ್ಮೊಳಗಿರುವ ಅಹಂಕಾರ, ಕ್ಷಮಿಸಲಾರದಂತಹ ಹೃದಯ ಇತರೆ ವಿಚಾರಗಳನ್ನು ನಮ್ಮ ಜೀವಿತದಿಂದ ಹೊರದೂಡಲು ನಮಗೆ ಸಾಧ್ಯವಿದೆ.
ಮತ್ತೊಬ್ಬರಿಗಾಗಿ ನೀವು ಪ್ರಾರ್ಥಿಸುವ ಮೊದಲು ಅವರು ತಮ್ಮ ಪಾಪಗಳಿಗಾಗಿ ಪಶ್ಚಾತಾಪ ಪಟ್ಟು ಮಾನಸಾಂತರ ಹೊಂದಿ ಯೇಸುವನ್ನು ತಮ್ಮ ರಕ್ಷಕನಾಗಿ ಸ್ವೀಕರಿಸಿಕೊಳ್ಳುವಂತೆ ನೀವು ನಡೆಸಿದ್ದೀರಾ? ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಹಾಗೆಯೇ ನೀವು ಮತ್ತೊಬ್ಬರಿಗಾಗಿ ಪ್ರಾರ್ಥಿಸುವ ಮೊದಲು ಆರಾಧನೆಯಲ್ಲಿ ಕೆಲಕಾಲ ಕಳೆಯುವುದನ್ನು ಖಚಿತಪಡಿಸಿಕೊಳ್ಳಿ. ಆನಂತರವೇ ಮಧ್ಯಸ್ಥಿಕೆ ಪ್ರಾರ್ಥನೆಯನ್ನು ಆರಂಭಿಸಿ. ಅದು ನಿಮ್ಮ ಹೃದಯವನ್ನು ಪವಿತ್ರಾತ್ಮನೊಂದಿಗೆ ಜೊತೆಗೂಡಿಸುತ್ತದೆ.
ಅಪೋಸ್ತಲನಾದ ಪೇತ್ರನು ತನ್ನ ಕರ್ತನೂ ಒಡೆಯನೂ ಆದ ಯೇಸುಕ್ರಿಸ್ತನಿಂದ ಅದ್ಭುತಗಳನ್ನು ಜರುಗಿಸುವ ವಾತಾವರಣವನ್ನು ಸಿದ್ಧಪಡಿಸುವುದರ ರಹಸ್ಯವನ್ನು ಅರಿತಿದ್ದನು.
ಪೇತ್ರನು ದೊರ್ಕಳೆಂಬ ಸ್ತ್ರೀಗಾಗಿ ಪ್ರಾರ್ಥಿಸಲು ಕರೆ ಕಳುಹಿಸಲ್ಪಟ್ಟಾಗ"ಪೇತ್ರನು ಅವರೆಲ್ಲರನ್ನು ಹೊರಕ್ಕೆ ಕಳುಹಿಸಿ ಮೊಣಕಾಲೂರಿ ಪ್ರಾರ್ಥನೆಮಾಡಿ ಶವದ ಕಡೆಗೆ ತಿರುಗಿಕೊಂಡು - ತಬಿಥಾ, ಏಳು ಅಂದನು. ಆಕೆಯು ಕಣ್ಣು ತೆರೆದು ಪೇತ್ರನನ್ನು ನೋಡಿ ಎದ್ದು ಕೂತುಕೊಂಡಳು."(ಅಪೊಸ್ತಲರ ಕೃತ್ಯಗಳು 9:40)
ಪೇತ್ರನು ಕರ್ತನಾದ ಯೇಸುವಿನಂತೆ ಎಲ್ಲಾ ಆಟಂಕಗಳನ್ನು ತೆಗೆದುಹಾಕಿ ಅದ್ಭುತಗಳು ಜರಗುವಂತ ವಾತಾವರಣವನ್ನು ಸಿದ್ಧಪಡಿಸಿದನು. ನಾವೂ ಸಹ ನಮ್ಮ ಯಜಮಾನನು ಮತ್ತು ಆತನ ಮಹಾನ್ ಅಪೋಸ್ತಲರ ಹೆಜ್ಜೆ ಜಾಡನ್ನು ಅನುಸರಿಸಿ ಹೀಗೆಯೇ ವಾತಾವರಣವನ್ನು ಸಿದ್ಧಪಡಿಸುವುದನ್ನು ಕಲಿಯಬೇಕು.
ಮತ್ತೊಂದು ಸತ್ಯದ ನಿಧಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನನಗೆ ಅವಕಾಶ ಮಾಡಿಕೊಡಿ.
"ಪರಲೋಕರಾಜ್ಯದ ಬೀಗದ ಕೈಗಳನ್ನು ನಿನಗೆ ಕೊಡುವೆನು; ಭೂಲೋಕದಲ್ಲಿ ನೀನು ಯಾವದನ್ನು ಕಟ್ಟುತ್ತೀಯೋ, ಅದು ಪರಲೋಕದಲ್ಲಿಯೂ ಕಟ್ಟಿರುವದು; ಮತ್ತು ಭೂಲೋಕದಲ್ಲಿ ನೀನು ಯಾವದನ್ನು ಬಿಚ್ಚುತ್ತೀಯೋ ಅದು ಪರಲೋಕದಲ್ಲಿಯೂ ಬಿಚ್ಚಿರುವದು ಅಂದನು." (ಮತ್ತಾಯ 16:19)
ದೇವರು ನಮಗೆ ಪರಲೋಕದ ಸ್ಥಳಗಳಲ್ಲಿ ದುಷ್ಟ ಆತ್ಮಗಳನ್ನು ಬಂಧಿಸುವ ಅಧಿಕಾರವನ್ನು ಕೊಟ್ಟಿದ್ದಾನೆ. ನಾವು ಯಾವುದೇ ಸ್ಥಳದಲ್ಲಿ ಪ್ರಾರ್ಥಿಸುವ ಮೊದಲು ಯೇಸುವಿನ ನಾಮದ ಅಧಿಕಾರದ ಮೂಲಕ ಆ ಸ್ಥಳದಲ್ಲಿ ಇರುವಂತಹ ಎಲ್ಲಾ ಆಟಂಕಗಳನ್ನು, ಎಲ್ಲಾ ಎಡರು ತೊಡರುಗಳನ್ನು, ಎಲ್ಲಾ ದುಷ್ಟ ಶಕ್ತಿಗಳ ಕಾರ್ಯಗಳನ್ನು ಬಂಧಿಸುತ್ತೇವೆ. ಹೀಗೆಯೇ ನೀವೂ ಸಹ ಅದ್ಭುತ ಜರುಗುವಂತ ವಾತಾವರಣವನ್ನು ಸಿದ್ಧಪಡಿಸಬೇಕು.
ಪ್ರಾರ್ಥನೆಗಳು
ಪರಲೋಕದಲ್ಲಿರುವ ಪ್ರೀತಿಯುಳ್ಳ ತಂದೆಯೇ, ನನ್ನ ಹಾಗೂ ನನ್ನ ಕುಟುಂಬದಲ್ಲಿ ಅದ್ಭುತವಾದ ಬಿಡುಗಡೆಗಳು ಉಂಟಾಗಲು ಅಡ್ಡಿ ಪಡಿಸುತ್ತಿರುವ ಎಲ್ಲಾ ಅಂಧಕಾರ ಶಕ್ತಿಗಳನ್ನು ಯೇಸುನಾಮದಲ್ಲಿ ಬಂಧಿಸುತ್ತೇನೆ.ನನ್ನ ಹಾಗೂ ನನ್ನ ಕುಟುಂಬದ ಮೇಲೆ ಬಿಡುಗಡೆಯು, ದೇವರ ದಯೆಯು ಯೇಸು ನಾಮದಲ್ಲಿ ಉಂಟಾಗಲೆಂದು ನುಡಿಯುತ್ತೇನೆ. ಆಮೇನ್
Join our WhatsApp Channel
Most Read
● ನಂಬುವವರಾಗಿ ನಡೆಯುವುದು● ಇತರರೊಂದಿಗೆ ಸಮಾಧಾನದಿಂದ ಜೀವಿಸಿರಿ
● ದೂರದಿಂದ ಹಿಂಬಾಲಿಸುವುದು
● ಭಕ್ತಿವೃದ್ಧಿಮಾಡುವ ಅಭ್ಯಾಸಗಳು.
● ಹೆಚ್ಚಿನ ಹೊರೆ ಬೇಡ
● ನೀವು ದೇವರನ್ನು ಎದುರಿಸುತ್ತಿದ್ದೀರಾ?
● ಕರ್ತನ ಸೇವೆ ಮಾಡುವುದು ಎಂದರೇನು II
ಅನಿಸಿಕೆಗಳು