english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ಹಿನ್ನಡೆಯಿಂದ ಪುನರಾಗಮನದವರೆಗೆ
ಅನುದಿನದ ಮನ್ನಾ

ಹಿನ್ನಡೆಯಿಂದ ಪುನರಾಗಮನದವರೆಗೆ

Wednesday, 8th of October 2025
1 0 163
"ಹಿನ್ನಡೆ ಎಂದರೆ ಮತ್ತೆ ಬರುವ ಸಿದ್ಧತೆ" ಎಂಬ ಮಾತನ್ನು ನಾವೆಲ್ಲರೂ ಕೇಳಿದ್ದೇವೆ. ಆದರೆ ನಾವು ಪ್ರತಿಕೂಲ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಾಗ, ಅದರಲ್ಲಿ ಹೊಳೆಯುವ ಬೆಳ್ಳಿ ರೇಖೆಯನ್ನು ನೋಡುವುದು ಕಷ್ಟ. ಇಂದು, ನಿಮ್ಮ ಜೀವನದ ಕುರಿತು ನಾನು ಪ್ರವಾದನೆ ನುಡಿಯುವುದೇನೆಂದರೆ, ನಿಮ್ಮ ಹಿನ್ನಡೆಗಳು ಸೋಲುಗಳಾಗದೆ ಬದಲಾಗಿ ದೊಡ್ಡ ಸ್ಥಾನಕ್ಕೆ ನಿಮ್ಮನ್ನು ಹೊಂದಿಸುವ ದೈವಿಕ ತಿರುವುಗಳಾಗಲಿ 

ಜೀವನದಲ್ಲಿ ಹಿನ್ನಡೆಗಳ ಸ್ವರೂಪವನ್ನು ಅರ್ಥಮಾಡಿಕೊಳ್ಳುವುದು ಮುಖ್ಯ  ಹಿನ್ನಡೆಗಳು ಯಾವ ಆಕಾರ ಮತ್ತು ಗಾತ್ರಗಳಲ್ಲಿಯಾದರೂ ಬರಬಹುದು. ಉದ್ಯೋಗವನ್ನು ಕಳೆದುಕೊಳ್ಳುವುದು, ಸಂಬಂಧಗಳ ಮುರಿಯುವಿಕೆ ಮತ್ತು ಯೋಜನೆಗಳು ವಿಫಲವಾಗುವುದು ಹೀಗೆ ಅನೇಕ ರೀತಿ. ಅದರ ತಕ್ಷಣದ ಪರಿಣಾಮಗಳು ನಮ್ಮನ್ನು ದಿಗ್ಭ್ರಮೆಗೊಳಿಸಿ, ನಮ್ಮ ಮೌಲ್ಯ ಮತ್ತು ಸಾಮರ್ಥ್ಯಗಳನ್ನು ಪ್ರಶ್ನಿಸುತ್ತವೆ. 

ಆದರೂ, ರೋಮನ್ನರು 8:28 ರಲ್ಲಿ ಬೈಬಲ್ ನಮಗೆ ಹೇಳುವುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು: "ಮತ್ತು ದೇವರು ತನ್ನ ಉದ್ದೇಶದ ಪ್ರಕಾರ ಕರೆಯಲ್ಪಟ್ಟ ತನ್ನನ್ನು ಪ್ರೀತಿಸುವವರ ಒಳಿತಿಗಾಗಿ ಎಲ್ಲಾ ವಿಷಯಗಳಲ್ಲಿಯೂ ತನ್ನ ಕಾರ್ಯ ಮಾಡುತ್ತಾನೆ ಎಂದು ನಮಗೆ ತಿಳಿದಿದೆ."

ಅಪೊಸ್ತಲ ಪೌಲನಿಗೆ ಹಿನ್ನಡೆಗಳು ಹೊಸದೇನಾಗಿರಲಿಲ್ಲ. ಸೆರೆವಾಸದಿಂದ ಹಡಗು ಧ್ವಂಸದವರೆಗೆ, ಅವನು ಹಲವಾರು ಅಡೆತಡೆಗಳನ್ನು ಎದುರಿಸಿದನು ಆದರೆ ಪ್ರತಿಯೊಂದನ್ನು ಇನ್ನೂ ಎತ್ತರಕ್ಕೆ ಏರಲು ಮೆಟ್ಟಿಲು ಕಲ್ಲನ್ನಾಗಿ ಬಳಸಿದನು. 2 ಕೊರಿಂಥ 4:8-9 ರಲ್ಲಿ  "ಎಲ್ಲಾದರಲ್ಲಿಯೂ ನಮಗೆ ಇಕ್ಕಟ್ಟು ಇದ್ದರೂ ನಾವು ಸಂಕಟಪಡುವವರಲ್ಲ. ನಾವು ಗೊಂದಲಕ್ಕೀಡಾಗಿದ್ದರೂ ಹತಾಶರಾಗುವವರಲ್ಲ. ಹಿಂಸೆಪಡುವವರಾಗಿದ್ದರೂ ಕೈಬಿಡಲ್ಪಟ್ಟವರಲ್ಲ. ಕೆಡವಲ್ಪಟ್ಟವರಾಗಿದ್ದರೂ ನಶಿಸಿಹೊಗುವವರಲ್ಲ." ಪೌಲನು ಹೇಳುತ್ತಾನೆ.

ನಿಭಾಯಿಸುವ ತಂತ್ರಗಳು 

ಹಿನ್ನಡೆಗಳಿಂದ ಮರಳಿ ಮುಂದೆ ಬರುವಂತೆ ಮಾಡುವ ನಮ್ಮ ಪ್ರಯಾಣದಲ್ಲಿ, ನಾವು ಮೊದಲು ನಮ್ಮ ದೃಷ್ಟಿಕೋನವನ್ನು ಸರಿಹೊಂದಿಸಿಕೊಳ್ಳಬೇಕು.  ಪೇತ್ರನು ನೀರಿನ ಮೇಲೆ ನಡೆದನು, ಅವನು ಯೇಸುವಿನಿಂದ ತನ್ನ ಕಣ್ಣುಗಳನ್ನು ಕದಲಿಸಿ ಬಿರುಗಾಳಿ ಮತ್ತು ಅಲೆಗಳ ಮೇಲೆ ಕೇಂದ್ರೀಕರಿಸಲು ಪ್ರಾರಂಭಿಸಿದಾಗ ನೀರಲ್ಲಿ ಮುಳುಗಲಾರಾಂಭಿಸಿದನು. (ಮತ್ತಾಯ 14:29-31). 

ನಾವು ನಮ್ಮ ಸಮಸ್ಯೆಗಳ ಮೇಲೆ ನಮ್ಮ ಗಮನವನ್ನು ಕೇಂದ್ರೀಕರಿಸಿದಾಗ, ಅವು ದುಸ್ತರವೆಂದು ತೋರುತ್ತದೆ. ಆದಾಗ್ಯೂ, ನಮ್ಮ ದೃಷ್ಟಿಯನ್ನು ದೇವರ ಕಡೆಗೆ ತಿರುಗಿಸುವ ಮೂಲಕ, ಗೊಂದಲದ ಮಧ್ಯೆಯಲ್ಲೂ ನಾವು ಶಾಂತಿಯನ್ನು ಕಂಡುಕೊಳ್ಳಬಹುದು. ,.

"ನನ್ನ ಸಹೋದರರೇ, ನೀವು ನಾನಾವಿಧವಾದ ಕಷ್ಟಗಳನ್ನು ಅನುಭವಿಸುವಾಗ ಅದನ್ನು ಕೇವಲ ಆನಂದಕರವಾದದ್ದೆಂದು ತಿಳಿಯಿರಿ.ಏಕೆಂದರೆ ನಿಮ್ಮ ನಂಬಿಕೆಗೆ ಆಗುವ ಪರಿಶೋಧನೆಯು ನಿಮಗೆ ತಾಳ್ಮೆಯನ್ನುಂಟು ಮಾಡುತ್ತದೆಂದು ನೀವು ತಿಳಿಯಿರಿ.  ಆ ತಾಳ್ಮೆಯು ಸಂಪೂರ್ಣವಾಗಿ ನಿಮ್ಮಲ್ಲಿ ಫಲಿಸಲಿ, ಆಗ ನೀವು ಸರ್ವಸುಗುಣಸಂಪನ್ನರೂ, ಪರಿಪೂರ್ಣರೂ, ಯಾವುದಕ್ಕೂ ಕಡಿಮೆಯಿಲ್ಲದವರೂ ಆಗುವಿರಿ." ಎಂದು ಯಾಕೋಬ 1:2-4 ನಮಗೆ ಹೇಳುತ್ತದೆ.


ನಿಮ್ಮ ಹಿನ್ನಡೆಯನ್ನು ನಿಮ್ಮಲ್ಲಿರುವ ಇನ್ನೂ ಹೆಚ್ಚಿನ ಸಾಮರ್ಥ್ಯ ವನ್ನು ಉತ್ಪಾದಿಸುವ ಪರೀಕ್ಷೆಯಾಗಿ ನೋಡಿ. ಹೊಸ ಯೋಜನೆಯನ್ನು ರಚಿಸಿ ಮತ್ತು ಸಾಧಿಸಬಹುದಾದ ಗುರಿಗಳನ್ನು ಹೊಂದಿಸಿ. ನಿಮ್ಮ ಪುನರಾಗಮನದ ಪ್ರಯಾಣದಲ್ಲಿ ಹಿನ್ನಡೆಗಳನ್ನು ಎದುರಿಸುವಾಗ, ಜನರು ಸಾಮಾನ್ಯವಾಗಿ ಎರಡು ರೀತಿಯ ಮಾರ್ಗಗಳನ್ನು ಆಯ್ಕೆ ಮಾಡುತ್ತಾರೆ: ಒಂದು ಬಿಟ್ಟುಕೊಡುವುದು ಅಥವಾ ಕೊಡವಿಕೊಂಡು ಎದ್ದೇಳುವುದು. 

ಯೋಸೇಫನ ಕಥೆಯು ಎರಡನೆಯದಕ್ಕೆ ಗಮನಾರ್ಹ ಉದಾಹರಣೆಯಾಗಿದೆ. ತನ್ನ ಸ್ವಂತ ಸಹೋದರರಿಂದ ಗುಲಾಮಗಿರಿಗೆ ಮಾರಲ್ಪಟ್ಟು, ತಪ್ಪೇ ಇಲ್ಲದೇ ಜೈಲಿನಲ್ಲಿರಿಸಲ್ಪಟ್ಟನು ಮತ್ತು ಅವನು ಯಾರಿಗೆ ಸಹಾಯ ಮಾಡಿದನೋ ಅವನೂ ಇವನನ್ನು ಮರೆತುಹೋದನು,ಹೀಗೆ ಯೋಸೇಫನು ಅನೇಕ ಹಿನ್ನಡೆಗಳನ್ನು ಸಹಿಸಿಕೊಂಡನು. ಆದರೂ, ಅವನು ಎಂದಿಗೂ ದೇವರ ಯೋಜನೆಯಲ್ಲಿ ತನ್ನ ನಂಬಿಕೆಯನ್ನು ಕಳೆದುಕೊಳ್ಳಲಿಲ್ಲ ಅಥವಾ ಬಿಟ್ಟುಬಿಡಲಿಲ್ಲ. ಅಂತಿಮವಾಗಿ, ಅವನು ಪ್ರಧಾನ ಅಧಿಕಾರದ ಸ್ಥಾನಕ್ಕೆ ಏರಿಸಲ್ಪಟ್ಟನು, ಅವನ ಕುಟುಂಬವನ್ನು ಮಾತ್ರವಲ್ಲದೆ ಇಡೀ ರಾಷ್ಟ್ರವನ್ನು ಕ್ಷಾಮದಿಂದ ರಕ್ಷಿಸಿದನು (ಆದಿಕಾಂಡ 41). 


ನಿಮ್ಮ ಆಶೀರ್ವಾದಗಳನ್ನು ಎಣಿಸುವ ಮೂಲಕ ಪ್ರಾರಂಭಿಸಿ, ಅವು  ಇಂದು ಎಷ್ಟೇ ಚಿಕ್ಕದಾಗಿ ಕಾಣಿಸಬಹುದು. ಯೋಸೇಫನಂತೆ, ನಿಮ್ಮ ಪರೀಕ್ಷೆಗಳು ವರ್ಷಗಳ ಕಾಲ ಇರಬಹುದು ಆದರೆ ಸಣ್ಣ ಸಣ್ಣ ವಿಜಯಗಳ ಶಕ್ತಿಯನ್ನು ಎಂದಿಗೂ ಕಡಿಮೆಯಾಗಿ ಅಂದಾಜು ಮಾಡಬೇಡಿ. ಇನ್ನೂ ಹೇಳಬೇಕೆಂದರೆ ದಾವೀದನು ದೈತ್ಯ ಗೋಲಿಯಾತನನ್ನು ಒಂದು ಸಣ್ಣ ಕಲ್ಲಿನಿಂದ ಸೋಲಿಸಿದನು (1 ಸಮುವೇಲ 17:49-50).

ಪ್ರತಿ ಸಾಧನೆಯನ್ನು ನಿಮ್ಮ ಪುನರಾಗಮನದತ್ತ ಇಡುವ ಒಂದು ಹೆಜ್ಜೆಯಾಗಿ ಆಚರಿಸಿ. ನಿಮ್ಮ "ಕಲ್ಲು" ಬೆಳಿಗ್ಗೆ ನವೀಕೃತ ಚೈತನ್ಯದೊಂದಿಗೆ ಎಚ್ಚರಗೊಂಡು, ದಿನದ ಸವಾಲುಗಳನ್ನು ಎದುರಿಸಲು ಸಿದ್ಧವಾಗಿರುವಷ್ಟು ಸರಳವಾಗಿರಬಹುದು. ಅದು ಏನೇ ಇರಲಿ, ದೇವರು ನಿಮ್ಮ ಜೀವನದಲ್ಲಿ ಕಾರ್ಯ ಮಾಡುತ್ತಿದ್ದಾನೆ ಎಂಬುದರ ಪುರಾವೆಯಾಗಿ ಅದನ್ನು ಒಪ್ಪಿಕೊಳ್ಳಿ. 

ಪುನರಾಗಮನ ಮಾಡುವ ದೇವರು ನಾವು ಪುನರಾಗಮನದ ದೇವರನ್ನು ಸೇವಿಸುತ್ತೇವೆ. ಆತನು ಲಾಜರನನ್ನು ಸತ್ತವರೊಳಗಿಂದ ಎಬ್ಬಿಸಿದನು (ಯೋಹಾನ 11:43-44), ತೀವ್ರ ಪರೀಕ್ಷೆಗಳ ನಂತರ ಯೋಬನ ಗತಿಯನ್ನು ಪುನಃಸ್ಥಾಪಿಸಿದನು (ಯೋಬ 42:10), ಮತ್ತು ಮುಖ್ಯವಾಗಿ, ಯೇಸು ಕ್ರಿಸ್ತನ ಪುನರುತ್ಥಾನದ ಮೂಲಕ ಮರಣವನ್ನು ಸೋಲಿಸಿದನು (ಮತ್ತಾಯ 28:5-6). ನಿಮ್ಮ ಹಿನ್ನಡೆಯ ಸ್ವರೂಪ ಏನೇ ಆಗಿರಲಿ, ನೀವು ಪರಿಸ್ಥಿತಿಗಳನ್ನು ತಿರುಗಿಸುವಲ್ಲಿ ಪರಿಣತಿ ಹೊಂದಿರುವ ದೇವರನ್ನು ಸೇವಿಸುತ್ತೀರಿ ಎಂಬುದನ್ನು ನೆನಪಿಡಿ. 

Bible Reading: Malachi 1-4
ಪ್ರಾರ್ಥನೆಗಳು
ತಂದೆಯೇ, ಹಿನ್ನಡೆಗಳನ್ನು ಇನ್ನು ಹೆಚ್ಚು ನಂಬಲಾಗದ ವಿಷಯಗಳಿಗೆ ನನ್ನನ್ನು ಕರೆದೋಯ್ಯುವಂತ ದೈವಿಕ ಮಾರ್ಗಗಳಾಗಿ ನೋಡುವ ಶಕ್ತಿಯನ್ನು ನಮಗೆ ನೀಡಿ. ನಮ್ಮ ನಂಬಿಕೆ ಮತ್ತು ಪರಿಶ್ರಮವನ್ನು ಬೆಳಗಿಸಿ, ನೀವು ಪುನರಾಗಮನದ ದೇವರಾಗಿದ್ದು, ಪರೀಕ್ಷೆಗಳನ್ನೇ ಜಯಧ್ವಜವನ್ನಾಗಿ ಪರಿವರ್ತಿಸುವವರಾಗಿದ್ದೀರಿ ಎಂಬುದನ್ನು ಯೇಸುನಾಮದಲ್ಲಿ ನಮಗೆ ನೆನಪಿಸ. ಆಮೆನ್.

Join our WhatsApp Channel


Most Read
● ವರ್ಗಗಳು : ದೇವರ ಹೆಸರುಗಳು
● ಸಹವಾಸದಲ್ಲಿರುವ ಅಭಿಷೇಕ
● ದಿನ 14:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ದುರಾತ್ಮಗಳ ಪ್ರವೇಶವನ್ನು ತಡೆಯುವ ಅಂಶಗಳು - II
● ನಿರ್ಣಾಯಕ ಅಂಶವಾಗಿರುವ ವಾತಾವರಣದ ಒಳನೋಟ -3
● ನಿಮ್ಮ ಹೃದಯವನ್ನು ಕಾಪಾಡಿಕೊಳ್ಳುವುದು ಹೇಗೆ?
● ನೀವು ದೇವರ ಉದ್ದೇಶಕ್ಕಾಗಿ ನಿಯೋಜಿಸಲ್ಪಟ್ಟಿದ್ದೀರಿ
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2025 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್