"ಒಂದು ದಿನ ಯೋಸೇಫನು ಕನಸು ಕಂಡು ಅದನ್ನು ತನ್ನ ಅಣ್ಣಂದಿರಿಗೆ ತಿಳಿಸಿದಾಗ ಅವರು ಅವನನ್ನು ಇನ್ನೂ ಹೆಚ್ಚಾಗಿ ದ್ವೇಷಿಸಿದರು". (ಆದಿಕಾಂಡ 37:5)
"ನೀವು ದೊಡ್ಡವರಾದಾಗ ನೀವು ಏನಾಗಲು ಬಯಸುತ್ತೀರಿ?" ಎಂದು ಚಿಕ್ಕ ಮಗುವನ್ನು ಕೇಳಿನೋಡಿ ಅದು "ನಾನು ಪೈಲಟ್ ಅಥವಾ ವೈದ್ಯನಾಗಲು ಬಯಸುತ್ತೇನೆ" ಎಂಬ ಉತ್ತರವನ್ನು ಬಹುಶಃ ಕೊಡುತ್ತದೆ. ಆದರೂ, ನಮ್ಮಲ್ಲಿ ಪ್ರತಿಯೊಬ್ಬರೂ ನಮ್ಮೊಳಗೆ ದೇವರು ನೀಡಿದ ಕನಸನ್ನು ಹುದುಗಿಸಿಕೊಂಡಿದ್ದೇವೆ. ಬಹುಶಃ ನೀವು ನಿಮ್ಮನ್ನು ಒಬ್ಬ ಬೋಧಕರಾಗಿ, ಯಶಸ್ವಿ ವ್ಯಾಪಾರವನ್ನು ಹೊಂದಿರುವ ವ್ಯಕ್ತಿಯಾಗಿ ನಿಮ್ಮನ್ನು ನೀವು ನೋಡಿಕೊಳ್ಳುವ ಕನಸನ್ನು ಹೊಂದಿರಬಹುದು. ನಿಮ್ಮ ಕನಸು ಯಾವುದೇ ಆಗಿರಲಿ , ಅದನ್ನು ಮರೆಯಾಗಲು ಬಿಡಬೇಡಿರಿ; ಅದನ್ನು ಸಾಯಲು ಬಿಡಬೇಡಿರಿ.
ಹಳೆಯ ಒಡಂಬಡಿಕೆಯಲ್ಲಿ, ಯೋಸೆಫನು ಮೂಲಭೂತವಾಗಿ ಒಂದೇ ಸಂದೇಶಕೊಡುವ ಎರಡು ಕನಸುಗಳನ್ನು ಕಂಡನು. ಮೊದಲ ಕನಸಿನಲ್ಲಿ, ಒಂದು ಹೊಲದಲ್ಲಿ ಗೋಧಿಯ ಸಿವುಡುಗಳಿದ್ದವು - ಆ ಪ್ರತಿಯೊಂದೂ ಸಿವುಡುಗಳು ಯಾಕೋಬನ ಮಕ್ಕಳನ್ನು ಪ್ರತಿನಿಧಿಸುತ್ತದೆ. ಅದರಲ್ಲಿ ಯೋಸೇಫನನ್ನು ಪ್ರತಿನಿಧಿಸುವ ಸಿವುಡು "ಎದ್ದು ನೇರವಾಗಿ ನಿಂತಿತು," ಆದರೆ ಎಲ್ಲಾ ಇತರ ಸಿವುಡುಗಳು ಅವನ ಮುಂದೆ ಅಡ್ಡ ಬಿದ್ದಿದ್ದವು (ಆದಿಕಾಂಡ 37:7).
ಎರಡನೆಯ ಕನಸಿನಲ್ಲಿ, ಯೋಸೆಫನು ಸೂರ್ಯ, ಚಂದ್ರ ಮತ್ತು 11 ನಕ್ಷತ್ರಗಳು ಅವನಿಗೆ ನಮಸ್ಕರಿಸುವುದನ್ನು ನೋಡಿದನು (ಆದಿಕಾಂಡ 37: 9). ಈ ಕನಸುಗಳು ಅರ್ಥಹೀನವಾಗಿರಲಿಲ್ಲ. ಅವು ಯೋಸೆಫನ ಭವಿಷ್ಯದ ಪ್ರವಾದನಾ ಚಿತ್ರಣಗಳಾಗಿದ್ದವು.
ದೇವರು ಕೊಟ್ಟ ಕನಸು ಎಂಬುದು ಒಂದು ಅದ್ಭುತ ವಿಷಯವಾಗಿದೆ.
ನಿಮ್ಮ ಒಳಗಿರುವ ದೇವರು ಅನುಗ್ರಹಿಸಿರುವ ಕನಸು ನಿಮ್ಮ ಭವಿಷ್ಯಕ್ಕಾಗಿ ಭರವಸೆಯನ್ನು ನಿಮ್ಮಲ್ಲಿ ತುಂಬಿ ಪ್ರತಿಯೊಂದು ಅಡೆ ತಡೆಗಳು ನಿಮಗೆ ವಿರುದ್ಧವಾಗಿ ನಿಲ್ಲುವಾಗ ನೀವು ಆ ಕನಸುಗಳನ್ನು ಸಾಕಾರ ಗೊಳಿಸಿಕೊಳ್ಳುವಂತೆ ಪ್ರಯತ್ನಿಸಲು ನಿಮ್ಮನ್ನು ಪ್ರೋತ್ಸಾಹಿಸುತ್ತದೆ. ಯೋಸೆಫನು ತನ್ನ ಸ್ವಂತ ಸಹೋದರರಿಂದಲೇ ನೀರಿಲ್ಲದ ಗುಂಡಿಗೆ ಹಾಕಲ್ಪಟ್ಟು ಐಗುಪ್ತರಿಗೆ ಗುಲಾಮನಾಗಿ ಮಾರಲ್ಪಟ್ಟಾಗಲೂ ಅವನನ್ನು ನಿರೀಕ್ಷೆಯಲ್ಲಿ ಮುನ್ನಡಿಸುತಿದ್ದದ್ದು ಇದೇ ಎಂದು ನಾನು ನಂಬುತ್ತೇನೆ. (ಆದಿಕಾಂಡ 37: 24, 28)
ಬೇರೆ ಯಾರಾದರೂ ಇಂತಹ ತಿರಸ್ಕಾರ ಮತ್ತು ಅವಮಾನಕ್ಕೆ ಒಳಗಾಗಿದ್ದರೆ ಮನಸೋತುಹೋಗುತ್ತಿದ್ದರು. ಆದರೆ ಯೋಸೆಫನು ಹಾಗೆ ಮನಮುರಿದವನಾಗಲಿಲ್ಲ . ಅವನ ಮೇಲೆ ಸುಳ್ಳು ಆರೋಪ ಹೊರಿಸಿದಾಗಲೂ, ಯೋಸೇಫನ ಒಳಗಿರುವ ದೇವರು ಒದಗಿಸಿದ ಕನಸು ಅವನನ್ನು ಮುನ್ನಡೆಸುತಿತ್ತು ಎಂದು ನಾನು ನಂಬುತ್ತೇನೆ. ಯೋಸೆಫನು ಐಗುಪ್ತದಲ್ಲಿ ಪ್ರಖ್ಯಾತನಾಗಿ ಅಂತಿಮವಾಗಿ ಅಕ್ಷರಶಃ ಅವನ ಅವನತಿಗೆ ಸಂಚು ರೂಪಿಸಿದ ಜನರ ಮೇಲೆಯೇ ಆಳ್ವಿಕೆ ನಡೆಸಿದರನು. (ಆದಿಕಾಂಡ 45).
ನಮ್ಮಲ್ಲಿ ಕಾರ್ಯಸಾಧಿಸುವ ತನ್ನ ಈ ಶಕ್ತಿಯ ಪ್ರಕಾರ ನಾವು ಬೇಡುವುದಕ್ಕಿಂತಲೂ ಯೋಚಿಸುವುದಕ್ಕಿಂತಲೂ ಅತ್ಯಧಿಕವಾದದ್ದನ್ನು ಮಾಡಲು ಶಕ್ತನಾದ ದೇವರಿಗೆ ಸಭೆಯಲ್ಲಿಯೂ ಕ್ರಿಸ್ತ ಯೇಸುವಿನಲ್ಲಿಯೂ ತಲತಲಾಂತರಕ್ಕೂ ಯುಗಯುಗಾಂತರಕ್ಕೂ ಮಹಿಮೆಯಾಗಲಿ. ಆಮೆನ್.(ಎಫೆ 3:20-21)
ಕರ್ತನು ನಿಮ್ಮ ಕನಸುಗಳನ್ನು ಸಾಕಾರಗೊಳಿಸಬಲ್ಲವನೂ ಮತ್ತು ಸಾಕಾರ ಗೊಳಿಸುವವನೂ ಆಗಿದ್ದಾನೆ. ಏಕೆಂದರೆ ನಿಮ್ಮೊಳಗೆ ಆ ಕನಸುಗಳನ್ನು ಹುದುಗಿಸಿದವನು ಆತನೇ. ಆದ್ದರಿಂದ ಆತನನೊಂದಿಗೆ ಅನ್ಯೋನ್ಯತೆಯಿಂದ ಇರ್ರಿ ಆತನೊಂದಿಗೆ ನಿಮ್ಮ ಕನಸುಗಳನ್ನು ಹೇಳಿಕೊಳ್ಳಿ. ಆತನು ನಿಶ್ಚಯವಾಗಿ ಅದನ್ನು ಸಾಕಾರಗೊಳಿಸುವನು.
ಪ್ರಾರ್ಥನೆಗಳು
ತಂದೆಯೇ, ನನ್ನೆಲ್ಲಾ ಕನಸುಗಳನ್ನು ನಿನಗೇ ಒಪ್ಪಿಸಿಕೊಡುತ್ತೇನೆ. (ಈಗ ನಿಮ್ಮ ಬಯಕೆಗಳನ್ನೆಲ್ಲಾ ಹೇಳಿಕೊಳ್ಳಿ ) ನಾವು ಯೋಚಿಸುವುದಕ್ಕಿಂತಲೂ ಬೇಡುವುದಕ್ಕಿಂತಲೂ ಕಾರ್ಯ ಮಾಡಲು ನೀನು ಶಕ್ತನ್ನಾಗಿದ್ದೀಯ ತಂದೆಯೇ. ನಿನ್ನ ಆತ್ಮದಿಂದ ಯೇಸುನಾಮದಲ್ಲಿ ನನ್ನ ಕನಸುಗಳನ್ನು ಸಾಕಾರಗೊಳಿಸು. ಆಮೆನ್.
Join our WhatsApp Channel
Most Read
● ನಂಬಿಕೆಯ ಮೂಲಕ ಕೃಪೆಯನ್ನು ಪಡೆದುಕೊಳ್ಳುವುದು● ದೇವರ ರೀತಿಯ ನಂಬಿಕೆ
● ಈ ದಿನಮಾನಗಳಲ್ಲಿ ಕಾಣುವ ಅಪರೂಪದ ಸಂಗತಿ
● ಕೆಟ್ಟ ಆಲೋಚನೆಗಳ ಹೋರಾಟವನ್ನು ಗೆಲ್ಲುವುದು
● ಕಟ್ಟಬೇಕಾದ ಬೆಲೆ
● ದೇವರು ನಿಮ್ಮನ್ನು ಉಪಯೋಗಿಸಲು ಬಯಸುತ್ತಾನೆ.
● ಅದ್ಭುತಗಳಲ್ಲಿ ಕಾರ್ಯ ಮಾಡುವುದು - ಕೀಲಿಕೈ #1
ಅನಿಸಿಕೆಗಳು