ಅನುದಿನದ ಮನ್ನಾ
ಪುರುಷರು ಏಕೆ ಪತನಗೊಳ್ಳುವರು -3
Friday, 10th of May 2024
4
2
332
Categories :
ಜೀವನದ ಪಾಠಗಳು (Life Lessons)
ಮಹಾನ್ ಸ್ತ್ರೀ -ಪುರುಷರು ಏಕೆ ಪತನಗೊಂಡರು ಎಂಬ ಸರಣಿಯು ನಿಮಗೆ ಆಶೀರ್ವಾದಕರವಾಗಿದೆ ಎಂದು ನಾನು ನಂಬುತ್ತೇನೆ. ಇಂದು ನಾವು ದಾವೀದನ ದುರಂತಮಯವಾದ ಪತನಕ್ಕೆ ಕಾರಣಗಳನ್ನು ಇನ್ನಷ್ಟು ಆಳವಾಗಿ ಪರಿಶೀಲಿಸೋಣ.
ದಾವಿದನು ಬಕ್ಷಬೆಯನ್ನು ಅರಮನೆಗೆ ಕರೆತಂದಾಗ ಅವನ ಹೆಂಡತಿಯಾದ ಮಿಕಾಲಳು ಅರಮನೆಯಲ್ಲಿ ಕಾಣಿಸಲಿಲ್ಲ. ಆಕೆಯು ಆ ಸನ್ನಿವೇಶದಲ್ಲಿಯೇ ಇರಲಿಲ್ಲ. ಆಗ ದಾವೀದನ ಶೂರ ಸೈನಿಕರು ಸಹ ಯುದ್ಧದಲ್ಲಿದ್ದರು. ತಪ್ಪಾದ ಸ್ಥಳ, ತಪ್ಪಾದ ಸಮಯ ಮತ್ತು ತಪ್ಪಾದ ಯೋಜನೆ ಎಂಬ ಈ ಮೂರು ಹೆಣಿಗೆಯ ತಪ್ಪುಗಳು ಅವನ ಹೆಂಡತಿಯು ಕಳೆದುಹೋಗುವಂತೆ ಅವನಿಗೆ ಮಾಡಿತ್ತು.
ನಿಮ್ಮ ವಿರುದ್ಧವಾದ ಲಿಂಗದವರೊಂದಿಗೆ ಏಕಾಂತದಲ್ಲಿರುವ ಪರಿಸ್ಥಿತಿಯಿಂದ ತಪ್ಪಿಸಿಕೊಳ್ಳುವುದಕ್ಕೆ ಮದುವೆಯು ಒಂದು ನಿಜವಾಗಿ ನಿಮಗೆ ರಕ್ಷಣಾ ಗಡಿಯಾಗಿದೆ. ಆದರೆ ಇದು ಯಾವಾಗಲೂ ಸಾಧ್ಯವಿಲ್ಲ. ಆದರೆ ನಾವು ಪ್ರಯತ್ನಿಸಬೇಕು ಮತ್ತು ಹೆಚ್ಚಿನ ಆದ್ಯತೆಯನ್ನು ಅದಕ್ಕೆ ನೀಡಬೇಕು. ನೀವು ನಿಮಗೆ ವಿರುದ್ಧ ಲಿಂಗದವರೊಂದಿಗೆ ಸಮಾಲೋಚನೆ ನಡೆಸಬೇಕಾದ ಪರಿಸ್ಥಿತಿ ಬಂದಾಗ ಎಂದಿಗೂ ಅವರೊಟ್ಟಿಗೆ ಏಕಾಂಗಿಯಾಗಿ ಇರಬೇಡಿರಿ. ಇಂತಹ ಸವಾಲೋಚನೆಗಳಲ್ಲಿ ಅನೇಕ ಖಾಸಗಿ ವಿಚಾರಗಳನ್ನು ಹಂಚಿಕೊಳ್ಳಲಾಗುತ್ತದೆ. ಆಗ ಅಂತಹ ಸಮಯದಲ್ಲಿ ಅವರಿಗೆ ಸಹಾನುಭೂತಿ ತೋರಿಸಲು ಆರಂಭಿಸಿದಾಗ ಇಂತಹ ಘಟನೆಗಳು ಜರುಗಿ ನಾವು ಖರೀದಿಸದಿದ್ದರೂ ಕೆಲವೊಂದು ಗೊಂದಲಗಳಲ್ಲಿ ನಾವು ಸಿಕ್ಕಿ ಬೀಳುತ್ತವೆ.
ನಾನೊಮ್ಮೆ ಕರ್ತನಾದ ಯೇಸುಕ್ರಿಸ್ತನ ಸುವಾರ್ತೆಯನ್ನು ಸಾರುತ್ತಾ ಇಡೀ ಪ್ರಪಂಚದ ಮೇಲೆಯೇ ಪರಿಣಾಮ ಬೀರುವಂತಹ ಒಂದು ಗುಂಪಿನ ಜನರನ್ನು ಭೇಟಿಯಾಗಿದ್ದೆ. ಅವರೂ ಸಹ ಇದೇ ತತ್ವವನ್ನು ಹಂಚಿಕೊಂಡರು. ಸಿಂಹಾವಲೋಕನ ಮಾಡಿ ನೋಡಿದರೆ ದಾವೀದನು ಒಬ್ಬ ವಿವಾಹಿತ ಪುರುಷನಾಗಿದ್ದನು. ತನ್ನ ಹೆಂಡತಿಯನ್ನು ಅವನು ಆ ಸಮಯದಲ್ಲಿ ಜೊತೆಗಿರಿಸಿಕೊಂಡಿರಬೇಕಿತ್ತು ಆಗ ಅವನು ನಾಶನದ ಹಳ್ಳಕ್ಕೆ ಬೀಳುವುದರಿಂದ ತಪ್ಪಿಸಿಕೊಳ್ಳಬಹುದಿತ್ತು.
"ಯೆಹೋವದೇವರು ಉಂಟುಮಾಡಿದ ಎಲ್ಲಾ ಭೂಜಂತುಗಳಲ್ಲಿ ಸರ್ಪವು ಯುಕ್ತಿಯುಳ್ಳದ್ದಾಗಿತ್ತು. ಅದು ಸ್ತ್ರೀಯ ಬಳಿಗೆ ಬಂದು - ಏನವ್ವಾ, ತೋಟದಲ್ಲಿರುವ ಯಾವ ಮರದ ಹಣ್ಣನ್ನೂ ನೀವು ತಿನ್ನಬಾರದೆಂದು ದೇವರು ಅಪ್ಪಣೆಕೊಟ್ಟಿರುವದು ನಿಜವೋ ಎಂದು ಕೇಳಲು... "(ಆದಿಕಾಂಡ 3:1)
ಅನೇಕ ಸತ್ಯವೇದ ಪಂಡಿತರು ಹೇಳುವ ಪ್ರಕಾರ ಹವ್ವಳು ಏಕಾಂಗಿಯಾಗಿ ಇದ್ದಾಗ ಸರ್ಪವು ಬಂದು ಅವಳನ್ನು ಹಣ್ಣನ್ನು ತಿನ್ನುವಂತೆ ಪ್ರೇರೇಪಿಸಿತು. ಒಂದು ಪಕ್ಷ ಆದಾಮನು ಆಗ ಅವಳ ಜೊತೆಯಲ್ಲಿದ್ದರೆ ಅದರ ಕಥೆಯೇ ಬೇರೆಯಾಗುತ್ತಿತ್ತು. ಆದರೆ ಅವಳು ಒಂದು ತಪ್ಪಾದ ಕ್ಷೇತ್ರದಲ್ಲಿದ್ದಳು.
"ಆಕೆ ಯೋಸೇಫನ ಸಂಗಡ ಪ್ರತಿ ದಿನವೂ ಈ ಮಾತನ್ನು ಆಡಿದಾಗ್ಯೂ ಅವನು ಅದಕ್ಕೆ ಕಿವಿಗೊಡದೆ ಆಕೆಯಲ್ಲಿ ಸಂಗಮಮಾಡುವದಕ್ಕಾಗಲಿ ಆಕೆಯ ಬಳಿಯಲ್ಲಿರುವದಕ್ಕಾಗಲಿ ಒಪ್ಪಿಕೊಳ್ಳಲೇ ಇಲ್ಲ. [11] ಹೀಗಿರಲು ಒಂದು ದಿನ ಅವನು ತನ್ನ ಕೆಲಸದ ಮೇಲೆ ಮನೆಗೆ ಬಂದಾಗ ಮನೆಯವರಲ್ಲಿ ಯಾರೂ ಒಳಗೆ ಇಲ್ಲದಿರುವಲ್ಲಿ... "(ಆದಿಕಾಂಡ 39:10-11)
ಯೋಸೇಫನು ಆ ಒಂದು ಸನ್ನಿವೇಶದಿಂದ ಓಡಿ ಹೋದನು. ಆದರೂ ಅವನು ತಪ್ಪಾಗಿ ಆರೋಪಿಸಲ್ಪಟ್ಟು ದೂಷಿಸಲ್ಪಟ್ಟನು. ಇದು ಅವನನ್ನು ಯಾವುದೇ ತಪ್ಪಿಲ್ಲದಿದ್ದರೂ ಸೆರೆಮನೆಯಲ್ಲಿ ಕೊಳೆಯುವಂತೆ ಮಾಡಿತು. ಯೋಸೇಫನು ಆಕೆಗೆ ಏಕಾಂತದಲ್ಲಿ ಸಿಕ್ಕದಂತೆ ಸ್ವಲ್ಪ ಜಾಗೃತೆವಹಿಸಿದ್ದಾರೆ ಅವನು ಅದೆಷ್ಟೋ ನೋವು ಸಂಕಟದಿಂದ ಪಾರಾಗುತ್ತಿದ್ದನು.
ಪ್ರಾರ್ಥನೆಗಳು
ತಂದೆಯೇ, ಯೇಸುವಿನ ನಾಮದಲ್ಲಿ ದೈವಿಕವಾದ ಸಂಬಂಧಗಳನ್ನು ದಯಪಾಲಿಸಿರೆಂದು ಬೇಡಿಕೊಳ್ಳುತ್ತೇನೆ. ಹಾಗೆಯೇ ಆರೋಗ್ಯಕರವಾದ ಹಾಗೂ ಅರ್ಥಪೂರ್ಣವಾದ ಸಂಬಂಧಗಳನ್ನು ಬೆಳೆಸಿಕೊಳ್ಳುವಂತೆ ನಿನ್ನ ಕೃಪೆಯನ್ನು ಅನುಗ್ರಹಿಸಿ ಎಂದು ಬೇಡುತ್ತೇನೆ. ಆಮೇನ್.
Join our WhatsApp Channel
Most Read
● ದ್ವಾರ ಪಾಲಕರು / ಕೋವರ ಕಾಯುವವರು● ಅಪ್ಪನ ಮಗಳು - ಅಕ್ಷಾ
● ಮಹಾತ್ತಾದ ಕಾರ್ಯಗಳು
● ಅಂತಿಮ ಸುತ್ತನ್ನೂ ಗೆಲ್ಲುವುದು
● ಕರ್ತನೇ, ನನ್ನ ಚಿತ್ತ- ಚಂಚಲಗೊಳಿಸುವ ಸಂಗತಿಗಳಿಂದ ನನ್ನನ್ನು ಬಿಡಿಸು.
● ನಿರ್ಣಾಯಕ ಅಂಶವಾಗಿರುವ ವಾತಾವರಣದ ಒಳನೋಟಗಳು-1
● ದಿನ 23:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
ಅನಿಸಿಕೆಗಳು