ಅನುದಿನದ ಮನ್ನಾ
ದಿನ 21:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
Sunday, 31st of December 2023
2
0
347
Categories :
ಉಪವಾಸ ಮತ್ತು ಪ್ರಾರ್ಥನೆ (Fasting and prayer)
ಕರ್ತನಿಗಾಗಿ ಯಜ್ಞವೇದಿಯನ್ನು ಕಟ್ಟುವುದು.
"ಯೆಹೋವನು ಮೋಶೆಗೆ - ಮೊದಲನೆಯ ತಿಂಗಳಿನ ಪ್ರಥಮದಿನದಲ್ಲಿ ನೀನು ದೇವದರ್ಶನದ ಗುಡಾರವನ್ನು ಎತ್ತಿ ನಿಲ್ಲಿಸಬೇಕು.17ಎರಡನೆಯ ವರುಷದ ಮೊದಲನೆಯ ತಿಂಗಳಿನ ಪ್ರಥಮ ದಿನದಲ್ಲಿ ಮೋಶೆ ಗುಡಾರವನ್ನು ಎತ್ತಿ ನಿಲ್ಲಿಸಿದನು."(ವಿಮೋಚನಕಾಂಡ 40:1-2,17).
ಈ ಮೇಲಿನ ವಾಕ್ಯಗಳಲ್ಲಿ ಕರ್ತನು ಮೋಶೆಗೆ ಮೊದಲ ತಿಂಗಳ ಮೊದಲ ದಿನದಲ್ಲಿ (ಹೊಸ ವರ್ಷದ ದಿನದಲ್ಲಿ) ದೇವ ದರ್ಶನ ಗುಡಾರವನ್ನು ಅರಣ್ಯದಲ್ಲಿ ಎತ್ತಿ ನಿಲ್ಲಿಸಲು ಆಜ್ಞಾಪಿಸಿದನು. ಇದು ನಿಮ್ಮ ಜೀವಿತದ ಗತಿಯನ್ನು ಮಾರ್ಪಡಿಸುವ ಯಜ್ಞವೇದಿಗೆ ಒಂದು ಪರಿಪೂರ್ಣವಾದಂತಹ ಉದಾಹರಣೆಯಾಗಿದೆ.
ಆದರೆ, ದುಷ್ಟ ಯಜ್ಞವೇದಿಗಳು ಸಹ ಅಸ್ತಿತ್ವದಲ್ಲಿ ಇದೆ ಎಂಬುದು ನಿಮಗೆ ಗೊತ್ತೇ? ದುಷ್ಟ ಯಜ್ಞವೇದಿಗಳು ಜೀವ ಸ್ವರೂಪನಾದ ದೇವರ ಯಜ್ಞ ವೇದಿಗಳಿಗಿಂತ ವಿಭಿನ್ನವಾದವು. ಇವುಗಳ ಮೂಲಕ ದುಷ್ಟನು ಕ್ರೈಸ್ತರ ಹಾಗೂ ನಿರುಪರಾಧಿಗಳ ವಿರುದ್ಧವಾಗಿಯೂ ಯಜ್ಞದ ಕಾರ್ಯಗಳನ್ನು ನಡೆಸುತ್ತಾರೆ. ಈ ಪ್ರಪಂಚದಲ್ಲಿ ಅನೇಕ ರೀತಿಯ ಯಜ್ಞವೇದಿಗಳಿದ್ದು ಅವುಗಳೆಲ್ಲ ಮನುಷ್ಯರ ಗತಿಯನ್ನು ನಾಶಪಡಿಸಲು ಕಾರ್ಯ ಮಾಡುತ್ತಿವೆ ಎಂಬುದರ ಅರಿವು ಕ್ರೈಸ್ತರಾದ ನಮಗಿರಬೇಕು.
ಯಜ್ಞವೇದಿ ಕುರಿತಾದ ಕೆಲವು ವಾಸ್ತವ ಅಂಶಗಳು.
ಸತ್ಯವೇದ ಆಧಾರಿತ ವಾಕ್ಯಗಳ ಅಧ್ಯಯನದಿಂದ ಕಂಡುಕೊಂಡ ಯಜ್ಞವೇದಿಯ ಕುರಿತಾದ ಕೆಲವು ಮಾಹಿತಿಗಳನ್ನು ನಾನಿಂದು ನಿಮಗಾಗಿ ಕೊಡುತ್ತಿದ್ದೇನೆ. ಅವು ಈ ಕೆಳಕಂಡಂತಿವೆ.
- ಪ್ರತಿಯೊಂದು ಯಜ್ಞವೇದಿಗೂ ಅದರ ಪಾರಪತ್ಯವಹಿಸುವ ಯಾಜಕರು ಇದ್ದೇ ಇರುತ್ತಾರೆ.
- ಪ್ರತಿಯೊಂದು ಯಜ್ಞ ವೇದಿಗೂ ನಿರಂತರವಾದ ಬಲಿದಾನದ ಅಗತ್ಯವಿದೆ.
- ಯಜ್ಞ ವೇದಿಗಳು ಆತ್ಮಗಳನ್ನು ಸಂಪರ್ಕಿಸುವ ತಾಣವಾಗಿದೆ.
- ಯಜ್ಞ ವೇದಿಗಳು ಒಡಂಬಡಿಕೆಗಳನ್ನು ಮಾಡಿಕೊಳ್ಳುವ ಆತ್ಮಿಕ ವೇದಿಕೆಯಾಗಿದೆ.
- ಯಜ್ಞ ವೇದಿಗಳು ವಿನಿಮಯದ ತಾಣವಾಗಿದ್ದು ನಿರ್ದಿಷ್ಟವಾದ ಕೆಲವು ವಹಿವಾಟುಗಳು ಅಲ್ಲಿ ನಡೆಯುತ್ತವೆ.
- ಪ್ರತಿಯೊಂದು ಯಜ್ಞವೇದಿಗೂ ಅದರದೇ ಧ್ವನಿಯಿದ್ದು ಅದರೊಟ್ಟಿಗೆ ಮಾತಾಡಬಹುದಾಗಿದೆ. ಬಿಳಾಮನು ಏಳು ಯಜ್ಞ ವೇದಿಗಳನ್ನು ಕಟ್ಟಿ ಯಜ್ಞವೇದಿಗಳ ಮೂಲಕ ಇಸ್ರಾಯೆಲ್ಯರ ವಿರುದ್ಧ ಮಾತಾಡ ಬಯಸಿದ. ಆದರೆ ದೇವರು ಅವನನ್ನು ಯಜ್ಞವೇದಿಯ ಮೂಲಕ ತನ್ನ ಜನರ ವಿರುದ್ಧವಾಗಿ ಮಾತನಾಡದಂತೆ ತಡೆದನು.
ಯಜ್ಞವೇದಿಯಿಂದ ಶಾಪಗಳೂ ಆಶೀರ್ವಾದಗಳೂ ಹೊರಡುತ್ತವೆ.
ಯಜ್ಞವೇದಿಗಳು ಶಕ್ತಿಯುತವಾಗಿದ್ದು ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿನವರೆಗೂ ಸಹ ಅವು ಕಾರ್ಯ ಮಾಡಬಲ್ಲವು.
ದುಷ್ಟ ಯಜ್ಞ ವೇದಿಗಳು ಎಷ್ಟೇ ಶಕ್ತಿಯುತವಾಗಿರಲಿ, ದೇವರ ಬಲವು ಅದನ್ನು ಸಂಧಿಸಿದಾಗ ಅದು ನಾಶವಾಗಿ ಹೋಗುತ್ತದೆ ಆದ್ದರಿಂದ ನೀವು ದೇವರಬಲದಲ್ಲಿ ಬೆಳೆಯಬೇಕು ಆಗ ಮಾತ್ರ ನಿಮ್ಮ ಪ್ರಗತಿಗೆ ಸವಾಲನ್ನು ಒಡ್ಡುವ ಎಲ್ಲಾ ದುಷ್ಟ ಯಜ್ಞ ವೇದಿಗಳನ್ನು ನಾಶಪಡಿಸಬಹುದು.
ಯಜ್ಞ ವೇದಿಗಳ ಕಾರ್ಯಾಚರಣೆ ಬಗ್ಗೆ ನೀವು ಹೇಗೆ ತಿಳಿದುಕೊಳ್ಳಬಹುದು?
1. ದುಷ್ಟ ಯಜ್ಞ ವೇದಿಗಳು ನಿಮ್ಮನ್ನು ಜೀವ ಸ್ವರೂಪನಾದ ದೇವರಿಂದ ದೂರ ಮಾಡಲು ನಿರ್ಮಿಸಲ್ಪಟ್ಟಿರುತ್ತವೆ.
"ಎಫ್ರಾಯೀಮು ಯಜ್ಞವೇದಿಗಳನ್ನು ಹೆಚ್ಚೆಚ್ಚಾಗಿ ಕಟ್ಟಿ ಪಾಪಮಾಡಿದೆ; ಕಟ್ಟಿದ ಯಜ್ಞವೇದಿಗಳೇ ಅದಕ್ಕೆ ಪಾಪವಾಗಿ ಪರಿಣವಿುಸಿವೆ."(ಹೋಶೇಯ 8:11).
2. ನಿಮ್ಮ ಆತ್ಮಿಕ ಕರೆಯನ್ನು ಪೂರೈಸಲು ತಡವಾಗುತ್ತಿರುವುದು ಈ ದುಷ್ಟ ಯಜ್ಞಗಳಿಂದ.
3. ನಿಮ್ಮ ಆತ್ಮಿಕ ಕರೆಯನ್ನು ದುಷ್ಟ ಯಜ್ಞಗಳು ನಾಶ ಮಾಡಬಲ್ಲವು.
4. ದುಷ್ಟ ಯಜ್ಞ ವೇದಿಗಳು ನಿಮ್ಮ ಆತ್ಮಿಕ ಕರೆಯನ್ನು ಮಲಿನಗೊಳಿಸುತ್ತವೆ. (ಯೆರೆಮೆಯ 19:13)
5. ದುಷ್ಟ ಯಜ್ಞವೇದಿಗಳಿಂದಾಗಿಯೇ ವಂಶಾವಳಿಗಳಲ್ಲಿ ರೋಗ, ಬಡತನ ಮತ್ತು ದುರಾತ್ಮಗಳು ಹೊಕ್ಕುತ್ತವೆ.
ಈ ದುಷ್ಟ ಯಜ್ಞವೇದಿಗಳ ವಿರೋಧವಾಗಿ ನಾವು ಏನು ಮಾಡಬೇಕು?
1. ಪ್ರವಾದನ ವಾಕ್ಯವನ್ನು ಅವುಗಳ ಮೇಲೆ ಪ್ರವಾದಿಸಬೇಕು.
"ಆ ಮನುಷ್ಯನು ಯೆಹೋವನ ಅಪ್ಪಣೆಯಿಂದ ವೇದಿಯನ್ನು ಕುರಿತು - ವೇದಿಯೇ, ವೇದಿಯೇ, ದಾವೀದನ ಸಂತಾನದಲ್ಲಿ ಯೋಷೀಯನು ಎಂಬೊಬ್ಬನು ಹುಟ್ಟುವನು; ಅವನು ನಿನ್ನ ಮೇಲೆ ಧೂಪಸುಡುವ ಪೂಜಾಸ್ಥಳಗಳ ಯಾಜಕರನ್ನು ಹಿಡಿದು ಅವರನ್ನು ನಿನ್ನ ಮೇಲೆಯೇ ಯಜ್ಞಮಾಡುವನು. ಮನುಷ್ಯರ ಎಲುಬುಗಳು ನಿನ್ನ ಮೇಲೆ ಸುಡಲ್ಪಡುವವು ಎಂದು ಯೆಹೋವನು ಹೇಳುತ್ತಾನೆ ಅಂದನು. ಅವನು ಅದನ್ನು ಹಿಂದೆಗೆಯಲಾರದವನಾದನು. ಯಜ್ಞವೇದಿಯು ಸೀಳಿ ಅದರ ಮೇಲಣ ಬೂದಿಯು ಬಿದ್ದುಹೋಯಿತು; ಹೀಗೆ ಆ ದೇವರ ಮನುಷ್ಯನು ಯೆಹೋವನ ಅಪ್ಪಣೆಯಿಂದ ಹೇಳಿದ ಗುರುತು ನೆರವೇರಿತು."(1 ಅರಸುಗಳು 13:2,5).
ನಮ್ಮ ಮೌನವೇ ದುಷ್ಟ ಯಜ್ಞವೇದಿಗಳು ಸಲೀಸಾಗಿ ಕಾರ್ಯ ಮಾಡಲು ಅನುಮತಿ ನೀಡುವಂಥದ್ದು. ನಾವು ಭೂಮಿಯ ಮೇಲೆ ಇದರ ವಿರುದ್ಧವಾಗಿ ಆಜ್ಞಾಪಿಸದೆ ಹೋದರೆ ಅದು ಪರಲೋಕದಲ್ಲಿಯೂ ಜರಗುವುದಿಲ್ಲ. ವಿಶ್ವಾಸಿಗಳಾದ ನಾವೇ ದೇವರ ಚಿತ್ತವನ್ನು ಭೂಮಿಯ ಮೇಲೆ ತರುವಂತವರಾಗಿದ್ದೇವೆ.
ನಿಮ್ಮ ಜೀವಿತದಲ್ಲಿ ನಿಮ್ಮ ದೈವಿಕ ಕರೆಯನ್ನು ಪೂರೈಸಲು ತೊಂದರೆ ಪಡಿಸುತ್ತಿರುವ ಯಾವುದೇ ಯಜ್ಞವೇಧಿಗಳಾಗಲಿ, ಯೇಸು ನಾಮದಲ್ಲಿ ಸರ್ವನಾಶವಾಗಿ ಹೋಗಲೆಂದು ನಿಮ್ಮ ಜೀವಿತದ ಮೇಲೆ ಯೇಸು ನಾಮದಲ್ಲಿ ನಾನು ಅಜ್ಞಾಪಿಸುತ್ತೇನೆ.
2. ದೈವಿಕವಾದ ಯಜ್ಞವೇದಿಯನ್ನು ಕಟ್ಟಬೇಕು.
ಬರಗಾಲದ ನಂತರ ಎಲೀಯನು ಜನರನ್ನೆಲ್ಲಾ ಕೂಡಿಸಿ ಮಳೆ ಬೀಳಬೇಕೆಂದು ಪ್ರಾರ್ಥಿಸಿದ ರೀತಿಯು ನಿಜಕ್ಕೂ ಕುತೂಹಲಕಾರಿಯಾದದ್ದು.
"ಅನಂತರ ಎಲೀಯನು ಎಲ್ಲಾ ಜನರನ್ನು ಹತ್ತಿರಕ್ಕೆ ಕರೆಯಲು ಅವರು ಬಂದರು. ಅವನು ಹಾಳಾಗಿದ್ದ ಅಲ್ಲಿನ ಯೆಹೋವವೇದಿಯನ್ನು ತಿರಿಗಿ ಕಟ್ಟಿಸಿದನು."( 1 ಅರಸುಗಳು 18:30).
ನಮ್ಮ ಯಜ್ಞವೇದಿಯು ನಮ್ಮ ಆರಾಧನೆ ಹಾಗೂ ದೇವರೊಂದಿಗಿನ ನಮ್ಮ ಸಂಬಂಧವನ್ನು ಪ್ರತಿಬಿಂಬಿಸುತ್ತದೆ. ನಮ್ಮಲ್ಲಿ ಒಟ್ಟಾರೆಯಾಗಿ ಮೂರು ರೀತಿಯ ದೇವರ ಯಜ್ಞವೇದಿಗಳು ಇವೆ. ಅವು ನಮ್ಮ ದೇಹ(1ಕೊರಿಯಂತೆ 6:19), ನಮ್ಮ ಮನೆ(ಮತ್ತಾಯ 18:20) ಹಾಗೂ ನಮ್ಮ ಸಭೆ (ಕೊಲಸ್ಸೆ 1:24).
ಪ್ರಾರ್ಥನೆಗಳು
ಈ ಪ್ರಾರ್ಥನಾ ಕ್ಷಿಪಣಿಗಳು ನಿಮ್ಮ ಹೃದಯದ ಆಳದಿಂದ ಬರುವವರೆಗೂ ಪುನರಾವರ್ತನೆ ಮಾಡಿರಿ. ಆನಂತರವೇ ಮುಂದಿನ ಪ್ರಾರ್ಥನಾ ಅಂಶಕ್ಕೆ ಹೋಗಿರಿ. ಒಂದೊಂದು ಪ್ರಾರ್ಥನಾ ಅಂಶಗಳನ್ನು ವ್ಯಕ್ತಿಗತ ಮಾಡಿಕೊಂಡು ಪ್ರತಿಯೊಂದಕ್ಕೂ ಕನಿಷ್ಠ ಪಕ್ಷ ಒಂದೊಂದು ನಿಮಿಷವಾದರೂ ಮುಡಿಪಾಗಿಡಿ. ಮುಂದಿನ ಪ್ರಾರ್ಥನಾ ಅಂಶಕ್ಕೆ ಹೋಗುವ ಮೊದಲು ನಿಜವಾಗಿಯೂ ಹೃತ್ಪೂರ್ವಕವಾಗಿ ಪ್ರಾರ್ಥಿಸಿದ್ದೀರಿ ಎಂದು ಖಚಿತ ಪಡಿಸಿಕೊಳ್ಳಿ.
ಖಂಡಿತವಾಗಿಯೂ ಹೌದು! ಇಲ್ಲಿ ಕೊಟ್ಟಿರುವ ಪ್ರತಿಯೊಂದು ಪ್ರಾರ್ಥನಾ ಅಂಶಕ್ಕೂ ದೇವರ ವಾಕ್ಯದ ಆಧಾರವಿದ್ದು ನಿಮ್ಮ ವಿನಂತಿಯಂತೆ ಅದನ್ನು ರಚಿಸಿ ಕೊಡಲಾಗಿದೆ.
1. ನನ್ನ ಜೀವಿತದಲ್ಲಿ ದೇವರ ಕರೆಗೆ ವಿರುದ್ಧವಾಗಿ ಕಾರ್ಯ ಮಾಡುತ್ತಿರುವ ಯಾವುದೇ ಯಜ್ಞವೇದಿಯಾಗಲಿ, ಯೇಸು ನಾಮದಲ್ಲಿ ಅದನ್ನು ನಾನು ನಾಶಪಡಿಸುತ್ತಿದ್ದೇನೆ. (ವಿಮೋಚನಾ ಕಾಂಡ 34:13).
2. ನನ್ನ ಜೀವಿತದ ಕರೆಯನ್ನು ಪತನಗೊಳಿಸಲು ಮಾತಾಡುತ್ತಿರುವ ಯಾವುದೇ ನಿಗೂಢ ಯಜ್ಞ ವೇದಿಗಳು ಯೇಸು ನಾಮದಲ್ಲಿ ನಿಶಬ್ದಗೊಳ್ಳಲಿ. (ಯೆಶಾಯ 54:17).
3. ದೇವದೂತರುಗಳಿರಾ,ನನ್ನ ಜೀವಿತದ ಕರೆಗೆ ವಿರೋಧವಾಗಿ ನನ್ನ ತಂದೆಯ ಮನೆಯಲ್ಲಿ ಎಬ್ಬಿಸಲ್ಪಟ್ಟಿರುವಂತಹ ಎಲ್ಲಾ ದುಷ್ಟ ಯಜ್ಞ ವೇದಿಗಳನ್ನು ಯೇಸು ನಾಮದಲ್ಲಿ ಹೋಗಿ ನಾಶಪಡಿಸಿ. (ನ್ಯಾಯಸ್ಥಾಪಕರು 7:25-26).
4. ನನ್ನ ದೈವಿಕ ಕರೆಯನ್ನು ಮಿತಿಗೊಳಿಸಲು ಕಟ್ಟಲ್ಪಟ್ಟಿರುವ ಎಲ್ಲಾ ದುಷ್ಟ ಯಜ್ಞವೇದಿಗಳನ್ನು ಯೇಸುವಿನ ರಕ್ತದ ಮೂಲಕ ಯೇಸು ನಾಮದಲ್ಲಿ ನಾಶಪಡಿಸುತ್ತೇನೆ. (ಇಬ್ರಿಯ 9:14).
5. ದುಷ್ಟ ಯಜ್ಞವೇದಿಗಳ ಬಳಿ ಕುಳಿತು ನನ್ನ ಜೀವಿತದ ದೈವಿಕ ಕರೆಯ ವಿರುದ್ಧವಾಗಿ ಕಾರ್ಯ ಮಾಡುತ್ತಿರುವ ಎಲ್ಲಾ ದುಷ್ಟ ಯಾಜಕರನ್ನು ಯೇಸು ನಾಮದಲ್ಲಿ ಬಂಧಿಸುತ್ತೇನೆ. (ಮತ್ತಾಯ 16:19).
6. ನನ್ನ ವಿರುದ್ಧವಾಗಿ ದುಷ್ಟ ಯಜ್ಞ ವೇದಿಗಳ ಮೇಲೆ ನನಗೆ ವಿರುದ್ಧವಾಗಿ ಯಾವುದೇ ಕೇಡನ್ನು ಮಾಡಿದರೂ ಯೇಸು ನಾಮದಲ್ಲಿ ಅವು ನನಗೆ ಆಶೀರ್ವಾದಗಳಾಗಿ ಮಾರ್ಪಡಲಿ. (ಆದಿಕಾಂಡ 50:20)
7. ನನ್ನ ಜೀವಿತದ ಕರೆಗೆ ವಿರುದ್ಧವಾಗಿ ಕಾರ್ಯ ಮಾಡುತ್ತಿರುವ ಎಲ್ಲ ದುಷ್ಟ ಯಜ್ಞವೇದಿಯ ಬಲವನ್ನು ಯೇಸು ನಾಮದಲ್ಲಿ ನಿಷ್ಕ್ರಿಯಗೊಳಿಸುತ್ತೇನೆ (2 ಅರಸು 23:14).
8. ನನಗೆ ಕೇಡು ಮಾಡಲು ನನ್ನ ಹೆಸರನ್ನು ಎತ್ತಿಕೊಳ್ಳುವ ಯಾವುದೇ ಶಕ್ತಿಯಾಗಲಿ ಯೇಸು ನಾಮದಲ್ಲಿ ಅದು ಸರ್ವನಾಶವಾಗಿ ಹೋಗಲಿ. (ಯೆಶಾಯ 47:12-15).
9. ದೇವದೂತರುಗಳಿರಾ,ನಾನು ಕಳೆದುಕೊಂಡ ಗುಣ ಗೌರವ ಆಶೀರ್ವಾದಗಳು ಮತ್ತು ಸಂಪತ್ತನ್ನು ಯಜ್ಞ ವೇದಿಗಳಿಂದ ತಿರುಗಿ ತೆಗೆದುಕೊಂಡು ಬರಲು ಯೇಸು ನಾಮದಲ್ಲಿ ನಿಮ್ಮನ್ನು ಕಳುಹಿಸಿ ಕೊಡುತ್ತೇನೆ. (ಕೀರ್ತನೆ 103:20).
10. ನನ್ನೆಲ್ಲಾ ಸ್ವತ್ತುಗಳನ್ನು ಯೇಸು ನಾಮದಲ್ಲಿ ದುಷ್ಟ ಯಜ್ಞವೇದಿಗಳಿಂದ ಸ್ವಾಧೀನ ಪಡಿಸಿಕೊಳ್ಳುತ್ತೇನೆ. (ಒಬದ್ಯ 1:17).
11. ತಂದೆಯೇ ದೈವಿಕವಾದ ಯಜ್ಞ ವೇದಿಯನ್ನು ಕಟ್ಟಲು ಯೇಸು ನಾಮದಲ್ಲಿ ನನಗೆ ಸಹಾಯ ಮಾಡಿ. (ಆದಿಕಾಂಡ 22:9).
12. ನನ್ನ ಜೀವಿತದ ವಿರುದ್ಧವಾಗಿ ಎಬ್ಬಿಸಲ್ಪಟ್ಟಿರುವ ಯಾವುದೇ ಯಜ್ಞವೇದಿಗಳ ಮೇಲೆ ಯೇಸು ನಾಮದಲ್ಲಿ ಪವಿತ್ರಾತ್ಮನ ಅಗ್ನಿ ಇಳಿದುಅವುಗಳನ್ನು ಸುಟ್ಟು ಸರ್ವನಾಶ ಮಾಡಲೆಂದು ಯೇಸುನಾಮದಲ್ಲಿ ಪ್ರವಾದನೆಯನ್ನು ನುಡಿಯುತೇನೆ. (ಯೆರೆಮಿಯ 23:29)
13.ಯಾವುದೇ ದುಷ್ಟ ಯಜ್ಞ ವೇದಿಗಳ ಮೇಲಿರುವ ದುಷ್ಟ ದಾಖಲೆಗಳಲ್ಲಿ ಬರೆದಿರುವ ನನ್ನ ಹೆಸರನ್ನು ಯೇಸು ನಾಮದಲ್ಲಿ ಅಳಿಸಿ ಹಾಕುತ್ತಿದ್ದೇನೆ.(ಕೊಲಸ್ಸೆ 2:14).
14. ನನಗೆ ವಿರುದ್ಧವಾಗಿ ರೂಪಿಸಿರುವ ಯಾವುದೇ ಮರಣದಿಂದ ಯೇಸು ನಾಮದಲ್ಲಿ ನಾನು ತಪ್ಪಿಸಿಕೊಳ್ಳುತ್ತೇನೆ. (ಕೀರ್ತನೆ 91:3).
15. ದೇವದೂತರುಗಳಿರಾ, ನನ್ನ ಹಣಕಾಸು ಪ್ರಗತಿ ವೈವಾಹಿಕ ಒಪ್ಪಂದ ಮತ್ತು ನನ್ನ ಆಶೀರ್ವಾದಗಳ ವಿರುದ್ಧ ಕಟ್ಟಲ್ಪಟ್ಟಿರುವ ಎಲ್ಲ ದುಷ್ಟ ಯಜ್ಞ ವೇದಿಗಳನ್ನು ಯೇಸು ನಾಮದಲ್ಲಿ ಹೋಗಿ ಮುರಿದು ಬನ್ನಿರಿ. (2 ಪೂರ್ವ ಕಾಲ ವೃತ್ತಾಂತ20:15).
16. ನನ್ನ ಜೀವಿತದ ಕರೆಯ ವಿರುದ್ಧ ಸೈತಾನನು ಮಾಡುವ ಎಲ್ಲಾ ದೋಷಾರೋಪಣೆಗಳನ್ನು ಯೇಸು ನಾಮದಲ್ಲಿ ನಿಶಬ್ದ ಗೊಳಿಸುವೆ. (ಪ್ರಕಟಣೆ 12:10).
17. ನನ್ನ ಆಶೀರ್ವಾದಗಳನ್ನು ಬಂಧಿಸಿರುವ ಬಲವೇ ಯೇಸು ನಾಮದಲ್ಲಿ ಅದನ್ನು ಬಿಡುಗಡೆ ಮಾಡು. (ಕೀರ್ತನೆ 69:28)
18. ನಾಶನದ ಪಟ್ಟಿಯಿಂದ ಯೇಸು ನಾಮದಲ್ಲಿ ನನ್ನ ಹೆಸರನ್ನು ಹಿಂಪಡೆಯುತ್ತಿದ್ದೇನೆ. (ಮತ್ತಾಯ 18:18).
19. ತಂದೆಯೇ ನನ್ನ ಜೀವಿತಕ್ಕೆ ತೊಂದರೆ ನೀಡಲು ಕೂಡಿರುವವರ ಗುಡಾರಗಳಲ್ಲಿ ಯೇಸುನಾಮದಲ್ಲಿ ಗೊಂದಲವನ್ನುಂಟುಮಾಡು.(2ಪೂರ್ವ ಕಾಲ ವೃತ್ತಾಂತ20:22).
20. ನನ್ನ ಜೀವಿತ ನನ್ನ ವ್ಯವಹಾರ ಹಾಗೂ ನನ್ನ ಮನೆಯ ಸುತ್ತಲೂ ಕಾರ್ಯ ಮಾಡುವ ಯಾವುದೇ ಸೈತಾನನ ಪ್ರತಿನಿಧಿಯಾಗಲಿ ಅವನ ಕಾರ್ಯಗಳನ್ನು ಯೇಸುನಾಮದಲ್ಲಿ ನಿಷ್ಕ್ರಿಯಗೊಳಿಸುತ್ತೇನೆ (ಎಫಸ್ಸೆ 6:12)
Join our WhatsApp Channel
Most Read
● ದೈವಿಕ ಶಾಂತಿಯನ್ನು ಪ್ರವೇಶಿಸುವುದು ಹೇಗೆ● ಉದ್ಯೋಗದ ಸ್ಥಳದಲ್ಲಿ ಮಿಂಚುವ ತಾರೆಯಾಗುವುದು-ll
● ಅಂತ್ಯದಿನಗಳ ಕುರಿತು ಪ್ರವಾದನ ಯುಕ್ತ ಗೂಡಾರ್ಥ ವಿವರಣೆ
● ಕೃತಜ್ಞತೆಯ ಯಜ್ಞ
● ದೇವರಿಗೇ ಪ್ರಥಮ ಸ್ಥಾನ ನೀಡುವುದು.#1
● ಚಿಕ್ಕ ಸಂಗತಿಗಳೂ ಸಹ ಮಹತ್ತರ ಉದ್ದೇಶಗಳನ್ನು ಪೂರೈಸಬಲ್ಲವು.
● ಕುಟುಂಬಕ್ಕಾಗಿ ಇರುವ ಗುಣಮಟ್ಟದ ಸಮಯ
ಅನಿಸಿಕೆಗಳು