ಅನುದಿನದ ಮನ್ನಾ
ನಿಮ್ಮ ಸಂಪರ್ಕವನ್ನು ಕಳೆದುಕೊಳ್ಳಬೇಡಿರಿ
Thursday, 27th of June 2024
2
1
319
Categories :
ಸಂಪರ್ಕಿಸಲಾಗಿದೆ (Connected)
ಇಂದಿನ ಕಾಲಮಾನದಲ್ಲಿ ನಮ್ಮ ಬಳಿ ಅದ್ಭುತವಾದ ಸೆಲ್ ಫೋನ್ ಗಳಿವೆ. ಕೆಲವು ಸೆಲ್ ಫೋನ್ ಗಳು ಬಹಳ ದುಬಾರಿಯಾದವು ಮತ್ತು ಕೆಲವು ಅಷ್ಟೇನೂ ದುಬಾರಿ ಅಲ್ಲದ್ದು ಮತ್ತು ನಮ್ಮ ಕೈಗೆಟುಕುವ ಬೆಲೆಯುಳ್ಳವು. ಈಗ ನೀವು ನಿಮ್ಮ ಬಳಿಯಲ್ಲಿ ಇಡೀ ಲೋಕದಲ್ಲಿಯೇ ದುಬಾರಿಯಾದ ಮೊಬೈಲ್ ಫೋನನ್ನು ಹೊಂದಿರಬಹುದು. ಆದರೆ ಅದು ಸಂಪರ್ಕ ಜಾಲಕ್ಕೆ ಸಂಪರ್ಕ ಹೊಂದದಿದ್ದರೆ ಅದರಲ್ಲಿ ಒಳ್ಳೆಯದೇನಿಲ್ಲ. ಅದರಲ್ಲಿ ಕೆಲವು ಆಟವಾಡುವುದನ್ನು ಬಿಟ್ಟು ಮತ್ಯಾವುದೇ ರೀತಿಯ ಲಾಭದಾಯಕ ಕಾರ್ಯ ಮಾಡಲು ಸಾಧ್ಯವಿಲ್ಲ. ಸಂಪರ್ಕ ಹೊಂದಿರಬೇಕಾಗಿರುವುದೇ ನಿಜವಾದ ಕೀಲಿ ಕೈ.
"ನೀವು ನನ್ನಲ್ಲಿ ನೆಲೆಗೊಂಡಿರ್ರಿ, ನಾನೂ ನಿಮ್ಮಲ್ಲಿ ನೆಲೆಗೊಂಡಿರುವೆನು. ಕೊಂಬೆಯು ಬಳ್ಳಿಯಲ್ಲಿ ನೆಲೆಗೊಂಡಿರದಿದ್ದರೆ ಹೇಗೆ ತನ್ನಷ್ಟಕ್ಕೆ ತಾನೇ ಫಲಕೊಡಲಾರದೋ ಹಾಗೆಯೇ ನೀವು ನನ್ನಲ್ಲಿ ನೆಲೆಗೊಂಡಿರದಿದ್ದರೆ ಫಲಕೊಡಲಾರಿರಿ."(ಯೋಹಾನ 15:4)
ಕೊಂಬೆಯು ದ್ರಾಕ್ಷಿಬಳ್ಳಿಯಲ್ಲಿ ನೆಲೆಗೊಂಡಿದ್ದರೆ ಮಾತ್ರ ಅದಕ್ಕೆ ಜೀವ.
ದ್ರಾಕ್ಷಾಬಳ್ಳಿಯಲ್ಲಿ ನೆಲೆಗೊಂಡಿರುವ ಕೊಂಬೆಯು ಮಾತ್ರವೇ ಫಲವನ್ನು ಬಿಡುತ್ತದೆ.
ನಮ್ಮ ಜೀವಿತದಲ್ಲಿ ಕಪಟವಾಗಿ ಮಾಡಲಾಗದಂತ ಕೆಲವು ವಿಚಾರಗಳಿವೆ. ಅದರಲ್ಲಿ ಒಂದು ಯೇಸುವಿನೊಂದಿಗೆ ಸಂಪರ್ಕ ಹೊಂದಿರುವೆವೆಂದು ಹೇಳುವಂತಾದ್ದಾಗಿದೆ.
ಕೆಲವರು ಆ ರೀತಿ ನಟಿಸಲು ಪ್ರಯತ್ನಿಸುತ್ತಾರೆ. ಆದರೆ ಸ್ವಲ್ಪ ಕಾಲವಾದ ಮೇಲೆ ಸಿಕ್ಕಿ ಬೀಳುತ್ತಾರೆ.
ನಾನು ಒಂದು ಕೊಂಬೆಯನ್ನು ತೆಗೆದುಕೊಂಡು ಒಂದು ಮರಕ್ಕೆ ಅಂಟಿನಿಂದ ಅಂಟಿಸಿದರೆ ಅದು ಬೆಳೆದು, ಎಲೆ ಬಿಟ್ಟು,ಹಣ್ಣು ಕೊಡುವುದೇ? ಇಲ್ಲ. ಅದು ಸತ್ತು ಹೋಗಿರುವಂಥದ್ದು. ನಾವು ಅದನ್ನು ಮರಕ್ಕೆ ಅಂಟಿಸಿದ ಮಾತ್ರಕ್ಕೆ ಅದು ಆ ಮರದಲ್ಲಿ ನೆಲೆಗೊಂಡಿದೆ ಎಂದು ಅರ್ಥವಲ್ಲ. ಮರದ ಜೀವನಾಳದಲ್ಲಿ ನೆಲೆಗೊಂಡಿದ್ದರೇ ಮಾತ್ರವೇ ಆ ಕೊಂಬೆಯೂ ಸಹ ಜೀವಂತವಾಗಿರಬಲ್ಲದು.
ನಾವು ಯೇಸುವಿನಲ್ಲಿ ನೆಲೆಗೊಂಡಿದ್ದೇವೆ ಎಂದು ಕಾಣುವ ಹಾಗೆ ಇರುವಂತದ್ದು ಬಹಳ ಸುಲಭ. ಆದರೆ ನಾವು ನಿಜವಾಗಿಯೂ ಆತನ ವಾಕ್ಯ ಹಾಗೂ ಪವಿತ್ರ
ಅನ್ಯೋ ನ್ಯತೆಯ ಮೂಲಕ ಕ್ರಿಸ್ತನಲ್ಲಿ ಸಂಪರ್ಕ ಹೊಂದಿರದಿದ್ದರೆ, ನಾವೂ ಸಹ ಆ ದ್ರಾಕ್ಷಾಬಳ್ಳಿಯಲ್ಲಿ ನೆಲೆಗೊಂಡಿರದ ಕೊಂಬೆಯ ಹಾಗೆ ನಮ್ಮ ನಂಬಿಕೆಯೂ ಕುಂದಿ ಹೋಗುತ್ತದೆ.
ನಮ್ಮ ಸಭೆಯ ಸೇವಾ ಕೂಟಕ್ಕೆ ಅನೇಕ ಮಂದಿ ಬರುತ್ತಾರೆ. ನಾನು ಅದಕ್ಕಾಗಿ ದೇವರಿಗೆ ಸ್ತೋತ್ರ ಸಲ್ಲಿಸುತ್ತೇನೆ. ಆದಾಗಿಯೂ ಆರಾಧನೆ ಸಮಯದಲ್ಲಿ ಅವರಲ್ಲಿ ಬಹುತೇಕರು ಅತ್ತಿತ್ತ ನೋಡುತ್ತಾ ಇರುವುದನ್ನು ನಾನು ಆಗಾಗ್ಗೆ ನೋಡುತ್ತಿರುತ್ತೇನೆ. ಅವರು ಬಹಳ ಬೇಗನೆ ಚಂಚಲರಾಗುತ್ತಾರೆ ಮತ್ತು ಇತರರೊಂದಿಗೆ ಮಾತನಾಡುತ್ತಿರುತ್ತಾರೆ.ಇತ್ಯಾದಿ.
ಹಾಜರಾತಿಯು ಕೇವಲ ಧಾರ್ಮಿಕ ನಿಬಂಧನೆಯನ್ನು ಪೂರೈಸುತ್ತದೆ ಅಷ್ಟೇ. ಆದರೆ ಬಾಂಧವ್ಯವೇ ಬದಲಾವಣೆಯನ್ನು ತರುವಂತದ್ದಾಗಿದೆ. ಮತ್ತು ಆ ಬಾಂಧವ್ಯವನ್ನು ನಾವು ಬೆಳೆಸಿಕೊಳ್ಳುವುದಾದರೂ ಹೇಗೆ? ನಿರಂತರವಾಗಿರುವ ಸಂಪರ್ಕವೇ ಬಾಂಧವ್ಯಗಳನ್ನು ಬೆಳೆಸುವುದಕ್ಕೂ ನೆಲೆಗೊಳಿಸುವುದಕ್ಕೂ ಸಾಧನವಾಗಿದೆ.
ಹಾಗಾಗಿ ನೀವು ಸಭೆಯ ಸೇವಾ ಕೂಟಕ್ಕೆ ಹೋದಾಗ ದೇವರಾತ್ಮನೊಂದಿಗೆ ಸಂಪರ್ಕ ಸಾಧಿಸಿರಿ. ನೀವು ದೇವರ ವಾಕ್ಯವನ್ನು ಓದುವಾಗ- ಪ್ರಾರ್ಥಿಸುವಾಗ ಆತನೊಂದಿಗೆ ಸಂಪರ್ಕ ಸಾಧಿಸಿರಿ. ಇದನ್ನು ಪ್ರಯತ್ನಿಸಿ ಮತ್ತು ಎಲ್ಲಾ ಚಂಚಲಗೊಳಿಸುವ ಸಂಗತಿಗಳಿಂದ ವಿಮುಕ್ತರಾಗಿರಿ. ಆಗ ನೀವು ಬೇಗನೇ ಫಲಿತಾಂಶವನ್ನು ಕಾಣುವಿರಿ.
ಪ್ರಾರ್ಥನೆಗಳು
ಕರ್ತನಾದ ಯೇಸುವೆ, ನೀನೇ ನಿಜವಾದ ದ್ರಾಕ್ಷಾಬಳ್ಳಿ. ನಾನು ಯಾವಾಗಲೂ ನಿನ್ನಲ್ಲಿ ನೆಲೆಗೊಂಡಿರುವಂತೆ ಸಹಾಯ ಮಾಡು. ನನ್ನ ಜೀವಿತವು ನಿನ್ನ ಫಲವನ್ನು ಕೊಟ್ಟು ನಿನಗೆ ಘನವನ್ನು- ಮಹಿಮೆಯನ್ನು ಯೇಸುನಾಮದಲ್ಲಿ ತರಲಿ. ಆಮೆನ್.
Join our WhatsApp Channel
Most Read
● ಕರ್ತನ ಸೇವೆ ಮಾಡುವುದು ಎಂದರೇನು II● ಸ್ವಸ್ಥ ಬೋಧನೆಯ ಪ್ರಾಮುಖ್ಯತೆ
● ಭೂರಾಜರುಗಳ ಒಡೆಯನು
● ಮನುಷ್ಯರಿಂದ ಬರುವ ಹೊಗಳಿಕೆಗಿಂತಲೂ ದೇವರು ಕೊಡುವ ಪ್ರತಿಫಲವನ್ನು ಎದುರು ನೋಡುವುದು.
● ಪ್ರೀತಿಯ ಹುಡುಕಾಟ
● ಆತನಿಗೆ ಯಾವುದೇ ಮಿತಿಯಿಲ್ಲ.
● ವಿವೇಚನೆ v/s ತೀರ್ಪು
ಅನಿಸಿಕೆಗಳು